ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಹೋಳಿಯೂ ಒಂದು. ಈ ಹಬ್ಬವನ್ನು ಉತ್ತರದ ರಾಜ್ಯಗಳಲ್ಲಿ ಮಾತ್ರವಲ್ಲದೆ ಇತ್ತೀನ ವರ್ಷಗಳಲ್ಲಿ ದ‍ಕ್ಷಿಣ ಭಾರತದಲ್ಲೂ ಆಚರಿಸಲಾಗುತ್ತಿದೆ. ಈ ರೋಮಾಂಚಕ ಹಬ್ಬದಂದು ತರಹೇವಾರಿ ಬಣ್ಣಗಳನ್ನು ಎರಚಿ ಸಂಭ್ರಮಿಸುವುದರಿಂದ ಇದೊಂದು ವರ್ಣರಂಜಿತ ಹಬ್ಬವಾಗಿದೆ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಈ ಹಬ್ಬವನ್ನು ಆಚರಿಸುವವರಿಗೆ ಸಂಭ್ರಮವಾದರೆ ವಾಹನ ಮಾಲೀಕರಿಗೆ ಮಾತ್ರ ಸಂಕಂಟದ ದಿನವಾಗಿರುತ್ತದೆ. ಏಕೆಂದರೆ ಬಣ್ಣ ಬಣ್ಣದ ಪೌಡರ್‌ಗಳ ಧೂಳಿನಿಂದಾಗಿ ವಾಹನಗಳು ಕೆಲವೊಮ್ಮೆ ನೈಜ ಬಣ್ಣ ಕಳೆದುಕೊಳ್ಳುತ್ತವೆ. ಇದರಿಂದ ವಾಹನ ಮಾಲೀಕರು ವಾಹನವನ್ನು ಮೊದಲಿನಂತೆ ಮಾಡಿಸಲು ಹಣ ವ್ಯಯಿಸಬೇಕಾಗುತ್ತದೆ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಇಂತಹ ಸಂಘಟನೆಗಳು ಪ್ರತಿ ವರ್ಷ ನಡಿಯುತ್ತಲೇ ಇರುತ್ತವೆ. ಇದರಿಂದ ಹಲವು ವಾಹನ ಮಾಲೀಕರು ಬೇಸರ ವ್ಯಕ್ತಪಡಿಸಿದ್ದೂ ಉಂಟು. ಮುಖ್ಯವಾಗಿ ಕಾರುಗಳನ್ನು ಮೂಲ ಬಣ್ಣಕ್ಕೆ ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಹೋಳಿ ಹಬ್ಬದಂದು ನಮ್ಮ ವಾಹನಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಮುಚ್ಚಿದ ಪಾರ್ಕಿಂಗ್

ಹೋಳಿ ಆಚರಣೆಗಳನ್ನು ಸಾಮಾನ್ಯವಾಗಿ ಹೊರಾಂಗಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಆಚರಿಸಲಾಗುತ್ತದೆ. ಆದ್ದರಿಂದ, ಬಣ್ಣಗಳಿಂದ ನಿಮ್ಮ ಕಾರನ್ನು ರಕ್ಷಿಸಿಕೊಳ್ಳಲು ಒಳಾಂಗಣದಲ್ಲಿ ಪಾರ್ಕ್‌ ಮಾಡಿಕೊಳ್ಳಿ. ನೀವು ಈ ಸೌಲಭ್ಯವನ್ನು ಹೊಂದಿಲ್ಲದಿದ್ದರೆ ಒಂದು ದಿನದ ಮಟ್ಟಿಗೆ ನಿರ್ಜನ ಸ್ಥಳಗಳಲ್ಲಿ ಕಾರನ್ನು ನಿಲ್ಲಿಸಬಹುದು. ಇನ್ನು ನೀವು ಅಪಾರ್ಟ್‍‍ಮೆಂಟ್ ನಲ್ಲಿ ವಾಸಿಸುತ್ತಿದ್ದರೆ ನಿಮ್ಮ ಕಾರನ್ನು ಪಾರ್ಕಿಂಗ್ ಲಾಟ್ ನಿಂದ ಹೊರಗೆ ಪಾರ್ಕಿಂಗ್ ಮಾಡದೇ ಕಾರ್ ಕವರ್ ನಿಂದ ಕಾರನ್ನು ಕವರ್ ಮಾಡಿ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಇದೂ ಸಾಧ್ಯವಾಗದಿದ್ದರೆ, ಗುಣಮಟ್ಟದ ಕಂಬಳಿಗಳ ಜೊತೆಗೆ ಕಾರ್‌ ಕವರ್‌ನಿಂದ ಮುಚ್ಚಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಬಣ್ಣದ ಪುಡಿಗಳಿಂದ ಪ್ರಭಾವಿತವಾಗದ ಕಂಬಳಿಗಳಿಂದ ಕಾರನ್ನು ಮುಚ್ಚುವುದು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇವುಗಳನ್ನು ಅನುಸರಿಸುವುದರಿಂದ ನಿಮ್ಮ ಕಾರನ್ನು ಬಣ್ಣಗಳಿಂದ ಖಂಡಿತವಾಗಿಯೂ ರಕ್ಷಿಸಿಕೊಳ್ಳಬಹುದು.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಕಾರ್ ವ್ಯಾಕ್ಸ್‌

ಈ ಹೋಳಿ ಸಮಯದಲ್ಲಿ ನಿಮ್ಮ ವಾಹನವನ್ನು ರಕ್ಷಿಸುವ ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೇ ಮುನ್ನೆಚ್ಚರಿಕೆಯ ಕ್ರಮದ ಒಂದು ಭಾಗವಾಗಿ ವ್ಯಾಕ್ಸ್ ಪಾಲಿಶ್ ಮಾಡುವುದರ ಮೂಲಕವು ಕಾರಿನ ಹೊಳಪನ್ನು ರಕ್ಷಿಸಬಹುದು. ಕಾರ್ ವ್ಯಾಕ್ಸ್ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಕಾರಿನ ಬಣ್ಣವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಕಾರಿನ ಮೇಲಿರುವ ಧೂಳು ಮತ್ತು ಕೊಳೆಯನ್ನು ಬಹಳ ಸುಲಭವಾಗಿ ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಆದ್ದರಿಂದ, ಕಾರ್ ವ್ಯಾಕ್ಸ್‌ ನಿಮ್ಮ ವಾಹನವನ್ನು ಹೋಳಿ ಹಬ್ಬದಿಂದ ಮಾತ್ರವಲ್ಲದೆ ಪಕ್ಷಿಗಳ ಹಿಕ್ಕೆ, ಬೇಸಿಗೆಯ ಬಿಸಿಲು ಮತ್ತು ಅತಿಯಾದ ಧೂಳಿನಿಂದ ರಕ್ಷಣೆ ನೀಡುತ್ತದೆ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಟೆಫ್ಲಾನ್ ಲೇಪನ

ಟೆಫ್ಲಾನ್ ಲೇಪನವು ಸ್ವಲ್ಪ ದುಬಾರಿಯೇ ಹೌದು. ಆದರೆ ನಿಮ್ಮ ವಾಹನವನ್ನು ತ್ವರಿತ ಹೊಳಪು ನಷ್ಟದಿಂದ ರಕ್ಷಿಸುತ್ತದೆ. ಕಾರನ್ನು ಸದಾ ಹೊಸತಾಗಿ ಇರಿಸಲು ಇದು ಸಹಾಯಕಾರಿ. ಅದಕ್ಕಾಗಿಯೇ ಕಾರು ಪ್ರಿಯರು ವಾಹನ ಖರೀದಿಸಿದ ಕೂಡಲೇ ಟೆಫ್ಲಾನ್ ಲೇಪನವನ್ನು ಮಾಡಿಸುತ್ತಾರೆ. ಹಾಗಾಗಿ ಹೋಳಿ ಬಣ್ಣಗಳಿಂದ ರಕ್ಷಿಸಿಕೊಳ್ಳಲು ಟೆಫ್ಲಾನ್‌ ಕೋಟಿಂಗ್‌ ಕೂಡ ಉಪಯುಕ್ತವಾಗಿದೆ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಕಿಟಕಿಗಳನ್ನು ಮುಚ್ಚಿರಿಸಿ

ಹೋಳಿ ಹಬ್ಬದ ಸಮಯದಲ್ಲಿ ನಿಮ್ಮ ಕಾರಿನ ಹೊರಭಾಗವನ್ನು ಮಾತ್ರವಲ್ಲದೆ ಒಳಭಾಗವನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಿಸುವುದು ಅತ್ಯಗತ್ಯ. ಧೂಳು ಮಾತ್ರವಲ್ಲ, ಗಾಳಿಯೊಂದಿಗೆ ಮಿಶ್ರಿತ ಬಣ್ಣದ ಪುಡಿಗಳೂ ನಿಮ್ಮ ಕಾರಿನ ಒಳಭಾಗಕ್ಕೆ ನುಗ್ಗುತ್ತವೆ. ಆದ್ದರಿಂದ, ಕಾರಿನ ಕಿಟಕಿಗಳನ್ನು ಒಂದಕ್ಕೆ ಎರಡು ಬಾರಿ ಸರಿಯಾಗಿ ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಕಾರ್ ವಾಶ್

ಕಾರಿಗೆ ಅಂಟಿಕೊಂಡಿರುವ ಕಲೆಯನ್ನು ತೊಲಗಿಸಲು ನೀವು ನಿಮ್ಮ ಮನೆಯಲ್ಲಿ ಉಪಯೋಗಿಸುವ ಡಿಟರ್ಜಂಟ್‍‍ಗಳನ್ನು ಬಳಸಿದ್ದಲ್ಲಿ ಕಾರಿನ ಕಲೆಯನ್ನು ತೆಗೆಯಬಹುದಾದರೂ ಇದರಿಂದ ಕಾರಿನ ಅಂದಕ್ಕೆ ಮಾರಾಕವಾಗಿರುತ್ತದೆ. ಡಿಟರ್ಜಂಟ್‍ ಬಳಸುವುದರಿಂದ ನಿಮ್ಮ ಕಾರಿನ ಪಾಲಿಶ್ ನಾಶಾವಾಗುತ್ತದೆ. ಹೀಗಾಗಿ ನಿಮ್ಮ ಕಾರನ್ನು ಕಾರ್ ಶಾಂಪು ಮತ್ತು ನೀರಿನಿಂದ ಸ್ವಚ್ಛಗೊಳಿಸುವುದರಿಂದಲೂ ನಿಮ್ಮ ಕಾರಿಗೆ ಅಂಟಿಕೊಂಡಿರುವ ಬಣ್ಣದ ಕಲೆಗಳಿಂದ ಕಾಪಾಡಿಕೊಳ್ಳಬಹುದು. ಅಲ್ಲದೇ.ಕಾರುಗಳನ್ನು ಸ್ವಚ್ಚಗೊಳಿಸಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿದೆ. ಪ್ರಮಾಣಿತ ಉತ್ಪನ್ನಗಳನ್ನು ಬಳಸಿ ಕಲೆಗಳು ಸಂಪೂರ್ಣವಾಗಿ ಕಣ್ಮರೆಯಾಗುವವರೆಗೆ ತೊಳೆಯುವುದು ಉತ್ತಮ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಪ್ರಮುಖ ಸಲಹೆ:

ಹೋಳಿ ಆಚರಣೆ ವೇಳೆ ಕಾರನ್ನು ಹೊರಗೆ ಕೊಂಡೊಯ್ಯುವುದನ್ನು ತಪ್ಪಿಸಿ. ಒಂದು ವೇಳೆ ನೀವು ಹೋಳಿ ಆಚರಿಸಲು ನಿಮ್ಮ ಕಾರನ್ನು ಕೂಡ ಬಳಸಿದಲ್ಲಿ ನಿಮ್ಮ ಕಾರಿನ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿರಿ. ಹೀಗೆ ಮಾಡಿದಲ್ಲಿ ಬಣ್ಣಗಳು ಗಾಳಿಗೆ ಅಥವಾ ಹೋಳಿ ನೀರಿನ ಹನಿಗಳು ನಿಮ್ಮ ಕಾರಿನ ಒಳಭಾಗದಲ್ಲಿ ಬೀಳದ ಹಾಗೆ ಮಾಡಬಹುದು. ಸಾಧ್ಯವಾದಷ್ಟು ಕಾರನ್ನು ಬಳಸದಿರುವುದು ಉತ್ತಮ. ಒಂದು ವೇಳ ಕೊಂಡೊಯ್ದರೂ ಬದಲಿ ಉಡುಪುಗಳನ್ನು ಮರಿಯದಿರಿ.

ಹೋಳಿ ಹಬ್ಬದಂದು ಈ ಐದು ಸಲಹೆಗಳಿಂದ ನಿಮ್ಮ ಕಾರನ್ನು ಬಣ್ಣಗಳಿಂದ ರಕ್ಷಿಸಿಕೊಳ್ಳಿ!

ಈ ಮೇಲೆ ನೀಡಲಾಗಿರುವ ಅಂಶಗಳು ನಿಮ್ಮ ಕಾರನ್ನು ಹೋಳಿ ಬಣ್ಣದ ಕಲೆಗಳಿಂದ ರಕ್ಷಿಸಲು ಸೂತ್ರಗಳಾಗಿದ್ದು, ಹೋಳಿ ಆಚರಿಸುವಾಗ ನಿಮ್ಮ ಕಾರನ್ನು ಆಚರಣೆಯಲ್ಲಿ ಬಳಸದಿರಿ. ಒಂದು ವೇಳೆ ಮನೆಯ ಹೊರಗೆ ಸಂಚರಿಸಲು ನೀವು ನಿರ್ಧರಿಸಿದ್ದಲ್ಲಿ ಕ್ಯಾಬ್‍ಗಳನ್ನು ಬಳಕೆ ಮಾಡುವುದು ಒಳಿತು.

More from DriveSpark

Article Published On: Friday, March 18, 2022, 17:47 [IST]
English summary
Here is five car care tips to prevent from holi colours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+