ಹೆದ್ದಾರಿಯಲ್ಲಿ ಕಾರು ಕೆಟ್ಟು ನಿಂತರೆ ಹೀಗೆ ಮಾಡಿ ಸಾಕು!
ನೀವು ಹೆದ್ದಾರಿಯಲ್ಲಿ ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಿಮ್ಮ ಕಾರು ಕೆಟ್ಟುನಿಂತರೇ ಏನು ಮಾಡುತ್ತೀರಿ? ಯಾರಿಗೇ ಆಗಲಿ ಅಂತಹ ಪರಿಸ್ಥಿತಿಯಲ್ಲಿ ಭಯವಾಗುತ್ತದೆ. ಏಕೆಂದರೆ ಯಾವುದೋ ಅಗತ್ಯ ಕೆಲಸದ ಮೇಲೆ ಹೋಗುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಹೀಗಾದರೇ ದಿಕ್ಕು ತೋಚದೆ ಗೊಂದಲಕ್ಕೆ ಒಳಗಾಗಿ ಗಾಬರಿಗೊಳ್ಳುತ್ತಾರೆ. ಆದರೆ ಹಾಗೆ ಮಾಡಬಾರದು, ಕಾರು ಸ್ಥಗಿತಗೊಂಡಾಗ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಜ್ಞಾನ ಮತ್ತು ಕೌಶಲ್ಯಗಳು ನಮಗಿರಬೇಕು. ಹೆದ್ದಾರಿಯಲ್ಲಿ ನಮ್ಮನ್ನು ನಾವು ಸುರಕ್ಷಿತವಾಗಿಸಿಕೊಂಡು, ಭಯವಿಲ್ಲದೇ ಕಾರನ್ನು ಮನೆಗೆ ಕೊಂಡೊಯ್ಯುವ ಬಗ್ಗೆ ಅಗತ್ಯ ಸಲಹೆ, ಸೂಚನೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಎಮರ್ಜೆನ್ಸಿ ಲೈಟ್‌ಗಳನ್ನು ಆನ್ ಮಾಡಿ: ವಾಹನದೊಳಗಿನ ಅಪಾಯ ಅಥವಾ ತುರ್ತು ದೀಪ (Emergency light)ಗಳನ್ನು ಆನ್ ಮಾಡುವುದು ಮೊದಲ ಮತ್ತು ಪ್ರಮುಖ ಕೆಲಸ. ಹೀಗೆ ಮಾಡುವುದರಿಂದ ನೀವು ಸಮಸ್ಯೆ ಎದುರಿಸುತ್ತಿದ್ದೀರಿ ಎಂದು ಇತರ ಚಾಲಕರು ಎಚ್ಚರಗೊಳ್ಳುತ್ತಾರೆ. ನೀವು ಸಹಾಯ ಪಡೆಯುವವರೆಗೆ ಈ ಲೈಟ್‌ಗಳನ್ನು ಹಾಗೆಯೇ ಬಿಡಿ.

ವಾಹನ ರಸ್ತೆಯಿಂದ ಕೆಳಗಿಳಿಸಿ: ವಾಹನ ರಸ್ತೆಯ ಮೇಲಿದ್ದರೇ ಅದನ್ನು ಮೊದಲು ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಬೇಕು. ಇಂತಹ ಸಮಯದಲ್ಲಿ ವಾಹನವನ್ನು ರಸ್ತೆ ಮೇಲೆ ಬಿಡುವುದು ತುಂಬಾ ಅಪಾಯಕಾರಿ. ವೇಗದ ವಾಹನಗಳು ಓಡಾಡುವ ಸ್ಥಳದಿಂದ ದೂರವಿದ್ದರೇ ಉತ್ತಮ. ಬಳಿಕ ವಾಹನದಲ್ಲಿ ಆಗಿರುವ ಸಮಸ್ಯೆ ಏನು ಎಂದು ಖಚಿತಪಡಿಸಿಕೊಳ್ಳಿ.
ಹ್ಯಾಂಡ್‌ಬ್ರೇಕ್ ಹಾಕಿ: ಇಂತಹ ಸಂದರ್ಭಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಹ್ಯಾಂಡ್ ಬ್ರೇಕ್ ಬಳಸಲು ಸೂಚಿಸುತ್ತೇವೆ. ಉದಾಹರಣೆಗೆ, ನಿಮ್ಮ ಕಾರು ಇಳಿಜಾರಿನ ಪ್ರದೇಶದಲ್ಲಿ ಕೆಟ್ಟುಹೋದಾಗ ತುರ್ತು ಬ್ರೇಕ್ ಬಳಸದಿದ್ದರೆ ಉರುಳಲು ಕಾರಣವಾಗಬಹುದು. ಇದು ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಎಚ್ಚರ ವಹಿಸಿ ಸಮತಲ ರಸ್ತೆಯಾದ್ರೂ ಸಹ ಹ್ಯಾಂಡ್‌ಬ್ರೇಕ್ ಹಾಕುವುದನ್ನು ಮರೆಯದಿರಿ.

ಒಳಗೆ ಇರಿ: ನಿಮ್ಮ ಕಾರು ದೂರದ ಪ್ರದೇಶದಲ್ಲಿ ಕೆಟ್ಟುಹೋದರೆ, ರಸ್ತೆಯಲ್ಲಿ ನಿಲ್ಲುವುದಕ್ಕಿಂತ ಕಾರಿನೊಳಗೆ ಉಳಿಯುವುದು ಸುರಕ್ಷಿತ. ಆದರೆ ನೀವು ಏನನ್ನಾದರೂ ಪರಿಶೀಲಿಸಲು ಅಥವಾ ಸರಿಪಡಿಸಲು ಹೊರಬರಬೇಕಾದರೆ, ನೀವು ಮೊದಲು ಸುರಕ್ಷಿತ ಸ್ಥಳಕ್ಕೆ ಕಾರನ್ನು ತಳ್ಳುವುದು ಇನ್ನೂ ಉತ್ತಮ. ಬಳಿಕ ನಿಮ್ಮ ಸುತ್ತಲಿನ ರಸ್ತೆ ಸುರಕ್ಷತವೆಂದು ಖಚಿತಪಡಿಸಿಕೊಂಡು ವಾಹನ ಪರಿಶೀಲಿಸಬಹುದು.
ಸಹಾಯ ಪಡೆಯಿರಿ: ಇಂತಹ ಪರಿಸ್ಥಿತಿಯಲ್ಲಿ ನಿರ್ಣಾಯಕ ಹಂತವೆಂದರೆ ಸಹಾಯ ಕೇಳುವುದು. ನಿಮ್ಮ ಕಾರಿನ ಬಾನೆಟ್ ಮೇಲಕ್ಕೆತ್ತಿ ಇರಿಸಬೇಕು, ಇದರಿಂದ ಇತರ ಚಾಲಕರು ಹಾದುಹೋಗುವಾಗ ನೋಡಬಹುದು ಮತ್ತು ಸಹಾಯಕ್ಕೆ ಬರಬಹುದು. ನಿಮ್ಮ ಕಾರು ಕೆಟ್ಟುನಿಂತಿದೆ ಎಂದು ತೋರಿಸಲು ನಿಮಗಿರುವ ಅತಿ ಪ್ರಮುಖ ಮಾರ್ಗವಾಗಿದೆ.

ತುಂಬಾ ಸಮಯ ಕಾಯುವ ಅವಶ್ಯಕತೆಯೂ ಇಲ್ಲ, ಸಂಚಾರ ಪೊಲೀಸರಿಗೆ ಮಾಹಿತಿ ನೀಡಿ ಸಹಾಯ ಪಡೆಯುವುದು ಒಳ್ಳೆಯದು. ನೀವು ಅವರನ್ನು ತಲುಪಲು ಸಾಧ್ಯವಾಗದಿದ್ದರೆ, ತುರ್ತು ಸಂಖ್ಯೆಗಳಿಗೆ ಅಥವಾ ರಸ್ತೆಬದಿಯ ಸಹಾಯಕ್ಕಾಗಿ ನಿಮ್ಮ ಕಂಪನಿಗೆ ಕರೆ ಮಾಡಿ. ಈಗ ಟ್ರಕ್‌ಗಳು, ಮೆಕ್ಯಾನಿಕ್‌ಗಳು ಅಥವಾ ರಸ್ತೆಬದಿಯ ಸಹಾಯ ಸೇವೆಗಳನ್ನು ಪಡೆಯಲು ಆನ್‌ಲೈನ್ ಅಪ್ಲಿಕೇಶನ್‌ಗಳು ಕೂಡ ಇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








