ವಿಂಡ್‌ಶೀಲ್ಡ್ ವೈಪರ್‌ಗಾಗಿ ವೋಡ್ಕಾ ಸುರಿದ ಮಹೀಂದ್ರಾ ಥಾರ್ ಮಾಲೀಕ... ಸಲಹೆಗೆ ಮೆಚ್ಚಿದ ನೆಟ್ಟಿಗರು
ಪ್ರಸ್ತುತ ತಲೆಮಾರಿನ ಮಹೀಂದ್ರಾ ಥಾರ್ ಕಳೆದೆರಡು ವರ್ಷಗಳಿಂದ ಮಾರುಕಟ್ಟೆಯಲ್ಲಿದೆ. ಇದು ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ, ನಾವು ಆನ್‌ಲೈನ್‌ನಲ್ಲಿ SUV ಗೆ ಸಂಬಂಧಿಸಿದ ವಿವಿಧ ವಿಡಿಯೋಗಳನ್ನು ನೋಡುತ್ತಿದ್ದೇವೆ. ಅವುಗಳಲ್ಲಿ ಕೆಲವು ಮಾಡಿಫೈಗಳಿಗೆ ಸಂಬಂಧಿಸಿದ್ದರೆ, ಇನ್ನೂ ಕೆಲವು ಆಫ್-ರೋಡಿಂಗ್ ಮತ್ತು ಮಾಲೀಕರಿಗೆ ಸಲಹೆ ನೀಡುವ ಕುರಿತಾಗಿವೆ.
ಇದೀಗ ಮಹೀಂದ್ರಾ ಥಾರ್ ಮಾಲೀಕರೊಬ್ಬರು ಮತ್ತೊಂದು ವಿಚಿತ್ರ ಸಲಹೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ತಾಪಮಾನವು ತೀವ್ರ ಕಡಿಮೆ ಇರುವ ಪ್ರದೇಶಗಳಲ್ಲಿನ ಕಾರು ಮಾಲೀಕರಿಗೆ ಸಾಕಷ್ಟು ಉಪಯುಕ್ತವಾದ ಟ್ರಿಕ್ ಅನ್ನು ಇವರು ಬಹಿರಂಗಪಡಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ವೀಡಿಯೊದಲ್ಲಿ, ಮಹೀಂದ್ರಾ ಥಾರ್ ಮಾಲೀಕರು ತಮ್ಮ ಕಾರಿನಲ್ಲಿ ವೋಡ್ಕಾವನ್ನು ವೈಪರ್ ದ್ರವವಾಗಿ (wiper fluid) ಬಳಸಿದ್ದಾರೆ.

ಈ ವಿಡಿಯೋವನ್ನು ರಘುರಾಜಥಪ್ಪ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹೀಂದ್ರಾ ಥಾರ್ ಮಾಲೀಕರು ತಮ್ಮ SUV ಯಿಂದ ಸೀಲ್ ಮಾಡಿದ ವೋಡ್ಕಾ ಬಾಟಲಿಯನ್ನು ತೆಗೆದು ಇದು ನನಗಲ್ಲ, ನನ್ನ ಕಾರಿಗೆ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಬಳಿಕ ಬಾನೆಟ್ ಒಳಗಿನ ರಿಸರ್ವಾಯರ್ ಕವರ್ ಅನ್ನು ತೆರೆದು ಸರಳವಾಗಿ ವೋಡ್ಕಾದ ಸಂಪೂರ್ಣ ಬಾಟಲಿಯನ್ನು ಸುರಿಯುತ್ತಾರೆ. ಬಹುಶಃ ಇದೇ ಮೊದಲ ಬಾರಿಗೆ, ನಾವು ಇಂತಹದನ್ನು ನೋಡಿದ್ದೇವೆ ಎಂಬುದು ನಮ್ಮ ಭಾವನೆ.
ಇದು ವಿಚಿತ್ರವಾಗಿ ಅನಿಸಬಹುದು ಆದರೆ ಇದು ಅತ್ಯಂತ ಶೀತವಿರುವ ಪ್ರದೇಶದಲ್ಲಿ ಕಾರುಗಳನ್ನು ಹೊಂದಿರುವ ಜನರಿಗೆ ತುಂಬಾ ಉಪಯುಕ್ತವಾದ ಟ್ರಿಕ್ ಆಗಿದೆ. ನಾವು ವೀಡಿಯೊದಲ್ಲಿ ನೋಡುವಂತೆ, ಮಹೀಂದ್ರಾ ಥಾರ್ ಬಹುಶಃ ಮೌಂಟೇನ್ ಪಾಸ್‌ನಲ್ಲಿ ನಿಲ್ಲಿಸಲಾಗಿದೆ. ಹಿಂಬದಿಯಲ್ಲಿ ಹಿಮದಿಂದ ತುಂಬಿದ ಪರ್ವತಗಳನ್ನು ನಾವು ನೋಡಬಹುದು. ಈ ಪರಿಸ್ಥಿತಿಗಳಲ್ಲಿ ಸಾಮಾನ್ಯವಾಗಿ ನೀರು ಮಂಜಾಗುತ್ತದೆ, ವಿಂಡ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದಾಗ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿಯೇ ವೋಡ್ಕಾವನ್ನು ಬಳಸಿದ್ದಾರೆ.

ಸಾಮಾನ್ಯವಾಗಿ ಆಲ್ಕೋಹಾಲ್ (ಮದ್ಯ) ಅಥವಾ ವೋಡ್ಕಾ ನೀರಿಗಿಂತ ಭಿನ್ನವಾಗಿರುತ್ತದೆ. ತುಂಬಾ ಮಂಜಿನಿಂದ ಕೂಡಿರುವ ಪ್ರದೇಶಗಳಲ್ಲಿ ನೀರು ತುಂಬಾ ಸರಳವಾಗಿ ಹೆಪ್ಪುಗಟ್ಟುತ್ತದೆ, ಆದರೆ ಆಲ್ಕೋಹಾಲ್ ಆಗುವುದಿಲ್ಲ. ಪೈಪ್‌ಗಳ ಮೂಲಕ ಸುಲಭವಾಗಿ ಹರಿಯುತ್ತದೆ ಮತ್ತು ಅಗತ್ಯವಿದ್ದಾಗ ವಿಂಡ್‌ಶೀಲ್ಡ್ ಅನ್ನು ಸ್ವಚ್ಛಗೊಳಿಸುತ್ತದೆ. ಹಿಮಭರಿತ ಪರಿಸ್ಥಿತಿಗಳಲ್ಲಿ ಕಾರನ್ನು ಚಾಲನೆ ಮಾಡುವಾಗ ಇದು ವಿಂಡ್‌ಶೀಲ್ಡ್‌ಗಳಿಗೆ ಆಂಟಿ ಫ್ರೀಜ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಈ ವಿಧಾನವು ತುಂಬಾ ಉಪಯುಕ್ತವಾಗಿರುತ್ತದೆ
ಮಾಲೀಕರು ವೋಡ್ಕಾವನ್ನೇ ಏಕೆ ಬಳಸಿದ್ದಾರೆ ಇತರ ಆಲ್ಕೋಹಾಲ್‌ಗಳು ಇವೆಯಲ್ಲವೇ ಎಂದು ಕೇಳಿದರೆ, ವೋಡ್ಕಾ ಬಣ್ಣರಹಿತವಾಗಿರುತ್ತದೆ ಹಾಗಾಗಿಯೇ ವೈಪಿಂಗ್ ವೇಳೆ ಸಮಸ್ಯೆ ಇರುವುದಿಲ್ಲ ಎಂದಿದ್ದಾರೆ. ಮಾಲೀಕ ಅದನ್ನು ನೀರಿನೊಂದಿಗೆ ಬೆರೆಸಿ ಬಳಸುತ್ತಿದ್ದಾರಾ ಎಂಬುದು ನಮಗೆ ಖಚಿತವಾಗಿಲ್ಲ. ಏನೇ ಆಗಲಿ ಪ್ರಯಾಣದ ವೇಳೆ ನಮಗೆ ಎದುರಾಗುವ ಸಮಸ್ಯೆಗಳಿಗೆ ನಾವೇ ಉಪಾಯ ಕಂಡುಕೊಳ್ಳುವುದು ಉತ್ತಮ. ಇಂತಹ ಸಲಹೆಗಳು ದುಬಾರಿಯಾದರೂ ಅನಿವಾರ್ಯ ಪರಿಸ್ಥಿತಿಗಳಲ್ಲಿ ತುಂಬಾ ಸಹಕಾರಿಯಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇನ್ನು ಮಹೀಂದ್ರಾ ಥಾರ್ ಬಗ್ಗೆ ಮಾತನಾಡುವುದಾದರೆ, ಬಿಡುಗಡೆಯಾದಾಗಿನಿಂದ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸಾಬೀತುಪಡಿಸಿದೆ. SUV ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ 4×4 SUV ಆಗಿದೆ. ಮಹೀಂದ್ರಾ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮತ್ತು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಮಹೀಂದ್ರಾ ಥಾರ್‌ನ ಹೆಚ್ಚು ಕೈಗೆಟುಕುವ 4×2 ರೂಪಾಂತರವನ್ನು ಸಹ ಬಿಡುಗಡೆ ಮಾಡಿದೆ. ಮಹೀಂದ್ರಾ ಥಾರ್‌ನ 4×4 ರೂಪಾಂತರ 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.
ಇದು 130 bhp ಮತ್ತು 320 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ರೂಪಾಂತರವು 2.0 ಲೀಟರ್ mStallion ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಇದು 150 ps ಮತ್ತು 320 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಮಹೀಂದ್ರಾ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್‌ನ ಹೆಚ್ಚು ಪ್ರಾಯೋಗಿಕ 5-ಬಾಗಿಲಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.


Click it and Unblock the Notifications








