ಬೈಕ್‌ನಷ್ಟೇ ಮೈಲೇಜ್ ನೀಡುವ ಹೈಬ್ರಿಡ್ ಕಾರುಗಳ ಬಗ್ಗೆ ಖಂಡಿತ ತಿಳಿಯಬೇಕಾದ ವಿಷಯಗಳಿವು!

ಭಾರತದಲ್ಲಿ ಮಿತಿಮೀರಿದ ಪೈಪೋಟಿಯಿಂದಾಗಿ ಹೊಸ ತಂತ್ರಜ್ಞಾಗಳೊಂದಿಗೆ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು ಪರಿಚಯಿಸುತ್ತಿದ್ದಾರೆ. ಕಳೆದ ವಾರವಷ್ಟೇ ಹೋಂಡಾ ಸಿಟಿ ಮಧ್ಯಮ ಗಾತ್ರದ ಸೆಡಾನ್ ಬಿಡುಗಡೆಯಾಗಿದೆ. ಇದರ ಹೈಬ್ರಿಡ್ ರೂಪಾಂತರವು (ಸಿಟಿ e:HEV) ಪೆಟ್ರೋಲ್‌ನಲ್ಲಿ 27.13 ಕಿ.ಮೀ/ಲೀಟರ್ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ವಿವಿಧ ಕಂಪನಿಗಳಿಂದ ಹೊರಹೊಮ್ಮಿರುವ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (HEV ಗಳು) ಸದ್ಯಕ್ಕೆ ಭಾರತದಲ್ಲಿ ಆರು ಇವೆ. ಇದರಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ (27.97 ಕಿ.ಮೀ/ಲೀಟರ್), ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (27.97 ಕಿ.ಮೀ/ಲೀಟರ್), ಟೊಯೊಟಾ ಕ್ಯಾಮ್ರಿ (23.27 ಕಿ.ಮೀ/ಲೀಟರ್), ಟೊಯೊಟಾ ಇನ್ನೋವಾ ಹೈಕ್ರಾಸ್ (21.1 ಕಿ.ಮೀ/ ಲೀಟರ್) ಮತ್ತು ಟೊಯೊಟಾ ವೆಲ್‌ಫೈರ್ (16.3 ಕಿ.ಮೀ/ಲೀಟರ್) ಇವೆಲ್ಲವೂ ಅತ್ಯಧಿಕ ಮೈಲೇಜ್ ನೀಡುವ ಕಾರುಗಳಾಗಿವೆ.

ಬೈಕ್‌ನಷ್ಟೇ ಮೈಲೇಜ್ ನೀಡುವ ಹೈಬ್ರಿಡ್ ಕಾರುಗಳ ಬಗ್ಗೆ ಖಂಡಿತ ತಿಳಿಯಬೇಕಾದ ವಿಷಯಗಳಿವು!

HEVಗಳು ಎರಡು ಶಕ್ತಿಯ ಮೂಲಗಳನ್ನು ಬಳಸುತ್ತವೆ. ಅದರಲ್ಲಿ ಒಂದು ಆಂತರಿಕ ದಹನಕಾರಿ ಎಂಜಿನ್ ಆಗದ್ದರೇ (ಸಾಮಾನ್ಯವಾಗಿ ಪೆಟ್ರೋಲ್) ಮತ್ತೊಂದು ಎಲೆಕ್ಟ್ರಿಕ್ ಮೋಟರ್ ಆಗಿದೆ. ನೀವು ನಿಧಾನವಾಗಿ ಚಾಲನೆ ಮಾಡಲು ಪ್ರಾರಂಭಿಸಿದಾಗ, HEV ಗಳು ಎಲೆಕ್ಟ್ರಿಕ್ ಪವರ್‌ನಿಂದ ಮಾತ್ರ ಚಲಿಸುತ್ತವೆ. ಅದೇ ವೇಗವಾಗಿ ಪ್ರಯಾಣಿಸಲು ಬಯಸಿ ಆಕ್ಸಿಲೇಟರ್ ಪೆಡಲ್ ತುಳಿದರೆ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಎರಡೂ ಚಕ್ರಗಳಿಗೆ ಪವರ್ ನೀಡುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಈ ಸಂಕೀರ್ಣವಾದ ಸೆಟಪ್ HEV ಗಳನ್ನು ಸಾಂಪ್ರದಾಯಿಕ ಪೆಟ್ರೋಲ್ ಕಾರುಗಳಿಗಿಂತ ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಉದಾಹರಣೆಗೆ, ಹೋಂಡಾ ಸಿಟಿ ಪೆಟ್ರೋಲ್ ಬೆಲೆ ರೂ. 11.49 ಲಕ್ಷದಿಂದ ರೂ. 15.97 ಲಕ್ಷ (ಎಕ್ಸ್ ಶೋ ರೂಂ)ಇದ್ದರೇ ಸಿಟಿ ಇ:ಹೆಚ್ಇವಿ ರೂ. 18.89 ಲಕ್ಷದಿಂದ ರೂ. 20.39 ಲಕ್ಷದವರೆಗೆ ಹೋಗುತ್ತದೆ. ಅದೇ ರೀತಿ ಗ್ರಾಂಡ್ ವಿಟಾರಾ ಪೆಟ್ರೋಲ್ ಬೆಲೆ ರೂ. 10.45 ಲಕ್ಷದಿಂದ ರೂ. 16.89 ಲಕ್ಷವಿದ್ದರೇ ಹೈಬ್ರಿಡ್ ರೂಪಾಂತರಗಳ ಬೆಲೆ ರೂ. 17.99 ಲಕ್ಷದಿಂದ ರೂ. 19.49 ಲಕ್ಷವಿದೆ.

ಬೈಕ್‌ನಷ್ಟೇ ಮೈಲೇಜ್ ನೀಡುವ ಹೈಬ್ರಿಡ್ ಕಾರುಗಳ ಬಗ್ಗೆ ಖಂಡಿತ ತಿಳಿಯಬೇಕಾದ ವಿಷಯಗಳಿವು!

ಇತರ ಇಂಧನ-ಸಮರ್ಥ ಕಾರುಗಳು:
ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸಲು ನಿಮಗೆ ಯಾವಾಗಲೂ ಎಲೆಕ್ಟ್ರಿಕ್ ಮೋಟಾರ್ ಅಗತ್ಯವಿಲ್ಲ. ಕಡಿಮೆ ತೂಕದ ತಂತ್ರಜ್ಞಾನ ಮತ್ತು ಇತರ ನಾವೀನ್ಯತೆಗಳನ್ನು ಬಳಸುವುದರಿಂದ ಕಾರುಗಳಿಂದ ಹೆಚ್ಚು ಇಂಧನ ದಕ್ಷತೆಯನ್ನು ಪಡಿಯಬಹುದು. ಉದಾಹರಣೆಗೆ, ಮಾರುತಿ ಸುಜುಕಿ ಸೆಲೆರಿಯೊ ಭಾರತದ ಅತ್ಯಂತ ಇಂಧನ-ಸಮರ್ಥ ನಾನ್-ಹೈಬ್ರಿಡ್ ಕಾರ್ ಆಗಿದ್ದು, 26.68 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳಲಾಗುತ್ತದೆ. ಮಾರುತಿ ಇಂಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ಸಿವಿ ರಾಮನ್ ಕೂಡ ಇದರ ಬಗ್ಗೆ ವಿವರಿಸಿದ್ದರು.

ಈ ಬಗ್ಗೆ ಅವರು ಮಾತನಾಡಿ, ಐದು ಎಂಜಿನಿಯರಿಂಗ್ ಬದಲಾವಣೆಗಳು ಸೆಲೆರಿಯೊದ ಇಂಧನ ದಕ್ಷತೆಯನ್ನು ಹೆಚ್ಚಿಸಿವೆ ಎಂದು ಹೇಳಿದ್ದರು. ಅವುಗಳನ್ನು ನೋಡುವುದಾದರೆ, ಸುಜುಕಿ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ತೂಕವನ್ನು ಕಡಿಮೆ ಮಾಡಿದೆ. ಎರಡನೇಯದು ಐಡಲ್ ಸ್ಟಾರ್ಟ್ ಸ್ಟಾಪ್ ತಂತ್ರಜ್ಞಾನ. ಅಂದರೆ ಕಾರ್ ಸಂಪೂರ್ಣ ನಿಲುಗಡೆಗೆ ಬಂದಾಗ ಎಂಜಿನ್ ಆಟೋಮ್ಯಾಟಿಕ್ ಆಗಿ ಸ್ವಿಚ್ ಆಫ್ ಆಗುವುದರ ಜೊತೆಗೆ ನೀವು ಕ್ಲಚ್ ಅನ್ನು ಒತ್ತಿದಾಗ ಸ್ವಿಚ್ ಆನ್ ಆಗುತ್ತದೆ.

ಬೈಕ್‌ನಷ್ಟೇ ಮೈಲೇಜ್ ನೀಡುವ ಹೈಬ್ರಿಡ್ ಕಾರುಗಳ ಬಗ್ಗೆ ಖಂಡಿತ ತಿಳಿಯಬೇಕಾದ ವಿಷಯಗಳಿವು!

ಮೂರನೇಯದು ಮಾರುತಿ ಸುಜುಕಿ ಕಡಿಮೆ ಸ್ನಿಗ್ಧತೆಯ ಎಂಜಿನ್ ತೈಲವನ್ನು ಬಳಸುವ ಮೂಲಕ ಘರ್ಷಣೆ ನಷ್ಟವನ್ನು ಕಡಿಮೆ ಮಾಡಿದೆ. ನಾಲ್ಕನೇಯದು ಕಾರಿನ ವಾಯು ಬಲವೈಜ್ಞಾನಿಕ (Aerodynamic) ದೇಹ. ಕೊನೆಯದಾಗಿ ಸೆಲೆರಿಯೊ ಕಡಿಮೆ ರೋಲಿಂಗ್ ರೆಸಿಸ್ಟೆನ್ಸ್ ಟೈರ್‌ಗಳ ಮೇಲೆ ಸವಾರಿ ಮಾಡುತ್ತದೆ. ಈ ಐದು ಬದಲಾವಣೆಗಳ ಮೂಲಕ ಸೆಲೆರಿಯೊದಲ್ಲಿ ಶೇ 16 ರಿಂದ 23 ರಷ್ಟು ಉತ್ತಮ ಇಂಧನ ದಕ್ಷತೆಯನ್ನು ಪಡಿಯಬಹುದು ಎಂದು ರಾಮನ್ ತಿಳಿಸಿದ್ದಾರೆ.

ಮಾರುತಿ ಸುಜುಕಿಯು XL6 ಎಂಬ ದೊಡ್ಡ ಕಾರಿಗೆ ಅದೇ ಬದಲಾವಣೆಗಳನ್ನು ಅನ್ವಯಿಸಿ, ಕೆಲವು HEV ಗಳಂತೆಯೇ ಇಂಧನ ದಕ್ಷತೆಯನ್ನು ಹೆಚ್ಚಿಸಲಾಗಿದೆ. XL6 20.97 ಕಿ.ಮೀ/ಲೀಟರ್ ಇಂಧನ ದಕ್ಷತೆಯನ್ನು ನೀಡುತ್ತದೆ. ಹಾಗೆಯೇ ಮಾರುತಿಯಲ್ಲಿ 20 ಕಿ.ಮೀಗಿಂತ ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿರುವ ಕೆಲವು ಕಾರುಗಳು ಇವೆ. ಮಾರುತಿ ಸುಜುಕಿ ಆಲ್ಟೊ AGS (24.9 ಕಿಮೀ/ಲೀಟರ್), ಮಾರುತಿ ಸುಜುಕಿ ವ್ಯಾಗನ್ ಆರ್ ಎಜಿಎಸ್ (24.43 ಕಿಮೀ/ಲೀಟರ್), ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲ್ಯಾನ್ಜಾ (22.94 ಕಿಮೀ/ಲೀಟರ್), ಹಾಗೆಯೇ ಮಾರುತಿ ಸುಜುಕಿ ಡಿಜೈರ್ AGS (22.61 ಕಿಮೀ/ಲೀಟರ್).

More from DriveSpark

Article Published On: Thursday, March 9, 2023, 15:35 [IST]
English summary
Top things you must know about hybrid cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+