ಭಾರತ್ ಬಂದ್: ಖಾಲಿ ರಸ್ತೆಯಲ್ಲಿ ಜಾಲಿ ಸವಾರಿ

ವಿದೇಶಿ ನೇರ ಹೂಡಿಕೆ, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್ ನಡೆಯುತ್ತಿದೆ. ಅಂಗಡಿಗಳು ಬಾಗಿಲು ಹಾಕಿವೆ. ಬಸ್ಸುಗಳು ಡಿಪೋದಲ್ಲೇ ಉಳಿದಿವೆ. ಆಟೋಗಳು ಮೀಟರ್ ಆಫ್ ಮಾಡಿ ಓಡಾಡುತ್ತಿವೆ. ರಸ್ತೆಗಳು ಬಿಕೋ ಎನ್ನಲು ಆರಂಭವಾಗಿದೆ. ಮಕ್ಕಳು ಕೈಯಲ್ಲಿ ಬ್ಯಾಟು ಬಾಲು ಹಿಡಿದು ರಸ್ತೆಗಿಳಿಯುತ್ತಿದ್ದಾರೆ.

ಖಾಲಿ ಖಾಲಿ ರಸ್ತೆ ಕಂಡಾಕ್ಷಣ ವಾಹನ ಚಾಲಕರು ಡ್ರೈವಿಂಗ್ ಫ್ಯಾಷನನ್ನು ಇಗ್ನೈಟ್ ಮಾಡಲು ಇಚ್ಚಿಸುವುದು ಸಹಜ. ಬಂದ್ ಸಮಯದಲ್ಲಿ ಟ್ರಾಫಿಕ್ ಲೈಟುಗಳು ಯೆಲ್ಲೋ ಬಣ್ಣದಲ್ಲಿರುತ್ತವೆ. ಕೆಂಪು ಸಿಗ್ನಲ್ ಹಂಗಿಲ್ಲದೇ ಪ್ರಯಾಣಿಸುವ ಖುಷಿಯಲ್ಲಿ ನೀವಿರಬಹುದು. ಅದಕ್ಕೂ ಮುನ್ನ ನಿಮಗೊಂದಿಷ್ಟು ಕಿವಿ ಮಾತು ಹೇಳಲು ನಾವು ಬಯಸಿದ್ದೇವೆ. ಮುಂದೆ ಓದಿ.

ನಗರದಲ್ಲಿ ಜಾಲಿಯಾಗಿ ವಾಹನ ಚಾಲನೆ ಮಾಡಲು ಖಾಲಿ ರಸ್ತೆ ಅಪರೂಪ. ಹೀಗಾಗಿ ಬಂದ್ ದಿವಸ ಬೈಕ್/ಕಾರಲ್ಲಿ ಜಾಲಿ ರೈಡ್ ಹೊರಡುವರು ಹೆಚ್ಚಾಗಿದ್ದಾರೆ. ಆದರೆ ನೆನಪಿಡಿ ಬಂದ್ ದಿನ ರಸ್ತೆ ನಿಮಗೆ ರೇಸ್ ಟ್ರ್ಯಾಕ್ ಅಲ್ಲ. ಸುರಕ್ಷತೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.

ಬಂದ್ ಸಮಯದಲ್ಲಿ ಹೆಚ್ಚಾಗಿ ಪೆಟ್ರೋಲ್ ಬಂಕುಗಳು ಬಾಗಿಲು ಹಾಕಿರುತ್ತವೆ. ನಿಮಗೆ ಮೊದಲೇ ಬಂದ್ ಮಾಹಿತಿ ತಿಳಿದಿದ್ದರೆ ಬೈಕ್ ಅಥವಾ ಕಾರಿನ ಟ್ಯಾಂಕ್ ಫುಲ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಪೆಟ್ರೋಲ್ ಬಂಕುಗಳಲ್ಲಿ ಹೆಚ್ಚು ಸಮಯ ವೇಟಿಂಗ್ ಮಾಡುವುದು ತಪ್ಪಬಹುದು.

ಬಂದ್ ಸಮಯದಲ್ಲಿ ರಸ್ತೆ ತಡೆ, ಹರತಾಳ, ಪ್ರತಿಭಟನೆ ಸಾಮಾನ್ಯ. ಅಂತಹ ರಸ್ತೆಗಳಲ್ಲಿ ಅವಾಯ್ಡ್ ಮಾಡಿಕೊಂಡು ರೈಡ್ ಮಾಡಿ. ಇಂತಹ ಸಮಯದಲ್ಲಿ ಆದಷ್ಟು ಒಬ್ಬಂಟಿಯಾಗಿ ಪ್ರಯಾಣಿಸುವುದನ್ನು ತಪ್ಪಿಸಿ. ಸ್ನೇಹಿತರನ್ನು ನಿಮ್ಮ ಜೊತೆ ಕರೆದುಕೊಳ್ಳಿ.

ಬಂದ್ ಸಮಯದಲ್ಲಿ ಕಲ್ಲು ತೂರಾಟ, ಹೊಡೆದಾಟಗಳು ಸಂಭವಿಸಬಹುದು. ಬಿಕೋ ಎನ್ನುತ್ತಿರುವ ರಸ್ತೆ ಯಾವುದೋ ಸಮಯದಲ್ಲಿ ಕರಾಳ ಛಾಯೆ ಪಡೆದುಕೊಳ್ಳಬಹುದು. ಹೀಗಾಗಿ ಬಂದ್ ಸಮಯದಲ್ಲಿ ಎಚ್ಚರಿಕೆಯಿಂದ ಪ್ರಯಾಣಿಸಿ.

ಇನ್ನೊಂದು ಸಲಹೆ: ಬಂದ್ ಸಮಯದಲ್ಲಿ ವಾಹನ ಸವಾರಿ ಬಯಕೆ ಹತ್ತಿಟ್ಟುಕೊಂಡರೆ ಒಳ್ಳೆಯದು. ಮನೆಯಲ್ಲಿ ಟಿವಿ ನೋಡುತ್ತ, ಫೇಸ್ಬುಕ್ ನೋಡುತ್ತ, ಫ್ಯಾಮಿಲಿ ಜೊತೆ ಹರಟುತ್ತ ಕಳೆಯಬಹುದು.

More from DriveSpark

Article Published On: Thursday, September 20, 2012, 12:11 [IST]
English summary
Enjoy Bharat Bandh By Riding The Empty Roads. A bandh will usually mean petrol bunks will be closed. So always ensure you have sufficient fuel for your trip. A bandh day will also mean a possibility of people protesting and holding marches. Areas and roads that usually have such events are avoidable.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+