ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಫಾರ್ಮುಲಾ 1 ಸೇರಿದಂತೆ ವಿವಿಧ ರೇಸಿಂಗ್‌ಗಳಲ್ಲಿ ಬಳಸುವ ಹೈಟೆಕ್ ತಂತ್ರಜ್ಞಾನಗಳು ನಿಧಾನವಾಗಿ ಸಾಮಾನ್ಯ ಕಾರುಗಳಲ್ಲಿಯೂ ಕಂಡು ಬರುತ್ತಿವೆ. ಇವುಗಳಲ್ಲಿ ಪ್ಯಾಡಲ್ ಶಿಫ್ಟ್ ಫೀಚರ್ ಪ್ರಮುಖವಾದುದು.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಈ ಫೀಚರ್ ವೇಗವಾಗಿ ಕಾರು ಚಾಲನೆ ಮಾಡುವ ಚಾಲಕರಿಗೆ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತದೆ. ಪ್ಯಾಡಲ್ ಶಿಫ್ಟ್ ಸೌಲಭ್ಯವನ್ನು ಈಗ ಭಾರತದಲ್ಲಿ ಮಾರಾಟವಾಗುತ್ತಿರುವ ಸಾಮಾನ್ಯ ಕಾರುಗಳಲ್ಲಿಯೂ ನೀಡಲಾಗುತ್ತಿದೆ. ಪ್ಯಾಡಲ್ ಶಿಫ್ಟ್ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ. ಈ ಫೀಚರ್'ನಿಂದಾಗುವ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಹೈಸ್ಪೀಡ್ ರೇಸ್ ಕಾರುಗಳಲ್ಲಿ ಗೇರುಗಳನ್ನು ಬದಲಿಸುವ ಚಾಲಕರು ಸ್ಟೀಯರಿಂಗ್ ವ್ಹೀಲ್‌ನಿಂದ ಕೈ ತೆಗೆದಾಗ ಕಾರಿನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಇದನ್ನು ತಪ್ಪಿಸಲು ಸ್ಟೀಯರಿಂಗ್ ವ್ಹೀಲ್‌ನಲ್ಲಿ ಚಾಲಕನಿಗೆ ಸುಲಭವಾದ ಗೇರ್ ಶಿಫ್ಟಿಂಗ್ ಒದಗಿಸಲು ಪ್ಯಾಡಲ್ ಶಿಫ್ಟ್ ಫೀಚರ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಕ್ಲಚ್ ಇಲ್ಲದೆ ಚಲಿಸುವ ಎಎಂಡಿ ಮಾದರಿಯ ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳಲ್ಲಿ ಈ ಪೆಡಲ್ ಶಿಫ್ಟ್ ಫೀಚರ್ ಅನ್ನು ನೀಡಲಾಗುತ್ತದೆ. ಇದರ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರುಗಳಲ್ಲಿಯೂ ಬಳಸಲಾಗುತ್ತದೆ.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ರೇಸ್ ಕಾರುಗಳಲ್ಲಿ ಪ್ಯಾಡಲ್ ಶಿಫ್ಟ್ ಸೌಲಭ್ಯವನ್ನು ನೀಡಲಾಯಿತು. ಆದರೆ ಈ ರೇಸ್ ಕಾರುಗಳಲ್ಲಿ ವಿಶೇಷ ಕ್ಲಚ್ ತಂತ್ರಜ್ಞಾನವನ್ನು ಸಹ ನೀಡಲಾಯಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಪ್ಯಾಡಲ್ ಶಿಫ್ಟ್ ಫೀಚರ್ ಅನ್ನು ಕಾರುಗಳು ಚಲಿಸುವಾಗ ಅಥವಾ ನಿಲ್ಲಿಸಿದಾಗ ಮಾತ್ರ ಕಾರ್ಯ ನಿರ್ವಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ಆಟೋಮ್ಯಾಟಿಕ್ ಕಾರನ್ನು ಚಾಲನೆ ಮಾಡುವಾಗ ಕಾರ್ ಡ್ರೈವರ್'ಗೆ ಏಕಾಏಕಿ ಕಾರಿನ ಹರಿವಿಗೆ ಅನುಗುಣವಾಗಿ ಪಿಕ್ ಅಪ್ ಪಡೆಯಲು ಕಷ್ಟವಾಗುತ್ತದೆ.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಇದನ್ನು ತಪ್ಪಿಸಲು ಸರಿಯಾದ ಎಂಜಿನ್ ರೋಟೆಷನಲ್ ಸ್ಪೀಡ್'ನಲ್ಲಿ ಪೆಡಲ್ ಶಿಫ್ಟರ್‌ಗಳನ್ನು ಬಳಸಿಕೊಂಡು ಗೇರ್‌ಗಳನ್ನು ಹೆಚ್ಚಿಸಲು ಹಾಗೂ ಕಡಿಮೆ ಮಾಡಲು ಚಾಲಕನಿಗೆ ಸಾಧ್ಯವಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಮ್ಯಾನುವಲ್ ಗೇರ್ ಕಾರುಗಳಲ್ಲಿ ಲಿವರ್ ಅನ್ನು ಒಂದು ಗೇರ್‌ನಿಂದ ನ್ಯೂಟ್ರಲ್'ಗೆ ತರಲಾಗುತ್ತದೆ. ನಂತರ ಯಾವುದೇ ಗೇರ್‌ಗೆ ಬದಲಿಸಬಹುದು. ಆದರೆ ಪ್ಯಾಡಲ್ ಶಿಫ್ಟ್ ಫೀಚರ್, ಗೇರ್‌ಗಳನ್ನು ಒಂದು ಗೇರ್‌ನಿಂದ ಇನ್ನೊಂದಕ್ಕೆ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಅವಕಾಶ ನೀಡುತ್ತದೆ.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಪ್ಯಾಡಲ್ ಶಿಫ್ಟ್ ಬಳಸುವ ಚಾಲಕನು ತನ್ನ ಇಷ್ಟದಂತೆ ಕಾರಿನ ಪರ್ಫಾಮೆನ್ಸ್ ಅನ್ನು ತಕ್ಷಣವೇ ಹೊರತರಬಹುದು ಹಾಗೂ ಅತ್ಯಾಕರ್ಷಕ ಚಾಲನಾ ಅನುಭವವನ್ನು ಪಡೆಯಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಕಡಿದಾದ ಬೆಟ್ಟ ಹಾಗೂ ತಿರುವುಗಳಲ್ಲಿ ಸಾಗುವಾಗ ಕಾರಿನ ವೇಗವನ್ನು ಸುಲಭವಾಗಿ ನಿಯಂತ್ರಿಸಲು ಪೆಡಲ್ ಶಿಫ್ಟ್ ನೆರವಾಗುತ್ತದೆ. ಪೆಡಲ್ ಶಿಫ್ಟ್ ಮೂಲಕ ತೇವವಿರುವ ರಸ್ತೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸರಾಗವಾಗಿ ಸಾಗಬಹುದು.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ವೇಗವಾಗಿ ಹೋಗುವಾಗ ಗೇರ್ ಅನ್ನು ತ್ವರಿತವಾಗಿ ಕಡಿಮೆ ಮಾಡಲು ಸಾಧ್ಯವಾಗುವುದರಿಂದ ಕಾರನ್ನು ಸುಲಭವಾಗಿ ನಿಯಂತ್ರಿಸಬಹುದು. ಪೆಡಲ್ ಶಿಫ್ಟ್ ಹೆಚ್ಚುವರಿ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಆಟೋಮ್ಯಾಟಿಕ್ ಕಾರುಗಳಲ್ಲಿ ಪೆಡಲ್ ಶಿಫ್ಟ್ ಬಳಸಿ ಗೇರ್‌ಗಳನ್ನು ಮ್ಯಾನುವಲ್ ಆಗಿ ಬದಲಿಸುವುದರಿಂದ ಮೈಲೇಜ್ ಹೆಚ್ಚಾಗುವ ಸಾಧ್ಯತೆಗಳು ಕಡಿಮೆ. ಆಟೋಮ್ಯಾಟಿಕ್ ಕಾರುಗಳ ತಂತ್ರಜ್ಞಾನವನ್ನು ಈ ಪ್ಯಾಡಲ್ ಶಿಫ್ಟ್ ಕಂಟ್ರೋಲ್ ಮೂಲಕ ನಿರ್ವಹಿಸಲಾಗುತ್ತದೆ.

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಈ ಕಾರಣಕ್ಕೆ ಮೈಲೇಜ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಾಗುವುದಿಲ್ಲ. ಹೋಂಡಾ ಸಿಟಿ ಸಿವಿಟಿ, ಹೋಂಡಾ ಅಮೇಜ್ ಸಿವಿಟಿ, ಟೊಯೊಟಾ ಯಾರಿಸ್ ಸಿವಿಟಿ, ಹ್ಯುಂಡೈ ಕ್ರೆಟಾ, ಫೋರ್ಡ್ ಇಕೋಸ್ಪೋರ್ಟ್ ಕಾರುಗಳ ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್ ನೀಡಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಕಾರನ್ನು ಖರೀದಿಸುವಾಗ ಈ ಪ್ಯಾಡಲ್ ಶಿಫ್ಟ್ ಫೀಚರ್ ಬಗ್ಗೆ ತಿಳಿದು ಕೊಳ್ಳುವುದು ಮುಖ್ಯ.

Most Read Articles

Kannada
English summary
Use and benefits of paddle shifters. Read in Kannada.
Story first published: Saturday, April 17, 2021, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X