ವಾಹನ ಚಾಲನೆ ಪಾಠ: ಕಾರು ಬಿಡೋದು ಹೇಗೆ?

ಆರಂಭದಲ್ಲಿಯೇ ಹೇಳಿಬಿಡುತ್ತೇನೆ. ಇದು ಕಾರು ಚಾಲನೆ ಗೊತ್ತಿಲ್ಲದವರಿಗೆ ಪುಸ್ತಕದ ಬದನೆಕಾಯಿ. ಕಾರು ಚಾಲನೆಯ ಎಬಿಸಿಡಿ ಗೊತ್ತಿಲ್ಲದವರು ಸುಮ್ನೆ ಓದಿಕೊಳ್ಳಬಹುದು. ಕಾರು ಚಾಲನೆ ಗೊತ್ತಿರುವರು ಸಲಹೆ ಸೂಚನೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ನೀಡಬಹುದು. ವಾಹನ ಚಾಲನೆ ಕುರಿತ ಅನಪೇಕ್ಷಿತ ಭಯ, ಅಂಜಿಕೆ ಹೋಗಲಾಡಿಸೋದು ಈ ಲೇಖನದ ಉದ್ದೇಶ.
ಸುಮ್ಮನೆ ಕಾರು ಚಾಲನೆ ಮಾಡುವುದು ಹೇಗೆಂದು ಕಲ್ಪಿಸಿಕೊಳ್ಳಿ. ಸಂಚಾರ ದಟ್ಟನೆ ಇರುವ ರಸ್ತೆ. ನೀವು ಕಾರಿನ ಒಳಗೆ ಪ್ರವೇಶಿಸಿ ಡ್ರೈವರ್ ಸೀಟಿನಲ್ಲಿ ಪ್ರಪ್ರಥಮ ಬಾರಿಗೆ ಕುಳಿತುಕೊಂಡಿದ್ದೀರಿ. ಎದೆ ಢವಢವ ಎನುತ್ತಿದೆ. ಭಯಪಡಬೇಡಿ. ಸುಮ್ನೆ ಒಂದೆರಡು ಬಾರಿ ಜೋರಾಗಿ ಉಸಿರೆಳೆದುಕೊಂಡು ಏಕಾಗ್ರತೆ ತಂದುಕೊಳ್ಳಬಹುದು
ಒಮ್ಮೆ ಸ್ಟಿಯರಿಂಗ್ ವೀಲ್ ಮೇಲೆ ಕೈಯಿಟ್ಟುಬಿಡಿ. ಸ್ವಲ್ಪ ಧೈರ್ಯ ಬಂತಾ? ಸ್ಟಿಯರಿಂಗ್ ನಡುವೆ ಒಂದು ಚಿಹ್ನೆ ಇದೆ. ವಾಹನ ಚಾಲನೆ ಕಲಿಯುವಾಗ ನಿಮ್ಮ ಗಮನ ಅದರ ಮೇಲೆ ಕೊಂಚ ಇರಲಿ. ಸ್ಟಿಯರಿಂಗ್ ನೇರವಾಗಿದೆಯೇ, ಓರೆಯಾಗಿದೆಯೇ ಎನ್ನುವುದನ್ನು ಆ ಸ್ಟಿಯರಿಂಗ್ ಚಿಹ್ನೆಯನ್ನು ನೋಡಿಕೊಂಡು ಡ್ರೈವ್ ಮಾಡಬಹುದು.
ಸೀಟ್ ಸರಿಯಾಗಿ ಅಜೆಸ್ಟ್ ಮಾಡಿಕೊಳ್ಳಿ. ಅಜೆಸ್ಟ್ ಮಾಡುವ ಕುಟ್ಟಿ ಎಲ್ಲಿದೆ ಗೊತ್ತಿದೆಯಲ್ವ? ಅದರ ನೆರವಿನಿಂದ ಸೀಟನ್ನು ಆದಷ್ಟು ಮುಂದಕ್ಕೆ ಸರಿಸಿ. ನಿಮ್ಮ ಎರಡೂ ಕಾಲು ಕ್ಲಚ್, ಬ್ರೇಕ್, ಆಕ್ಸಿಲರೇಟರನ್ನು ಆರಾಮವಾಗಿ ತುಳಿಯುವಂತೆ ಸೀಟ್ ಇರಲಿ. ಕೂತಿರೋದು ಕಂಫರ್ಟ್ ಅನಿಸ್ತಾ ಇದೆಯಲ್ವಾ? ಗುಡ್.
ಸೀಟ್ ಬೆಲ್ಟ್ ಹಾಕಿಕೊಳ್ಳಿ. ಕಿಟಕಿಯ ಗಾಜನ್ನು ಕೆಳಕ್ಕೆ ಸರಿಸಿ. ಹಿಂಭಾಗದಲ್ಲಿರುವ ವಾಹನಗಳು ಸರಿಯಾಗಿ ಕಾಣಬೇಕಲ್ವ? ಕಿಟಕಿ ಹೊರಭಾಗದಲ್ಲಿರುವ ರಿಯರ್ ವ್ಯೂ ಮಿರರ್ ಅಜೆಸ್ಟ್ ಮಾಡ್ಕೊಳ್ಳಿ. ಕಾರಿನೊಳಗಿರುವ ಮಿರರ್ ಕೂಡ ಹೊಂದಾಣಿಕೆ ಮಾಡಿಕೊಳ್ಳಿ.
ನಿಮ್ಮ ಬಲಗಾಲಲ್ಲಿ ಆಕ್ಸಿಲರೇಟರ್, ಎಡಗಾಲಿನಲ್ಲಿ ಕ್ಲಚ್ ಇರಲಿ. ಸುಮ್ನೆ ಕಾಲಿಟ್ಟುಕೊಳ್ಳಿ. ಒತ್ತೋಕೆ ಹೋಗ್ಬೇಡಿ. ನಡುವೆ ಬ್ರೇಕ್ ಇದೆಯಲ್ವ. ಆಕ್ಸಿಲರೇಟರ್ ಮತ್ತು ಬ್ರೇಕ್ ತುಳಿಯಲು ಒಂದೇ ಕಾಲು(ಬಲ) ಬಳಸಬೇಕು. ಆಕ್ಸಿಲರೇಟರ್ ಬಿಟ್ಟು ಬ್ರೇಕ್ ತುಳಿದರೆ ಸಾಕು.
ಹೆಡ್ ಲೈಟ್, ರೈಟ್ ಸಿಗ್ನಲ್, ಲೆಫ್ಟ್ ಸಿಗ್ನಲ್ ಉರಿಸೋದು ಹೇಗೆ ಎಂದು ಸ್ಟಿಯರಿಂಗ್ ವಿಲ್ ಪಕ್ಕದಲ್ಲಿರುವ ಸ್ವಿಚ್ ಗಳಿಂದ ತಿಳಿದುಕೊಳ್ಳಿ. ಸುಮ್ನೆ ಒಮ್ಮೆ ಗೇರ್ ಗಳನ್ನು ನೋಡಿಕೊಳ್ಳಿ. ಫಸ್ಟ್, ಸೆಕೆಂಡ್, ಥರ್ಡ್, ಫೋರ್ತ್ ಮತ್ತು ರಿವರ್ಸ್ ಗೇರ್ ಹೇಗೆ ಹಾಕೋದು ಅಂತ ಕಾರು ಸ್ಟಾರ್ಟ್ ಮಾಡದೆಯೇ ಪ್ರಾಕ್ಟಿಸ್ ಮಾಡಿ. ಅದರಲ್ಲಿರುವ ಅಂಕೆಗೆ ತಕ್ಕಂತೆ ಗೇರ್ ಹಾಕಿ.
ಸರಿ ಕಾರು ಸ್ಟಾರ್ಟ್ ಮಾಡೋಣ್ವ? ಮುಂದಿನ ಪುಟ ನೋಡಿ


Click it and Unblock the Notifications








