ಡ್ರೈವಿಂಗ್ ಪಾಠ: ಕಾರು ಚಾಲನೆ ಸುಲಭವಾಗಿ ಕಲಿಯಿರಿ

(ಮುಂದುವರೆದ ಭಾಗ)ಬ್ರೇಕ್ ಗಟ್ಟಿಯಾಗಿ ಅದುಮಿಟ್ಟುಕೊಳ್ಳಿ. ನಿಮ್ಮ ಸೀಟು ಪಕ್ಕದಲ್ಲಿ ಒಂದು ಪಾರ್ಕಿಂಗ್ ಬ್ರೇಕ್ ಅಥವಾ ಹ್ಯಾಂಡ್ ಬ್ರೇಕ್ ಇದೆ. ಅದರ ಮೇಲಿರುವ ಬಟನ್ ಕ್ಲಿಕ್ ಮಾಡಿ ಅದನ್ನು ಕೆಳಕ್ಕೆ ಮಾಡಿ. ಎಡಗಾಲಿನಲ್ಲಿರುವ ಕ್ಲಚ್ ಪೂರ್ತಿ ತುಳಿದುಬಿಡಿ. ತಪ್ಪಿಯೂ ಆಕ್ಸಿಲರೇಟರ್ ಅದುಮದಿರಿ. ಈಗ ಗೇರನ್ನು ನ್ಯೂಟ್ರೊಲಿಗೆ ತನ್ನಿ.

ಕಾರಿನ ಕೀಲಿಕೈ ಹಾಕೋದು ಎಲ್ಲಿ ಎಂದು ಗೊತ್ತಲ್ವ? ಕೀಲಿಕೈ ಹಾಕಿ ಎರಡು ಸ್ಟೆಪ್ ಮೇಲಕ್ಕೆ ಮಾಡಿ ಸ್ಟಾರ್ಟ್ ಮಾಡಿ. ನಿಮ್ಮ ಕಾಲು ಕ್ಲಚ್ ಪೂರ್ತಿ ಅದುಮಿರಲಿ. ಗೇರ್ ನ್ಯೋಟ್ರೊಲ್ ನಲ್ಲಿರಲಿ. ಯಾವುದೇ ಗೇರ್ ಹಾಕುವಾಗ ಮ್ಯಾನುಯಲ್ ಗೇರ್ ಕಾರುಗಳಲ್ಲಿ ಕ್ಲಚ್ ಪೂರ್ತಿಯಾಗಿ ಅದುಮಿಟ್ಟುಕೊಳ್ಳಬೇಕು. ಕಾರು ಸ್ಟಾರ್ಟ್ ಆಗಿರಬೇಕಲ್ವ? ಭಯಪಡಬೇಡಿ. ದೇವರಿದ್ದಾನೆ

ನಿಮ್ಮ ಎರಡು ಕಾಲು ಕ್ಲಚ್ ಮತ್ತು ಬ್ರೇಕ್ ಮೇಲಿದೆಯಲ್ವ. ಬ್ರೇಕ್ ಮೇಲಿಂದ ಕಾಲು ತೆಗೆದುಬಿಡಿ(ಕಾರು ನ್ಯೂಟ್ರೊಲ್ ನಲ್ಲಿರೊದನ್ನು ಖಚಿತಪಡಿಸಿಕೊಳ್ಳಿ). ಬ್ರೇಕ್ ಮೇಲಿನಿಂದ ಕಾಲು ತೆಗೆದು ಆಕ್ಸಿಲರೇಟರ್ ಮೇಲೆ ಇಟ್ಟುಬಿಡಿ(ನಿಲ್ಲಿ, ಈಗ್ಲೇ ಒತ್ತಬೇಡಿ). ಫಸ್ಟ್ ಗೇರ್ ಹಾಕಿ. ಮೆಲ್ಲಗೆ ಕ್ಲಚ್ ರಿಲೀಸ್ ಮಾಡುತ್ತ ಬನ್ನಿ(ಒಮ್ಮೆಗೆ ಬಿಡಬೇಡಿ). ಎಡಗಾಲಿನಲ್ಲಿ ನಿಧಾನವಾಗಿ ಕ್ಲಚ್ ಬಿಡುತ್ತ, ಬಲಗಾಲಿನಲ್ಲಿ ನಿಧಾನವಾಗಿ ಆಕ್ಸಿಲರೇಟರ್ ಒತ್ತುತ್ತ ಬನ್ನಿ.

ಕಾರು ಎಂಜಿನ್ ಆಫ್ ಆಯ್ತಾ? ಇನ್ನೊಮ್ಮೆ ಮೊದದಿಂದ ಆಗ ಹೇಳಿಕೊಟ್ಟ ಹಾಗೆ ಮಾಡುತ್ತ ಬನ್ನಿ. ಕ್ಲಚ್ ನಿಧಾನವಾಗಿ ಬಿಡುತ್ತ, ಆಕ್ಸಿಲರೇಟರ್ ನಿಧಾನವಾಗಿ ಅದುಮುವ ಕಲೆ ನಿಮಗೆ ಅರಿವಾಗುವರೆಗೆ ಕಾರು ಆಫ್ ಆಗುತ್ತ ಇರುತ್ತದೆ. ಅರೇ ಕಾರು ಹೋಗ್ತಾ ಇದೆ. ವೆರಿಗುಡ್,

ಈಗ ಫಸ್ಟ್ ಗೇರ್ ನಲ್ಲಿ ಇದ್ದಿರಲ್ವ? ಕಾರು ಸ್ಲೋ ಆಗಿ ಹೋಗ್ತಾ ಇದೆ. ಸೆಕೆಂಡ್ ಗೇರ್ ಗೆ ಶಿಫ್ಟ್ ಮಾಡಿ. ಆಕ್ಸಿಲರೇಟರ್ ಸ್ವಲ್ಪಸ್ವಲ್ಪವೇ ಹೆಚ್ಚು ಅದುಮುತ್ತ ಬನ್ನಿ. ವೇಗದಲ್ಲಿ ಹೋಗಲು ಥರ್ಡ್ ಗೇರಿಗೆ ಬನ್ನಿ. ಇವತ್ತು ಫೋರ್ಥ್ ಗೇರ್ ಬೇಡ. ಏನಾದರೂ ಜಂಪ್/ಹಂಪ್ ಕಂಡರೆ ಎರಡನೇ ಗೇರಿಗೆ ಬಂದು ಹಂಪ್ ಮೇಲೆ ಚಲಾಯಿಸಿ. ಎದುರಲ್ಲಿ ಏನಾದರೂ ಅಡ್ಡಬರೋದು ದೂರದಲ್ಲಿ ಕಂಡಾಕ್ಷಣ, ಆಕ್ಸಿಲರೇಟರಿನಿಂದ ಕಾಲು ತೆಗೆದು ನಿಧಾನವಾಗಿ ಬ್ರೇಕ್ ಹಾಕಿ.

ಕಾರು ನಿಲ್ಲಿಸೋದು ಹೇಗೆ ಅಂತ ಇನ್ನೂ ಹೇಳಿಕೊಟ್ಟಿಲ್ಲ ಅಲ್ವಾ? ಆದಷ್ಟು ಸಮತಟ್ಟಿರುವ ರಸ್ತೆ ಬದಿಗೆ ಬನ್ನಿ. ಕ್ಲಚ್ ಪೂರ್ತಿಯಾಗಿ ತುಳಿದಿರಿ. ಬ್ರೇಕ್ ಕೂಡ ಹಾಕಿ. ಯಾವ ಗೇರಿನಲ್ಲಿದ್ದೀರೋ ಅಲ್ಲಿಂದ ಹಿಂದಕ್ಕೆ ಬಂದು ನೀಟ್ರೋಲಿಗೆ ತನ್ನಿ. ಕೀಲಿಕೈ ತೆಗೆದು ಎಂಜಿನ್ ಆಫ್ ಮಾಡಿ. ಹ್ಯಾಂಡ್ ಬ್ರೇಕ್ ಹಾಕಿ. ಹ್ಯಾಂಡ್ ಬ್ರೇಕ್ ಮೇಲೆ ಇರೋ ಬಟನ್ ಕ್ಲಿಕ್ ಮಾಡಿ ಮೇಲಕ್ಕೆ ಮಾಡಿದರೆ ಆಯ್ತು. ಕ್ಲಚ್ ಬಿಡಿ. ಮೆಲ್ಲಗೆ ಬ್ರೇಕ್ ಕೂಡ ಬಿಡಿ. ಕಾರು ಮೂವ್ ಆಗ್ತಾ ಇಲ್ಲ ಅನ್ನೋದು ಖಚಿತವಾಗಿದೆ ತಾನೇ. ಸರಿ ಸೀಟ್ ಹಿಂದಕ್ಕೆ ಸರಿಸಿ. ಕಿಟಕಿ ಗಾಜು ಮೇಲಕ್ಕೆ ಏರಿಸಿ. ಸೀಟ್ ಬೆಲ್ಟ್ ತೆಗೆದು ಕೆಳಗಿಳಿದುಬಿಡಿ.

ಕಂಗ್ರಾಜ್ಯುಲೇಷನ್! ಮ್ಯಾನುಯಲ್ ಗೇರ್ ನಲ್ಲಿ ಕಾರು ಚಾಲನೆ ಕಾಲ್ಪನಿಕವಾಗಿ ನೀವು ಕಲಿತುಬಿಟ್ಟಿರಿ. ಕಾರು ಚಾಲನೆ ಅನ್ನೋದು ಬ್ರಹ್ಮಾಂಡ ವಿದ್ಯೆಯೇನೂ ಅಲ್ಲವೆಂದು ನಿಮಗೀಗ ಅರಿವಾಗಿರಬಹುದು. ಕಾರಿನ ಸ್ಟಿಯರಿಂಗ್ ಬ್ಯಾಲೆನ್ಸ್, ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ರಿವರ್ಸ್ ತೆಗೆಯೋದು, ಏರು ರಸ್ತೆಯಲ್ಲಿ ಕಾರು ನಿಲ್ಲಿಸೋದು ಇತ್ಯಾದಿ ಹಲವು ಅಂಶಗಳನ್ನು ಇನ್ನು ಕಲಿಯಲಿಕ್ಕಿದೆ.

ಹೆಚ್ಚು ಹೆಚ್ಚು ಡ್ರೈವ್ ಮಾಡಿದಷ್ಟು ಡ್ರೈವಿಂಗ್ ಕಲೆ ನಿಮಗೆ ಸಂಪೂರ್ಣವಾಗಿ ನಿಮಗೆ ಒಲಿಯಬಹುದು. ವಾಹನ ಚಾಲನೆ ನೀತಿನಿಯಮಗಳು, ಸಂಚಾರಿ ನಿಯಮಗಳು ಇತ್ಯಾದಿಗಳನ್ನು ಪಾಲಿಸಿ ಅತ್ಯುತ್ತಮ ಚಾಲಕ ನೀವಾಗಿ. ಸರಿ ಕಲ್ಪನೆ ಮೂಲಕ ಕಾರು ಕಲಿತದ್ದು ಸಾಕು. ಇನ್ನು ಪರಿಣತ ಚಾಲಕರನ್ನು ಪಕ್ಕದಲ್ಲಿಟ್ಟುಕೊಂಡು ಡ್ರೈವ್ ಮಾಡಿ. ಅಥವಾ ಡ್ರೈವಿಂಗ್ ಸ್ಕೂಲಿಗೆ ಸೇರಿಬಿಡಿ. ಒಬ್ರೆ ಡ್ರೈವ್ ಮಾಡೋಕೆ ಹೋಗಿ ಎಲ್ಲಾದರೂ ಅಪಘಾತ ಮಾಡಿ ನಮ್ ಮೇಲೆ ದೂರು ಹಾಕಿಬಿಟ್ಟಿರಾ.. ಹುಷಾರ್!

ಓದಿ: ಎಲ್ಎಲ್: ಲರ್ನಿಂಗ್ ಲೈಸನ್ಸ್ ಪಡೆಯೋದು ಹೇಗೆ?

ಸ್ಟಿಯರಿಂಗ್ ವೀಲ್ ಹಿಡಿಯೋದು ಹೇಗೆ?

Article Published On: Friday, March 30, 2012, 14:47 [IST]
English summary
How to Drive Car in Manual Transmission. Driving Lessons. Car driving for beginners. Car driving is not big deal. Keep this rules and suggests in mind when you start driving.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+