ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ವಾಹನಗಳಲ್ಲಿ ಎಂಜಿನ್ ಎಷ್ಟು ಮುಖ್ಯವೋ, ಎಂಜಿನ್ ಆಯಿಲ್ ಉತ್ತಮವಾಗಿ ಕಾರ್ಯ ನಿರ್ವಹಿಸುವುದು ಸಹ ಅಷ್ಟೇ ಮುಖ್ಯ. ಒಂದು ವೇಳೆ ಎಂಜಿನ್ ಆಯಿಲ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಎಂಜಿನ್‌ನಲ್ಲಿ ತೊಂದರೆಗಳು ಕಂಡು ಬರುವುದು ಖಚಿತ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಈ ಕಾರಣಕ್ಕಾಗಿಯೇ ವಾಹನ ಚಾಲಕರಿಗೆ ಕಾಲ ಕಾಲಕ್ಕೆ ತಮ್ಮ ವಾಹನಗಳ ಎಂಜಿನ್ ಆಯಿಲ್ ಬದಲಿಸುವಂತೆ ಸೂಚಿಸಲಾಗುತ್ತದೆ. ಎಂಜಿನ್ ಆಯಿಲ್ ಬದಲಾಯಿಸುವ ಸಮಯ ಬಂದಾಗ ವಾಹನಗಳೇ ಸಂಕೇತಗಳನ್ನು ನೀಡುತ್ತವೆ. ಆದರೆ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಈ ಸಂಕೇತಗಳನ್ನು ಗಮನಿಸುವುದಿಲ್ಲ. ಆ ಸಂಕೇತಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಎಲ್ಲಾ ಎಂಜಿನ್‌ಗಳಲ್ಲಿ ಗುಣ ಮಟ್ಟದ ಎಂಜಿನ್ ಆಯಿಲ್ ಬಳಸುವುದು ಸೂಕ್ತ. ಇಲ್ಲದಿದ್ದರೇ ಎಂಜಿನ್ ಆಯಿಲ್ ಕೆಟ್ಟು ಹೋಗುವಂತಹ ಅಥವಾ ಸ್ಥಗಿತಗೊಳ್ಳುವಂತಹ ಸಮಸ್ಯೆಗಳು ಎದುರಾಗುತ್ತವೆ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಎಂಜಿನ್ ಆಯಿಲ್ ಪರಿಶೀಲಿಸಿ:

ವಾಹನದಲ್ಲಿರುವ ಎಂಜಿನ್ ಆಯಿಲ್ ಹಳೆಯದು ಎಂದೆನಿಸಿದರೆ ಮೆಕ್ಯಾನಿಕ್ ಬಳಿ ಕೊಂಡೊಯ್ದು ಅಥವಾ ಸ್ವತಃ ನೀವೇ ಪರಿಶೀಲಿಸಬಹುದು. ವಾಹನದಲ್ಲಿರುವ ಎಂಜಿನ್ ಆಯಿಲ್ ಅನ್ನು ತೆಗೆದು ಬೆರಳ ತುದಿಯಲ್ಲಿ ಇಡಬಹುದು ಅಥವಾ ಬಿಳಿ ಕಾಗದದ ಮೇಲೆ ಹಾಕಿ ಅದರ ಗುಣಲಕ್ಷಣಗಳನ್ನು ಪರಿಶೀಲಿಸಬಹುದು.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಎಂಜಿನ್ ಆಯಿಲ್ ಹಳೆಯದಾದರೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹಾಗಿದ್ದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ. ಎಂಜಿನ್ ಆಯಿಲ್ ತುಂಬಾ ಹಳೆಯದಾಗಿದ್ದರೆ ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಎಂಜಿನ್ ಆಯಿಲ್ ಅನ್ನು ದೀರ್ಘಕಾಲದವರೆಗೆ ಬದಲಾಯಿಸದಿದ್ದರೆ, ಘರ್ಷಣೆಯಿಂದಾಗಿ ಎಂಜಿನ್'ನಲ್ಲಿ ತ್ಯಾಜ್ಯವು ಸಂಗ್ರಹಗೊಂಡು ವಾಹನದ ಚಲನೆಗೆ ಅಡ್ಡಿಪಡಿಸುತ್ತದೆ. ಇದರ ಜೊತೆಗೆ ಹೆಚ್ಚಿನ ಶಾಖವನ್ನು ಹೊರಸೂಸುತ್ತದೆ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಅತಿಯಾದ ಶಬ್ದ:

ಎಂಜಿನ್ ಆಯಿಲ್ ಹಳೆಯದಾಗಿದ್ದರೆ ಎಂಜಿನ್'ನಿಂದ ಹೆಚ್ಚುವರಿ ಶಬ್ದ ಬರುತ್ತದೆ. ಎಂಜಿನ್‌ನಿಂದ ಹೆಚ್ಚುವರಿ ಶಬ್ದ ಬರುತ್ತದೆಯೇ ಎಂದು ಗಮನಿಸಿ. ಈ ರೀತಿಯ ಶಬ್ದ ಬಂದರೆ ಎಂಜಿನ್ ಆಯಿಲ್ ಹಳೆಯದಾಗಿದೆ ಎಂದರ್ಥ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಅತಿಯಾದ ಅಲುಗಾಡುವಿಕೆ:

ಎಂಜಿನ್ ಆಯಿಲ್ ಸ್ವಲ್ಪ ಹಳೆಯದಾದರೆ ವಾಹನವು ಐಡ್ಲಿಂಗ್'ನಲ್ಲಿದ್ದಾಗ ಸ್ವಲ್ಪ ಹೆಚ್ಚು ವೈಬ್ರೇಟ್ ಆಗುತ್ತದೆ. ಇಂದು ಎಂಜಿನ್ ಆಯಿಲ್ ಹಳೆಯದಾಗಿದೆ ಎಂಬುದರ ಸಂಕೇತವಾಗಿದೆ. ಇದನ್ನು ತಪ್ಪಿಸಲು ತಕ್ಷಣ ಎಂಜಿನ್ ಆಯಿಲ್ ಬದಲಾಯಿಸುವುದು ಒಳ್ಳೆಯದು.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಅತಿಯಾದ ಹೊಗೆ:

ಸಾಮಾನ್ಯ ಹೊಗೆಗಿಂತ ಹೆಚ್ಚಿನ ಹೊಗೆ ಹೊರಬಂದರೆ, ಹೊಗೆ ಬೇರೆ ಬಣ್ಣದಲ್ಲಿದ್ದರೆ ಎಂಜಿನ್ ಆಯಿಲ್ ಹಳೆಯದಾಗಿದೆ ಎಂದರ್ಥ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ದೊಡ್ಡ ಸಮಸ್ಯೆಗಳು ಉಂಟಾಗಬಹುದು.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ವಾಹನದಿಂದ ಭಾರೀ ಪ್ರಮಾಣದಲ್ಲಿ ಬಿಳಿ ಹೊಗೆ ಹೊರಬಂದರೆ, ಆಯಿಲ್ ಸೋರಿಕೆ ಅಥವಾ ಹೆಡ್ ಗ್ಯಾಸ್ಕೆಟ್‌ನಲ್ಲಿ ಸಮಸ್ಯೆ ಇದೆ ಎಂದು ತಿಳಿಯಬಹುದು. ಈ ಸಮಸ್ಯೆಯನ್ನು ಸರಿಪಡಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ವಾಹನದೊಳಗೆ ಆಯಿಲ್ ವಾಸನೆ:

ವಾಹನದೊಳಗೆ ಆಯಿಲ್ ವಾಸನೆ ಬಂದರೆ ಎಂಜಿನ್ ಹೆಚ್ಚು ಬಿಸಿಯಾಗುತ್ತಿದೆ ಅಥವಾ ಸೋರಿಕೆಯಾಗುತ್ತಿದೆ ಎಂದರ್ಥ. ಇದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಈ ರೀತಿಯಾದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಿಸಿ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಮೈಲೇಜ್ ಕಡಿಮೆಯಾಗುವುದು:

ಹಳೆಯ ಆಯಿಲ್, ಎಂಜಿನ್ ಘರ್ಷಣೆಗೆ ಕಾರಣವಾಗುತ್ತದೆ. ಇದರಿಂದ ಎಂಜಿನ್ ಪರ್ಫಾಮೆನ್ಸ್ ಕುಸಿಯುತ್ತದೆ. ಇದರ ಪರಿಣಾಮವು ಮೈಲೇಜ್'ನ ಮೇಲಾಗುತ್ತದೆ. ನಿಮ್ಮ ವಾಹನವು ಇದ್ದಕ್ಕಿದ್ದಂತೆ ಕಡಿಮೆ ಮೈಲೇಜ್ ನೀಡಿದರೆ ಹಾಗೂ ಹೆಚ್ಚು ಇಂಧನವನ್ನು ಬಳಸುತ್ತಿದ್ದರೆ ತಕ್ಷಣ ಎಂಜಿನ್ ಆಯಿಲ್ ಪರಿಶೀಲಿಸಿ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಡ್ಯಾಶ್‌ಬೋರ್ಡ್‌ ಸಂಕೇತ

ಕೆಲವು ವಾರ್ನಿಂಗ್'ಗಳನ್ನು ಸೂಚಿಸಲು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಪ್ರತ್ಯೇಕ ಹೆಡ್‌ಲೈಟ್‌ಗಳನ್ನು ನೀಡಲಾಗಿದೆ. ಅವುಗಳಲ್ಲಿ ಎಂಜಿನ್ ಆಯಿಲ್ ಬಗ್ಗೆ ಮಾಹಿತಿ ನೀಡಲು ಡ್ಯಾಶ್‌ಬೋರ್ಡ್‌ನಲ್ಲಿ ಸಣ್ಣ ಬೆಳಕಿನ ಬಲ್ಬ್ ಒದಗಿಸಲಾಗಿರುತ್ತದೆ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ವಾಹನ ತಜ್ಞರ ಮುಖ್ಯ ಸಲಹೆಯ ಪ್ರಕಾರ ಈ ಬಲ್ಬ್ ಎಚ್ಚರಿಕೆ ನೀಡಿದರೆ ಅದರತ್ತ ಗಮನ ಹರಿಸುವುದು ಒಳ್ಳೆಯದು. ಕಾರು ಹೊಸದಾಗಿದ್ದರೆ ಪ್ರತಿ 6,000 ಮೈಲಿ ಅಥವಾ ಪ್ರತಿ ಆರು ತಿಂಗಳಿಗೊಮ್ಮೆ ಎಂಜಿನ್ ಆಯಿಲ್ ಬದಲಾಯಿಸಿ.

ವಾಹನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಎಂಜಿನ್ ಆಯಿಲ್ ಬದಲಾಯಿಸಿ

ಕಾರು ಸ್ವಲ್ಪ ಹಳೆಯದಾಗಿದ್ದರೆ, ಪ್ರತಿ 3 ಸಾವಿರ ಮೈಲಿ ಅಥವಾ ಪ್ರತಿ 3 ತಿಂಗಳಿಗೊಮ್ಮೆ ಎಂಜಿನ್ ಆಯಿಲ್ ಬದಲಾಯಿಸುವುದು ಉತ್ತಮ. ಹಾಗೆ ಮಾಡುವುದರಿಂದ ಕಾರಿನ ಎಂಜಿನ್‌ ಜೀವಿತಾವಧಿಯನ್ನು ಹೆಚ್ಚಿಸಬಹುದು.

Most Read Articles

Kannada
English summary
Signs which says about oil change in vehicles. Read in Kannada.
Story first published: Monday, July 26, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X