ಈ ಸಿಂಪಲ್ ಫೀಚರ್ಸ್ ಅಪ್‌ಗ್ರೇಡ್ ಮೂಲಕ ನಿಮ್ಮ ಹಳೆಯ ಕಾರನ್ನು ಹೊಸದಾಗಿಸಿಕೊಳ್ಳಿ...
ಇತ್ತೀಚಿನ ದಿನಗಳಲ್ಲಿ ಹ್ಯಾಚ್‌ಬ್ಯಾಕ್‌ನ ಪ್ರವೇಶ ಮಟ್ಟದ ಕಾರುಗಳು ಸಾಕಷ್ಟು ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಬರುತ್ತಿವೆ. ಹಳೆಯ ಕಾರುಗಳಿಗೆ ಹೋಲಿಸಿದರೆ ಇಂದಿನ ಕಾರುಗಳು ಎಲ್ಲಾ ವೈಶಿಷ್ಟ್ಯಗಳನ್ನು ಕಡಿಮೆ ಬೆಲೆಯಲ್ಲೇ ಶ್ರೀಮಂತಿಕೆಯನ್ನು ಪಡೆದುಕೊಂಡು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಆದ್ದರಿಂದ ಹಳೆಯ ಕಾರುಗಳಲ್ಲಿ ನೀಡಲಾಗಿರುವ ವೈಶಿಷ್ಟ್ಯಗಳ ಕೊರತೆಯಿಂದ ನಾವು ಕಾರಿನ ವಯಸ್ಸನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಬಹುದು.
ಈ ಲೇಖನದಲ್ಲಿ ನಾವು ಐದು ಹೊಸ ವೈಶಿಷ್ಟ್ಯಗಳನ್ನು ಪಟ್ಟಿ ಮಾಡಿದ್ದು, ಅವು ನಿಮ್ಮ ಕಾರಿನ ವಯಸ್ಸು ಮತ್ತು ನವೀಕರಣದ ಸಮಯವನ್ನು ನೆನಪಿಸುತ್ತವೆ. ಈ ಫೀಚರ್‌ಗಳನ್ನು ನಿಮ್ಮ ಹಳೆಯ ಕಾರಿನಲ್ಲಿ ಅಪ್‌ಗ್ರೇಡ್ ಮಾಡಿಕೊಳ್ಳುವ ಮೂಲಕ ಹೊಸ ಕಾರಿನ ಖರೀದಿಯನ್ನು ತಪ್ಪಿಸುತ್ತದೆ. ಜೊತೆಗೆ ಇವು ಹೊಸ ಕಾರುಗಳಲ್ಲಿನ ಪ್ರೀಮಿಯಂ ಫೀಚರ್‌ಗಳ ಅನುಭವವನ್ನೂ ನೀಡುತ್ತವೆ. ಈ ಕೆಳಗೆ ನೀಡಿರುವ ಎಲ್ಲಾ ವೈಶಿಷ್ಟ್ಯಗಳನ್ನು ನಾವು ಆಫ್ಟರ್ ಮಾರ್ಕೆಟ್ ಮೂಲಕವು ಅಳವಡಿಸಿಕೊಳ್ಳಬಹುದು.

ಕ್ಲೈಮೆಟ್ ಕಂಟ್ರೋಲ್
ತಾಪಮಾನವನ್ನು ಸರಿಹೊಂದಿಸಲು ಕಲರ್-ಕೋಡೆಡ್ ನಾಬ್ಸ್‌ಗಳನ್ನು ತಿರುಗಿಸುವುದು ಮತ್ತು ಸ್ಲೈಡ್ ಮಾಡುವ ದಿನಗಳು ಕಳೆದುಹೋಗಿವೆ. ನಿಮ್ಮ ಕಾರಿನಲ್ಲಿನ AC ಯ ತಾಪಮಾನವನ್ನು ಸರಿಹೊಂದಿಸಲು ನೀವು ಇನ್ನೂ ಈ ಕಲರ್-ಕೋಡೆಡ್ ನಾಬ್‌ಗಳನ್ನು ಅವಲಂಬಿಸಿದ್ದರೆ, ಇದು ನಿಮ್ಮ ಕಾರನ್ನು ಅಪ್‌ಗ್ರೇಡ್ ಮಾಡಲಿರುವ ಸ್ಪಷ್ಟ ಸೂಚನೆಯಾಗಿದೆ. ಆಧುನಿಕ ಕಾರುಗಳು 'ಹವಾಮಾನ ನಿಯಂತ್ರಣ' ವ್ಯವಸ್ಥೆಯೊಂದಿಗೆ ಬರುತ್ತವೆ. ಇದರಿಂದ ಬೇಸಿಗೆ ಸಮಯದಲ್ಲಿ ಕಾರನ್ನು ಬಹು ಬೇಗನೇ ಒಳಾಂಗಣವನ್ನು ತಣ್ಣಗಾಗಿಸಬಹುದು.
Android Auto / Apple Carplay ವೈಶಿಷ್ಟ್ಯಗಳು
ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ಗಳು ಇಂದು ಆಟೋಮೋಟಿವ್ ಪ್ರಪಂಚದ ಸಮಾನ್ಯ ಚರ್ಚಾವಿಷಯವಾಗಿಬಿಟ್ಟಿವೆ. ಎಲ್ಲಾ ಕಾರು ತಯಾರಕರು ಈ ವೈಶಿಷ್ಟ್ಯವನ್ನು ಹೈಲೈಟ್ ಮಾಡುತ್ತಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಇದು ಪ್ರಸ್ತುತ ಅನಿವಾರ್ಯವಾಗಿದೆ. ಒಂದು ದಶಕದ ಹಿಂದೆ, ಪ್ರೀಮಿಯಂ ಐಷಾರಾಮಿ ಕಾರುಗಳಲ್ಲಿ ಮಾತ್ರ ಸ್ಕ್ರೀನ್‌ಗಳನ್ನು ಹೊಂದಿರುವ ಇನ್ಫೋಟೈನ್‌ಮೆಂಟ್ ಘಟಕಗಳನ್ನು ಕಾಣಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ ರೆನಾಲ್ಟ್ ಕ್ವಿಡ್‌ನಂತಹ ಪ್ರವೇಶ ಮಟ್ಟದ ಮಾದರಿಗಳು ಸಹ ಟಚ್‌ಸ್ಕ್ರೀನ್ ವ್ಯವಸ್ಥೆಯನ್ನು ನೀಡುತ್ತಿವೆ.
ಈ ವೈಶಿಷ್ಟ್ಯ ನಿಮ್ಮ ಕಾರಿನಲ್ಲಿ ಲಭ್ಯವಿರದಿದ್ದರೆ ನಿಮಗೆ ನವೀಕರಣದ ಅಗತ್ಯವಿದೆ ಎಂದರ್ಥ. ಹೆಚ್ಚುವರಿಯಾಗಿ, ಈ ಇನ್ಫೋಟೈನ್‌ಮೆಂಟ್ ಘಟಕಗಳು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯಂತಹ ಸಂಪರ್ಕ ವೈಶಿಷ್ಟ್ಯಗಳನ್ನು ಸಹ ಹೊಂದಿವೆ. ಈ ಸಂಪರ್ಕ ವೈಶಿಷ್ಟ್ಯಗಳು ಗ್ರಾಹಕರು ತಮ್ಮ ಫೋನ್ ಅನ್ನು ಕನೆಕ್ಟ್ ಮಾಡುವ ಮೂಲಕ Google Maps, Phone, Google Assistant, Siri, Spotify ನಂತಹ ವಿವಿಧ ಕಾರ್ಯಗಳು ಮತ್ತು ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಅನುಮತಿಸುತ್ತದೆ.
TPMS
ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಎನ್ನುವುದು ಬಾಹ್ಯ ಟೈರ್ ಒತ್ತಡದ ಮಾನಿಟರಿಂಗ್ ಗೇಜ್ ಅನ್ನು ಬಳಸದೆಯೇ ಟೈರ್ ಒತ್ತಡವನ್ನು ಮೇಲ್ವಿಚಾರಣೆ ಮಾಡಲು ಬಳಕೆದಾರರಿಗೆ ಅನುಮತಿಸುವ ಒಂದು ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ತುಂಬಾ ಅನುಕೂಲಕರವಾಗಿದ್ದು, ಪ್ರಯಾಣಿಸುವಾಗಲೂ ಸಹ ಪಂಕ್ಚರ್ ಅಥವಾ ಇತರ ಟೈರ್ ಒತ್ತಡದ ಕುಸಿತ ಸಂಭವಿಸಿದಾಗ ಬಳಕೆದಾರರಿಗೆ ತಕ್ಷಣವೇ ತಿಳಿಸುತ್ತದೆ. ಪ್ರಸ್ತುತ ಇಂತಹ ವೈಶಿಷ್ಟ್ಯವನ್ನು ಆರಂಭಿಕ ಕಾರುಗಳಲ್ಲಿಯೂ ಹಲವು ಕಂಪನಿಗಳು ನೀಡುತ್ತಿವೆ. ಹಾಗಾಗಿ ಈ ವೈಶಿಷ್ಟ್ಯ ನಿಮ್ಮ ಕಾರಿನಲ್ಲಿ ಲಭ್ಯವಿಲ್ಲವಾದರೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಉತ್ತಮ.
ಏರ್‌ಬ್ಯಾಗ್‌ಗಳು
ನಿಮ್ಮ ಕಾರು ಏರ್‌ಬ್ಯಾಗ್‌ಗಳನ್ನು ಹೊಂದಿಲ್ಲದಿದ್ದರೆ, ನೀವು ಆಧುನಿಕ ಸುರಕ್ಷತಾ ಸಾಧನಗಳೊಂದಿಗೆ ಕಾರನ್ನು ಓಡಿಸುತ್ತಿಲ್ಲ ಎಂಬುದಕ್ಕೆ ಇದು ಸೂಚನೆಯಾಗಿದೆ. ಏರ್‌ಬ್ಯಾಗ್ ಸುರಕ್ಷತಾ ವೈಶಿಷ್ಟ್ಯವಾಗಿದ್ದು, ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರನ್ನು ಮಾರಣಾಂತಿಕ ಗಾಯಗಳಿಂದ ರಕ್ಷಿಸಲು ಸಕ್ರಿಯಗೊಳಿಸಲಾಗುತ್ತದೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಂಟ್ರಿ ಲೆವೆಲ್ ಕಾರುಗಳಲ್ಲೂ ನಾಲ್ಕು ಏರ್ ಬ್ಯಾಗ್‌ಗಳು ಹೊಂದಿರಬೇಕು ಎಂದು ಆದೇಶಿದಿದ್ದಾರೆ. ಹಾಗಾಗಿ ನಿಮ್ಮ ಕಾರನ್ನು ಅಪ್‌ಗ್ರೇಡ್ ಮಾಡುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸ್ಪಷ್ಟ ಸೂಚನೆಯಾಗಿದೆ.
ABS & EBD
ಎಬಿಎಸ್ ಮತ್ತು ಇಬಿಡಿ ವ್ಯವಸ್ಥೆಯನ್ನು ಎಲ್ಲಾ ಹೊಸ ಕಾರುಗಳು ಈ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಪ್ರಸ್ತುತಪಡಿಸುವುದರಿಂದ ಈಗ ಬಹಳ ಮುಖ್ಯವಾಗಿದೆ. ಜೊತೆಗೆ, ಈ ವೈಶಿಷ್ಟ್ಯಗಳು ರಸ್ತೆಗಳಲ್ಲಿ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಈ ವ್ಯವಸ್ಥೆಗಳು ಒಟ್ಟಾಗಿ ಚಾಲಕನಿಗೆ ಪ್ಯಾನಿಕ್ ಬ್ರೇಕಿಂಗ್ ಸಮಯದಲ್ಲಿ ಉತ್ತಮ ನಿಯಂತ್ರಣವನ್ನು ನೀಡುತ್ತವೆ. ಹಾಗಾಗಿ ಈ ವೈಶಿಷ್ಟವು ಹಳೆಯ ಕಾರುಗಳಿಗೂ ತುಂಬಾ ಮುಖ್ಯವಾಗಿದೆ. ಈ ಐದು ವೈಶಿಷ್ಟ್ಯಗಳು ಪ್ರಸ್ತುತ ಅಗತ್ಯವಾಗಿದ್ದು, ನಿಮ್ಮ ಕಾರನ್ನು ಅಪ್‌ಗ್ರೇಡ್ ಮಾಡಿಕೊಳ್ಳುವ ಮೂಲಕ ಹಳೆಯ ಕಾರಿನಲ್ಲೇ ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದು.


Click it and Unblock the Notifications








