ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

By Manoj Bk

ಚಳಿಗಾಲದಲ್ಲಿ ಬೈಕ್‌ ಹಾಗೂ ಸ್ಕೂಟರ್‌ಗಳನ್ನು ಸ್ಟಾರ್ಟ್ ಮಾಡುವಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ಬೈಕುಗಳನ್ನು ಹೊರಗೆ ನಿಲ್ಲಿಸಿದಾಗ ಎಂಜಿನ್ ತಣ್ಣಗಾಗುತ್ತದೆ. ಇದರಿಂದ ಎಂಜಿನ್ ಸ್ಟಾರ್ಟ್ ಮಾಡಲು ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಇದರಿಂದ ವಾಹನ ಸ್ಟಾರ್ಟ್ ಮಾಡಲು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಬೈಕ್ ಅಥವಾ ಸ್ಕೂಟರ್ ಸ್ಟಾರ್ಟ್ ಆಗುವುದೇ ಇಲ್ಲ. ಚಳಿಗಾಲದಲ್ಲಿ ಬೈಕುಗಳನ್ನು ತೊಂದರೆಯಿಲ್ಲದೇ ಸುಲಭವಾಗಿ ಸ್ಟಾರ್ಟ್ ಮಾಡಲು ಅನುಸರಿಸಬೇಕಾದ ಸರಳ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

1. ಬೈಕ್ ಅನ್ನು ಬಯಲಿನಲ್ಲಿ ನಿಲ್ಲಿಸಬೇಡಿ

ಚಳಿಗಾಲದಲ್ಲಿ ತೆರೆದ ಜಾಗದಲ್ಲಿ ಬೈಕ್ ನಿಲ್ಲಿಸುವವರು ಅವುಗಳನ್ನು ಸ್ಟಾರ್ಟ್ ಮಾಡುವಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಚಳಿಯಲ್ಲಿ ಹೆಚ್ಚು ಹೊತ್ತು ಬೈಕ್ ಅನ್ನು ಹೊರಗೆ ನಿಲ್ಲಿಸಿದರೆ ಎಂಜಿನ್ ಆಯಿಲ್ ಸಾಮಾನ್ಯ ತಾಪಮಾನಕ್ಕಿಂತ ತಣ್ಣಗಾಗುತ್ತದೆ. ಇದರಿಂದ ಎಂಜಿನ್ ಸ್ಟಾರ್ಟ್ ಮಾಡಲು ತೊಂದರೆಯಾಗುತ್ತದೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಈ ಹಿನ್ನೆಲೆಯಲ್ಲಿ ಬೈಕುಗಳನ್ನು ರೂಫ್ ಕೆಳಗೆ ಅಥವಾ ತುಂಬಾ ತಂಪಾಗಿರದ ಮುಚ್ಚಿದ ಸ್ಥಳದಲ್ಲಿ ನಿಲ್ಲಿಸಲು ಪ್ರಯತ್ನಿಸಿ. ಇದಲ್ಲದೇ, ಬೈಕ್ ಅನ್ನು ನಿಲ್ಲಿಸುವಾಗ ಬೈಕ್ ಕವರ್‌ನಿಂದ ಮುಚ್ಚಿ. ಇದರಿಂದ ಎಂಜಿನ್ ತಾಪಮಾನವು ಹೆಚ್ಚು ತಣ್ಣಗಾಗುವುದಿಲ್ಲ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

2. ಐಡಲ್ ಎಂಜಿನ್ ರನ್ನಿಂಗ್

ಬೈಕು ಸ್ಟಾರ್ಟ್ ಮಾಡುವ ಮುನ್ನ ಮುಂದಕ್ಕೆ ಚಾಲನೆ ಮಾಡದೇ ಕೆಲ ಹೊತ್ತು ಐಡಲ್ ಎಂಜಿನ್ ರನ್ ಮಾಡಿ. ಇದರಿಂದ ಎಂಜಿನ್ ಸ್ವಲ್ಪ ಬೆಚ್ಚಗಾಗಲು ಸಾಧ್ಯವಾಗುತ್ತದೆ. ಜೊತೆಗೆ ಬೈಕ್ ಚಾಲನೆಯಲ್ಲಿರುವಾಗ ಸ್ಥಗಿತಗೊಳ್ಳುವುದಿಲ್ಲ. ಐಡಲ್ ಇಂಜಿನ್ ಅನ್ನು ಚಾಲನೆ ಮಾಡುವುದರಿಂದ, ಬೈಕಿನ ಎಂಜಿನ್ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

3. ಕಿಕ್ ಸ್ಟಾರ್ಟ್

ಚಳಿಗಾಲದಲ್ಲಿ ಬೈಕ್ ಸ್ಟಾರ್ಟ್ ಮಾಡಲು ತೊಂದರೆಯಾದರೆ, ಬೈಕ್ ಅನ್ನು ಸೆಲ್ಫ್ ಸ್ಟಾರ್ಟ್ ಮಾಡುವ ಬದಲು ಕಿಕ್ ಮಾಡಿ ಸ್ಟಾರ್ಟ್ ಮಾಡಿ. ಕಿಕ್ ನಿಂದ ಬೈಕ್ ಸುಲಭವಾಗಿ ಸ್ಟಾರ್ಟ್ ಆಗುತ್ತದೆ. ಆದರೆ ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಅನೇಕ ಆಧುನಿಕ ಬೈಕುಗಳು ಕಿಕ್ ಸ್ಟಾರ್ಟ್ ಹೊಂದಿಲ್ಲ. ಬದಲಿಗೆ ಈ ಬೈಕುಗಳು ಸೆಲ್ಫ್ ಸ್ಟಾರ್ಟ್ ಆಯ್ಕೆಯನ್ನು ಮಾತ್ರ ಹೊಂದಿವೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

4. ಸ್ಪಾರ್ಕ್ ಪ್ಲಗ್ ಸ್ವಚ್ಛಗೊಳಿಸಿ

ಸ್ಪಾರ್ಕ್ ಪ್ಲಗ್ ಗಳಲ್ಲಿ ಕೊಳೆ ತುಂಬಿಕೊಂಡರೂ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬೈಕ್ ಅಥವಾ ಸ್ಕೂಟರ್ ಗಳಲ್ಲಿರುವ ಸ್ಪಾರ್ಕ್ ಪ್ಲಗ್'ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ಇದರ ಜೊತೆಗೆ ಬೈಕುಗಳನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸುವುದು ಒಳ್ಳೆಯದು.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

5. ಬ್ಯಾಟರಿ ಚಾರ್ಜ್

ಬೈಕಿನ ಎಂಜಿನ್ ಅನ್ನು ಆರಂಭಿಸುವಲ್ಲಿ ಬ್ಯಾಟರಿ ಪ್ರಮುಖ ಪಾತ್ರ ವಹಿಸುತ್ತದೆ. ಬ್ಯಾಟರಿ ಡಿಸ್ಚಾರ್ಜ್ ಆಗಿದ್ದರೆ ಅಥವಾ ಅದರ ವೈರಿಂಗ್'ನಲ್ಲಿ ಏನಾದರೂ ದೋಷವಿದ್ದರೆ, ಬೈಕ್ ಸ್ಟಾರ್ಟ್ ಆಗುವುದಿಲ್ಲ. ಒಂದು ವೇಳೆ ವೈರ್ ಗಳು ಹಾಳಾಗಿದ್ದರೆ ಅಥವಾ ಬ್ಯಾಟರಿ ಡಿಸ್ಚಾರ್ಜ್ ಆಗಿದ್ದರೆ, ಅವುಗಳನ್ನು ರಿಪೇರಿ ಮಾಡಿಸುವುದು ಒಳ್ಳೆಯದು.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಇನ್ನು ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ದ್ವಿಚಕ್ರ ವಾಹನ ಕಳ್ಳತನವೂ ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಯಾರಾದರೂ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ ಮರಳಿ ಬರುವಷ್ಟರಲ್ಲಿ ಅವರ ಬೈಕ್ ಕಳ್ಳತನವಾಗಿರುತ್ತದೆ. ಈ ರೀತಿಯ ಹಲವು ಘಟನೆಗಳು ದೇಶಾದ್ಯಂತ ವರದಿಯಾಗುತ್ತಿವೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಇನ್ನು ಕೆಲವು ಬಾರಿ ಮನೆಯ ಮುಂಭಾಗದಿಂದಲೇ ಬೈಕುಗಳ ಕಳ್ಳತನವಾಗಿರುತ್ತದೆ. ಬೈಕ್ ಕದಿಯಲು ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಬೈಕ್ ಕಳ್ಳತನವಾಗುವುದನ್ನು ತಡೆಯಬಹುದು. ಆ ವಿಧಾನಗಳು ಯಾವುವು ಎಂಬುದನ್ನು ನೋಡುವುದಾದರೆ....

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಬೈಕ್ ಕಳ್ಳತನವಾಗುವುದನ್ನು ತಡೆಯಲು ಚೈನ್ ಹಾಗೂ ಲಾಕ್'ಗಳನ್ನು ಬಳಸಬೇಕು. ಬೈಕಿನಲ್ಲಿ ಎಲ್ಲಿಗೆ ಹೋದರೂ ಸ್ಟೀಲ್ ಚೈನ್'ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ ಲಾಕ್ ಮಾಡುವುದು ಒಳ್ಳೆಯದು.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಬೈಕ್ ಪಾರ್ಕ್ ಮಾಡಿದ ನಂತರ ಚೈನ್ ಬಳಸಿ ಬೈಕಿನ ವ್ಹೀಲ್'ಗೆ ಕಟ್ಟಿ. ಇದರಿಂದ ಬೈಕಿನ ವ್ಹೀಲ್ ಚೈನ್'ನಲ್ಲಿ ಸಿಲುಕಿಕೊಳ್ಳುತ್ತದೆ. ಚೈನ್ ಬಳಸಿ ಬೈಕಿನ ಎರಡೂ ಬದಿಯ ವ್ಹೀಲ್'ಗಳನ್ನು ಲಾಕ್ ಮಾಡಿದರೆ ಇನ್ನೂ ಒಳ್ಳೆಯದು. ಬೈಕ್‌ ಅನ್ನು ಬೈಕ್ ಕಳ್ಳರಿಂದ ಕಾಪಾಡಿಕೊಳ್ಳಲು ಇದು ಸುರಕ್ಷಿತ ಮಾರ್ಗವಾಗಿದೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದ್ದರೆ ಚೈನ್ ಹಾಗೂ ಲಾಕ್ ಅನ್ನು ಪ್ರತ್ಯೇಕವಾಗಿ ಕೊಂಡೊಯ್ಯುವ ಅಗತ್ಯವಿಲ್ಲ. ಡಿಸ್ಕ್ ಬ್ರೇಕ್‌ಗಳಲ್ಲಿರುವ ಲಾಕ್ ಚಿಕ್ಕದಾಗಿರುವ ಕಾರಣ ಅವುಗಳನ್ನು ಬೈಕಿನ ಸ್ಟೋರೇಜ್ ಸ್ಪೇಸ್'ನಲ್ಲಿ ಸುಲಭವಾಗಿ ಇಡಬಹುದು. ಡಿಸ್ಕ್ ಲಾಕ್ ಅನ್ನು ಹೊರತುಪಡಿಸಿ ಯು ಲಾಕ್ ಅಥವಾ ಪ್ಯಾಡ್ ಲಾಕ್'ಗಳನ್ನು ಸಹ ಬಳಸಬಹುದು. ಡಿಸ್ಕ್ ಲಾಕ್ ಬ್ರೇಕ್'ಗಳನ್ನು ಬೈಕಿನ ಎರಡೂ ವ್ಹೀಲ್'ಗಳಿಗೆ ಅಳವಡಿಸಿದರೆ ಬೈಕ್ ಕದಿಯುವುದು ಕಷ್ಟಕರವಾಗುತ್ತದೆ. ಬೈಕ್'ಗಳನ್ನು ರಕ್ಷಿಸಿಕೊಳ್ಳಲು ಡಿಸ್ಕ್ ಲಾಕ್ ಉತ್ತಮ ಆಯ್ಕೆಯಾಗಿದೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಬೈಕುಗಳನ್ನು ಸುರಕ್ಷಿತವಾಗಿಡಲು ತಂತ್ರಜ್ಞಾನಗಳಿಗೇನು ಕೊರತೆಯಿಲ್ಲ. ಬೈಕ್‌ಗಳಲ್ಲಿ ಆ್ಯಂಟಿ ಥೆಫ್ಟ್ ಅಲಾರಂ ಬಳಸಬಹುದು. ಈ ಅಲಾರಂ ವೈರ್'ಲೆಸ್ ಸೆನ್ಸಾರ್'ಗಳ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಈ ಅಲಾರಂ ಅಳವಡಿಸಿದರೆ ಬೈಕ್‌ನ ಹ್ಯಾಂಡಲ್ ಅನ್ನು ಯಾರಾದರೂ ತೆರೆಯಲು ಅಥವಾ ತಿರುಗಿಸಲು ಪ್ರಯತ್ನಿಸಿದರೆ ತಕ್ಷಣವೇ ಅದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ.

ಚಳಿಗಾಲದಲ್ಲಿ ಬೈಕುಗಳನ್ನು ಸುಲಭವಾಗಿ ಸ್ಟಾರ್ಟ್ ಮಾಡುವ ಸರಳ ವಿಧಾನಗಳಿವು

ಹೆಚ್ಚು ಕಾಲ ಬೈಕ್ ಪಾರ್ಕ್ ಮಾಡುವುದಾದರೆ ಸುರಕ್ಷಿತವಾದ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿ. ಅಂತಹ ಸ್ಥಳ ಲಭ್ಯವಿಲ್ಲದಿದ್ದರೆ ಪೇ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡುವುದು ಒಳ್ಳೆಯದು. ನಿಮ್ಮ ಬೈಕಿನ ಭಾಗಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದ್ದರೆ, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂದು ನಿಮಗೆ ತಿಳಿದಿದ್ದರೆ, ಬೈಕುಗಳನ್ನು ಸುರಕ್ಷಿತವಾಗಿಡಲು ಈ ಟ್ರಿಕ್ ತುಂಬಾ ಉಪಯುಕ್ತವಾಗಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Simple tips to start bikes in winter season details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X