ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಪೆಟ್ರೋಲ್ ಬೆಲೆ ಹೊಸ ದಾಖಲೆ ಬರೆದಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.104.56ಗಳಾಗಿದೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಈ ಮೂಲಕ ಮುಂಬೈ ಜನರು ಪೆಟ್ರೋಲ್ ಚಾಲಿತ ಕಾರನ್ನು ಚಾಲನೆ ಮಾಡಲು ಪ್ರತಿ ಕಿ.ಮೀಗೆ ರೂ.6.50 ಖರ್ಚಾಗುತ್ತದೆ. ಈ ಪ್ರಮಾಣವು ಎಲೆಕ್ಟ್ರಿಕ್ ಕಾರಿಗಿಂತ 550%ನಷ್ಟು ಹೆಚ್ಚಾಗಿದೆ. ಇನ್ನು ಸಿಎನ್‌ಜಿ ಕಾರಿಗೆ ಹೋಲಿಸಿದರೆ 160%ನಷ್ಟು ಹೆಚ್ಚಾಗಿದೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಪೆಟ್ರೋಲ್ ಕಾರು ಮಾತ್ರವಲ್ಲದೇ ಡೀಸೆಲ್ ಕಾರು ಪ್ರಯಾಣವು ಸಹ ದುಬಾರಿಯಾಗಿದೆ. ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.96.42ಗಳಾಗಿದೆ. ಡೀಸೆಲ್ ಕಾರ್ ಅನ್ನು ಚಾಲನೆ ಮಾಡಲು ಪ್ರತಿ ಕಿ.ಮೀಗೆ ರೂ.5 ಖರ್ಚಾಗುತ್ತದೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಸಿಎನ್‌ಜಿ ಕಾರಿನಲ್ಲಿ ಒಂದು ಕಿ.ಮೀ ಪ್ರಯಾಣಿಸಲು ಕೇವಲ ರೂ.2.50 ಖರ್ಚಾಗುತ್ತದೆ. ಈ ಎಲ್ಲಾ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಮಿತವ್ಯಯಿಯಾಗಿವೆ. ಎಲೆಕ್ಟ್ರಿಕ್ ಕಾರನ್ನು ಒಂದು ಕಿ.ಮೀ ಚಾಲನೆ ಮಾಡಲು ಕೇವಲ 1 ರೂಪಾಯಿ ಖರ್ಚಾಗುತ್ತದೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ದೇಶಾದ್ಯಂತ ಈ ಪರಿಸ್ಥಿತಿ ಬಹುತೇಕ ಒಂದೇ ಆಗಿದೆ. ಆಟೋಮೊಬೈಲ್ ಉದ್ಯಮವು ಈ ಅಂಕಿ ಅಂಶಗಳನ್ನು ವರದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಗಳು ಸಿಎನ್‌ಜಿ ಕಾರುಗಳನ್ನು ಬಿಡುಗಡೆಗೊಳಿಸಲು ಆಸಕ್ತಿ ವಹಿಸಿವೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಇನ್ನು ವಿವಿಧ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿವೆ. ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಚಾಲನೆ ಮಾಡಲು ಕಡಿಮೆ ಖರ್ಚಾಗುವುದರಿಂದ ಗ್ರಾಹಕರು ಸಹ ಈ ಕಾರುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಮುಂಬೈನಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ ರೂ.49.40ಗಳಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳಲ್ಲಿ ಪ್ರತಿ ಯೂನಿಟ್‌ಗೆ ರೂ.6 ಶುಲ್ಕ ವಿಧಿಸಲಾಗುತ್ತದೆ. ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ ಇರುವುದರಿಂದ ಜನರು ಈ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಓಲಾ, ಉಬರ್‌ನಂತಹ ಕ್ಯಾಬ್ ಕಂಪನಿಗಳ ಚಾಲಕರು ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ನಿರ್ವಹಣಾ ವೆಚ್ಚ ಕಡಿಮೆ ಎಂಬುದು ಇದಕ್ಕೆ ಪ್ರಮುಖ ಕಾರಣ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಕಾರುಗಳು ಪರಿಸರವನ್ನು ಹೆಚ್ಚು ಕಲುಷಿತಗೊಳಿಸುವುದಿಲ್ಲ. ಈ ಕಾರಣಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಉತ್ತೇಜನ ನೀಡುತ್ತಿವೆ.

ಪೆಟ್ರೋಲ್, ಡೀಸೆಲ್, ಸಿ‌ಎನ್‌ಜಿ, ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದು ಸೂಕ್ತ? ಇಲ್ಲಿದೆ ಉತ್ತರ

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರೀತಿಯಲ್ಲಿ ಉತ್ತೇಜನ ನೀಡುತ್ತಿವೆ. ಇವುಗಳಲ್ಲಿ ಸಬ್ಸಿಡಿ, ರಸ್ತೆ ತೆರಿಗೆಯಿಂದ ವಿನಾಯಿತಿ, ನೋಂದಣಿ ಶುಲ್ಕಗಳಿಂದ ವಿನಾಯಿತಿಗಳು ಸೇರಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Running cost comparison between petrol, diesel, CNG and electric cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X