ಟೆಸ್ಟ್ ಡ್ರೈವ್ ಟಿಪ್ಸ್: ಡೀಲರುಗಳ ಮಾತಿಗೆ ಮರುಳಾಗದಿರಿ

ಇಂದಿನ ಸಲಹೆ: ಟೆಸ್ಟ್ ಡ್ರೈವ್ ಆರಂಭಿಸಿದ ನಂತರ ಡ್ರೈವಿಂಗಿಗೆ ಹೆಚ್ಚಿನ ಗಮನ ನೀಡಿ. ಅಂದರೆ ಗಮನವಿಟ್ಟು ಡ್ರೈವಿಂಗ್ ಮಾಡಿ. ಇಲ್ಲದಿದ್ದರೆ ಮಾರಾಟ ಪ್ರತಿನಿಧಿ ಕಾರಿನಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷ್ಯ ಇದೆಯೆಂದು ನಿಮ್ಮ ತಲೆ ತಿನ್ನುತ್ತಿರಬಹುದು. ಆದರೆ ಕಾರಿನ ಮಾಹಿತಿ ನೀಡು ಎಂದು ಸರಳವಾಗಿ ತಿಳಿಸಿ ಚಾಲನೆ ಮಾಡಿ. ಮಾರಾಟ ಪ್ರತಿನಿಧಿ ಹೇಳುವ ಎಲ್ಲಾ ಮಾತುಗಳು ನಿಜವಾಗಿರುವುದಿಲ್ಲ. ನೀವೆ ಆ ಕಾರಿನಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ತಿಳಿದುಕೊಳ್ಳಿರಿ.
ಭಾನುವಾರದ ಬೋನಸ್ ಸಲಹೆ: ಸಿಟಿ ಮತ್ತು ಹೆದ್ದಾರಿ ರಸ್ತೆಗಿಳೆರಡರಲ್ಲೂ ಟೆಸ್ಟ್ ಡ್ರೈವ್ ಮಾಡಿ. ರಸ್ತೆಯ ಲೇನುಗಳನ್ನು ಬದಲಾಯಿಸಿ ಡ್ರೈವಿಂಗ್ ಮಾಡಿ. ಹ್ಯಾಂಡ್ಲಿಂಗ್, ಏರ್ ಕಂಡಿಷನರ್, ಸ್ಟ್ರಿಯರಿಂಗ್ ಮತ್ತು ಬ್ರೇಕ್ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಅರಿತುಕೊಳ್ಳಿ. ಕಾರಿನೊಳಗಿನಿಂದ ರಸ್ತೆ ಯಾವ ರೀತಿ ಕಾಣುತ್ತದೆ ಎನ್ನುವುದು ಗಮನದಲ್ಲಿರಲಿ. ಹಿಂಭಾಗದಲ್ಲಿ ಬರುವ ವಾಹನಗಳನ್ನು ನೋಡಲು ಆ ಕಾರಿನಲ್ಲಿ ನಿಮಗೆ ಸಾಧ್ಯವಾಗುತ್ತದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಸಲಹೆ ಮುಂದುವರೆಯಲಿದೆ. ಅದಕ್ಕೂ ಮುನ್ನ ಹಿಂದಿನ ದಿನದ ಸಲಹೆಗಳನ್ನು ಓದಿ.
ವಾಹನ ಚಾಲನೆ ಆಸಕ್ತಿಗೆ ಕನ್ನಡ ಡ್ರೈವ್ ಸ್ಪಾರ್ಕಿನಿಂದ ಇನ್ನಷ್ಟು ಅಶ್ವಶಕ್ತಿ: ದಿನಕ್ಕೊಂದು ಸಲಹೆ ಅಂಕಣ


Click it and Unblock the Notifications








