ಡ್ರೈವಿಂಗ್ ಮಾಡುವಾಗ ಬ್ಲೂಟೂಥ್ ಬಳಸಬಹುದೇ?

ಅಂದರೆ ಮೊಬೈಲ್ ಫೋನಿನಲ್ಲಿರುವ ಬ್ಲೂಟೂಥ್ ಬಳಸಿ ಮಾತನಾಡುತ್ತ, ಹಾಡು ಕೇಳುತ್ತ ಸಾಗುತ್ತಾರೆ. ಇದೇ ಕಾರಣಕ್ಕಾಗಿ ಹೆಚ್ಚು ದ್ವಿಚಕ್ರವಾಹನ ಚಾಲಕರು ಬ್ಲೂಟೂಥ್ ಹೆಡ್ ಸೆಟ್ ಖರೀದಿಸುತ್ತಿದ್ದಾರೆ. ಆದರೆ ಟ್ರಾಫಿಕ್ ನಲ್ಲಿ ಬ್ಲೂಟೂಥ್ ಬಳಸುವುದು ಸುರಕ್ಷಿತವೇ?
ಮೊಬೈಲ್ ಫೋನ್ ಮೂಲಕ ನೇರವಾಗಿ ಮಾತನಾಡುವುದಕ್ಕೆ ಹೋಲಿಸಿದರೆ ಬ್ಲೂಟೂಥ್ ಬಳಕೆ ಕಡಿಮೆ ಅಪಾಯಕಾರಿ ಎನ್ನಬಹುದು. ಆದರೆ ಅಮೆರಿಕದಲ್ಲಿ ನಡೆದ ಇತ್ತೀಚಿನ ಅಧ್ಯಯನದ ಪ್ರಕಾರ ಇದು ತಪ್ಪು. ಜನರು ಮೊಬೈಲ್ ಫೋನ್ ಬ್ಲೂಟೂಥ್ ಹೆಡ್ ಸೆಟ್ ಬಳಸುವ ಮೂಲಕ ಹೆಚ್ಚು ಚಂಚಲರಾಗುತ್ತಾರೆ. ಇದರಿಂದ ಹೆಚ್ಚು ಅಪಘಾತ ಸಂಭವಿಸುತ್ತದೆ ಎಂದು ವರದಿ ಹೇಳಿದೆ.
ಬ್ಲೂಟೂಥ್ ಹೆಡ್ ಸೆಟ್ ಬಳಸುವುದರಿಂದ ರಸ್ತೆಯಲ್ಲಿನ ಸದ್ದುಗದ್ದಲಗಳು ನಮ್ಮ ಕಿವಿಗೆ ಬೀಳುವುದಿಲ್ಲ. ಪಕ್ಕದ ವಾಹನದವ ಹಾರ್ನ್ ಹಾಕಿದರೂ ನಮ್ಮ ಕಿವಿಗೆ ಬೀಳುವುದಿಲ್ಲ. ಆನೆ ನಡೆದದ್ದೇ ಹಾದಿ ಅನ್ನೋ ತರಹ ಬ್ಲೂಟೂಥ್ ಹೆಡ್ ಸೆಟ್ ಬಳಸುವರು ಸಾಗುತ್ತಿರುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ.
ಇದೇ ರೀತಿ ಸಂಗೀತ ಪ್ರೇಮಿಗಳು ಕೂಡ ಎಚ್ಚರಿಕೆ ವಹಿಸಬೇಕು. ಬ್ಲೂಟೂಥ್ ಮೂಲಕ ಹಾಡುಕೇಳುತ್ತ ವಾಹನ ಚಾಲನೆ ಮಾಡುವುದು ಅಪಾಯಕಾರಿ. ವಾಹನ ಚಾಲನೆ ಮಾಡುವಾಗ ನಮ್ಮ ಕಣ್ಣು, ಕಿವಿಗಳು ಎಚ್ಚರದಿಂದ ಇರಬೇಕಾದ್ದು ಅತಿಅಗತ್ಯ.
ಬ್ಲೂಟೂಥ್ ಸಾಧನಗಳು ಬಳಸಲು ಸುಲಭ. ಆದರೆ ಸುರಕ್ಷತೆಯ ವಿಷಯಕ್ಕೆ ಬಂದರೆ ಇದನ್ನು ನೀವು ತ್ಯಜಿಸಲೇಬೇಕಾಗುತ್ತದೆ. ಅಂತಹ ಅಗತ್ಯದ ಮಾತುಕತೆ ಇದೆಯೆಂದಾದರೆ ವಾಹನವನ್ನು ಬದಿಗೆ ನಿಲ್ಲಿಸಿ ಮಾತನಾಡಿ. ಮಾತುಮುಗಿದ ನಂತರ ಹೊರಟುಬಿಡಿ. ಹ್ಯಾಪಿ ಜರ್ನಿ.(ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








