ಕಾರು ಕಳವಾದರೆ ಮೊದಲು ಮಾಡ್ಬೇಕಾದ ಅಂಶ ಏನು..?

ಗ್ರಾಹಕರು ಹೆಚ್ಚಿನ ಭದ್ರತಾ ವ್ಯವಸ್ಥೆ ಹೊಂದಿರುವ ಕಾರುಗಳ ಖರೀದಿಗೆ ಹೆಚ್ಚಿನ ಗಮನ ಕೊಡುತ್ತಾರೆ. ಹಾಗಿದ್ದರೂ ಇವೆಲ್ಲಕ್ಕಿಂತಲೂ ಚಾಲಾಕ್ ಆಗಿರುವ ಕಳ್ಳರು ಕ್ಷಣಮಾತ್ರದಲ್ಲಿ ಕಾರನ್ನು ಚೋರಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಇದು ಹತಾಶೆ ಹಾಗೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಆದರೆ ಕಾರು ಕಳವಾದ ತಕ್ಷಣಕ್ಕೆ ಹತಾಶರಾಗದೇ ಸ್ವಲ್ಪ ಬುದ್ಧಿವಂತಿಕೆಯಿಂದ ಮುಂದುವರಿದ್ದಲ್ಲಿ ಚೋರಿ ಆದ ನಿಮ್ಮ ಕಾರು ಮರಳಿ ಪಡೆಯುವ ಸಾಧ್ಯತೆಯೂ ಇದೆ.

ಇದಕ್ಕಾಗಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಐದು ಅತ್ಯಮೂಲ್ಯ ಸಲಹೆಗಳನ್ನು ಕೊಡುತ್ತಿದ್ದು, ಇದನ್ನು ಅನುಸರಿಸಿದ್ದಲ್ಲಿ ನಿಮಗೆ ನಷ್ಟವಾದ ಕಾರು ಮರಳಿ ಪಡೆಯುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಯಾವುದೇ ರೀತಿಯ ಗ್ಯಾರಂಟಿ ಅಥವಾ ವಾಗ್ದಾನವನ್ನು ನಾವು ಕೊಡುತ್ತಿಲ್ಲ. ಬದಲಾಗಿ ಕಾರು ಕಳವಾದರೆ ತಕ್ಷಣಕ್ಕೆ ಇದನ್ನು ಪಾಲಿಸಿದರೆ ಉತ್ತಮ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಸಿ

ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಸಿ

ಕಾರು ಕಳವಾದ ತಕ್ಷಣಕ್ಕೆ ಮಾಡಬೇಕಾದ ಮುಖ್ಯ ಕೆಲಸ ಏನೆಂದರೆ ಹಿಂದು ಮುಂದು ನೋಡದೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ದಾಖಲಿಸಿಕೊಳ್ಳಿರಿ. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಕಾರು ವಾಪಾಸ್ ಪಡೆಯುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಕಳವಾದ ಕಾರು ಸ್ಟೇಷನ್ ಪರ್ಯಂತದಿಂದ ತುಂಬಾ ದೂರ ಸಾಗಿರಲಾರದು. ಇನ್ನು ಕಳವಾದ ಕಾರನ್ನು ಕಳ್ಳರು ಯಾವುದೇ ಅಪರಾಧ ಕೃತ್ಯಗಳಿಗೆ ಬಳಸಿದ್ದೇ ಆದ್ದಲ್ಲಿ ನೀವು ಮೊದಲೇ ನೀಡಿರುವ ಲಿಖಿತ ದೂರು ನೆರವಿಗೆ ಬರಲಿದೆ.

ಸ್ಟಾಲನ್ ವೆಹಿಕಲ್ ಇಂಡಿಯಾದಲ್ಲಿ ನಮೂದಿಸಿ

ಸ್ಟಾಲನ್ ವೆಹಿಕಲ್ ಇಂಡಿಯಾದಲ್ಲಿ ನಮೂದಿಸಿ

ನಿಮ್ಮ ವಾಹನ ಕಳವಾಗಿದೆ ಎಂದು ತಿಳಿದ ತಕ್ಷಣ ಸ್ಟಾಲನ್ ವೆಹಿಕಲ್ ಇಂಡಿಯಾ (stolen.in) ವೆಬ್‌ಸೈಟ್‌ಗೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ. ಹಾಗೇನಾದರೂ ಕಳ್ಳರು ನಿಮ್ಮ ಕಾರನ್ನು ಪೂರ್ಣವಾಗಿ ಅಥವಾ ಎಂಜಿನ್‌ಗಳಂತಹ ಬಿಡಿಭಾಗಗಳನ್ನು ಮಾರಲು ಯತ್ನಿಸಿದ್ದಲ್ಲಿ ಈ ವೆಬ್‌ಸೈಟ್ ಮುಖಾಂತರ ಇದು ಖರೀದಿಗಾರರ ಗಮನಕ್ಕೆ ಬರುವ ಸಾಧ್ಯತೆಯಿದೆ.

ಸ್ಥಳೀಯ ಗ್ಯಾರೇಜ್, ವಾಹನ ಅಂಗಡಿಗಳಲ್ಲಿ ವಿಚಾರಿಸಿರಿ

ಸ್ಥಳೀಯ ಗ್ಯಾರೇಜ್, ವಾಹನ ಅಂಗಡಿಗಳಲ್ಲಿ ವಿಚಾರಿಸಿರಿ

ಇನ್ನು ಕಾರು ಕಳವಾದ ಬಳಿಕ ಸ್ಥಳೀಯ ಗ್ಯಾರೇಜ್ ಅಥವಾ ವಾಹನ ಅಂಗಡಿಗೆ ಭೇಟಿಕೊಟ್ಟು ವಿಚಾರಿಸಿಕೊಳ್ಳಿರಿ. ಯಾಕೆಂದರೆ ಹೆಚ್ಚು ದಿನ ಕಾರನ್ನು ತಮ್ಮ ಕೈಯಲ್ಲಿರಿಸಿದರೆ ಅಪಾಯವನ್ನು ಮನಗಾಣುವ ಕಳ್ಳರು ಆದಷ್ಟು ಬೇಗನೇ ಸಿಕ್ಕಿದ ಬೆಲೆಗೆ ಅದನ್ನು ಮಾರಾಟ ಮಾಡಲು ಬಯಸುತ್ತಾರೆ.

ಸೆಕೆಂಡ್ ಹ್ಯಾಂಡ್ ಸೇಲ್ಸ್ ಬಗ್ಗೆ ವಿಚಾರಿಸಿಕೊಳ್ಳಿರಿ

ಸೆಕೆಂಡ್ ಹ್ಯಾಂಡ್ ಸೇಲ್ಸ್ ಬಗ್ಗೆ ವಿಚಾರಿಸಿಕೊಳ್ಳಿರಿ

ಹಾಗೆಯೇ ಸ್ಥಳೀಯ ಅಲ್ಪಬೆಲೆಯ ಮಾರುಕಟ್ಟೆಗೆ ಭೇಟಿ ಕೊಟ್ಟು ಬಳಕೆಯಾದ ಕಾರು ಮಾರಾಟವನ್ನು ಪತ್ತೆಹಚ್ಚಿಕೊಳ್ಳಿರಿ. ಕಳವಾದ ಕಾರು ಕಡಿಮೆ ಬೆಲೆಗೆ ಸೆಕೆಂಡ್ಸ್ ಹ್ಯಾಂಡ್ ಮಾರಾಟದಲ್ಲಿ ಸೇಲ್ ಆಗುವ ಸಾಧ್ಯತೆ ಹೆಚ್ಚಿದೆ.

ಇ ಕಾಮರ್ಸ್ ವೆಬ್‌ಸೈಟ್

ಇ ಕಾಮರ್ಸ್ ವೆಬ್‌ಸೈಟ್

ಮಗದೊಮ್ಮೆ ಬಳಕೆಯಾದ ಕಾರುಗಳನ್ನು ಸೇಲ್ ಮಾಡುವ ಅಂತರ್ಜಾಲ ಸೈಟ್‌ಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸುವುದರಿಂದಲೂ ನಿಮ್ಮ ಕಾರು ಮರಳಿ ಪಡೆಯುವ ಸಾಧ್ಯತೆಯಿದೆ. Click.in, Craigslist, ebay, OLX ಗಳಂತಹ ಜಾಹೀರಾತು ವೆಬ್‌ಸೈಟ್‌ಗಳಿಗೆ ತೆರಳಿ ನಿರಂತರವಾಗಿ ಪರಿಶೀಲಿಸುತ್ತಿರಿ. ನಿಮ್ಮಗೆಲ್ಲರಿಗೂ ಶುಭವಾಗಲಿ!

More from DriveSpark

Article Published On: Wednesday, April 24, 2013, 10:06 [IST]
English summary
Losing your vehicle is a frustrating and depressing affair, which, in a few unfortunate cases, could turn disastrous. When a motorcycle or a car or even a bicycle is stolen, it is always better to follow an appropriate plan of action immediately.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+