ನೀವು ಕಾರಲ್ಲಿ ನಿದ್ರಿಸುತ್ತೀರಾ? ಅಂದ್ರೆ ಜೀವಕ್ಕೆ ಅಪಾಯ!
ಬಹುತೇಕರಿಗೆ ಕಾರು ಎಂಬುದು ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರದೇ ಹೊರತು ಮೋಜು ಮಸ್ತಿಗಳಿಗೂ ಕಾರಣವಾಗಿರುತ್ತದೆ. ಕಾರಲ್ಲಿ ನಮಗೆ ಬೇಕೆನಿಸಿದ್ದಲ್ಲಿ ರಿಲಾಕ್ಸ್ ಮಾಡಬಹುದು. ಇನ್ನು ಸ್ವಲ್ಪ ಹೊತ್ತು ಮ್ಯೂಸಿಕ್ ಕೇಳಬಹುದು. ಅಷ್ಟೇ ಯಾಕೆ ಇನ್ನು ಕೆಲವರಿಗಂತೂ ನಿದ್ರಿಸಲು ಕಾರನ್ನೇ ಬಳಸುತ್ತಾರೆ.
ಅಂದ್ರೆ ನಿಜಕ್ಕೂ ಕಾರಿನಲ್ಲಿ ನಿದ್ರಿಸುವುದು ಸೂಕ್ತವೇ..? ಯಾರು ಈ ಬಗ್ಗೆ ಯೋಚಿಸಲಾರರು. ಯಾಕೆ ಏನಾಯ್ತು ಬಿಡಿ. ಚಾಲಕರನ್ನು ಬಿಟ್ಟು ಇತರ ಪ್ರಯಾಣಿಕರಿಗೆ ಯಾವಾಗ ಬೇಕಾದರೂ ನಿದ್ರಿಸಬಹುದು ತಾನೇ..? ಹೌದು ಇಂದೊಂದು ಸುಲಭ ವಿಚಾರ ಅನಿಸಿದರೂ ಕನ್ನಡ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡುತ್ತಿರುವ ಕೆಲವೊಂದು ಆಘಾತಕಾರಿ ಸತ್ಯಾಂಶಗಳ ಬಗ್ಗೆ ಒಮ್ಮೆ ಗಮನವನ್ನಿಟ್ಟು ನೋಡಿ...
ಹೌದು, ಕಾರಲ್ಲಿ ನಿದ್ರಿಸುವುದು ಭಾರಿ ಡೇಂಜರ್. ಅದರಲ್ಲೂ ವಿಶೇಷವಾಗಿ ಎಸಿ ಕಾರಿನಲ್ಲಿ ನಿದ್ರಿಸಲೇಬಾರದು ಅಂತಿದ್ದಾರೆ ತಜ್ಞರು. ಇದರಿಂದ ಹೊರಸೊಸುವ ಕಾರ್ಬನ್ ಮೊನೊಕ್ಸೈಡ್ ವಿಷಾಣು ಜೀವಕ್ಕೆ ಕುತ್ತು ಸಂಭವಿಸುವ ಅಪಾಯವಿದೆ ಎಂದು ಮಾಹಿತಿ ಹೊರಗೆಡವಿದೆ.ಕಾರಿನಲ್ಲಿ ಗ್ಲಾಸ್ ಮುಚ್ಚಿರುವುದರಿಂದ ಏರ್ ಸರ್ಕ್ಯೂಲೇಷನ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದ ಕಾರಿನೊಳಗೆ ಆಮ್ಲಜನಕದ ಕೊರತೆ ಕಾಡುತ್ತದೆ. ಪರಿಣಾಮವೆಂಬಂತೆ ಪ್ರಯಾಣಿಕ ಉಸಿರುಗಟ್ಟಿ ಸಾಯುವ ಅಪಾಯ ಕಾದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದುರ್ಬಲ ಎಸಿ ಕೂಡಾ ನಿಮ್ಮ ಜೀವಕ್ಕೆ ಅಪಾಯ ತಂದಿಡುವ ಸಾಧ್ಯತೆಯಿದೆ. ದುರ್ಬಲ ಎಸಿಯಿಂದ ಕಾರಿನೊಳಗೆ ಗಾಳಿಯನ್ನು ರಿಫ್ರೆಶ್ ಮಾಡಲು ಸಾಧ್ಯವಿಲ್ಲ. ಇದರಿಂದ ಕಾರ್ಬನ್ ಮೊನೊಕ್ಸೈಡ್ ಮಟ್ಟ ಜಾಸ್ತಿಯಾಗುತ್ತದೆ.
ಹಾಗಿದ್ದರೆ ಕಾರ್ಬನ್ ಮೊನೊಕ್ಸೈಡ್ ಸೇವಿಸುವುದರಿಂದ ನಿಜವಾಗಿಯೂ ಪ್ರಾಣಕ್ಕೆ ಅಪಾಯವಿದೆಯೇ? ಇದು ನಿಮ್ಮ ಜೀವಕೋಶಗಳಿಗೆ ಆಮ್ಲಜನಕ ಸಾಗಿಸಲು ರಕ್ತ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಆಮ್ಲಜನಕ ಕೊರತೆ ಸಮಸ್ಯೆ ಎದುರಾಗಬಹುದು.
ಕಾರಿನ ಗ್ಲಾಸ್ ತೆಗೆದಿಟ್ಟರೆ ಸಮಸ್ಯೆಗೆ ಪರಿಹಾರ ಸಿಕ್ಕಿತ್ತಲ್ಲವೇ ಎಂದು ನಿಮಗೆ ಅನಿಸಬಹುದು. ಆದರೆ ತಜ್ಞರ ಪ್ರಕಾರ ಇದು ಕೇವಲ ಭಾಗಶ: ನೆರವು ಮಾಡಲಿದೆ. ಹಾಗಾಗಿ ದೂರದ ಪ್ರಯಾಣಕ್ಕೆ ತೆರಳುವವರು ಕಾರಿನಲ್ಲಿ ನಿದ್ರಿಸುವುದನ್ನು ಕೈಬಿಡಬೇಕು. ಅಲ್ಲದೆ ಕಾರಿನ ಹೊರಗೆ ಬಂದು ಸಣ್ಣ ವಿರಾಮವನ್ನು ತೆಗೆದುಕೊಳ್ಳುವುದು ಸೂಕ್ತ. ಇದರಿಂದ ತಾಜಾ ಗಾಳಿ ಸೇವಿಸಲು ನೆರವಾಗಲಿದೆ.
ಸಮರ್ಪಕವಾಗಿರುವ ಎಸಿ ಸುರಕ್ಷಿತ ಪ್ರಯಾಣದ ಪ್ರಮುಖ ಅಂಶವಾಗಿರುತ್ತದೆ. ಹಾಗಾಗಿ ಕನಿಷ್ಠ ಪ್ರತಿ ಆರು ತಿಂಗಳಿಗಳಿಗೆ ಒಮ್ಮೆಯಾದರೂ ನಿಮ್ಮ ಕಾರಿನ ಎಸಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿ ಮಾಡತಕ್ಕದ್ದು. ಒಂದು ವೇಳೆ ಎಸಿ ತಂಪಾಗಲು ಬಹಳ ಸಮಯ ತೆಗೆಕೊಳ್ಳುತ್ತಿದೆ ಅಥವಾ ಇತರ ಸಾಂದರ್ಭಿಕ ತೊಂದರೆಗಳು ಇವೆ ಎಂದು ಅನಿಸಿದ್ದಲ್ಲಿ ತುರಂತ್ ಎಸಿ ರಿಪೇರ್ ಮಾಡುವುದು ಒಳ್ಳೆಯದು.


Click it and Unblock the Notifications









