ಟ್ರಾಫಿಕ್ ಪೊಲೀಸರಿಗೆ ಎಷ್ಟು ದಂಡ ಪಾವತಿಸಬೇಕು?

ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರ್ ರಾಂಕ್ ನ ಅಧಿಕಾರಿಗಳಿಗೆ ಮಾತ್ರ ದಂಡ ಪಾವತಿಸಿ. ಅದಕ್ಕಿಂತ ಕಡಿಮೆ ದರ್ಜೆಯ ಅಂದರೆ ಕಾನ್ಸ್ ಸ್ಟೇಬಲ್ ಗಳಿಗೆ ದಂಡ ಪಾವತಿಸಬೇಡಿ.
ಸಂಚಾರ ನಿಯಮ ಉಲ್ಲಂಘನೆಗೆ ದಂಡ
* ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡಿದರೆ, ನಿಮ್ಮ ವಾಹನವನ್ನು ಪರವಾನಿಗೆ ಇಲ್ಲದಾತ ಚಲಾಯಿಸಿದರೆ ನೀವು 300 ರುಪಾಯಿ ದಂಡ ನೀಡಬೇಕು. ಏನಪ್ಪ ಲೈಸನ್ಸ್ ಇಲ್ವ ಅಂತ ಟ್ರಾಫಿಕ್ ಪೊಲೀಸ್ 1 ಸಾವಿರ ಕೇಳಿದರೆ ಕೊಡಬೇಡಿ.
* ಪರವಾನಿಗೆ ಮತ್ತು ಇತರ ದಾಖಲೆ ಜೊತೆಗಿರದಿದ್ದರೆ 100 ರುಪಾಯಿ ದಂಡ.
* ನಿಗದಿಗಿಂತ ಜಾಸ್ತಿ ಜನರನ್ನು ಬೈಕಿನ ಹಿಂಬದಿಯಲ್ಲಿ ಕುಳ್ಳಿರಿಸಿದರೆ 100 ರುಪಾಯಿ ದಂಡ
* ನಿಮ್ಮಿಂದಾಗಿ ಸಂಚಾರಕ್ಕೆ ತಡೆಯಾದರೆ 100 ರು.
* ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ 100 ರು.
* ರಾಂಗ್ ರೂಟ್, ಸಿಗ್ನಲ್ ನಿಯಮ ಉಲ್ಲಂಘಿಸಿದರೆ 100 ರು. ದಂಡ
* ರಾಷ್ ಡ್ರೈವಿಂಗ್, ಮ್ಯೂಸಿಕಲ್ ಹಾರ್ನ್ ಬಳಸಿದರೆ 500 ರು.
* ಡ್ರೈವಿಂಗ್ ಮಾಡಿದಾಗ ಮೊಬೈಲ್ ಫೋನ್ ಬಳಸಿದರೆ 100 ರು.
* ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡು ರಾಷ್ ಆಗಿ ಡ್ರೈವಿಂಗ್ ಮಾಡಿದರೆ 500 ರು.
* ಸಂಚಾರಿ ಪೊಲೀಸರ ನಿರ್ದೇಶನಕ್ಕೆ ಗೌರವ ಸೂಚಿಸದೆ ಇದ್ದರೆ 200 ರು.
* ಟ್ರಾಫಿಕ್ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದರೆ 200 ರು.
* ಮೀಟರ್ ಗಿಂತ ಹೆಚ್ಚು ದುಡ್ಡು ಕಿತ್ತರೆ(ರಿಕ್ಷಾ ಡ್ರೈವರ್) 50 ರು.
* ನೆಗ್ಲೆಕ್ಟ್ ಆಗಿ ರಿವರ್ಸ್ ಚಾಲನೆ ಮಾಡಿದರೆ 100 ರು.
* ಸುರಕ್ಷತಾ ಬೆಲ್ಟ್ ಧರಿಸದೇ ಇದ್ದರೆ(ಕಾರು/ಜೀಪು)100 ರು.
* ಸೈಲೆಂಟ್ ಝೋನ್ ಗಳಲ್ಲಿ ಹಾರ್ನ್ ಬಳಸಿದರೆ 100 ರು.
* ಕಪ್ಪು ಗ್ಲಾಸ್ ಹಾಕಿರುವ ವಾಹನಗಳಿಗೆ 100 ರು.
* ನಂಬರ್ ಪ್ಲೇಟ್ ಇಲ್ಲದಿದ್ದರೆ 100 ರು ದಂಡ, ರಿಕ್ಷಾಗಳಿಗೆ 50 ರುಪಾಯಿ
* ಅತ್ಯಧಿಕ ವೇಗಕ್ಕೆ(ಮಲ್ಟಿ ವೆಹಿಕಲ್) 200 ರು. ದಂಡ
* ಮಾನಸಿಕ ಸಮತೋಲನವಿಲ್ಲದಿದ್ದಾಗ ವಾಹನ ಚಾಲನೆ ಮಾಡಿದರೆ 100 ರು. ದಂಡ
* ಪರವಾನಿಗೆ ಇಲ್ಲದೇ ರೇಸ್ ಆಯೋಜಿಸಿದರೆ(ಎಂವಿ) 300 ರು. ಫೈನ್
* ಕುಡಿದು ವಾಹನ ಚಲಾಯಿಸಿದರೆ 2 ಸಾವಿರ ರು.
* ಸೂಕ್ತ ಲೈಟ್ ಬಳಸದೇ ಇದ್ದರೆ 100 ರು., ರಿಕ್ಷಾ 50 ರು.
* ಒನ್ ವೇ ನಿಯಮಕ್ಕೆ ವಿರುದ್ಧವಾಗಿ ಚಲಾಯಿಸಿದರೆ, ಯು-ಟರ್ನ್ ಇಲ್ಲದ ಸ್ಥಳದಲ್ಲಿ ಯು-ಟರ್ನ್ ತೆಗೆದುಕೊಂಡರೆ, ಪೊಲೀಸ್ ಸೂಚಿಸಿದ ಸಿಗ್ನಲ್ ಗೆ ಗೌರವ ತೋರಿಸದಿದ್ದರೆ, ಲೇನ್ ಕಟ್ಟಿಂಗ್ ಇತ್ಯಾದಿ ಅಪರಾಧಗಳಿಗೆ ಎಲ್ಲಾ ವಾಹನಗಳಿಗೆ 100 ರುಪಾಯಿ ಮತ್ತು ಆಟೋ ರಿಕ್ಷಾಗಳಿಗೆ 50 ರುಪಾಯಿ ದಂಡ ವಿಧಿಸಲಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್).
ಓದಿ: ಬೆಂಗಳೂರು ಡ್ರಾಗ್ ಬೈಕರುಗಳಿಗೆ ಕಾದಿದೆ ಮಾರಿಹಬ್ಬ


Click it and Unblock the Notifications








