ಬೈಕ್ ಮೈಲೇಜ್ ಹೆಚ್ಚಿಸುವ ಸುಲಭ ತಂತ್ರಗಳು

How to Improve Your Bikes Mileage
ಕಾರಿನ ಇಂಧನ ದಕ್ಷತೆ ಹೆಚ್ಚಿಸುವ ಸಲಹೆ ಓದಿದ ಓದುಗರೊಬ್ಬರು ಬೈಕ್ ಮೈಲೇಜ್ ಹೆಚ್ಚಿಸುವ ಕುರಿತು ಸಲಹೆ ಕೊಡಿ ಎಂದು ಕೋರಿದ್ದಾರೆ. ಅವರಿಗಾಗಿ ಮತ್ತು ಮೈಲೇಜ್ ಹೆಚ್ಚಿಸಬಯಸುವ ಬೈಕು ರೈಡರುಗಳಿಗಾಗಿ ಕೆಲವು ಪುಕ್ಕಟೆ ಸಲಹೆಗಳು ಇಲ್ಲಿವೆ.

ಬೈಕಿನ ಆರೋಗ್ಯ, ಯೋಗಕ್ಷೇಮ ನಿಯಮಿತವಾಗಿ ವಿಚಾರಿಸಿಕೊಳ್ಳುತ್ತಿರುವುದು ಅತ್ಯಂತ ಅಗತ್ಯ. ನಿಮ್ಮಲ್ಲಿರುವ ಬೈಕು ಅದೇ ಮಾದರಿಯ ಇನ್ನೊಂದು ಬೈಕಿಗಿಂತ ಹೆಚ್ಚು ಮೈಲೇಜ್ ನೀಡುತ್ತಿದ್ದರೆ ನಿಮ್ಮ ಬೈಕಿನ ಆರೋಗ್ಯ ಚೆನ್ನಾಗಿದೆ ಎಂದರ್ಥ. ಬೈಕಿನ ಆರೋಗ್ಯ ಉತ್ತಮವಾಗಿರಬೇಕಾದರೆ ಅದನ್ನು ಕಾಲಕಾಲಕ್ಕೆ ಸರ್ವಿಸ್ ಮತ್ತು ಟ್ಯೂನ್ ಮಾಡಿಸೋದು ಅತ್ಯಂತ ಅಗತ್ಯ.

ಬೆಂಗಳೂರಿನ ರವಿಶಂಕರ್ ಬಳಿಯಿರುವ ಹೀರೋ ಹೋಂಡಾ ಕರಿಜ್ಮಾ ಸಿಟಿ ರಸ್ತೆಯಲ್ಲಿ ಪ್ರತಿ ಕಿ.ಮೀ.ಗೆ 41 ಮತ್ತು ಹೆದ್ದಾರಿಯಲ್ಲಿ 49 ಕಿ.ಮೀ. ಮೈಲೇಜ್ ನೀಡುತ್ತದಂತೆ. ಅಂದರೆ ಆ ಬೈಕಿನ ಆರೋಗ್ಯ ಸಮರ್ಪಕವಾಗಿದೆ. ಆದರೆ ನನ್ನ ಸ್ನೇಹಿತನೊಬ್ಬನ ಬಳಿಯಿರುವ ಕರಿಜ್ಮಾ ಬೈಕಿನ ಮೈಲೇಜ್ ಇಷ್ಟು ಉತ್ತಮವಾಗಿಲ್ಲ.


ಸ್ಪ್ಪೆಂಡರ್ ಎನ್ಎಕ್ಸ್ ಜಿ ಅಥವಾ ಪ್ಯಾಷನ್ ಪ್ಲಸ್ ಮುಂತಾದ ಬೈಕುಗಳು ಸಮತಲವಾಗಿರುವ ಎಂಜಿನ್ ಹೊಂದಿವೆ. ಇಂತಹ ಬೈಕುಗಳನ್ನು ಸ್ಟಾರ್ಟ್ ಮಾಡಿದ ತಕ್ಷಣ ಎಂಜಿನಿಗೆ ಇಂಧನ ಸಮರ್ಪಕವಾಗಿ ಪೂರೈಕೆಯಾಗುತ್ತದೆ. ಆದರೆ ಕೆಲವು ಬೈಕುಗಳನ್ನು ಸ್ಟಾರ್ಟ್ ಮಾಡಿದ ಕ್ಷಣದಲ್ಲಿ ಎಂಜಿನಿಗೆ ಇಂಧನ ಪೂರೈಕೆಯಾಗುವುದಿಲ್ಲ.

ಬೈಕ್ ಸಲಹೆಗಾರರ ಪ್ರಕಾರ ಬೈಕ್ ಚೋಕ್ ಹಾಕಿ, ಎಂಜಿನ್ ಸ್ಟಾರ್ಟ್ ಮಾಡಿ 10-15 ಸೆಕೆಂಡು ಬಿಡಬೇಕು. ಆ ಸಮಯದಲ್ಲಿ ಆಯಿಲ್ ಬಿಸಿಯಾಗಿ ಎಂಜಿನ್ ಗೆ ಸಮರ್ಪಕವಾಗಿ ಪೂರೈಕೆಯಾಗುತ್ತದೆ. ಆದರೆ ಹೆಚ್ಚು ಹೊತ್ತು ಚೋಕ್ ಹಾಕಿ ಬಿಡಬೇಡಿ. ಹಾಗೇ ಬಿಟ್ಟರೆ ಎಂಜಿನ್ ತುಂಬಾ ಆಯಿಲ್ ಹಾವಳಿಯಾದೀತು.

ಬೈಕ್ ಸ್ಟಾರ್ಟ್ ಮಾಡಿದ ಕೂಡಲೇ ಆಕ್ಸಿಲರೇಟರ್ ಕೊಡುವ ಬುದ್ದಿ ಬೇಡ. ಬೈಕ್ ಐದಾರು ಕಿ.ಮೀ. ಪ್ರಯಾಣಿಸಿದ ನಂತರ ಥ್ರೋಟಲ್ ತೆರೆದರೆ ಸಾಕು. ಯಾಕೆಂದರೆ ಆ ಸಮಯದಲ್ಲಿ ಎಂಜಿನ್ ಬಿಸಿಯಾಗದೇ ಎಂಜಿನ್ ಗೆ ಸಮರ್ಪಕವಾಗಿ ಆಯಿಲ್ ಪೂರೈಕೆಯಾಗಿರುವುದಿಲ್ಲ.

ನಿಮ್ಮ ಬೈಕಿನಲ್ಲಿ ಸಾರಿ ಗಾರ್ಡ್ ಇರಬಹುದು. ಹಿಂಭಾಗದಲ್ಲಿ ಮಹಿಳೆಯರು ಕೂತಿದ್ದರೆ ಅವರ ಸಾರಿ ಚಕ್ರಕ್ಕೆ ಸಿಲುಕಬಾರದೆಂದು ಸಾರಿ ಗಾರ್ಡ್ ಅಳವಡಿಸಿರುತ್ತಾರೆ. ನಿಮಗೆ ಅದರ ಅವಶ್ಯಕತೆಯಿರದಿದ್ದರೆ ಆ ಸಾರಿ ಗಾರ್ಡ್ ತೆಗೆದುಬಿಡಿ. ಇದರಿಂದ ಬೈಕಿನ ತೂಕ ಕೊಂಚ ಕಡಿಮೆಯಾಗುತ್ತದೆ. ಬೈಕಿನ ಮೈಲೇಜ್ ಮತ್ತು ಕ್ಷಮತೆ ಹೆಚ್ಚಾಗುತ್ತದೆ.

ಇನ್ನಷ್ಟು ಟಿಪ್ಸ್ ಗಳು
* ಸಿಗ್ನಲಿನಲ್ಲಿ ಹೆಚ್ಚು ಹೊತ್ತು ಕಾಯಬೇಕಾದ ಸಂದರ್ಭದಲ್ಲಿ ಎಂಜಿನ್ ಸ್ವಿಚ್ ಆಫ್ ಮಾಡಿ
* ಕಂಪನಿ ಸೂಚಿಸಿದಂತೆ ಸಮರ್ಪಕ ಸಮಯಕ್ಕೆ ಆಯಿಲ್ ಬದಲಾಯಿಸುತ್ತಿರಿ.
* ಟೈರ್ ಪ್ರೆಷರ್ ಸಮರ್ಪಕವಾಗಿರಲಿ.
* ನೆರಳಿನಲ್ಲಿ ಬೈಕ್ ಪಾರ್ಕ್ ಮಾಡಿ
* ಮುಂಜಾನೆಯ ಸಮಯದಲ್ಲಿ ಇಂಧನ ಟ್ಯಾಂಕ್ ತುಂಬಿಸಿದರೆ ಒಳ್ಳೆಯದು.
* ತಕ್ಷಣ ಬ್ರೇಕ್ ಹಾಕುವುದು, ಅನವಶ್ಯಕವಾಗಿ ಗೇರ್ ಬದಲಾಯಿಸದಿರಿ.

ಓದಿ: ಬೈಕ್ ಖರೀದಿಸುವರಿಗೆ ಉಪಯುಕ್ತ ಸಲಹೆಗಳು

Article Published On: Monday, December 12, 2011, 15:19 [IST]
English summary
How to improve your bikes mileage? Bike health depends on how you use your lovely bike. If you care your bike it care your money. Here is simple bike mileage improving tips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+