Diesel cars: ಡೀಸೆಲ್ ಕಾರುಗಳನ್ನು ಹೀಗೆ ಓಡಿಸಲೇಬಾರದು... ಕಾರು ತಯಾರಕರು ಕೂಡ ಹೇಳೋದಿಲ್ಲ!

ಬಿಎಸ್ 6 ಹೊರಸೂಸುವಿಕೆಯ ಮಾನದಂಡಗಳ ಅನುಷ್ಠಾನದ ನಂತರ, ಕಾರು ತಯಾರಕ ಕಂಪನಿಗಳು ಡೀಸೆಲ್ ಮಾದರಿಗಳನ್ನು ಬಹುತೇಕ ತೆಗೆದುಹಾಕಿದ್ದಾರೆ. ಡೀಸೆಲ್ ಕಾರುಗಳ ಕಡಿತವು ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೇಲೆ ಪ್ರಮುಖವಾಗಿ ಪರಿಣಾಮ ಬೀರಿದೆ. ಏಕೆಂದರೆ ಸಣ್ಣ ಡೀಸಲ್ ಕಾರುಗಳ ಮಾರಾಟದಲ್ಲಿ ಈ ಎರಡು ಬ್ರಾಂಡ್‌ಗಳು ಜನಪ್ರಿಯವಾಗಿವೆ.

ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಡೀಸೆಲ್ ಕಾರುಗಳನ್ನು ಕಡಿತಗೊಳಿಸಿದ್ದರೂ ಗ್ರಾಹಕರು ಮಾತ್ರ ಇನ್ನೂ ಡೀಸೆಲ್ ವಾಹನಗಳು, ವಿಶೇಷವಾಗಿ ಎಸ್‌ಯುವಿ ವಿಭಾಗದಲ್ಲಿ ಹೆಚ್ಚಾಗಿ ಹುಡುಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ನೀವು ಕೂಡ ಡೀಸೆಲ್ ವಾಹನವನ್ನು ಖರೀದಿಸಲು ಬಯಸುತ್ತಿದ್ದರೆ, ಡೀಸೆಲ್ ಕಾರನ್ನು ಹೇಗೆ ಓಡಿಸಬಾರದು ಎಂಬುದರ ಬಗ್ಗೆ ಐದು ಪ್ರಮುಖ ಸಲಹೆಗಳು ಇಲ್ಲಿವೆ.

Diesel cars

ಡಿಪಿಎಫ್ ಅನ್ನು ಸ್ವಚ್ಛವಾಗಿಡಿ: ಡಿಪಿಎಫ್ (ಡೀಸೆಲ್ ಪಾರ್ಟಿಕ್ಯುಲೇಟ್ ಫಿಲ್ಟರ್) ಇದು ಡೀಸೆಲ್ ವಾಹನಗಳಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದೆ. ಇದನ್ನು ಸ್ವಚ್ಚವಾಗಿಡುವುದು ತುಂಬಾ ಮುಖ್ಯ, ಏಕೆಂದರೆ ವಾಹನದಿಂದ ಪರಿಸರಕ್ಕೆ ಹೊರಸೂಸುವ ಹಾನಿಕಾರಕ ಅಂಶಗಳನ್ನು ತಡೆಯುತ್ತದೆ. ಸರಿಯಾದ ನಿರ್ವಹಣೆಯಿಲ್ಲದಿದ್ದರೇ DPF ಮಸಿ ಮತ್ತು ಕಣಗಳಿಂದ ಮುಚ್ಚಿಹೋಗಬಹುದು. ಇದು ಪವರ್, ಪರ್ಫಾಮೆನ್ಸ್ ಮತ್ತು ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದ್ದರೇ ಎಂಜಿನ್ ಮೇಲೆಯೂ ಪರಿಣಾಮ ಬೀರಬಹುದು.

ಕಡಿಮೆ ಡೀಸಲ್‌ನಲ್ಲಿ ವಾಹನ ಓಡಿಸಬೇಡಿ: ಡೀಸೆಲ್, ಎಂಜಿನ್‌ನ ಹಲವಾರು ನಿರ್ಣಾಯಕ ಘಟಕಗಳಿಗೆ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಟ್ಯಾಂಕ್‌ನಲ್ಲಿ ಡೀಸಲ್ ಕಡಿಮೆಯಾದಾಗ, ಇಂಧನ ಪಂಪ್ ಡೀಸೆಲ್ ಬದಲಿಗೆ ಕಂಬಷನ್ ಚೇಂಬರ್‌ (ಎಂಜಿನ್ ದಹನ ಕೊಠಡಿ) ಒಳಗೆ ಗಾಳಿಯನ್ನು ಸೆಳೆಯಬಹುದು, ಇದು ಘರ್ಷಣೆಯನ್ನು ಹೆಚ್ಚಿಸಿ ಪವರ್‌ಟ್ರೇನ್‌ನ ಆಂತರಿಕ ಘಟಕಗಳನ್ನು ಹಾನಿಗೊಳಿಸುತ್ತದೆ.

ಕಡಿಮೆ ಇಂಧನದಲ್ಲಿ ಚಾಲನೆ ಮಾಡುವಾಗ, ಟ್ಯಾಂಕ್‌ ಕೆಳಭಾಗದಲ್ಲಿರುವ ಸ್ಲಗ್ ಅನ್ನು ಕಂಬಷನ್ ಚೇಂಬರ್‌ ಒಳಗೆ ಹೀರಿಕೊಳ್ಳುವ ಹೆಚ್ಚಿನ ಅವಕಾಶವಿದ್ದು, ಎಂಜಿನ್‌ಗೂ ಹಾನಿಯಾಗುತ್ತದೆ. ಜೊತೆಗೆ ಕಡಿಮೆ ಇಂಧನದಲ್ಲಿ ಚಾಲನೆ ಮಾಡುವುದು ಇಂಧನ ಪಂಪ್‌ನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ, ಯಾವಾಗಲೂ ಟ್ಯಾಂಕ್‌ ನಲ್ಲಿ ಸಾಕಷ್ಟು ಮಟ್ಟದ ಇಂಧನದೊಂದಿಗೆ ಚಾಲನೆ ಮಾಡಿ.

Diesel cars

ಕಡಿಮೆ rpm ನಲ್ಲಿ ಹೆಚ್ಚಿನ ಗೇರ್‌ ಬೇಡ: ಕಡಿಮೆ rpm ನಲ್ಲಿ ಹೆಚ್ಚಿನ ಗೇರ್ ಹಾಕಿ ಓಡಿಸುವುದರಿಂದ ಲಗ್ಗಿಂಗ್ ಆಗುತ್ತದೆ. ಇದು ಕಾರಿನ ಎಂಜಿನ್ ಮತ್ತು ಟ್ರಾನ್ಸ್ ಮಿಷನ್‌ಗೆ ತೀವ್ರ ಹಾನಿ ಉಂಟುಮಾಡಬಹುದು. ಹಾಗೆ ಮಾಡುವುದರಿಂದ ಎಂಜಿನ್ ಮೇಲೆ ಒತ್ತಡ ಹೆಚ್ಚಾಗಿ ನಿರ್ಣಾಯಕ ಘಟಕಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಎಂಜಿನ್ ಹೀಟ್‌ ಆಗಲು ಬಿಡಿ: ಎಂಜಿನ್ ಸ್ಟಾರ್ಟ್ ಆದ ನಂತರ, ಹೀಟ್ ಆಗಲು ಸ್ವಲ್ಪ ಸಮಯ ಕೊಡಬೇಕು. ಹೀಗೆ ಮಾಡುವುದರಿಂದ ಪವರ್‌ಟ್ರೇನ್ ಜೀವಿತಾವಧಿಯನ್ನು ಹೆಚ್ಚಿಸಬಹುದು. ಜೊತೆಗೆ ಕಾರು ಧೀರ್ಘಕಾಲದವರೆಗೆ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ. ತಣ್ಣಗಿರುವ ಎಂಜಿನ್‌ ಅನ್ನು ಒಮ್ಮೆಲೆ ಓಡಿಸುವುದರಿಂದ ಸ್ಥಿರ ಕ್ರಮದಲ್ಲಿ ತೈಲವು ದಪ್ಪವಾಗಿರುವುದರಿಂದ ಪವರ್ ಮಿಲ್ ಹಾನಿಗೊಳ್ಳುತ್ತದೆ. ಇದು ಪಿಸ್ಟನ್, ಪಿಸ್ಟನ್ ರಿಂಗ್ಸ್, ವಾಲ್ವ್ ಮತ್ತು ಸಿಲಿಂಡರ್‌ಗೆ ಅಪಾಯವನ್ನು ಹೆಚ್ಚಿಸಬಹುದು.

Diesel cars

ಎಕ್ಸಾಸ್ಟ್ ಹೊಗೆಯ ಬಗ್ಗೆ ಎಚ್ಚರವಿರಲಿ: ಡೀಸೆಲ್ ಕಾರುಗಳಿಂದ ಕಪ್ಪು ಹೊಗೆ ಬರುವುದನ್ನು ಅನೇಕ ಚಾಲಕರು ನಿರ್ಲಕ್ಷಿಸುತ್ತಾರೆ. ಆದರೆ ಹಾಗೆಯೇ ಬಿಟ್ಟರೇ ನಿಮ್ಮ ವಾಹನಕ್ಕೆ ತೊಂದರೆಯಾಗಬಹುದು. ಈ ಹೊಗೆಯು ಪವರ್‌ ಟ್ರೇನ್‌ಗೆ ಏನೋ ತೊಂದರೆಯಾಗುತ್ತಿದೆ ಎಂಬುದರ ಸಂಕೇತವನ್ನು ನಿಡುತ್ತದೆ. ವಾತಾವರಣ ಶೀತವಿದ್ದಾಗ ವಾಹನಗಳು ಸ್ವಲ್ಪ ಹೊಗೆ ಹೊರಸೂಸುವುದು ಸಾಮಾನ್ಯ ಸಂಗತಿ.

ಇದರ ಬಗ್ಗೆ ಭಯ ಬೇಡ, ಆದ್ರೆ ಸಾಮಾನ್ಯ ವಾತಾವರಣದಲ್ಲೂ ಹೊಗೆ ಬರುತ್ತಿದೆ ಎಂದರೆ ನಿಮ್ಮ ಎಂಜಿನ್‌ಗೆ ಏನೋ ಸಮಸ್ಯೆ ಕಾಡುತ್ತಿದೆ ಎಂದರ್ಥ. ಎಕ್ಸಾಸ್ಟ್‌ನಿಂದ ಗಾಢ ಹೊಗೆ ಬರುತ್ತಿದೆ ಎಂದರೆ ಅತಿಯಾದ ಇಂಧನ ಬಳಕೆ ಅಥವಾ ದೋಷಪೂರಿತ ಇಂಜೆಕ್ಟರ್ ಅಥವಾ ಎಂಜಿನ್-ಸಂಬಂಧಿತ ಸಮಸ್ಯೆಗಳು ಇರುಬಹುದು ಹಾಗಾಗಿ ಇದರ ಬಗ್ಗೆ ಕಂಡಿತ ಎಚ್ಚರ ವಹಿಸಬೇಕು.

More from DriveSpark

Article Published On: Friday, May 26, 2023, 13:48 [IST]
English summary
Top tips on driving diesel cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+