ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಕಾರುಗಳಲ್ಲಿ ಕಂಡುಬರುವ ಪ್ರಮುಖ ಬಿಡಿ ಭಾಗಗಳಲ್ಲಿ ಡ್ರೈವ್ ಬೆಲ್ಟ್ ಸಹ ಸೇರಿದೆ. ಎಸಿಯಂತಹ ಅಗತ್ಯ ಉಪಕರಣಗಳ ಕಾರ್ಯಾಚರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಕ್ಕೆ ಡ್ರೈವ್ ಬೆಲ್ಟ್ ಸುರಕ್ಷತೆಯನ್ನು ನಿರ್ವಹಿಸುವುದು ಅತಿ ಅವಶ್ಯಕವಾಗಿದೆ. ಸತತವಾಗಿ ಚಾಲನೆಯಲ್ಲಿರುವ ಕಾರಣ ಇದು ಜಾಗರೂಕತೆ ವಹಿಸಬಹುದಾದ ಘಟಕವಾಗಿದೆ. ಡ್ರೈವ್ ಬೆಲ್ಟ್ ಅನ್ನು ಸರಿಯಾಗಿ ನಿರ್ವಹಿಸಿದರೆ ಅದರ ಜೀವಿತಾವಧಿಯನ್ನು ವಿಸ್ತರಿಸಬಹುದು.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಡ್ರೈವ್ ಬೆಲ್ಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕೆಲವು ಸಂಕೇತಗಳನ್ನು ಹೊರಹಾಕುತ್ತದೆ. ಈ ಸಂಕೇತಗಳಿಂದ ಡ್ರೈವ್ ಬೆಲ್ಟ್ ನಲ್ಲಿ ಸಮಸ್ಯೆ ಇದೆ ಎಂದುಅರಿತುಕೊಳ್ಳಬಹುದು. ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಐದು ಪ್ರಮುಖ ಲಕ್ಷಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಎಸಿಯಲ್ಲಿ ತೊಂದರೆ

ಕಾರುಗಳ ಎಸಿ ಕಾರ್ಯಾಚರಣೆಯಲ್ಲಿ ಡ್ರೈವ್ ಬೆಲ್ಟ್ ಪ್ರಮುಖ ಪಾತ್ರ ವಹಿಸುತ್ತದೆ. ಡ್ರೈವ್ ಬೆಲ್ಟ್'ಗೆ ಯಾವುದೇ ಹಾನಿಯಾದರೂ ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಡ್ರೈವ್ ಬೆಲ್ಟ್‌ಗಳು ಎಂಜಿನ್‌ನಿಂದ ನೇರವಾಗಿ ಚಲನೆಯನ್ನು ನಡೆಸಿ, ಎಸಿ ಸಾಧನವನ್ನು ಚಾಲನೆ ಮಾಡುತ್ತವೆ. ಈ ಕಾರಣಕ್ಕೆ ಡ್ರೈವ್ ಬೆಲ್ಟ್‌ಗೆ ಯಾವುದೇ ಹಾನಿಯಾದರೆ ಅಥವಾ ತೊಂದರೆಯಾದರೆ ಅದು ನೇರವಾಗಿ ಎಸಿ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಎಂಜಿನ್'ನಲ್ಲಿ ಎಕ್ಸಾಸ್ಟ್ ಶಬ್ದ

ಈ ಹಿಂದೆ ಸುಮಾರು 1990ರ ದಶಕದವರೆಗೆ ಜನರು ಹಿಟ್ಟು ರುಬ್ಬಲು ಹಿಟ್ಟಿನ ಗಿರಣಿಗೆ ಹೋಗುತ್ತಿದ್ದರು. ಹಿಟ್ಟಿನ ಗಿರಣಿಗಳಲ್ಲಿ ಮೆಣಸಿನಕಾಯಿ ರುಬ್ಬಲು, ಅಕ್ಕಿ ರುಬ್ಬಲು, ಧಾನ್ಯಗಳನ್ನು ರುಬ್ಬಲು ಪ್ರತ್ಯೇಕ ಯಂತ್ರಗಳಿರುತ್ತಿದ್ದವು. ಇವುಗಳನ್ನು ರುಬ್ಬುವ ಯಂತ್ರದಲ್ಲಿ ಒಂದು ಅಥವಾ ಎರಡು ಮೋಟರ್ ಗಳು ಮಾತ್ರ ಇರುತ್ತವೆ. ಇವುಗಳನ್ನು ರುಬ್ಬಲು ಪ್ರತ್ಯೇಕವಾದ ಬೆಲ್ಟ್ ಬದಲಾಯಿಸಲಾಗುತ್ತದೆ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಇನ್ನು ಕಾರಿನಲ್ಲಿರುವ ಡ್ರೈವ್ ಬೆಲ್ಟ್ ಹೆಚ್ಚು ಬಳಕೆಯಿಂದ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಇದರಿಂದ ದೊಡ್ಡ ಶಬ್ದವು ಹೊರ ಹೊಮ್ಮುತ್ತದೆ. ಈ ರೀತಿ ಶಬ್ದ ಹೊರ ಬಂದರೆ ಡ್ರೈವ್ ಬೆಲ್ಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಅರ್ಥ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಎಂಜಿನ್'ನಲ್ಲಿ ಹೆಚ್ಚುವರಿ ಶಾಖದ ಹರಡುವಿಕೆ

ಡ್ರೈವ್ ಬೆಲ್ಟ್, ಎಸಿ ಮಾತ್ರವಲ್ಲದೆ ಕಾರಿನಲ್ಲಿರುವ ನೀರಿನ ಪಂಪ್ ಅನ್ನು ಸಹ ನಿರ್ವಹಿಸುತ್ತದೆ. ಇದು ಎಂಜಿನ್ ಅನ್ನು ಬೇಗನೆ ಬಿಸಿಯಾಗುವುದನ್ನು ತಡೆಯುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ದೋಷಪೂರಿತ ಡ್ರೈವ್ ಬೆಲ್ಟ್ ಹಾನಿಯನ್ನು ಉಂಟು ಮಾಡಬಹುದು. ಹೀಗಾಗಿ ಶಾಖವು ಅಸಹಜವಾಗಿ ಎಂಜಿನ್'ನಿಂದ ಹೊರಬರುತ್ತದೆ. ಒಂದು ವೇಳೆ ಕಾರಿನಿಂದ ಹೆಚ್ಚು ಶಾಖ ಹೊರ ಬಂದರೆ ತಕ್ಷಣವೇ ಡ್ರೈವ್ ಬೆಲ್ಟ್ ಅನ್ನು ಪರಿಶೀಲಿಸಿ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಫ್ಲಾಟ್ ಹಾನಿ

ಡ್ರೈವ್ ಬೆಲ್ಟ್‌ಗಳು ಕೆಲವೊಮ್ಮೆ ಅದರ ಹಾನಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಅಂದರೆ ಡ್ರೈವ್ ಬೆಲ್ಟ್ ಡ್ರಾಸ್ಟ್ರಿಂಗ್'ನೊಂದಿಗೆ ಸುತ್ತುವರಿದ ಚೀಲದಂತೆ ಕಾಣುತ್ತದೆ. ಡ್ರೈವ್ ಬೆಲ್ಟ್ ಅನ್ನು ತಕ್ಷಣವೇ ಬದಲಾಯಿಸುವುದು ಇದನ್ನು ಸರಿ ಪಡಿಸುವ ಉತ್ತಮ ಮಾರ್ಗವಾಗಿದೆ. ಅಂತಹ ಹಾನಿಯು ಯಾವುದೇ ಶಬ್ದವಿಲ್ಲದೆ ನಡೆಯುತ್ತದೆ ಎಂಬುದು ಗಮನಾರ್ಹ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಪವರ್ ಸ್ಟೀಯರಿಂಗ್ ಚಲನೆಯಲ್ಲಿ ದೋಷ

ಪವರ್ ಸ್ಟೀಯರಿಂಗ್ ಅಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಡ್ರೈವ್ ಬೆಲ್ಟ್‌ನಲ್ಲಿ ಅಸಮರ್ಪಕವಾಗಿದೆ ಎಂದರ್ಥ. ಪವರ್ ಸ್ಟೀಯರಿಂಗ್‌ನಲ್ಲಿ ಡ್ರೈವ್ ಬೆಲ್ಟ್‌ಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಡ್ರೈವ್ ಬೆಲ್ಟ್'ನಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ತಕ್ಷಣವೇ ಬೆಲ್ಟ್ ಅನ್ನು ಬದಲಾಯಿಸಿ. ಡ್ರೈವ್ ಬೆಲ್ಟ್'ನಲ್ಲಿ ದುರಸ್ತಿ ಕಂಡುಬಂದರೆ ತಕ್ಷಣವೇ ಅದನ್ನು ಬದಲಾಯಿಸುವುದು ಉತ್ತಮ. ಈ ಬದಲಾವಣೆಯು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೆಕ್ಯಾನಿಕ್ ಗಳು ಕೆಲವೇ ಈ ಸಮಸ್ಯೆಯನ್ನು ಸರಿಪಡಿಸುತ್ತಾರೆ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಇನ್ನು ಕಾರುಗಳ ಸ್ಟೀಯರಿಂಗ್ ಬಗ್ಗೆ ಹೇಳುವುದಾದರೆ, ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗುವುದನ್ನು ಯಾರೂ ಬಯಸುವುದಿಲ್ಲ. ಸ್ಟೀಯರಿಂಗ್ ವ್ಹೀಲ್ ಅಲುಗಾಡುವುದು ಕಾರಿನಲ್ಲಿ ಏನಾದರೂ ತಪ್ಪಾಗಿದೆ ಎಂಬುದರ ಸೂಚನೆಯಾಗಿದೆ. ಸ್ಟೀಯರಿಂಗ್ ವ್ಹೀಲ್ ಅಲುಗಾಡುತ್ತಿರುವಾಗ ಕಾರನ್ನು ಚಾಲನೆ ಮಾಡಿದರೆ ಅನಗತ್ಯ ಭಯದಲ್ಲಿಯೇ ಪ್ರಯಾಣ ಮಾಡಬೇಕಾಗುತ್ತದೆ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಒಂದು ವೇಳೆ ಸ್ಟೀಯರಿಂಗ್ ವ್ಹೀಲ್ ಅಲುಗಾಡುತ್ತಿರುವುದು ಗಮನಕ್ಕೆ ಬಂದರೆ ಪರಿಸ್ಥಿತಿ ಹದಗೆಡುವ ಮೊದಲು ಅದನ್ನು ಸರಿಪಡಿಸುವುದು ಒಳ್ಳೆಯದು. ಕಾರಿನ ಸ್ಟೀಯರಿಂಗ್ ವ್ಹೀಲ್ ಅಲುಗಾಡಲು ಹಲವು ಕಾರಣಗಳಿರುತ್ತವೆ. ಆ ಕಾರಣಗಳು ಯಾವುವು ಎಂಬುದನ್ನು ನೋಡುವುದಾದರೆ...

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಕಾರಿನ ಟಯರ್‌ಗಳನ್ನು ಸರಿಯಾಗಿ ಜೋಡಿಸದಿದ್ದರೆ ಸ್ಟೀಯರಿಂಗ್ ವ್ಹೀಲ್ ಅಲುಗಾಡಬಹುದು. ಸ್ಟೀರಿಂಗ್ ವೀಲ್ ಅಲುಗಾಡಲು ಇದು ಪ್ರಮುಖ ಕಾರಣವಾಗಿದೆ. ಟಯರ್‌ಗಳ ಜೋಡಣೆ ಸರಿಯಾಗಿಲ್ಲದಿದ್ದರೆ ಕಾರು ಕಡಿಮೆ ವೇಗದಲ್ಲಿ ಚಲಿಸುವಾಗ ಸ್ಟೀಯರಿಂಗ್ ವ್ಹೀಲ್ ಅಲುಗಾಡುವುದಿಲ್ಲ. ಕಾರು ಹೆಚ್ಚು ವೇಗದಲ್ಲಿ ಚಲಿಸುವಾಗ ಮಾತ್ರ ಸ್ಟೀಯರಿಂಗ್ ವ್ಹೀಲ್ ಅಲುಗಾಡುತ್ತದೆ. ಗಂಟೆಗೆ 85 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವಾಗ, ಸ್ಟೀಯರಿಂಗ್ ವ್ಹೀಲ್ ಅಲುಗಾಡಬಹುದು.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ನೀವು ಈ ಸಮಸ್ಯೆಯನ್ನು ಎದುರಿಸಿದರೆ ಎಲ್ಲಾ ಟಯರ್‌ಗಳ ಜೋಡಣೆ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಜೊತೆಗೆ ಟಯರ್‌ಗಳಲ್ಲಿನ ಥ್ರೆಡ್ ಅನ್ನು ಪರಿಶೀಲಿಸಿ. ದೊಡ್ಡ ಸಮಸ್ಯೆಗಳಿದ್ದರೆ ಟಯರ್‌ಗಳನ್ನು ಬದಲಾಯಿಸುವುದು ಸೂಕ್ತ. ಇದರಿಂದ ಕಾರು ಸುಗಮವಾಗಿ, ಸುರಕ್ಷಿತವಾಗಿ ಚಲಿಸಲು ಸಾಧ್ಯವಾಗುತ್ತದೆ. ಟಯರ್‌ಗಳು ಸರಿಯಾಗಿದ್ದು, ಸಮಸ್ಯೆ ಇನ್ನೂ ಮುಂದುವರೆದರೆ ಆಕ್ಸಲ್'ಗೆ ಹಾನಿಯಾಗಿರುವ ಸಾಧ್ಯತೆಗಳಿರುತ್ತವೆ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಬ್ರೇಕ್‌ ಹಾಕಿದಾಗ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಅಲುಗಾಡಿದರೆ ಬ್ರೇಕ್ ರೋಟರ್‌ಗಳಲ್ಲಿ ಸಮಸ್ಯೆ ಇರಬಹುದು. ಬ್ರೇಕ್ ರೋಟರ್‌ಗಳು ತಮ್ಮ ಆಕಾರವನ್ನು ಕಳೆದು ಕೊಳ್ಳುತ್ತಿದ್ದು, ಹಾನಿಗೊಳಗಾಗುತ್ತಿವೆ ಎಂದು ತಿಳಿಯಬಹುದು. ಈ ರೀತಿಯಾದರೆ ಬ್ರೇಕ್ ಪೆಡಲ್ ಮೇಲೆ ಕಾಲು ಹಾಕಿದಾಗಲೆಲ್ಲಾ ವೈಬ್ರೇಷನ್ ಅನ್ನು ಗಮನಿಸಬಹುದು. ವಾಹನಗಳಲ್ಲಿ ಬ್ರೇಕ್ ಅಗತ್ಯವಾಗಿರುವ ಕಾರಣ ಈಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಡ್ರೈವ್ ಬೆಲ್ಟ್ ಅಸಮರ್ಪಕವಾಗಿರುವುದನ್ನು ಸೂಚಿಸುವ ಸಂಕೇತಗಳಿವು

ಹೊಸ ಬ್ರೇಕ್ ಅಳವಡಿಸಿದರೂ ವೈಬ್ರೇಷನ್ ಕಂಡು ಬಂದರೆ ರೋಟಾರ್‌ಗಳನ್ನು ಸರಿಯಾಗಿ ಅಳವಡಿಸಲ್ಲವೆಂದು ಅರ್ಥ. ಈ ಸಮಸ್ಯೆ ಕಂಡು ಬಂದರೆ ತಕ್ಷಣವೇ ವಾಹನವನ್ನು ಮೆಕ್ಯಾನಿಕ್ ಬಳಿ ಕೊಂಡೊಯ್ಯಿರಿ.

Most Read Articles

Kannada
English summary
Signs which shows about drive belt fault details
Story first published: Friday, December 24, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X