ದಿನಕ್ಕೊಂದು ಸಲಹೆ: ಒಂದು ಶಾರ್ಟ್ ಲಿಸ್ಟ್ ಮಾಡಿರಿ

ಕಾರು ಟೆಸ್ಟ್ ಡ್ರೈವ್ ಮಾಡೋಕ್ಮುಂಚೆ ಬಜೆಟ್ ಮತ್ತು ನಿಮ್ಮ ಅವಶ್ಯಕತೆ ಬಗ್ಗೆ ಆಲೋಚಿಸಲು ತಿಳಿಸಿದ್ದೇವು. ಅಂದ್ರೆ ನಿಮಗೆ ಬೇಕಾದ ಕಾರು ಒಂದು ಡೀಲರಿನಲ್ಲಿ ಇಲ್ಲದಿದ್ದರೆ ಬೇರೆ ಡೀಲರನ್ನು ಸಂಪರ್ಕಿಸುವಂತೆ ಹೇಳಲಾಗಿತ್ತು. ಹೀಗೆ ಹಲವು ಡೀಲರುಗಳು ಸಂಪರ್ಕಿಸಿ ವಿವಿಧ ಕಾರುಗಳನ್ನು ನೋಡಿರುತ್ತೀರಿ.
ಇಂದಿನ ಸಲಹೆ: ನೀವು ಟೆಸ್ಟ್ ಡ್ರೈವ್ ಮಾಡಲು ಬಯಸುವ ಕಾರುಗಳ ಶಾರ್ಟ್ ಲಿಸ್ಟ್ ಒಂದು ತಯಾರಿಸಿ. ನಮ್ ಪ್ರಕಾರ ನಿಮಗೆ ನಿಮ್ಮ ಬಜೆಟಿನಲ್ಲಿ ಇಷ್ಟವಾದ ಕಾರುಗಳನ್ನೆಲ್ಲ ಒಂದೆರಡು ದಿನದಲ್ಲಿ ಟೆಸ್ಟ್ ಡ್ರೈವ್ ಮಾಡಿ ಮುಗಿಸಿ. ಇದರಿಂದ ವಿವಿಧ ಕಾರುಗಳ ನಡುವೆ ಇರುವ ವ್ಯತ್ಯಾಸಗಳು ನಿಮಗೆ ಅರಿವಾಗುತ್ತದೆ.
ಸುಮ್ನೆ ಒಂದು ರೌಂಡ್ ಟೆಸ್ಟ್ ಡ್ರೈವ್ ಮಾಡಿದರೆ ನಿಮಗೆ ಕಾರಿನ ಬಗ್ಗೆ ಸರಿಯಾಗಿ ತಿಳುವಳಿಕೆಯಾಗದು. ಹೀಗಾಗಿ ಕೊಂಚ ಜಾಸ್ತಿ ಸಮಯ ಟೆಸ್ಟ್ ಡ್ರೈವ್ ಮಾಡಲು ಅವಕಾಶ ಸಿಗುವ ಸಮಯದಲ್ಲಿ ಟೆಸ್ಟ್ ಡ್ರೈವ್ ಮಾಡಿ. ಈ ಕುರಿತು ಡೀಲರುಗಳಲ್ಲಿ ಸ್ಪಷ್ಟವಾಗಿ ಚರ್ಚಿಸಿರಿ.
ಟೆಸ್ಟ್ ಡ್ರೈವ್ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನಷ್ಟು ವಿಷಯಗಳಿವೆ. ಅದಕ್ಕೂ ಮುನ್ನ ಮುಂದಿನ ಪುಟದಲ್ಲಿರುವ ನಿನ್ನೆಯ ಸಲಹೆ ಓದಿ. ಮುಂದಿನ ಸಲಹೆಗೆ ನಾಳೆ...


Click it and Unblock the Notifications








