ಬಿರುಬಿಸಿಲಿನಲ್ಲಿ ಕಾರುಗಳನ್ನು ತಂಪಾಗಿ ಇರುವಂತೆ ಮಾಡಲು ಈ ಟಿಪ್ಸ್ ಅನುಸರಿಸಿ ನೋಡಿ!
ದೇಶಾದ್ಯಂತ ಬಿಸಿಲಿನ ತಾಪಮಾನವು ದಿನದಿಂದ ದಿನಕ್ಕೆ ಗರಿಷ್ಠ ಮಟ್ಟದಲ್ಲಿ ದಾಖಲಾಗುತ್ತಿದ್ದು, ಎಸಿ ಇಲ್ಲದೇ ವಾಹನಗಳಲ್ಲಿ ಸವಾರಿ ಬೇಡವೇ ಬೇಡ ಎನ್ನಿಸುವಂತಿದೆ. ಆದರೆ ಎಸಿ ಇಲ್ಲದೆಯು ಕಾರುಗಳನ್ನು ತಂಪಾಗಿಸಿಕೊಂಡು ಕಾರು ಪ್ರಯಾಣವನ್ನು ಮತ್ತಷ್ಟು ಅರಾಮಗೊಳಿಸಲು ಈ ಟಿಪ್ಸ್‌ಗಳನ್ನು ಬಳಕೆ ಮಾಡಿ ನೋಡಿ.

ಕಾರು ಪ್ರಯಾಣದಲ್ಲಿ ಎಸಿ ಬಳಕೆಯು ಇದೀಗ ಅತ್ಯಅಗತ್ಯವಾಗಿದ್ದು, ಎಸಿ ಇದ್ದರೂ ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಣೆ ಸಾಧ್ಯವಾಗದ ಸಂದರ್ಭದಲ್ಲಿ ವಾಹನ ಸವಾರಿಯು ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಹೀಗಾಗಿ ಬೇಸಿಗೆ ಅವಧಿಯಲ್ಲಿ ಎಸಿ ಸೌಲಭ್ಯವನ್ನು ಪರಿಣಾಮಕಾರಿ ಬಳಕೆ ಮಾಡುವುದು ಹೇಗೆ? ಮತ್ತು ಎಸಿ ಇಲ್ಲದೆಯು ಕಾರಿನ ಒಳಭಾಗವನ್ನು ತಂಪಾಗಿಸಿಕೊಳ್ಳಲು ಕೆಲವು ಸರಳ ಮಾರ್ಗಸೂಚಿಗಳನ್ನು ಪಾಲನೆಯನ್ನು ನಾವಿಲ್ಲಿ ಚರ್ಚಿಸಿದ್ದೇವೆ.

ಜಾಗತಿಕ ತಾಪಮಾನದಿಂದ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಗರಿಷ್ಠ ಪ್ರಮಾಣದ ಉಷ್ಠಾಂಶ ದಾಖಲಾಗುತ್ತಿದ್ದು, ಎಸಿ ಸೌಲಭ್ಯವಿಲ್ಲದೆ ವಾಹನ ಪ್ರಯಾಣ ಕಷ್ಟಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಇನ್ನು ಕೆಲವು ಕಾರುಗಳಲ್ಲಿ ಎಸಿ ಇದ್ದರೂ ಸರಿಯಾಗಿ ಕಾರ್ಯನಿರ್ವಹಣೆ ಮಾಡುವುದೇ ಇಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಕಾರಿನ ಎಸಿ ಯುನಿಟ್ ಪ್ರಭಾವಶಾಲಿಯಾಗಿ ಕೆಲಸ ಮಾಡಲು ಮತ್ತು ಎಸಿ ಸೌಲಭ್ಯವಿಲ್ಲದೆಯೇ ಕಾರಿನ ಒಳಭಾಗವನ್ನು ತಂಪಾಗಿಡಲು ಈ ಸಲಹೆಗಳನ್ನು ಪಾಲನೆ ಮಾಡಬಹುದಾಗಿದೆ.

ಮಾಲಿಕರು ತಮ್ಮ ಕಾರುಗಳನ್ನು ಸಾಧ್ಯವಾದಷ್ಟು ತಣ್ಣಗಿರಿಸಲು ನೆರಳು ಇರುವ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದು ಒಳಿತು. ಯಾಕಂದರೆ ಮರದ ಅಡಿಯಲ್ಲಿ ಅಥವಾ ಬೆಸ್‌ಮೆಂಟ್ ಪಾರ್ಕಿಂಗ್ ಸ್ಲಾಟ್‌ನಲ್ಲಿ ಪಾರ್ಕ್ ಮಾಡುವುದರಿಂದ ಕಾರು ತಪ್ಪಾಗಿರುವುದಲ್ಲದೇ ಎಸಿ ಮೇಲೆ ಹೆಚ್ಚು ಒತ್ತಡ ಬೀಳಲಾರದು.

ಕಾರು ಸ್ಟಾರ್ಟ್ ಮಾಡಿದ ತಕ್ಷಣ ಕಾರಿನ ಒಳಭಾಗವು ಕೆಲವೇ ನಿಮಿಷಗಳಲ್ಲಿ ತಣ್ಣನೆಯ ವಾತಾವರಣವು ಹರಡಿಕೊಳ್ಳುತ್ತದೆ. ಇಲ್ಲವಾದಲ್ಲಿ ಸುಡು ಬಿಸಿಲಿನಲ್ಲಿ ನಿಂತಿರುವ ಕಾರಿನ ಎಸಿ ಯುನಿಟ್ ಅನ್ನು ಎಷ್ಟೇ ಜೋರಾಗಿ ಇಟ್ಟರೂ ತಣ್ಣನೆಯ ಗಾಳಿ ಬರಲು ಧೀರ್ಘ ಸಮಯವನ್ನೇ ತೆಗೆದುಕೊಳ್ಳುತ್ತದೆ.

ಕಾರುಗಳ ಒಳಭಾಗವನ್ನು ತಣ್ಣಗಿರಿಸಲು ಈ ಹಿಂದಿನಿಂದಲೂ ಬಹುತೇಕ ಕಾರು ಮಾಲೀಕರು ವಿಂಡ್ ಸ್ಕ್ರೀನ್ ಸಲಹೆಯನ್ನು ಪಾಲಿಸುತ್ತಿದ್ದರು. ಕಾರಿನ ಮುಂಭಾಗ ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ವಿಂಡ್ ಸ್ಕ್ರೀನ್‌ಗಳಿಗೆ ಕಪ್ಪು ಬಣ್ಣದ ರಿಫ್ಲೆಕ್ಟರ್‌ಗಳನ್ನು ಅಂಟಿಸುವುದು ಕೂಡಾ ಬಿಸಿಲ ತಾಪವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಹಾಗೆಯೇ ಮಾಲೀಕರು ಕಾರನ್ನು ಪಾರ್ಕ್ ಮಾಡುವ ಮುನ್ನ ಕಾರಿನ ಡ್ಯಾಶ್‌ಬೋರ್ಡ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಸೂರ್ಯನ ಕಿರಣಗಳನ್ನು ನೇರವಾಗಿ ಹಿರದಿರುವಂತಹ ಬಟ್ಟೆಯಿಂದ ಹೊದಿಕೆ ಮಾಡುವುದು ಕೂಡಾ ಉತ್ತಮ ಕ್ರಮವಾಗಿದ್ದು, ಸ್ಟೀರಿಂಗ್ ಮತ್ತು ಡ್ಯಾಶ್‌ಬೋರ್ಡ್ ಸೂರ್ಯನ ನೇರವಾದ ಶಾಖದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ಕಾರು ಚಾಲನೆಯ ಸಂದರ್ಭದಲ್ಲಿ ಒಳಭಾಗವು ಅತಿ ಕಡಿಮೆ ಅವಧಿಯಲ್ಲಿ ತಂಪಾಗಲು ನೆರವಾಗುತ್ತದೆ.

ಜೊತೆಗೆ ನಾಲ್ಕು ಕಡೆಗಳಲ್ಲೂ ವಿಂಡ್ ಸ್ಕ್ರೀನ್‌ಗಳಿಗೆ ರಿಫ್ಲೆಕ್ಟರ್‍ಗಳನ್ನು ಬಳಕೆ ಮಾಡಬಹುದಾಗಿದ್ದು, ಇವು ಸೂರ್ಯ ಶಾಖವನ್ನು ಕಾರಿನ ಒಳಭಾಗಕ್ಕೆ ಬಿಡದಂತೆ ತಡೆಯುವುದಲ್ಲದೇ ಎಸಿ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಮಾಡುತ್ತದೆ.

ಇನ್ನು ಬಹುತೇಕ ಕಾರು ಮಾಲೀಕರು ಕಾರ್ ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಬಿಸಿಯಾಗಿ ಮಾರ್ಪಾಡುತ್ತದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇದರಿಂದ ಹೆಚ್ಚು ಬಿಸಿಲು ಇರುವ ಜಾಗದಲ್ಲಿ ಪಾರ್ಕ್ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ ಪೂರ್ತಿಯಾಗಿ ವಿಂಡ್ ಮುಚ್ಚದೇ ತುಸು ತೆರೆಯುವುದು ಒಳಿತು. ಇಲ್ಲವಾದಲ್ಲಿ ಕಾರ್ ಪಾರ್ಕ್ ಬೇರೆಯಡೆ ಹೋಗುವುದಾದರೇ ನೆರಳಿನಡಿಯೇ ಪಾರ್ಕ್ ಮಾಡಿ.

ಆದರೆ ಬಿಸಿಲಿನ ಜಾಗದಲ್ಲಿ ಪಾರ್ಕ್ ಮಾಡಿ ಬೇರೆಯಡೆ ಹೋಗುವುದಾದರೆ ವಿಂಡೋಗಳನ್ನು ಪೂರ್ತಿಯಾಗಿ ಮುಚ್ಚಲೇಬೇಕಾದ ಅನಿವಾರ್ಯಗಳಿದ್ದು, ರಿಫ್ಲೇಕ್ಟರ್ ಮತ್ತು ಡ್ಯಾಶ್‌ಬೋರ್ಡ್ ಕವರ್ ಬಳಕೆ ಮಾಡಿ.

ಎಸಿ ಅಗತ್ಯವಿದ್ದಲ್ಲಿ..
ಹೆಚ್ಚಿನ ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಈ ಟಿಪ್ಸ್ ತಪ್ಪದೇ ಅನುಸರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಬಿಸಿಲಿನಲ್ಲಿ ಪಾರ್ಕ್ ಮಾಡಿ ತಕ್ಷಣವೇ ಕಾರು ಪ್ರಯಾಣ ಮಾಡುವ ಸಂದರ್ಭವಿದ್ದಾಗ ಎಸಿ ಆನ್ ಮಾಡುವಾಗ ಪೂರ್ತಿಯಾಗಿ ಕಿಟಿಕಿಗಳನ್ನು ಕ್ಲೋಸ್ ಮಾಡಬಾರದು.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇದಕ್ಕೆ ಕಾರಣ, ಕಾರು ಚಾಲನೆ ಶುರು ಮಾಡಿದ ತಕ್ಷಣವೇ ಎಸಿ ಆನ್ ಮಾಡಿದಲ್ಲಿ ಒಳಭಾಗವನ್ನು ತಣ್ಣಗಾಗಿಸಲು ಎಸಿಗೆ ಹೆಚ್ಚಿನ ಸಮಯಬೇಕಾಗುತ್ತದೆ. ಆದ್ದರಿಂದ ಪ್ರಯಾಣಕ್ಕೂ ಮುನ್ನ ವಿಂಡೋಗಳನ್ನು ಪೂರ್ತಿಯಾಗಿ ಕೆಳಕ್ಕೆ ಇಳಿಸಿ ಕೆಲವು ನಿಮಿಷ ಹೊರಗಿನ ಗಾಳಿಯಲ್ಲಿ ಕಾರಿನ ಒಳಭಾಗವನ್ನು ತಣ್ಣಗಾಗಲು ಬೀಡಿ. ತದನಂತರವಷ್ಟೇ ಕಿಟಿಕಿ ಮುಚ್ಚಿ ಎಸಿ ಆನ್ ಮಾಡಿ.

ಎಸಿ ಸರ್ವೀಸ್ ತುಂಬಾ ಅಗತ್ಯ
ಬೇಸಿಗೆ ಶುರುವಾಗುವುದಕ್ಕೂ ಮುನ್ನ ಮನೆಗಳಲ್ಲಿ ಅಳವಡಿಸಲಾಗಿರುವ ಎಸಿಯನ್ನು ಹೇಗೆ ಸರ್ವೀಸ್ ಮಾಡಿಸುತ್ತಿರೋ ಹಾಗೆಯೆ ಕಾರಿನ ಎಸಿಯನ್ನು ಕೂಡಾ ಕಾಲಕಾಲಕ್ಕೆ ಚೆಕ್ ಮಾಡಿಸುವುದನ್ನು ಮರೆಯಬಾರದು. ಇದರಿಂದ ದೂರ ಪ್ರಯಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ.

ಇಲ್ಲವಾದಲ್ಲಿ ಎಸಿ ಇಲ್ಲದ ಕಾರು ಪ್ರಯಾಣವು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆಗಳಿದ್ದು, ನಗರಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆಯ ವೇಳೆ ಎಸಿ ಕಾರ್ಯನಿರ್ವಹಿಸದೆ ಇದ್ದಲ್ಲಿ ಅದರಿಂದಾಗಿರುವ ಕಿರಿಕಿರಿ ಅಷ್ಟಿಷ್ಟಲ್ಲ.

ಆದರೆ ನಗರ ಪ್ರದೇಶದಿಂದ ಹೊರಹೋದಾಗ ಎಸಿ ಅಷ್ಟಾಗಿ ಅಗತ್ಯವಿಲ್ಲವಾದರೂ ಪ್ರದೇಶಗಳಿಗೆ ಅನುಗುಣವಾಗಿ ಎಸಿ ಬಳಕೆ ಬೇಕಿದ್ದು, ಸಾಮಾನ್ಯ ಸಲಹೆಗಳನ್ನು ಅನುಸರಿಸುವ ಮೂಲಕ ಎಸಿ ಮೇಲಿನ ಅವಲಂಬನೆಯನ್ನು ತಡೆಯಲು ಈ ಟಿಪ್ಸ್ ಉಪಯುಕ್ತ ಎನ್ನಬಹುದು.


Click it and Unblock the Notifications








