ಬೆಂಗಳೂರು ಟ್ರಾಫಿಕ್ ಪೊಲೀಸರ ಮಾಮೂಲಿ ದಂಧೆ

ಇಂತಹ ಸಮಯದಲ್ಲಿ ಹೆಚ್ಚಿನ ಚಾಲಕರು ಲಂಚದ ಮೊರೆ ಹೋಗುತ್ತಾರೆ. ಏನಪ್ಪ ತ್ರಿಬಲ್ ರೈಡ್ ಮಾಡ್ತಾ ಇದ್ದಿಯಾ 500 ರುಪಾಯಿ ಫೈನ್ ಕಟ್ಟು ಅಂತ ಟ್ರಾಫಿಕ್ ಪೊಲೀಸ್ ದಬಾಯಿಸಿದರೆ ಆತನಲ್ಲಿ ಚೌಕಾಶಿಗಿಳಿದು 300 ರುಪಾಯಿ ಫೈನ್ ಕಟ್ಟುತ್ತಾರೆ. ಫೈನ್, ಅಷ್ಟು ದುಡ್ಡನ್ನು ಕಿಸೆಗೆ ಹಾಕಿದ ಪೊಲೀಸ್ ಬೇರಾವುದೋ ಮಿಕಕ್ಕೆ ಕಾಯುತ್ತಾನೆ.
ಆದರೆ ಹೆಚ್ಚಿನವರಿಗೆ ಗೊತ್ತಿಲ್ಲ. ಸಂಚಾರ ನಿಯಮ ಉಲ್ಲಂಘಿಸಿದರೆ ಎಷ್ಟು ಫೈನ್ ಕಟ್ಟಬೇಕೆಂದು. ಟ್ರಾಫಿಕ್ ಪೊಲೀಸ್ ಹೇಳಿದಷ್ಟು ದುಡ್ಡು ಕೊಡುವುದು ಮಾಮೂಲಿ. ಅವರಂತು ಸದಾ 500 ರುಪಾಯಿಯಿಂದ ಹೆಚ್ಚು ಕೀಳುತ್ತಾರೆ. ಅಸಲಿಗೆ ಪಾವತಿಸಬೇಕಾದ ದಂಡ ಹೆಚ್ಚೆಂದರೆ ನೂರು ರುಪಾಯಿ ಇರುತ್ತದೆ ಅಷ್ಟೇ!
ಇನ್ನು ಮುಂದೆ ನೀವು ಟ್ರಾಫಿಕ್ ಪೊಲೀಸ್ ಗೆ ದಂಡ ನೀಡಬೇಕಾಗಿ ಬಂದರೆ ಅಡ್ಡದಾರಿ ಹಿಡಿಯಬೇಡಿ. ಆತನಲ್ಲಿ ನ್ಯಾಯಯುತವಾಗಿ ರಸೀದಿ ಪಡೆದು ಫೈನ್ ಪಾವತಿಸಿ. ಅದಕ್ಕೂ ಮೊದಲು ಯಾವ ತಪ್ಪಿಗೆ ಎಷ್ಟು ದಂಡ ತೆರಬೇಕು ಎಂಬುದನ್ನು ತಿಳಿದುಕೊಳ್ಳಿ. ಮುಂದಿನ ಪುಟದಲ್ಲಿ ಎಲ್ಲಾ ಮಾಹಿತಿಗಳು ಇವೆ.


Click it and Unblock the Notifications








