ರಸ್ತೆ ಸಂಚಾರ ಚಿಹ್ನೆಗಳು; ಒಂದು ವಿಸೃತ ಮಾಹಿತಿ
ನಮ್ಮ ದೈನಂದಿನ ಜೀವನದಲ್ಲಿ ಟ್ರಾಫಿಕ್ ಒಂದು ಅವಿಭಾಜ್ಯ ಘಟಕವಾಗಿ ಪರಿಣಮಿಸಿದೆ. ನಾವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಾಹನಗಳಲ್ಲಿ ತೆರಳುವಾಗ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವುದು ಅತಿ ಅಗತ್ಯವಾಗಿದೆ.
ಹಾಗಿರುವಾಗ ಎಷ್ಟೋ ಜನರು ಮೂಲಭೂತ ಟ್ರಾಫಿಕ್ ಸಂಕೇತಗಳ ಬಗ್ಗೆ ಅರಿವನ್ನು ಹೊಂದಿರುವುದಿಲ್ಲ. ಇದು ಕೆಲವೊಂದು ಬಾರಿ ಅಪಘಡಕ್ಕೆ ಕಾರಣವಾಗಬಲ್ಲದು. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ರಸ್ತೆ ಸಿಗ್ನಲ್‌ಗಳ ಬಗ್ಗೆ ವಿಸ್ತಾರವಾಗಿ ಹೇಳಿಕೊಡುವ ಪ್ರಯತ್ನ ಮಾಡಲಿದ್ದೇವೆ.
ಸುರಕ್ಷಿತ ಪಯಣದಲ್ಲಿ ರಸ್ತೆ ಸಂಚಾರ ಚಿಹ್ನೆಗಳು ಬಹುದೊಡ್ಡ ಪಾತ್ರ ವಹಿಸುತ್ತದೆ. ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಪ್ರಕಾರ ಭಾರತದಲ್ಲಿ ರಸ್ತೆ ಸಂಚಾರ ಚಿಹ್ನೆಗಳನ್ನು ಒಟ್ಟು ಮೂರು ವಿಭಾಗಗಳಾಗಿ ವಿಭಜಿಸಲಾಗಿದೆ. ಅವುಗಳೆಂದರೆ,
- ಕಡ್ಡಾಯ ಚಿಹ್ನೆಗಳು (Mandatory signs or regulatory signs)
- ಎಚ್ಚರಿಕಾ ಚಿಹ್ನೆಗಳು (cautionary signs or warning or precautionary)
- ಮಾಹಿತಿ ಚಿಹ್ನೆಗಳು (informatory signs)
ಇನ್ನು ಮೇಲೆ ತಿಳಿಸಿದ ಮೂರು ಚಿಹ್ನೆಗಳನ್ನು ಗುರುತಿಸುವುದು ತುಂಬಾನೇ ಸುಲಭ. ಕಡ್ಡಾಯ ಚಿಹ್ನೆಗಳು ವೃತ್ತಕಾರದಲ್ಲೂ, ಎಚ್ಚರಿಕಾ ಚಿಹ್ನೆಗಳು ತ್ರಿಕೋನಾಕೃತಿಯಲ್ಲೂ ಮತ್ತು ಮಾಹಿತಿ ಚಿಹ್ನೆಗಳು ಆಯತಾಕಾರದಲ್ಲೂ ಕಂಡುಬರಲಿದೆ.
ವಿ.ಸೂ: ಇಂದಿನ ಈ ಲೇಖನದಲ್ಲಿ ಕಡ್ಡಾಯ ಚಿಹ್ನೆಗಳ ಬಗ್ಗೆ ವಿಸೃತವಾಗಿ ಚರ್ಚಿಸಲಿದ್ದೇವೆ. ಹಾಗೆಯೇ ಇದರ ಮುಂದುವರಿದ ಲೇಖನಗಳಲ್ಲಿ ಎಚ್ಚರಿಕಾ ಹಾಗೂ ಮಾಹಿತಿ ಚಿಹ್ನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ...

Stop
ನಿಲ್ಲಿ

Give Way
ದಾರಿ ಬಿಡಿ

No Entry
ಪ್ರವೇಶವಿಲ್ಲ

One Way
ಒಂದೇ ದಾರಿ

One Way
ಒಂದೇ ದಾರಿ

Vehicles Prohibited
ವಾಹನಗಳನ್ನು ನಿಷೇಧಿಸಿದೆ

All M.V.s prohibited
ಎಲ್ಲ ಮೋಟಾರು ಅಥವಾ ವಾಹನಗಳನ್ನು ನಿಷೇಧಿಸಿದೆ.

Trucks Prohibited
ಟ್ರಕ್ಕುಗಳನ್ನು ನಿಷೇಧಿಸಿದೆ.

Bullock carts & hand carts prohibited
ಎತ್ತಿನಗಾಡಿ ಮತ್ತು ಕೈಗಾಡಿಗಳನ್ನು ನಿಷೇಧಿಸಿದೆ.

Tongas Prohibited
ಟಾಂಗಗಳನ್ನು ನಿಷೇಧಿಸಿದೆ.

Hand Carts Prohibited
ಕೈಗಾಡಿಗಳನ್ನು ನಿಷೇಧಿಸಿದೆ.

Cycle Prohibited
ಸೈಕಲ್ಲು ನಿಷೇಧಿಸಿದೆ.

pedestrians prohibited
ಪಾದಚಾರಿಗಳು ನಿಷೇಧಿಸಿದೆ.

Right Turn Prohibited
ಬಲಕ್ಕೆ ತಿರುವು ನಿಷೇಧಿಸಿದೆ.

Left turn Prohibited
ಎಡಕ್ಕೆ ತಿರುವು ನಿಷೇಧಿಸಿದೆ.

U Turn Prohibited
'U' ತಿರುವು ನಿಷೇಧಿಸಿದೆ.

Overtaking Prohibited
ಹಠಾತ್ತಾಗಿ ಮುಂದೆ ಹೋಗುವುದು (ಓವರ್‌ಟೇಕಿಂಗ್) ನಿಷೇಧಿಸಿದೆ.

Horns Prohibited
ಶಬ್ದಮಾಡುವುದು (ಹಾರ್ನ್) ನಿಷೇಧಿಸಿದೆ.

No Parking
ನಿಲುಗಡೆ (ಪಾರ್ಕಿಂಗ್) ನಿಷೇಧಿಸಿದೆ.

No Stopping or Standing
ವಾಹನಗಳನ್ನು ನಿಲ್ಲಿಸಕೂಡದು

Speed Limit
ವೇಗದ ಮಿತಿ- ಗಂಟೆಗೆ 50 ಕೀ.ಮೀ.

Width Limit
ಅಗಲ ಮಿತಿ

Height Limit
ಎತ್ತರ ಮಿತಿ

Length Limit
ಉದ್ದ ಮಿತಿ

Load Limit
ಭಾರ ಮಿತಿ

Axle Load Limit
ಎಕ್ಸಿಲ್ ಭಾರಮಿತಿ

Restiction End Sign
ನಿರ್ಬಂಧ ಕೊನೆ ಚಿಹ್ನೆ

Compulsory Turn Left
ಕಡ್ಡಾಯ ಎಡ ತಿರುವು

Compulsory Turn Ahead
ಕಡ್ಡಾಯ ನೇರ ಮಾತ್ರ

Compulsory Turn Right
ಕಡ್ಡಾಯ ಬಲ ತಿರುವು

Compulsory Ahead Or Turn Right
ಮುಂದಕ್ಕೆ ಹೋಗಿ ಅಥವಾ ಬಲಕ್ಕೆ

Compulsory ahead Or left
ಮುಂದಕ್ಕೆ ಹೋಗಿ ಅಥವಾ ಎಡಕ್ಕೆ

Compulsory Go Left
ಕಡ್ಡಾಯ ಎಡದಿಂದ ಚಲಿಸಿ

Compulsory Cycle Track
ಸೈಕಲ್ಲುಗಳು ಹೋಗಲೇಬೇಕಾದ ದಾರಿ

Compulsory Horn
ಶಬ್ದ ಮಾಡಲೇಬೇಕು


Click it and Unblock the Notifications