ಕಾರು ಮಾಲೀಕರೇ ಈ ತಪ್ಪು ಮಾಡಬೇಡಿ: ಕ್ಲಚ್ ಪ್ಲೇಟ್ ಢಮಾರ್: ಕಂಪನಿ ಕೂಡ ಹೇಳುವುದಿಲ್ಲ!

ಇತ್ತೀಚೆಗೆ ಸಾಲು ಸಾಲು ಹಬ್ಬಗಳು ಬಂದು ಬಹುತೇಕ ಎಲ್ಲಾ ಕಾರು ಬ್ರಾಂಡ್‌ಗಳಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ತಯಾರಕರು ಕೂಡ ಉತ್ತಮ ರಿಯಾಯಿತಿಗಳನ್ನು ನೀಡುವ ಮೂಲಕ ಹಲವರು ಗ್ರಾಹಕರ ಹೊಸ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದಾರೆ. ದಸರಾ, ದೀಪಾವಳಿಯಲ್ಲಿ ಲಕ್ಷಾಂತರ ಕಾರುಗಳು ಮಾರಾಟವಾಗಿವೆ. ಇದರಲ್ಲಿ ಬಹುತೇಕರು ತಮ್ಮ ಮೊದಲ ಹೊಸ ಕಾರನ್ನು ಖರೀದಿಸಿದವರು ಕೂಡ ಇದ್ದಾರೆ. ಇವರಿಗೆ ವಾಹನವನ್ನು ಓಡಿಸಲು ಬರುತ್ತದೆಯಾದರೂ ಉತ್ತಮ ನಿರ್ವಹಣೆ ಹೇಗೆ ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಹೊಸ ಕಾರುಗಳನ್ನು ಓಡಿಸುವಾಗ ಈ ತಪ್ಪುಗಳನ್ನು ಮಾಡಿದ್ರೆ ಖಂಡಿತ ಕ್ಲಚ್ ಪ್ಲೇಟ್ ಹಾನಿಗೊಳಗಾಗುತ್ತದೆ.

ಹೌದು, ಹೊಸ ಕಾರು ಮಾಲೀಕರಲ್ಲಿ ಹೆಚ್ಚಿನವರು ಚಾಲನಾ ಕೌಶಲ್ಯಗಳನ್ನು ಹೊಂದಿರುವುದಿಲ್ಲ. ಸರಿಯಾದ ಚಾಲನಾ ಕೌಶಲ್ಯವಿಲ್ಲದಿದ್ದರೇ ಕಾರಿನ ಕೆಲವು ಯಾಂತ್ರಿಕ ಭಾಗಗಳ ಹಾನಿಗೆ ಕಾರಣವಾಗಬಹುದು. ಹಾಗಾಗಿ ಹೊಸ ಕಾರು ಖರೀದಿಸಿ ವಾಹನವನ್ನು ಓಡಿಸುವಾಗ ಸರಿಯಾದ ಕ್ಲಚ್ ಬಳಕೆ ಹೇಗೆ ಎಂಬುದರ ಬಗ್ಗೆ ತಿಳಿದಿಲ್ಲದವರಿಗಾಗಿಯೇ ಈ ಲೇಖನದಲ್ಲಿ ಒಂದಷ್ಟು ಸಲಹೆಗಳನ್ನು ನೀಡಿದ್ದೇವೆ.

how-to-use-clutch-in-car-best-tips-and-tricks

ಕಾಲುಗಳನ್ನು ಕ್ಲಚ್ ಮೇಲೆ ಇಟ್ಟುಕೊಂಡು ವಾಹನ ಚಲಾಯಿಸಬೇಡಿ, ಏಕೆಂದರೆ ಡ್ರೈವಿಂಗ್ ಮಾಡುವಾಗ ಕ್ಲಚ್ ಪೆಡಲ್ ಅನ್ನು ಲಘುವಾಗಿ ಒತ್ತುವುದರಿಂದ ಕ್ಲಚ್ ಪ್ಲೇಟ್ ಬೇಗನೆ ಸವೆಯಬಹುದು. ಚಾಲಕರು ಅಗತ್ಯವಿದ್ದಾಗ ಮಾತ್ರ ಕ್ಲಚ್ ಪೆಡಲ್ ಒತ್ತಬೇಕು. ಜೊತೆಗೆ ಹಲವರು ಆಕ್ಸಿಲರೇಟರ್ ಮತ್ತು ಕ್ಲಚ್ ಅನ್ನು ಏಕಕಾಲದಲ್ಲಿ ಒತ್ತುವುದನ್ನು ಮಾಡುತ್ತಾರೆ. ಇದನ್ನು ಹೆಚ್ಚಾಗಿ ಹೊಸದಾಗಿ ಕಾರನ್ನು ಓಡಿಸುವವರು ಮಾಡುತ್ತಾರೆ.

ಆಕ್ಸಿಲರೇಟರ್ ಮತ್ತು ಕ್ಲಚ್ ಅನ್ನು ಏಕಕಾಲದಲ್ಲಿ ಒತ್ತುವುದು ಕೂಡ ಕ್ಲಚ್ ಪ್ಲೇಟ್ ಹಾನಿಗೆ ಮೂಲ ಕಾರಣವಾಗಬಹುದು, ಇದು ದುಬಾರಿ ದುರಸ್ತಿ ಅಥವಾ ರಿಪೇರಿಗಳಿಗೆ ಕಾರಣವಾಗುತ್ತದೆ. ಹಾಗಾಗಿ ಆಕ್ಸಿಲರೇಟರ್ ಮತ್ತು ಕ್ಲಚ್ ಪೆಡಲ್ ಎರಡನ್ನೂ ಏಕಕಾಲದಲ್ಲಿ ಒತ್ತುವುದನ್ನು ತಪ್ಪಿಸಬೇಕು. ಇಲ್ಲದಿದ್ದರೇ ಕ್ಲಚ್ ಪ್ಲೇಟ್ ತ್ವರಿತವಾಗಿ ಹಾನಿಗೊಳಗಾಗುತ್ತದೆ.

how-to-use-clutch-in-car-best-tips-and-tricks

ಹಾಗಯೇ ಚಾಲಕರು ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತುವ ಬದಲು ಅರ್ಧ ಒತ್ತುವ ಮೂಲಕ ಗೇರ್ ಶಿಫ್ಟ್ ಮಾಡುತ್ತಾರೆ. ಇದು ಕ್ಲಚ್ ಪ್ಲೇಟ್ ಹಾನಿಯಾಗಲು ಅತಿದೊಡ್ಡ ಕಾರಣವಾಗಬಹುದು, ಗೇರ್‌ಗಳನ್ನು ಬದಲಾಯಿಸುವಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಬೇಕು. ಕ್ಲಚ್ ಅರ್ಧ ಒತ್ತುವ ಅಭ್ಯಾಸವು ಕ್ಲಚ್ ಪ್ಲೇಟ್ ಅನ್ನು ತ್ವರಿತವಾಗಿ ಹಾನಿಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯಬೇಡಿ.

ಸಿಗ್ನಲ್‌ನಲ್ಲಿ ನಿಲ್ಲಿಸುವಾಗ, ಕ್ಲಚ್ ಮೇಲೆ ಅನಗತ್ಯವಾಗಿ ಒತ್ತಡವನ್ನು ಹೇರುವುದನ್ನು ತಪ್ಪಿಸಿ, ಬದಲಿಗೆ ನ್ಯೂಟ್ರಲ್‌ಗೆ ಹಾಕುವುದು ಉತ್ತಮ. ಇದು ಆಗಾಗ್ಗೆ ಮೆಕ್ಯಾನಿಕ್ ಭೇಟಿಗಳನ್ನು ತಪ್ಪಿಸುತ್ತದೆ. ಬ್ರೇಕಿಂಗ್ ಮತ್ತು ಗೇರ್ ಬದಲಾಯಿಸುವಾಗ ಕ್ಲಚ್ ಅನ್ನು ಸರಿಯಾಗಿ ಬಳಸಬೇಕು, ಆರಂಭದಲ್ಲಿ ಎಲ್ಲವೂ ಕಷ್ಟವೆನಿಸಿದರೂ ನಿಮಗೆ ದುಬಾರಿ ದುರಸ್ತಿ ಕರ್ಚುಗಳನ್ನು ತಪ್ಪಿಸುತ್ತವೆ.

how-to-use-clutch-in-car-best-tips-and-tricks

ಈ ಅಭ್ಯಾಸಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಮಾನ್ಯ ತಪ್ಪುಗಳನ್ನು ತಪ್ಪಿಸುವ ಮೂಲಕ, ಕಾರಿನ ಕ್ಲಚ್ ಪ್ಲೇಟ್ ಜೀವಿತಾವಧಿಯನ್ನು ಹೆಚ್ಚಿಸಬಹುದು. ಅಲ್ಲದೇ ಕಾಲಾನಂತರದಲ್ಲಿ ಉತ್ತಮ ನಿರ್ವಹಣಾ ಕೌಶಲ್ಯಗಳನ್ನು ಕೂಡ ಕಲಿಯುತ್ತೇವೆ. ಇನ್ನೊಂದು ಮುಖ್ಯ ವಿಷಯವೆಂದರೆ ಕಾರಿನ ಕ್ಲಚ್ ಪ್ಲೇಟ್ ನಿಯಮಿತವಾಗಿ ಬದಲಾಯಿಸಬೇಕು, ಇದು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ, ದ್ವಿಚಕ್ರ ವಾಹನಗಳಿಂದ ನಾಲ್ಕು ಚಕ್ರದ ವಾಹನಗಳಿಗೆ ಗಮನಾರ್ಹ ಬದಲಾವಣೆ ಕಂಡುಬಂದಿದೆ, ಇದರ ಪರಿಣಾಮವಾಗಿ ಪ್ರತಿ ವರ್ಷ ಲಕ್ಷಾಂತರ ಕಾರುಗಳು ರಸ್ತೆಗೆ ಇಳಿಯುತ್ತಿವೆ. ಈ ಹೆಚ್ಚಳದ ಹೊರತಾಗಿಯೂ, ನುರಿತ ಚಾಲಕರ ಕೊರತೆಯಿದೆ. ಅನೇಕರು ಮೊದಲ ಬಾರಿಗೆ ಕಾರು ಖರೀದಿಸುವವರು ಚಾಲನಾ ತಪ್ಪುಗಳನ್ನು ಮಾಡುವ ಮೂಲಕ ಹಲವು ಅಪಘಾತಗಳು ಸಂಭವಿಸಿರುವ ಹಲವು ಉದಾಹರಣೆಗಳಿವೆ.

More from DriveSpark

Article Published On: Sunday, November 10, 2024, 9:00 [IST]
English summary
How to use clutch in car best tips and tricks
Read more on tips india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+