Just In
- 3 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 4 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 5 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 5 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂತರ್ ರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅನುಸರಿಸಬೇಕಾದ ವಿಧಾನಗಳಿವು
ಉದ್ಯೋಗಕ್ಕಾಗಿ ಅಥವಾ ಬೇರೆ ಇನ್ನಾವುದೋ ಕೆಲಸಕ್ಕಾಗಿ ವಿದೇಶ ಪ್ರವಾಸ ಮಾಡುವ ಹಲವಾರು ಜನರಿದ್ದಾರೆ. ಭಾರತದಂತಹ ದೇಶದಲ್ಲಿ ವಾಹನವನ್ನು ಚಾಲನೆ ಮಾಡಲು ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಅವಶ್ಯಕ.

ಈ ಸನ್ನಿವೇಶದಲ್ಲಿ ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಪ್ರಯಾಣಿಸುವ ಜನರಿಗೆ ವಿವಿಧ ದೇಶಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭವಲ್ಲ. ಹೊರ ದೇಶದಲ್ಲಿರುವವರು ಪ್ರತಿ ದೇಶದಲ್ಲೂ ವಿಭಿನ್ನವಾದ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾಗುತ್ತದೆ. ಅಂತರ್ ರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು ಯಾವುವು, ಅನುಸರಿಸಬೇಕಾದ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1. ಭಾರತದ ಡ್ರೈವಿಂಗ್ ಲೈಸೆನ್ಸ್:
ಭಾರತೀಯ ಪ್ರಜೆಯಾಗಿದ್ದು, ಅಂತರರಾಷ್ಟ್ರೀಯ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ, ಮಾನ್ಯವಾದ ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ವಿದೇಶದಿಂದ ಹಿಂದಿರುಗುವವರೆಗೆ ಈ ಲೈಸೆನ್ಸ್ ಮಾನ್ಯತೆಯನ್ನು ಹೊಂದಿರಬೇಕು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

2. ಭಾರತದ ಪಾಸ್‌ಪೋರ್ಟ್:
ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು ಅವಶ್ಯಕವಿರುವ ಮತ್ತೊಂದು ದಾಖಲೆಯೆಂದರೆ ಪಾಸ್‌ಪೋರ್ಟ್. ಮಾನ್ಯವಾದ ಪಾಸ್‌ಪೋರ್ಟ್ ಇಲ್ಲದಿದ್ದರೆ ಡ್ರೈವಿಂಗ್ ಲೈಸೆನ್ಸ್'ಗಾಗಿ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ವಿದೇಶದಿಂದ ಭಾರತಕ್ಕೆ ಮರಳುವ ಮೊದಲು, ಪಾಸ್‌ಪೋರ್ಟ್‌ನ ಸಿಂಧುತ್ವವು ಕನಿಷ್ಠ 6 ತಿಂಗಳ ಕಾಲ ಇರಬೇಕಾಗುತ್ತದೆ.

3. ಫ್ಲೈಟ್ ಟಿಕೆಟ್
ಅಂತರರಾಷ್ಟ್ರೀಯ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ ಪ್ರಯಾಣ ಬೆಳೆಸಿದ ವಿಮಾನದ ಟಿಕೆಟ್ ಹಾಗೂ ರಿಟರ್ನ್ ಟಿಕೆಟ್‌ಗಳನ್ನು ಸಹ ಪರಿಶೀಲಿಸಲಾಗುತ್ತದೆ. ಎರಡೂ ಟಿಕೆಟ್‌ಗಳು ಸರಿಯಾಗಿವೆ ಎಂದು ದೃಢಪಟ್ಟ ನಂತರ ಅಂತರ್ ರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್'ಗಾಗಿ ಅರ್ಜಿ ಸ್ವೀಕರಿಸಲಾಗುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

4. ವೀಸಾ
ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು ವೀಸಾ ಹೊಂದಿರಬೇಕಾಗುತ್ತದೆ. ನೀವು ತೆರಳುವ ದೇಶವು ವೀಸಾ ಆನ್ ಅರೈವಲ್ ವೀಸಾ ನೀಡಿದರೆ, ಅದನ್ನು ಡ್ರೈವಿಂಗ್ ಲೈಸೆನ್ಸ್ ಅರ್ಜಿಯ ಜೊತೆಗೆ ಲಗತ್ತಿಸುವುದು ಕಡ್ಡಾಯ.

5. ಫೋಟೋಗಳು
ಅಂತರರಾಷ್ಟ್ರೀಯ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಲು ಪಾಸ್‌ಪೋರ್ಟ್ ಗಾತ್ರದ 3-4 ಫೋಟೋಗಳನ್ನು ಲಗತ್ತಿಸಬೇಕು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅರ್ಜಿ ಸಲ್ಲಿಸುವ ವಿಧಾನ
1. 4 ಎ ಫಾರಂ
ಅರ್ಜಿದಾರರು ತಮ್ಮ ಜಿಲ್ಲೆಯ ಸಾರಿಗೆ ಕಚೇರಿಯಿಂದ 4 ಎ ಫಾರಂ ಅನ್ನು ಪಡೆದು ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ನಿಗದಿಪಡಿಸಲಾದ ಜಾಗದಲ್ಲಿ ಸಹಿ ಮಾಡುವುದು ಕಡ್ಡಾಯವಾಗಿದೆ.

2. ಮೆಡಿಕಲ್ ಸರ್ಟಿಫಿಕೇಟ್
ಆರೋಗ್ಯದ ಬಗ್ಗೆ ಪುರಾವೆ ಒದಗಿಸಲು ನೋಂದಾಯಿತ ವೈದ್ಯರಿಂದ ಎನ್‌ಒಸಿ ಪಡೆಯಬೇಕು. ವಿದೇಶದಲ್ಲಿ ವಾಹನ ಚಲಾಯಿಸಲು ಅರ್ಜಿದಾರರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ ಎಂಬುದರ ಪುರಾವೆಯಾಗಿ ಈ ಸರ್ಟಿಫಿಕೇಟ್ ಪಡೆಯಲಾಗುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

3. ಎನ್‌ಒಸಿ
ಅರ್ಜಿದಾರನು ಯಾವುದೇ ರೀತಿಯ ದಂಡ ಹೊಂದಿಲ್ಲದೇ ಇರುವುದರ ಬಗ್ಗೆ ಪುರಾವೆ ನೀಡಬೇಕು. ಇದನ್ನು ಸಾರಿಗೆ ಪೋರ್ಟಲ್‌ನಲ್ಲಿರುವ ಡೇಟಾಬೇಸ್'ನಿಂದ ಪರಿಶೀಲಿಸಲಾಗುತ್ತದೆ. ಯಾವುದೇ ಬಾಕಿ ಇಲ್ಲದಿದ್ದರೆ ಎನ್‌ಒಸಿ ನೀಡಲಾಗುತ್ತದೆ.