ವಾಹನ ಸಲಹೆ: ಬೈಕ್ ಟಯರ್ ಬದಲಿಸುವ ಮುನ್ನ ಈ ವಿಚಾರಗಳನ್ನು ತಪ್ಪದೇ ಗಮನಿಸಿ..!
ಯುವಕರು ತಮ್ಮ ಬೈಕುಗಳನ್ನು ಮಾರ್ಪಾಡುಗೊಳಿಸುವ ಕ್ರೇಜ್ ಹೆಚ್ಚುತ್ತಿದೆ. ಬೈಕ್ ಅನ್ನು ಹಲವು ರೀತಿಯಲ್ಲಿ ಮಾರ್ಪಡಿಸಲಾಗುತ್ತಿದೆ. ಬೈಕ್‌ನ ವಿನ್ಯಾಸವನ್ನು ಬದಲಾಯಿಸುವುದರ ಜೊತೆಗೆ ಬೈಕಿನಲ್ಲಿರುವ ಬಿಡಿಭಾಗಗಳನ್ನು ಸಹ ಬದಲಾಯಿಸಲಾಗುತ್ತದೆ.

ಬೈಕ್‌ನ ಟಯರ್‌ಗಳನ್ನು ಮಾರ್ಪಾಡುಗೊಳಿಸುವುದು ಸಾಮಾನ್ಯವಾಗಿದೆ. ಚಿಕ್ಕ ಟಯರ್‌ಗಳ ಬದಲಿಗೆ ವಿಶಾಲವಾದ ದೊಡ್ಡ ಟಯರ್‌ಗಳನ್ನು ಅಳವಡಿಸಲಾಗುತ್ತಿದೆ. ಬೈಕ್‌ನಲ್ಲಿ ದಪ್ಪವಾದ ಟಯರ್‌ಗಳನ್ನು ಹೊಂದುವುದರಿಂದ ಆಗುವ ಅನುಕೂಲಗಳು ಹಾಗೂ ಅನಾನುಕೂಲಗಳು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಟಯರ್‌ಗಳ ಬದಲಾವಣೆ ಬೈಕ್‌ನ ಎಂಜಿನ್ ಎಷ್ಟು ಸಿಸಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬೈಕುಗಳ ಎಂಜಿನ್ 100 ಸಿಸಿ ಅಥವಾ 125 ಸಿಸಿಯಾಗಿದ್ದರೆ, ದಪ್ಪವಾದ ಟಯರ್‌ಗಳನ್ನು ಬೈಕ್‌ನ ಹಿಡಿತವನ್ನು ಹೆಚ್ಚಿಸುತ್ತವೆ. ಆದರೆ ಅದು ಬೈಕಿನ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.

ಅಗಲ ಮತ್ತು ದಪ್ಪವಾದ ಟಯರ್‌ಗಳನ್ನು ಅಳವಡಿಸುವುದರಿಂದ ಬೈಕ್‌ನ ತೂಕವು ಹೆಚ್ಚಾಗಿ, ಮೈಲೇಜ್ ಕಡಿಮೆಯಾಗುತ್ತದೆ. ಅಗಲವಾದ ಹಾಗೂ ದಪ್ಪವಾದ ಟಯರ್‌ಗಳನ್ನು ಅಳವಡಿಸುವುದರಿಂದ ಬೈಕ್‌ನ ರೋಡ್ ಗ್ರಿಪ್ ಹೆಚ್ಚಾಗುತ್ತದೆ. ಏಕೆಂದರೆ ಟಯರ್‌ನ ಹೆಚ್ಚಿನ ಭಾಗವು ರಸ್ತೆಯಲ್ಲಿರುತ್ತದೆ.

ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಬೈಕ್‌ಗಳಲ್ಲಿ ದೊಡ್ಡದಾದ ಹಾಗೂ ಅಗಲವಾದ ಟಯರ್‌ಗಳನ್ನು ಅಳವಡಿಸಿದರೆ ಎಂಜಿನ್ ಹಾಗೂ ಬೈಕ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಕಾರಣಕ್ಕೆ ವಿಶಾಲವಾದ ಟಯರ್‌ಗಳನ್ನು 150 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳಲ್ಲಿ ಕಾಣಬಹುದು.

ವಿನ್ಯಾಸ ಹಾಗು ಮೈಲೇಜ್ ಗಾಗಿ ಬೈಕ್‌ನಲ್ಲಿರುವ ಟಯರ್‌ಗಳೇ ಸೂಕ್ತವೆಂದು ತಜ್ಞರು ಹೇಳುತ್ತಾರೆ. ವಿಶಾಲವಾದ ಟಯರ್‌ಗಳನ್ನು ಅಳವಡಿಸುವುದರಿಂದ ಬೈಕ್‌ನ ಎಂಜಿನ್ ಒತ್ತಡ ಹೆಚ್ಚಾಗಿ, ಕಾರ್ಯಕ್ಷಮತೆಯ ಮೇಲೆ ಪರಿಣಾಮ ಉಂಟಾಗುತ್ತದೆ.

ಸರಿಯಾದ ಟಯರ್‌ಗಳನ್ನು ಪಡೆಯಿರಿ
ಮಾರುಕಟ್ಟೆಯಲ್ಲಿ ಟ್ಯೂಬ್ ಟಯರ್ ಹಾಗೂ ಟ್ಯೂಬ್‌ಲೆಸ್ ಟಯರ್ ಎಂಬ ಎರಡು ವಿಧದ ಟಯರ್‌ಗಳಿರುತ್ತವೆ. ಟ್ಯೂಬ್‌ಲೆಸ್ ಟಯರ್‌ಗಳ ಬೆಲೆ ಸಾಮಾನ್ಯ ಟಯರ್‌ಗಳಿಗಿಂತ ರೂ.400-500ಗಳಷ್ಟು ಹೆಚ್ಚಾಗಿರುತ್ತದೆ.

ಆದರೆ ಈ ಟಯರ್‌ಗಳು ಒಳ್ಳೆಯ ಗ್ರಿಪ್ ಹಾಗೂ ಕಂಟ್ರೋಲ್ ಹೊಂದಿರುತ್ತವೆ. ಟಯರ್ ಪಂಕ್ಚರ್ ಆದರೂ, ಟ್ಯೂಬ್‌ಲೆಸ್ ಟಯರ್‌ನಲ್ಲಿರುವ ಗಾಳಿಯು ಹೆಚ್ಚು ಕಾಲ ಉಳಿಯುತ್ತದೆ. ಜೊತೆಗೆ ವಾಹನದ ಮೇಲಿನ ಕಂಟ್ರೋಲ್ ತಪ್ಪುವುದಿಲ್ಲ.

ನೀವು ಬೈಕ್‌ನ ಟಯರ್‌ಗಳನ್ನು ಬದಲಿಸುತ್ತಿದ್ದರೆ, ಹಳೆಯ ಟಯರ್‌ಗಳನ್ನು ಹೊಸ ಟಯರ್‌ಗಳೊಂದಿಗೆ ಬದಲಿಸಿ. ಯಾವುದೇ ಕಾರಣಕ್ಕೂ ಹಳೆಯ ಟಯರ್‌ಗಳನ್ನು ಹಾಕಬೇಡಿ. ಬೈಕ್ ಅಗಲವಾದ ಟಯರ್‌ಗಳನ್ನು ಹೊಂದಿದ್ದರೆ, ವಿಶಾಲವಾದ ಟಯರ್‌ಗಳನ್ನೇ ಹಾಕಿಸಿರಿ. ತೆಳ್ಳಗಾರುವ ಟಯರ್‌ಗಳಿದ್ದರೆ, ತೆಳುವಾದ ಟಯರ್‌ಗಳನ್ನೇ ಹಾಕಿಸಿರಿ.

ಜನಪ್ರಿಯ ಕಂಪನಿಗಳ ಹೆಸರಿನಲ್ಲಿ ನಕಲಿ ಟಯರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಟಯರ್‌ಗಳನ್ನು ಪರಿಶೀಲಿಸಿದ ನಂತರವೇ ಖರೀದಿಸಿ. ಟಯರ್ ತಯಾರಿಕೆಯ ದಿನಾಂಕ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ.

ಜೊತೆಗೆ ಟಯರ್‌ನಲ್ಲಿ ಕಂಪನಿಯ ಹೊಲೊಗ್ರಾಮ್ ಇದೆಯೇ ಎಂದು ಪರೀಕ್ಷಿಸಿ. ಜೊತೆಗೆ ಟಯರ್‌ಗಳನ್ನು ಚೀನಾದಲ್ಲಿ ತಯಾರಿಸಲಾಗಿದೆಯೇ ಎಂದು ಪರೀಕ್ಷಿಸಿ, ಬಿಲ್ ಪಡೆಯುವುದನ್ನು ಮರೆಯದಿರಿ.


Click it and Unblock the Notifications








