ಮಳೆಗಾಲದಲ್ಲಿ ಕಾರಿನೊಳಗೆ ಇಲಿಗಳು ಬಾರದಂತೆ ತಡೆಯುವುದು ಹೇಗೆ? ಇಲ್ಲಿದೆ ಟಿಪ್ಸ್
ಇಲಿಗಳು ಮನೆಗೆ ನುಗ್ಗಿದರೆ ತರಕಾರಿಗಳು ಮಾಯವಾಗುತ್ತವೆ, ಬಟ್ಟೆಗಳು ಪೀಸ್ಪೀಸ್ ಆಗುತ್ತವೆ. ಇಲಿ ಕಾಟ ಮನೆಗಳಿಗಷ್ಟೇ ಅಲ್ಲದೇ ಕಾರುಗಳಿಗೂ ಕೂಡ ಇವೆ. ಇಲಿಗಳು ಕಾರಿಗೆ ನುಗ್ಗಿ ರಬ್ಬರ್, ವಯರ್ ಮತ್ತು ಪೈಪ್ ಇತ್ಯಾದಿಗಳನ್ನು ಕಡಿದು ಹಾಕುತ್ತದೆ. ನಂತರ ಕಾರಿನ ರಿಪೇರಿಗೆ ದುಬಾರಿ ಹಣ ತೆರಬೇಕಾಗಬಹುದು.
ಕಾರುಗಳಿಗೆ ಇಲಿಗಳು ಸುಲಭವಾಗಿ ನುಗ್ಗುತಿದೆ. ಕಾರಿನ ಆಕ್ಸೆಲ್ ಮೂಲಕ ಅವುಗಳು ಸುಲಭವಾಗಿ ಎಂಜಿನ್ ಇರುವ ಭಾಗವನ್ನು ಪ್ರವೇಶಿಸುತ್ತವೆ. ತುಸು ಬೆಚ್ಚನೆ ಇರುವ ಪ್ರದೇಶಗಳನ್ನು ಅವುಗಳು ಆಯ್ಕೆ ಮಾಡಿಕೊಳ್ಳುವುದರಿಂದ ಮತ್ತು ಪೈಪ್, ರಬ್ಬರ್ ವಸ್ತುಗಳು ಕಡಿಯಲು ಸಿಗುವುದರಿಂದ, ಅವುಗಳ ವಾಸನೆಯಿಂದಾಗಿ ಕಾರುಗಳತ್ತ ಇಲಿಗಳು ಬಹುಬೇಗನೆ ಆಕರ್ಷಿತವಾಗುತ್ತವೆ. ಮಳೆಗಾಲದಲ್ಲಿ ಇಲಿಗಳು ನಿಮ್ಮ ಕಾರಿನಲ್ಲಿ ಆಶ್ರಯ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂದಹಾಗೆ, ಮಳೆಗಾಲದಲ್ಲಿ ಇಲಿಗಳನ್ನು ಕಾರುಗಳಿಂದ ದೂರವಿಡಲು ಇಲ್ಲಿ ಕೆಲವು ಸಲಹೆಗಳಿವೆ.

ಆಹಾರ ಪದಾರ್ಥಗಳನ್ನು ಇಡಬೇಡಿ: ನಿಮ್ಮ ಕಾರುಗಳಲ್ಲಿ ಆಹಾರ ಪದಾರ್ಥಗಳನ್ನು ಇಡಬೇಡಿ. ಇಲಿಗಳು ಆಹಾರ ಪದಾರ್ಥಗಳಿಗೆ ಆಕರ್ಷಿತವಾಗುತ್ತವೆ. ಹಾಗಾಗಿ, ನಿಮ್ಮ ಕಾರಿನಲ್ಲಿ ಆಹಾರ ಪದಾರ್ಥಗಳನ್ನು ತಿನ್ನಬೇಡಿ. ಅಲ್ಲದೇ ಕಾರಿನ ಯಾವುದೇ ಆಹಾರ ಪದಾರ್ಥಗಳನ್ನು ಇಡಬೇಡಿ. ನಿಮ್ಮ ಕಾರನ್ನು ಯಾವಗಲು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಕಾರಿನಲ್ಲಿ ಇಲಿ ಪ್ರವೇಶಿಸುವುದು ತಡೆಯಬಹುದು.
ಕಾರು ಪಾರ್ಕಿಂಗ್: ಇಲಿಗಳು ಹೆಚ್ಚಾಗಿ ಕತ್ತಲೆಯಾದ ಸ್ಥಳಗಳಲ್ಲಿ ಆಶ್ರಯ ಬಯಸುತ್ತವೆ ಪಡೆಯಲು ಬಯಸುತ್ತವೆ. ಇದರರ್ಥ ಬೆಕ್ಕುಗಳು, ಗೂಬೆಗಳು ಮುಂತಾದ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಕಾರಿನ ಇಂಜಿನ್ ಬೇ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ. ಆದ್ದರಿಂದ, ನಿಮ್ಮ ಕಾರನ್ನು ಸ್ವಚ್ಛ ಮತ್ತು ಚೆನ್ನಾಗಿ ಬೆಳಗಿರುವ ಪ್ರದೇಶದಲ್ಲಿ ಪಾರ್ಕ್ ಮಾಡಿ. ಕಾರ್ ಶೆಡ್ ಭಾಗ ಶುಚಿಯಾಗಿಡಿ ನೀವು ಕಾರನ್ನು ಶೆಡ್‌ನಲ್ಲಿಡುತ್ತೀರಿ ಎಂದಾದರೆ ಕಾರು ನಿಲ್ಲುವ ಜಾಗ ಶುಚಿಯಾಗಿಡಿ.

ತಂಬಾಕು ಎಲೆಗಳು: ಇಂಜಿನ್ ಬೇ ಮತ್ತು ಕಾರಿನ ಒಳಭಾಗದಲ್ಲಿ ಒಣಗಿದ ತಂಬಾಕು ಎಲೆಗಳನ್ನು ಇಡುವುದು ಇಲಿಗಳನ್ನು ದೂರವಿರಿಸಲು ಜನಪ್ರಿಯ ವಿಧಾನವಾಗಿದೆ. ವಾಸ್ತವವಾಗಿ, ಅನೇಕ ಜನರು ಈ ವಿಧಾನವು ಇಲಿಗಳ ವಿರುದ್ಧ ಬಹಳ ಪರಿಣಾಮಕಾರಿ ಎಂದು ಹೇಳಿಕೊಳ್ಳುತ್ತಾರೆ. ನೀವು ಕೂಡ ಈ ವಿಧಾನವನ್ನು ಅನುಸರಿಸಿ ನೋಡಬಹುದು.
ಸ್ಪ್ರೇಗಳು: ವಿಶೇಷವಾದ ಇಲಿ-ನಿವಾರಕ ಸ್ಪ್ರೇಗಳನ್ನು ಬಳಸುವುದು ಇಲಿಗಳನ್ನು ಕಾರುಗಳಿಂದ ದೂರವಿಡುವಲ್ಲಿ ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ವಿಶೇಷ ಸ್ಪ್ರೇಗಳನ್ನು ವಿವಿಧ ಆನ್ಲೈನ್ ಸ್ಟೋರ್ಗಳ ಮೂಲಕ ಸುಲಭವಾಗಿ ಖರೀದಿಸಬಹುದು. ನೀವು ಕೂಡ ನಿಮ್ಮ ಕಾರಿಗೆ ಎಲಿ ಕಾಟದಿಂದ ತಪ್ಪಿಸಲು ಆನ್ ಲೈನ್ ಮೂಲಕ ಸ್ಪ್ರೇಗಳನ್ನು ಖರೀದಿಸಿ ಪ್ರಯತ್ನಿಸಬಹುದು.
ಸಾಕುಪ್ರಾಣಿಗಳು: ಬೆಕ್ಕುಗಳು ಮತ್ತು ನಾಯಿಗಳಂತಹ ಸಾಕುಪ್ರಾಣಿಗಳು ಇಲಿಗಳು ವಿರುದ್ಧ ಅತ್ಯಂತ ಪರಿಣಾಮಕಾರಿ ಜೈವಿಕ ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ. ಪ್ರತಿ ಕಾರು ಮಾಲೀಕರಿಗೆ ಇದು ತುಂಬಾ ಉತ್ತಮ ಆಯ್ಕೆಯಾಗಿದೆ. ಬೆಕ್ಕುಗಳು ಎಲೆಗಳನ್ನು ಕಂಡರೆ ಅದನ್ನು ಕೊಲ್ಲುತ್ತದೆ. ಇನ್ನು ಬೆಕ್ಕುಗಳಿದರೆ ಆ ಕಡೆ ಇಲಿಗಳು ಬರುವುದು ಕಡಿಮೆ.
ಕಹಿ ಬೇವಿನ ಎಣ್ಣೆಸ್ಪ್ರೇ: ಇಲಿಗಳ ಕಾಟವನ್ನು ತಪ್ಪಿಸಲು ಇದು ಒಂದು ಅತ್ಯುತ್ತಮ ವಿಧಾನ ಎಂದು ಹೇಳಲಾಗುತ್ತದೆ. ಕಹಿ ಬೇವಿನ ಎಣ್ಣೆ ವಿಪರೀತ ವಾಸನೆ ಹೊಂದಿರುವುದರಿಂದ ಳೆಯ ಹಲ್ಲುಜ್ಜುವ ಬ್ರಷ್‌ನಲ್ಲಿ ಅದ್ದಿ ಎಂಜಿನ್‌ನ ವಿವಿಧ ಭಾಗಗಳಲ್ಲಿ ಇದನ್ನು ಹಚ್ಚಬಹುದು. ಇಲಿ ಕಾಟದಿಮ್ದ ದೂರಗೊಳಿಸಲು ಇದು ಸುಲಭದ ಉಪಾಯ ಆಗಿದೆ.


Click it and Unblock the Notifications








