Top car sensors: ನಿಮ್ಮ ಕಾರನ್ನು ಸಖತ್ ಸ್ಮಾರ್ಟ್ ಆಗಿಸುವಲ್ಲಿ ಈ ಸೆನ್ಸಾರ್‌ಗಳದ್ದೇ ಪ್ರಮುಖ ಪಾತ್ರ!
ಭಾರತದಲ್ಲಿ ಈಗ ಆಟೋ ವಲಯವು ಹೆಮ್ಮರವಾಗಿ ಬೆಳೆದುನಿಂತಿದೆ. ಕಾರಣ ಪ್ರತಿಯೊಂದು ಕುಟುಂಬವು ಖರೀದಿಸಬಹುದಾದ ಕೈಗೆಟುಕುವ ಬೆಲೆಯಲ್ಲಿ ಕಾರುಗಳು ಲಭ್ಯವಿವೆ. ಪ್ರವೇಶ ಮಟ್ಟದ ಕಾರುಗಳು ಕೂಡ ತುಂಬಾ ಸ್ಮಾರ್ಟ್ ಫೀಚರ್‌ಗಳನ್ನು ಒಳಗೊಂಡು ಬರುತ್ತಿವೆ. ಆದರೆ ಆ ಫೀಚರ್‌ಗಳಿಗೆ ಜೀವಾಳವಾದ ಸೆನ್ಸಾರ್‌ಗಳ ಬಗ್ಗೆ ಎಷ್ಟು ಮಂದಿಗೆ ಗೊತ್ತು.
ಈಗಿನ ಕನೆಕ್ಟೆಡ್ ಕಾರ್ ಎಂದು ಕರೆಯಾಲಾಗುವ ಸ್ಮಾರ್ಟ್ ಕಾರುಗಳು ಸುರಕ್ಷತಾ ವೈಶಿಷ್ಟ್ಯಗಳು, ಮನರಂಜನಾ ವೈಶಿಷ್ಟ್ಯಗಳು ಸೇರಿದಂತೆ ಹಲವು ಫೀಚರ್ಸ್ ಸಂಬಂಧಿತ ಸೆನ್ಸಾರ್‌ಗಳನ್ನು ಕಾರಿನಾದ್ಯಂತ ಹೊಂದಿರುತ್ತವೆ. ಈ ಸೆನ್ಸಾರ್‌ಗಳು ಸುರಕ್ಷತೆ, ದಕ್ಷತೆ ಮತ್ತು ಅನುಕೂಲತೆಯನ್ನು ಸುಧಾರಿಸಲು ಬಳಸಬಹುದಾದ ಮಾಹಿತಿಯನ್ನು ಕಾರಿಗೆ ಒದಗಿಸುತ್ತವೆ. ಇಂತಹ ಸಂಪರ್ಕಿತ ಕಾರುಗಳಲ್ಲಿ ಕಂಡುಬರುವ 10 ಪ್ರಮುಖ ಸೆನ್ಸಾರ್‌ಗಳ ಬಗ್ಗೆ ಇಲ್ಲಿ ನೋಡೊಣ.

ಕ್ಯಾಮೆರಾಗಳು & ಸೆಲ್ಯುಲಾರ್ ಮೊಡೆಮ್: ಕಾರಿನಲ್ಲಿ ಅತಿಮುಖ್ಯವಾದ ಸೆನ್ಸಾರ್‌ಗಳೆಂದರೆ ಕ್ಯಾಮರಾ ಸೆನ್ಸಾರ್‌ಗಳಾಗಿದ್ದು, ಇವು ಕಾರಿನ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾರ್ಕಿಂಗ್ ಅಸಿಸ್ಟ್, ಲೇನ್ ಡಿಪಾರ್ಚರ್ ಎಚ್ಚರಿಕೆ ಮತ್ತು ಡಿಕ್ಕಿ ತಪ್ಪಿಸಲು ಸಹಕಾರಿಯಾಗಿದೆ. ಇನ್ನು ಸೆಲ್ಯುಲಾರ್ ಮೊಡೆಮ್ ಕಾರನ್ನು ಇಂಟರ್ನೆಟ್‌ಗೆ ಸಂಪರ್ಕಿಸಲು ಸಹಕರಿಸುತ್ತದೆ. ಇದು ಟ್ರಾಫಿಕ್ ಅಪ್‌ಡೇಟ್‌ಗಳು, ಹವಾಮಾನ ಮುನ್ಸೂಚನೆಗಳ ಮಾಹಿತಿಯನ್ನು ನೀಡಲು ಕಾರಿಗೆ ಅನುವು ಮಾಡಿಕೊಡುತ್ತದೆ.
GPS & ಸೀಟ್ ಬೆಲ್ಟ್ : ಜಿಪಿಎಸ್ ಸೆನ್ಸರ್ ಕಾರಿನ ಸ್ಥಳವನ್ನು ನಿರ್ಧರಿಸಿ ಮಾಹಿತಿ ನೀಡುತ್ತದೆ. ಈ ಮಾಹಿತಿಯನ್ನು ನ್ಯಾವಿಗೇಷನ್, ಟ್ರಾಫಿಕ್ ಅಪ್‌ಡೇಟ್‌ಗಳನ್ನು ಮತ್ತು ಎಮರ್ಜನ್ಸಿ ಸೇವೆಗಳಿಗಾಗಿ ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಪಿಎಸ್ ಸೆನ್ಸಾರ್‌ಗಳು ಅತಿಮುಖ್ಯವಾದ ಸೆನ್ಸಾರ್‌ಗಳಾಗಿವೆ. ಇದರ ಜೊತಗೆ ಸೀಟ್ ಬೆಲ್ಟ್ ಸೆನ್ಸಾರ್‌ಗಳು ಕೂಡ ಸುರಕ್ಷತೆಗೆ ಸಹಾಯಕವಾಗಿವೆ. ಸೀಟ್ ಬೆಲ್ಟ್ ಧರಿಸದಿದ್ದರೆ ಇವು ಶಬ್ದ ಮಾಡುತ್ತವೆ.

ರಾಡಾರ್ & LiDAR: ರಾಡಾರ್ ಸೆನ್ಸಾರ್ ತಂತ್ರಜ್ಞಾನವನ್ನು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಹಿಂಭಾಗದ ಕ್ರಾಸ್-ಟ್ರಾಫಿಕ್ ಅಲರ್ಟ್ ನಂತಹ ವಿವಿಧ ಉದ್ದೇಶಗಳಿಗಾಗಿ ಬಳಸಬಹುದು. ಹಾಗೆಯೇ ಲಿಡಾರ್ ತಂತ್ರಜ್ಞಾನವನ್ನು ಆಟೋಮ್ಯಾಟಿಕ್ ಕಾರುಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.ಇವು ಪ್ರತಿ ಕಾರಿನಲ್ಲೂ ಕಂಡುಬರುವುದಿಲ್ಲ. ಟೆಸ್ಲಾದಂತಹ ಕಾರುಗಳಲ್ಲಿ ನೋಡಬಹುದಾಗಿದ್ದು, ಇವು ತುಂಬಾ ಅಡ್ವಾನ್ಸಡ್ ಸೆನ್ಸಾರ್‌ಗಳನ್ನು ಒಳಗೊಂಡಿರುತ್ತವೆ.
ಅಲ್ಟ್ರಾಸಾನಿಕ್ ಸೆನ್ಸರ್ & ಇನ್-ಕಾರ್ ಸೆನ್ಸರ್: ಈ ಅಲ್ಟ್ರಾಸಾನಿಕ್ ಸೆನ್ಸರ್‌ಗಳು ಪಾರ್ಕಿಂಗ್ ವೇಳೆ ತುಂಬಾ ಸಹಕರಿಸುತ್ತವೆ. ಲೇನ್ ಡಿಪಾರ್ಚರ್ ಎಚ್ಚರಿಕೆಯಂತಹ ಉದ್ದೇಶಗಳಿಗಾಗಿ ಇದನ್ನು ಬಳಸಬಹುದು. ಇದರ ಜೊತೆಗೆ ಇನ್-ಕಾರ್ ಸೆನ್ಸರ್ ಎಂದರೆ ನಿಖರವಾಗಿ ಒಂದೇ ಸೆನ್ಸರ್ ಎಂದು ಹೇಳಲಾಗುವುದಿಲ್ಲ. ಕಾರುಗಳ ಒಳಗೆ ಕಂಡುಬರುವ ಅನೇಕ ಸೆನ್ಸಾರ್‌ಗಳಾಗಿವೆ. ಟೈರ್ ಒತ್ತಡ (TPMS), ಎಂಜಿನ್ ಹೀಟ್, ಫ್ಯೂಲ್ ಲೆವಲ್ ಸೇರಿದಂತೆ ಕಾರಿನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತವೆ.

ಬ್ಲೂಟ್ಯೂತ್: ಇದು ಮೊದಲಿನಿಂದಲೂ ಇರುವ ಹಾಗೂ ಅತ್ಯಂತ ಸಾಮಾನ್ಯ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಆದರೂ ಕೂಡ ಕಾರುಗಳಲ್ಲಿ ತುಂಬಾ ಉಪಯುಕ್ತವಾದ ಫೀಚರ್ ಆಗಿದೆ. ಸ್ಮಾರ್ಟ್ ಫೋನ್‌ಗಳು ಮತ್ತು ಮ್ಯೂಸಿಕ್ ಪ್ಲೇಯರ್‌ಗಳಂತಹ ಇತರ ಸಾಧನಗಳಿಗೆ ಸಂಪರ್ಕಿಸಲು ಬ್ಲೂಟೂತ್ ಕಾರನ್ನು ಅನುಮತಿಸುತ್ತದೆ. ಮುಖ್ಯವಾಗಿ ಈಗ ಕಾರನ್ನು ಮೊಬೈಲ್‌ಗೆ ಕನೆಕ್ಟ್ ಮಾಡಿಕೊಂಡರೆ ಕೀ ಫೋಬ್‌ನೊಂದಿಗೆ ಬ್ಲೂಟೂತ್ ಸೆನ್ಸಾರ್‌ಗಳು ಕನೆಕ್ಟ್ ಆಗಿರುತ್ತವೆ.
ನೀವು ಕಾರನ್ನು ಸಮೀಪಿಸಿದಾಗ ನಿಮ್ಮನ್ನು ಮಾಲೀಕರೆಂದು ಗುರುತಿಸುತ್ತದೆ. 2020 ರ ಬ್ಲೂಟ್ಯೂತ್ ಮಾರುಕಟ್ಟೆ ನವೀಕರಣದ ಪ್ರಕಾರ, 2024 ರ ವೇಳೆಗೆ ಬ್ಲೂಟೂತ್ ಸಕ್ರಿಯಗೊಳಿಸಿದ ಕೀ ಫೋಬ್ ಗಳು ಮತ್ತು ಪರಿಕರಗಳು 13 ಮಿಲಿಯನ್‌ಗಿಂತಲೂ ಹೆಚ್ಚಾಗಿವೆ ಎಂದು ತಿಳಿದುಬಂದಿದೆ. ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನವೀಕರಣ ಪಡೆಯಲಿದೆ.


Click it and Unblock the Notifications








