ಡ್ರೈವಿಂಗ್ ಸಮಯದಲ್ಲಿ ಭೂಕಂಪವಾದರೆ ಏನು ಮಾಡಬೇಕು?

ಭೂಕಂಪದ ಕುರಿತು ಭೀತಿ ಆರಂಭವಾಗಿದೆ. ಬೆಂಗಳೂರಿನಲ್ಲೂ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇಂಡೋನೇಷ್ಯಾದಲ್ಲಿ ಸಂಭವಿಸಿರುವ 8.7 ಪ್ರಮಾಣದ ಭೂಕಂಪದ ಪರಿಣಾಮವಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದೆ. ಹೆಚ್ಚಿನ ಜನರ ಮನಸ್ಸಿನಲ್ಲಿ ತಲ್ಲಣ ಶುರುವಾಗಿದೆ.

ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವಾಹನ ಸವಾರಿ ಮಾಡುತ್ತಿದ್ದರೆ ಏನು ಮಾಡಬೇಕು? ಪ್ರಶ್ನೆ ಸರಳವಾಗಿ ಕಂಡರೂ ಈ ಸಂದರ್ಭದಲ್ಲಿ ಕೆಲವರು ಎಚ್ಚರಿಕೆ ವಹಿಸುವುದನ್ನು ಮರೆಯುತ್ತಾರೆ. ಡ್ರೈವಿಂಗ್ ಮಾಡುತ್ತಿರುವಾಗ ಭೂಕಂಪದ ಅನುಭವವಾದರೆ ಏನು ಮಾಡಬೇಕು? ಯಾವ ರೀತಿ ಪಾರಾಗಬೇಕು? ಇಲ್ಲಿದೆ ಸಲಹೆ.

* ಸಮ್‌ಥಿಂಗ್ ರಾಂಗ್: ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದಾಗ ಯಾಕೋ ಏನೋ ಸರಿಯಿಲ್ಲ ಎಂದೆನಿಸಬಹುದು. ರಸ್ತೆಯಲ್ಲಿ ಯಾವುದಾದರೂ ಪಲ್ಲಟ ಕಾಣಬಹುದು. ಅಥವಾ ಕಾರಿನೊಳಗೆ ಕುಲುಕಾಡಿದ ಅನುಭವವಾಗಬಹುದು. ರಸ್ತೆಯಲ್ಲಿ ಒಮ್ಮೆಗೆ ಬಿರುಕುಗಳು ಕಂಡುಬರಬಹುದು. ಭೂಕಂಪದ ಸೂಚನೆಯನ್ನು ನಿರ್ಲಕ್ಷಿಸಬೇಡಿ.

* ರಸ್ತೆ ಬದಿಗೆ ಕಾರು ತನ್ನಿ: ಭೂಕಂಪದ ಅನುಭವವಾದ ತಕ್ಷಣ ಕಾರನ್ನು ರಸ್ತೆ ಬದಿಗೆ ತರಲು ಪ್ರಯತ್ನಿಸಿ. ಸಂಚಾರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಗಾಬರಿ ಕ್ರೀಯೆಟ್ ಮಾಡದಿರಿ. ರಸ್ತೆಯಲ್ಲಿ ವಾಹನಗಳ ನೂಕುನುಗ್ಗಲು ಉಂಟಾದರೆ ಮತ್ತಷ್ಟು ಅಪಾಯ. ಸಾವಧಾನವಾಗಿ ಕಾರನ್ನು ರಸ್ತೆ ಪಕ್ಕಕ್ಕೆ ತನ್ನಿರಿ.

* ವಾಹನವನ್ನು ಮೇಲ್ಸೆತುವೆ, ಕಟ್ಟಡ, ವಿದ್ಯುತ್ ಕಂಬಗಳ ಕೆಳಗೆ ನಿಲ್ಲಿಸಬೇಡಿ. ಯಾಕೆಂದರೆ ಕಾರಿನ ಬಾಡಿ ಹೆಚ್ಚು ಗಟ್ಟಿಮುಟ್ಟಾಗಿರುವುದಿಲ್ಲ. ಅದರ ಮೇಲೆ ಕಟ್ಟಡಗಳು, ಮೇಲ್ಸೆತುವೆ ಉರುಳಿಬಿದ್ದರೆ ಅಪಾಯ.

* ಕಾರಿನ ಎಂಜಿನ್ ಆಫ್ ಮಾಡಿ. ಹ್ಯಾಂಡ್ ಬ್ರೇಕ್ ಹಾಕಿ. ಕಾರಿನೊಳಗೆ ರೇಡಿಯೋ ಅಥವಾ ಇಂಟರ್ನೆಟ್ ಸಂಪರ್ಕವಿದ್ದರೆ ಭೂಕಂಪದ ತಾಜಾ ಮಾಹಿತಿ ಪಡೆಯಲು ಯತ್ನಿಸಿ. ಅದರಲ್ಲಿ ಎಚ್ಚರಿಕೆಯ ಸೂಚನೆಗಳು ಬರಬಹುದು. ಹೆಚ್ಚು ಟೆನ್ಷನ್ ಆಗದಿರಿ.

* ಭೂಕಂಪನದ ಅನುಭವ ನಿಲ್ಲುವರೆಗೆ ಕಾರಿನೊಳಗೆ ಇರಿ. ಹೊರಕ್ಕೆ ಬರದಿರಿ. ಭೂಕಂಪನದ ಅನುಭವ ನಿಂತ ನಂತರ ಹೊರಭಾಗದ ಪರಿಸರ ಅವಲೋಕಿಸಿ. ಕರೆಂಟ್ ವಯರ್ ತುಂಡಾಗಿ ರಸ್ತೆಯಲ್ಲಿ ಬಿದ್ದಿರಬಹುದು. ಕಾರಿಗೆ ಏನಾದರೂ ಅಪಾಯವಾಗಿರುವುದೇ ಪರಿಶೀಲಿಸಿ. ಕಾರಿನೊಳಗಿರುವ ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆಯೇ ಪರಿಶೀಲಿಸಿ.

* ನೀವಿರುವ ಪರಿಸರದಲ್ಲಿ ಭೂಕಂಪದಿಂದ ಹೆಚ್ಚು ಹಾನಿ ಸಂಭವಿಸಿದರೆ ತುರ್ತು ಸಂಖ್ಯೆಗಳಿಗೆ ಕರೆ ಮಾಡಿ ಡಿಸ್ಟರ್ಬ್ ಮಾಡದಿರಿ. ಯಾಕೆಂದರೆ ಅವರೂ ಈಗಾಗಲೇ ತುರ್ತುಕಾರ್ಯ ಆರಂಭಿಸಿರಬಹುದು. ನಿಮಗೆ ಅಥವಾ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಏನಾದರೂ ಗಾಯವಾಗಿದ್ದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಆದ್ಯತೆ ನೀಡಿರಿ.

* ಆದಷ್ಟು ಬೇಗ ಹೆಚ್ಚು ಸುರಕ್ಷಿತವಾಗಿರುವ ಪ್ರದೇಶಕ್ಕೆ ಹೋಗಿರಿ.

* ರಸ್ತೆಯಲ್ಲಿ ಪ್ರವಾಹ ಬಂದಿದ್ದರೆ, ಅದರ ಮೇಲೆ ವಾಹನ ಸವಾರಿ ಮಾಡುವ ದುಸ್ಸಾಹಸ ಕೈಗೊಳ್ಳದಿರಿ.

* ರಸ್ತೆಯಲ್ಲಿ ಬೃಹತ್ ಬಿರುಕು ಉಂಟಾಗಿದ್ದರೆ ಅದರ ಅಕ್ಕಪಕ್ಕ ಡ್ರೈವಿಂಗ್ ಮಾಡದಿರಿ.

* ಆದಷ್ಟು ಸಮುದ್ರ ತೀರದಲ್ಲಿ ವಾಹನ ಸವಾರಿ ತಪ್ಪಿಸಿ. ಯಾಕೆಂದರೆ ಭೂಕಂಪದ ಕಾರಣದಿಂದ ಸುನಾಮಿ ಉಂಟಾಗುವ ಸಂಭಾವ್ಯತೆ ಇರುತ್ತದೆ.

* ಒಂದು ಚಿಕ್ಕ ಭೂಕಂಪ ಉಂಟಾದ ನಂತರ ಮತ್ತೊಂದು ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರ ನೆನಪಿನಲ್ಲಿಟ್ಟುಕೊಂಡು ಸುರಕ್ಷಿತವಾಗಿರಿ. ಕಟ್ಟಡಗಳು, ಸೇತುವೆಗಳು, ಮರಗಳಡಿ ನಿಲ್ಲದಿರಿ. ಭಯಪಡಬೇಡಿ ದೇವರಿದ್ದಾನೆ...

More from DriveSpark

Article Published On: Wednesday, April 11, 2012, 16:02 [IST]
English summary
Imagine you are struck by a earth quake while driving a car, what would you do to survive? Read on to learn a few steps to be safe while traveling in a vehicle if a tremor hits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+