Safe car driving: ಸುರಕ್ಷಿತ ಕಾರು ಖರೀದಿಸುತ್ತಿದ್ದೀರಾ? ಈ ರಹಸ್ಯಗಳ ಬಗ್ಗೆ ತಿಳಿದಿರಲಿ!

Safe car driving: ಕಾರಿನ ಗುಣಮಟ್ಟವನ್ನು ನಿರ್ಣಯಿಸಲು ಕ್ರಾಷ್ ಟೆಸ್ಟ್‌ ಮಾಡಿ ಸುರಕ್ಷತಾ ರೇಟಿಂಗ್‌ ನೀಡಲಾಗುತ್ತದೆ. ಈ ರೇಟಿಂಗ್‌ಗಳ ಮೂಲಕ ವಾಹನ ಯಾವ ಮಟ್ಟಿಗೆ ಅಪಘಾತಗಳಲ್ಲಿ ಪ್ರಯಾಣಿಕರನ್ನು ರಕ್ಷಿಸಬಲ್ಲದು ಎಂಬುದನ್ನು ನಿರ್ಣಯಿಸಲಾಗುತ್ತದೆ. ಆದರೆ ಕಾರು ಗುಣಮಟ್ಟದ 5-ಸ್ಟಾರ್ ಸುರಕ್ಷಿತಾ ರೇಟಿಂಗ್ ಪಡೆದಿದೆ ಎಂದ ಮಾತ್ರಕ್ಕೆ, ನೀವು ನಿರ್ಲಕ್ಷ್ಯದ ಡ್ರೈವಿಂಗ್ ಮಾಡಿದರೂ ನಡೆಯುತ್ತದೆ ಎಂದರ್ಥವಲ್ಲ. ರಸ್ತೆಯಲ್ಲಿ ಗರಿಷ್ಠ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಕಾರಿನ ಸುರಕ್ಷತಾ ರೇಟಿಂಗ್ ಮಾತ್ರವಲ್ಲದೆ ನಿಮ್ಮ ಜವಾಬ್ದಾರಿಯುತ ಚಾಲನೆ ಕೂಡ ಮುಖ್ಯ. ಹಾಗಾದ್ರೆ ಪರಿಪೂರ್ಣ ಚಾಲಕ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ನೋಡೋಣ ಬನ್ನಿ.

ಎಲ್ಲಾ ಸಮಯದಲ್ಲೂ ಸೀಟ್ ಬೆಲ್ಟ್‌ಗಳನ್ನು ಧರಿಸಿರಬೇಕು, ಪ್ರತಿಯೊಬ್ಬ ಪ್ರಯಾಣಿಕರು - ಮುಂಭಾಗ ಮತ್ತು ಹಿಂಭಾಗಲ್ಲಿ ತಮ್ಮ ಸೀಟ್ ಬೆಲ್ಟ್‌ಗಳನ್ನು ಧರಿಸಬೇಕು. ಸೀಟ್ ಬೆಲ್ಟ್‌ಗಳು ಅಗ್ಗದ ವಾಹನಗಳಿಂದ ಹಿಡಿದು ಐಷಾರಾಮಿ ವಾಹನಗಳವರೆಗೆ ಎಲ್ಲದರಲ್ಲಿಯೂ ಇರುತ್ತವೆ. ಸಿಟ್ ಬೆಲ್ಟ್ ಧರಿಸುವುದರಿಂದ ಸಂಭವನೀಯ ಗಂಭೀರ ಗಾಯ ಅಥವಾ ಸಾವುಗಳನ್ನು ಬಹುತೇಕ ತಪ್ಪಿಸಬಹುದು.

safe-car-driving-tips-that-help-you-avoiding-accidents

ವೇಗದ ಮಿತಿಗಳನ್ನು ಪಾಲಿಸಬೇಕು ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು. ಅತಿಯಾದ ವೇಗವು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ನಿಗದಿತ ಮಿತಿಗಳಲ್ಲಿ ಚಾಲನೆ ಮಾಡಿ ಜೊತೆಗೆ ಮಳೆ, ಮಂಜು ಅಥವಾ ಸರಿಯಾಗಿ ಕಾಣದ ಪ್ರದೇಶಗಳಲ್ಲಿ ವೇಗವನ್ನು ಕಡಿಮೆ ಮಾಡಿ. ಹಾಗೆಯೇ ಮದ್ಯ, ಮಾದಕ ವಸ್ತುಗಳು ಅಥವಾ ಬಲವಾದ ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ಬಳಸಬೇಡಿ, ಇದು ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸಬೇಡಿ, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸರಿ ಮಾಡಿಕೊಳ್ಳಬೇಡಿ, ತಿನ್ನಬೇಡಿ ಅಥವಾ ಇತರ ಗೊಂದಲಗಳಲ್ಲಿ ತೊಡಗಿಸಿಕೊಳ್ಳಬೇಡಿ. ಎಲ್ಲಾ ಸಮಯದಲ್ಲೂ ರಸ್ತೆಯ ಮೇಲೆ ಗಮನವಿರಬೇಕು. ಸುಧಾರಿತ ಸುರಕ್ಷತಾ ತಂತ್ರಜ್ಞಾನ ಹೊಂದಿರುವ ಕಾರುಗಳಲ್ಲಿಯೂ ಸಹ, ಹಠಾತ್ ನಿಲುಗಡೆಗಳಿಗೆ ಅವಕಾಶ ನೀಡಲು ಮತ್ತು ಹಿಂಭಾಗದ ಡಿಕ್ಕಿಗಳನ್ನು ತಪ್ಪಿಸಲು ನಿಮ್ಮ ಕಾರು ಮತ್ತು ಮುಂದಿರುವ ಕಾರಿನ ನಡುವೆ ಸಾಕಷ್ಟು ಜಾಗವನ್ನು ಇರಿಸಿ.

safe-car-driving-tips-that-help-you-avoiding-accidents

ನಿಯಮಿತವಾಗಿ ನಿಮ್ಮ ವಾಹನ ಸರ್ವಿಸ್‌ಗೆ ಆದ್ಯತೆ ನೀಡಿ, ಕಾರಿನ ಬ್ರೇಕ್‌ಗಳು, ಟೈರ್‌ಗಳು, ಲ್ಯಾಂಪ್‌ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು. ಸರಿಯಾಗಿ ನಿರ್ವಹಿಸದಿದ್ದರೆ ಉನ್ನತ ದರ್ಜೆಯ ಕಾರುಗಳು ಸಹ ಬೇಗನೆ ಅಸುರಕ್ಷಿತವಾಗಬಹುದು. ಹಾಗಾಗಿ ಇದು ಎಲ್ಲಾ ಕಾರುಗಳಿಗೂ ವರ್ತಿಸುತ್ತದೆ ಎಂಬುದನ್ನು ಗಮನದಲ್ಲಿಡಿ.

ಓವರ್‌ಟೇಕ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು. ರಸ್ತೆ ಸ್ಪಷ್ಟವಾಗಿದೆ ಮತ್ತು ಸುರಕ್ಷಿತವಾಗಿ ಓವರ್‌ಟೇಕ್ ಮಾಡಲು ನಿಮಗೆ ಸಾಕಷ್ಟು ಸ್ಥಳವಿದೆ ಎಂದು ಖಚಿತಪಡಿಸಿಕೊಳ್ಳಿ. ಕಡಿಮೆ ಗೋಚರತೆ, ತೀಕ್ಷ್ಣವಾದ ತಿರುವುಗಳು ಅಥವಾ ರಾತ್ರಿ, ಮಂಜು ಅಥವಾ ಭಾರೀ ಮಳೆಯಂತಹ ಇತರ ಅಪಾಯಕಾರಿ ಪರಿಸ್ಥಿತಿಗಳಿರುವ ಪ್ರದೇಶಗಳಲ್ಲಿ ಓವರ್‌ಟೇಕ್ ಮಾಡುವುದನ್ನು ತಪ್ಪಿಸಿ.

safe-car-driving-tips-that-help-you-avoiding-accidents

ನಿಮ್ಮ ಉದ್ದೇಶಗಳನ್ನು ಇತರ ಚಾಲಕರಿಗೆ ತಿಳಿಸಲು ಇಂಡಿಕೇಟರ್‌ಗಳನ್ನು ಬಳಸುವುದು ಬಹಳ ಮುಖ್ಯ. ವಾಹನಗಳನ್ನು ಹಿಂದಿಕ್ಕುವ ಮೊದಲು ಸಿಗ್ನಲಿಂಗ್, ಲೇನ್‌ಗಳನ್ನು ಬದಲಾಯಿಸುವುದು ಅಥವಾ ಪಕ್ಕಕ್ಕೆ ತಿರುಗಿಸುವ ಬಗ್ಗೆ ಸುಳಿವು ನೀಡಬೇಕು. ಇದು ಇತರ ರಸ್ತೆ ಬಳಕೆದಾರರಿಗೆ ನಿಮ್ಮ ಚಲನೆಯ ಬಗ್ಗೆ ಸುಳಿವು ನೀಡುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗ್ಲೋಬಲ್ NCAP ಅಥವಾ ಭಾರತ್ NCAP ನಿಂದ ಹೆಚ್ಚಿನ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿರುವ ವಾಹನಗಳು ಅಪಘಾತಗಳಲ್ಲಿ ಉತ್ತಮ ರಕ್ಷಣೆ ನೀಡುತ್ತವೆ. ಹಾಗೆಯೇ ನಾವು ಕೂಡ ಸುರಕ್ಷಿತ ಚಾಲನಾ ನಡವಳಿಕೆಗಳಿಂದ ನಮ್ಮ ಹಾಗೂ ನಮ್ಮ ಕಾರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು. ಮೇಲೆ ನೀಡಿದ ಎಲ್ಲಾ ಸಲಹೆಗಳು ಪ್ರತಿಯೊಂದು ಕಾರಿಗೂ ಅನ್ವಯಿಸುತ್ತವೆ. ಈ ಸಲಹೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Wednesday, July 23, 2025, 16:28 [IST]
English summary
Safe car driving tips that help you avoiding accidents
Read more on tips india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+