ಚಲಿಸುತ್ತಿದ್ದ ಬೈಕ್‌ನ ಟ್ಯಾಂಕ್ ‌ಮೇಲೆ ಯುವತಿ ಕುಳ್ಳಿರಿಸಿ ಸರಸ ಸಲ್ಲಾಪ‌ : ಪೊಲೀಸರಿಂದ ಲುಕ್‌ಔಟ್‌ ನೋಟಿಸ್‌

ಕಳೆದ ಕೆಲವು ವರ್ಷಗಳಿಂದ ಈಚೆಗೆ ಮೋಟೋರ್‌ ಸೈಕಲ್‌ಗಳಲ್ಲಿ ಜೋಡಿಗಳು ಸರಸ ಸಲ್ಲಾಪದಲ್ಲಿ ತೊಡಗಿರುವುದನ್ನು ನೊಡುತ್ತಿದ್ದೇವೆ. ಅಪಾಯವೆಂದು ಅರಿವಿದ್ದರೂ ಸಹ ಜೋಡಿಗಳು ಚಲಿಸುತ್ತಿರುವ ಬೈಕ್‌ನಲ್ಲಿ ತಮ್ಮಷ್ಟಕ್ಕೆ ತಾವೇ ರೊಮ್ಯಾನ್ಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತಾ ಇರುತ್ತಾರೆ. ಇದರ ಕುರಿತಾಗಿ ಹಲವಾರು ಪ್ರಕರಣಗಳಲ್ಲಿ ಪೊಲೀಸರು ಕ್ರಮಕೈಗೊಂಡಿರುವುದನ್ನು ನಾವು ಕಾಣಬಹುದು.

ಕೆಲವು ದಿನಗಳ ಹಿಂದೆ ರಾಜಸ್ಥಾನದಲ್ಲಿ ಜೋಡಿಯೊಂದು ಚಲಿಸುತ್ತಿರು ಮೋಟಾರ್‌ ಸೈಕಲ್‌ನಲ್ಲಿ ರೊಮ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೈಪುರದ ಬಿ೨ ಬೈಪಾಸ್‌ನಲ್ಲಿ ಜೋಡಿಯು ಬೈಕ್‌ನಲ್ಲಿ ರೊಮ್ಯಾನ್ಸ್‌ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನಡು ರಸ್ತೆಯಲ್ಲೇ ಬೈಕ್‌ ಚಲಿಸುತ್ತಿರುವಾಗ ಯುವತಿಯು ಬೈಕ್‌ನ ಟ್ಯಾಂಕ್‌ನಲ್ಲಿ ಕುಳಿತಿರುವದನ್ನು ಕಾಣಬಹುದಾಗಿದೆ. ಬೈಕ್‌ನ ಟ್ಯಾಂಕ್‌ ಮೇಲೆ ಹಿಮ್ಮುಖವಾಗಿ ಕುಳಿತಿರುವ ಯುವತಿಯು ಬೈಕ್‌ ಓಡಿಸುತ್ತಿರುವ ಯುವಕನನ್ನು ಅಪ್ಪಿಕೊಂಡು ಕುಳಿತಿದ್ದು ಯುವಕ ಬೈಕ್‌ ಚಲಾಯಿಸುತ್ತಿದ್ದಾನೆ.

ಬೈಕ್‌ನ ಹಿಂಬದಿಯಲ್ಲೇ ಚಲಿಸುತ್ತಿದ್ದ ಕಾರ್‌ನಲ್ಲಿದ್ದ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿ ಕೂಡಲೇ ಸಾಮಾಜಿಕ ಜಾಲತಾಣಗಳಿಗಿ ಅಪ್‌ಲೋಡ್‌ ಮಾಡಿದ್ದು ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್‌ ಆಗಿದೆ. ಹೀಗೆ ವಿಡಿಯೋವನ್ನು ಗಮನಿಸಿದ ರಾಜಸ್ತಾನ್‌ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಬೈಕ್‌ನಲ್ಲಿ ರೊಮ್ಯಾನ್ಸ್‌ ಮಾಡುವುದರ ಮೂಲಕ ಸ್ಟಂಟ್‌ ತೋರಿಸಿದ ಜೋಡಿಗಾಗಿ ಹುಡುಕಾಟ ನಡೆಸಿದ್ದಾರೆ. ಮೊದಲಿಗೆ ಮೋಟಾರ್‌ ಸೈಕಲ್‌ನ ರಿಜಿಸ್ಟ್ರೇಷನ್‌ ನಂಬರ್‌ ಮೂಲಕ ವಾಹನಕ್ಕಾಗಿ ಹುಡುಕಾಟ ಮಾಡಲು ಆರಂಭಿಸಿ ಲುಕ್‌ ಔಟ್‌ ಹೊರಡಿಸಿದ್ದಾರೆ.

ಜೊಡಿ ಸಿಕ್ಕಿದ ಕೂಡಲೇ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದಕ್ಕೆ ದಂಡ ವಿಧಿಸಿಲು ಪೊಲೀಸರು ಸಿದ್ದರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನು ವಿಡಿಯೋದಲ್ಲಿ ಕಾಣುವ ಪ್ರಕಾರ ರಾಯಲ್‌ ಎನ್‌ಫೀಲ್ಡ್‌ ಕಂಪನಿಗೆ ಸೇರಿದ ಬೈಕ್‌ ಆಗಿದ್ದು, ರಸ್ತೆ ಬದಿಯಲ್ಲಿರುವ ಸಂಚಾರಿ ನಿಯಮಗಳ ಚಿಹ್ನೆಗಳಿಂದ ಘಟನೆಯ ಸ್ಥಳವನ್ನು ಸಹ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋವನ್ನು ಅಶೋಕ್‌ ಶರ್ಮಾ ಎಂಬ ಪತ್ರಕರ್ತ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನು ವಿಡಿಯೋ ಕುರಿತಾಗಿ ಸಾಮಾಜಿಕ ಜಾತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಬಹುತೇಕ ಎಲ್ಲರೂ ಸಹ ಜೋಡಿಯ ವರ್ತನೆಯನ್ನು ವಿರೋಧಿಸುತ್ತಿದ್ದಾರೆ. ರೀತಿಯಾಗಿ ವಾಹನ ಚಲಾಯಿಸುವುದರಿಂದ ಖುದ್ದಾಗಿ ಜೋಡಿಯ ಪ್ರಾಣ ಅಪಾಯದಲ್ಲಿ ಇರುವುದಲ್ಲದೇ, ಅಪಘಾತವೇನಾದರೂ ಸಂಭವಿಸಿದರೆ ಇತರರ ಪ್ರಾಣಕ್ಕೂ ಇವರು ಹೊಣೆಯಾಗಬೇಕಾಗುತ್ತದೆ. ಇದೇ ಕಾರಣದಿಂದಾಗಿ ರೀತಿಯಾದ ಅಪಾಯಕಾರಿ ಸ್ಟಂಟ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ ಮಾಡಿರುವುದು. ರೀತಿಯ ವರ್ತನೆ ಕೇವಲ ಖಾಸಗಿ ಸ್ಥಳಗಳಲ್ಲಿ ಮಾಡುವುದು ಸೂಕ್ತ.

2015ರಲ್ಲಿ ಇದೇ ರೀತಿಯ ಘಟನೆಯೊಂದು ಗೋವಾದಲ್ಲಿ ವರದಿಯಾಗಿತ್ತು. ಘಟನೆಯು ಆಗಿನ ಕಾಲದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಮಧ್ಯ ಪ್ರದೇಶ ಮೂಲದ ಜೋಡಿಯೊಂದು ಮೇಲೆ ತಿಳಿಸಿದ ಜೋಡಿಗಳ ರೀತಿಯಲ್ಲಿಯೇ ಮೋಟಾರ್‌ ಸೈಕಲನ್ನು ಓಡಿಸುತ್ತಾ ಹೋಗುತ್ತಿದ್ದುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿತ್ತು. ವಿಡಿಯೋ ವೈರಲ್‌ ಆದ ಕೂಡಲೇ ಗೋವಾ ಪೊಲೀಸರು ಸ್ವಯಂ ಪ್ರೇರಿತವಾಗಿ ಜೋಡಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ನಂತರ ಪೊಲೀಸರು ಜೊಡಿಯನ್ನು ಬಂಧಿಸಿ ಅವರಿಂದ 1000 ರೂಗಳ ದಂಡವನ್ನು ಕಟ್ಟಿಸಿಕೊಂಡಿದ್ದರು. ಇನ್ನು ರಾಜಸ್ಥಾನದ ಇತ್ತೀಚಿನ ಘಟನೆ ಗಮನಿಸಿದರೆ ವಿಡಿಯೋದಲ್ಲಿ ಕಾಣುವ ಪ್ರಕಾರ ಯುವಕ ಮತ್ತು ಯುವತಿ ಇಬ್ಬರೂ ಸಹ ಯಾವುದೇ ರೀತಿಯ ಹೆಲ್ಮೆಟ್‌ಗಳನ್ನು ಧರಿಸದೇ ಇರುವುದನ್ನು ಗಮನಿಸಬಹುದಾಗಿದೆ. ಜೋಡೊಯನ್ನು ಗಮನಿಸಿದರೆ ಹೋಲಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಬಳಿಕ ವಾಪಸ್‌ ಆಗುತ್ತಿರುವ ರೀತಿಯಲ್ಲಿ ಕಾಣುತ್ತದೆ. ಯಾಕೆಂದರೆ ಯುವತಿಯ ಬಿಳಿ ಬಣ್ಣದ ಬಟ್ಟೆಯಲ್ಲಿ ಬಣ್ಣಗಳಿರುವುದನ್ನು ಕಾಣಬಹುದು.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ತುಂಬಾ ಆಕ್ಟೀವ್‌ ಆಗಿದ್ದಾರೆ. ಇದರಿಂದ ಪೊಲೀಸರಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ. ಯಾಕೆಂದರೆ ಹಲವಾರು ಪ್ರಕರಣಗಳು ಪೊಲೀಸರಿಗೆ ಸಾಮಾಜಿಕ ಜಾಲತಾಣಗಳ ಸಹಯಾದಿಂದ ತಿಳಿಯುತ್ತದೆ. ಕೂಡಲೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರಿಗೆ ದಂಡ ವಿಧಿಸಿ ಸೂಕ್ತ ಶಿಕ್ಷೆಯನ್ನು ನೀಡುತ್ತಿದ್ದಾರೆ. ಹಾಗಾಗಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸಿದರೆ ಅಪಾಯದ ಜೊತೆಗೆ ಪೊಲೀಸರು ನಮ್ಮಿಂದ ದಂಡ ವಸೂಲಿ ಮಾಡುವುದನ್ನೂ ತಪ್ಪಿಸಬಹುದು.

More from DriveSpark

Article Published On: Friday, March 10, 2023, 17:30 [IST]
English summary
Police launch lookout for a couple who are engaging in romance on a moving bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+