ಕಾರಿನಲ್ಲಿ ಕವರ್ ಹಾಗೇ ಇದೆಯೇ? ಕಂಪನಿ ಕೂಡ ಹೇಳುವುದಿಲ್ಲ... ನಿಜ ಗೊತ್ತಾದರೆ ಕಿತ್ತು ಬಿಸಾಡುತ್ತೀರ!
ಜೀವನದಲ್ಲಿ ಒಮ್ಮೆಯಾದರು ಹೊಸ ಕಾರು ಖರೀದಿಸುವ ಕನಸು ಹಲವರಿಗಿರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸುವ ಕಾರನ್ನು ಜವಾಬ್ದಾರಿಯುತವಾಗಿ ಕಾಪಾಡಿಕೊಳ್ಳುತ್ತೇವೆ. ಇದಕ್ಕಾಗಿ ಕಾರ್ ವಾಷ್ ಮಾಡುವುದು, ಇಂಟೀರಿಯರ್ ಸ್ವಚ್ಚವಾಗಿಡುವಂತಹ ಕೆಲಸಗಳು ಸರ್ವೇ ಸಾಮಾನ್ಯ. ಇದರ ಜೊತೆಗೆ ಹಲವರು ಹೊಸ ಕಾರು ಖರೀದಿಸಿದ ಬಳಿಕ ಶೋರೂಂನಿಂದ ಹೊರಬಂದಾಗ ಸೀಟ್‌ಗಳ ಮೇಲಿನ ಪ್ಲಾಸ್ಟಿಕ್ ಕವರ್‌ಗಳನ್ನು ತೆಗೆಯುವುದಿಲ್ಲ. ಅವುಗಳನ್ನು ತೆಗೆದರೆ ಕೊಳಕಾಗುತ್ತದೆ ಎಂಬ ಭಯದಿಂದ ಅನೇಕರು ಹಾಗೇ ಬಿಟ್ಟಿರುತ್ತಾರೆ. ಆದ್ರೆ ಇವು ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.
ಈ ಹಿಂದೆ ಹೊಸ ಕಾರುಗಳು ಉತ್ಪಾದನಾ ಸ್ಥಾವರದಿಂದ ಡೀಲರ್ ಬಳಿ ತಲುಪುವಾಗ ಸೀಟ್‌ಗಳ ಮೇಲೆ ಪ್ಲಾಸ್ಟಿಕ್ ಕವರ್‌ಗಳಿಂದ ಸುತ್ತಲಾಗಿರುತ್ತದೆ. ಹೊಸ ಕಾರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಹಾಗೂ ಕೊಳೆಯಾಗದಂತೆ ನೋಡಿಕೊಳ್ಳಲು ಹೀಗೆ ಮಾಡುತ್ತಾರೆ. ಇತ್ತೀಚಿನ ಆಧುನಿಕ ಕಾರುಗಳಲ್ಲಿ, ಕಾರನ್ನು ರಕ್ಷಿಸಲು ಮರುಬಳಕೆ ಮಾಡಿದ ಬಟ್ಟೆಯಂತಹ ಕವರ್‌ಗಳನ್ನು ಬಳಸುತ್ತಿದ್ದಾರೆ.

ಇದು ಒಳಾಂಗಣವನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ, ಇಂತಹ ಬಟ್ಟೆಯಂತಹ ಕವರ್‌ಗಳಿಂದ ಯಾವುದೇ ಹಾನಿಯಿರುವುದಿಲ್ಲ. ಆದರೆ ಅನೇಕ ಗ್ರಾಹಕರು ಸೀಟಿನ ಮೇಲೆ ಪ್ಲಾಸ್ಟಿಕ್ ಕವರ್ ಇನ್ನೂ ಬಳಸುತ್ತಿದ್ದಾರೆ. ಕಾರು ಚಾಲನೆ ಮಾಡುವಾಗ ಇದು ತುಂಬಾ ಅಪಾಯಕಾರಿ. ನೀವು ಪ್ಲಾಸ್ಟಿಕ್ ಕವರ್ ಹೊಂದಿರುವ ಕಾರಿನಲ್ಲಿ ಕುಳಿತು ಡ್ರೈವ್ ಮಾಡುವವರಾಗಿದ್ದರೇ ಈಗಾಗಲೇ ನಿಮಗೆ ತಿಳಿದಿರುತ್ತದೆ.
ಪ್ಲಾಸ್ಟಿಕ್ ಶೀಟ್ ನಿಮ್ಮನ್ನು ಪಕ್ಕಕ್ಕೆ ಅಥವಾ ಬ್ರೇಕ್ ಹೊಡೆದಾಗ ಮುಂದಕ್ಕೆ ಜಾರುವಂತೆ ಮಾಡುತ್ತದೆ. ಇದು ಅತ್ಯಂತ ಅಪಾಯಕಾರಿ, ಏಕೆಂದರೆ ಕಾರು ಚಾಲನೆಯಲ್ಲಿ ಡ್ರೈವರ್ ಗಮನ ಒಂದು ಕ್ಷಣ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಅಲ್ಲದೇ ಸೀಟ್ ಮತ್ತು ಡ್ಯಾಶ್ ಬೋರ್ಡ್ ಅಥವಾ ಸ್ಟೀರಿಂಗ್ ವೀಲ್ ಅನ್ನು ಪ್ಲಾಸ್ಟಿಕ್ ಕವರ್‌ಗಳಿಂದ ಸುತ್ತಿದ್ದರೇ ಅದನ್ನು ತೆಗೆಯದೆ ಹಾಗೆಯೇ ಚಾಲನೆ ಮಾಡುತ್ತಿರುತ್ತಾರೆ.

ಡ್ಯಾಷ್ ಬೋರ್ಡ್ ಹಾಗೂ ಸ್ಟೀರಿಂಗ್ ವೀಲ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುತ್ತವೆ. ಈ ಪ್ಲಾಸ್ಟಿಕ್ ಕವರ್‌ಗಳು ಏರ್ ಬ್ಯಾಗ್‌ಗಳ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗೆಯೇ ನೀವು ನಿಮ್ಮ ಕಾರನ್ನು ನೇರ ಬಿಸಿಲಿನಲ್ಲಿ ನಿಲ್ಲಿಸಿದಾಗ, ಸೀಟಿನ ಮೇಲಿನ ಪ್ಲಾಸ್ಟಿಕ್ ಕವರ್ ವಿಷಕಾರಿ ಹೊಗೆಯನ್ನು ಹೊರಸೂಸಲು ಪ್ರಾರಂಭಿಸುತ್ತದೆ. ಈ ಹೊಗೆ ಕ್ಯಾಬಿನ್ ತುಂಬಾ ಹರಡುತ್ತದೆ. ಇದು ನಿಯಮಿತವಾಗಿ ಸಂಭವಿಸಿದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಆದ್ದರಿಂದ ನೀವು ಕಾರಿನ ಸೀಟ್ ಅಥವಾ ಕ್ಯಾಬಿನ್ ಒಳಗಿನ ಇತರ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಹೊಂದಿದ್ದರೆ, ಅದನ್ನು ತೆಗೆಯುವುದು ಉತ್ತಮ. ವಾಸ್ತವವಾಗಿ, ನೀವು ಹೊಸ ಕಾರನ್ನು ಖರೀದಿಸಿದರೆ ಮತ್ತು ಅದರ ಸೀಟ್ ಕವರ್ ಮತ್ತು ಕ್ಯಾಬಿನ್ ಮೇಲೆ ಪ್ಲಾಸ್ಟಿಕ್ ಕವರ್‌ಗಳಿದ್ದರೆ, ಡೆಲಿವರಿ ಕೊಡುವ ಮೊದಲು ಕವರ್‌ಗಳನ್ನು ತೆಗೆದುಕೊಂಡು ಹೋಗುವಂತೆ ಡೀಲರ್ ಸಿಬ್ಬಂದಿಯನ್ನು ಕೇಳಬೇಕು.

ಕ್ಯಾಬಿನ್ ಒಳಗೆ ಅಥವಾ ಆಸನಗಳ ಮೇಲೆ ಪ್ಲಾಸ್ಟಿಕ್ ಕವರ್ ಬಳಸುವುದರಿಂದ ನಿಮಗೆ, ನಿಮ್ಮ ಕಾರಿಗೆ ಒಳ್ಳೆಯದಲ್ಲ. ಒಳಾಂಗಣವು ಕೊಳಕಾಗುತ್ತದೆ ಎಂದು ನೀವು ಚಿಂತೆ ಮಾಡುತ್ತಿದ್ದರೆ, ಕಾರ್ ಕ್ಯಾಬಿನ್ ಅನ್ನು ಹೊಸದಾಗಿ ಕಾಣುವಂತೆ ಮಾಡುವ ಹಲವಾರು ಕಾರ್ ಇಂಟಿರಿಯರ್ ಕೇರ್ ಕಿಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲು ಬಟ್ಟೆಯಂತಹ ಕವರ್‌ಗಳನ್ನು ಖರೀದಿಸುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








