ಆಟೋಮ್ಯಾಟಿಕ್ ಪಾರ್ಕಿಂಗ್; ಇದು ವೋಲ್ವೋದಲ್ಲಿ ಮಾತ್ರ!
ತಂತ್ರಜ್ಞಾನ ಮುಂದುವರಿದಂತೆ ಬಳಕೆದಾರ ಸ್ನೇಹಿ ಹಲವು ಸೌಲಭ್ಯಗಳನ್ನು ಕಂಡುಹಿಡಿಯಲಾಗುತ್ತದೆ. ಆಟೋ ಕ್ಷೇತ್ರದಲ್ಲೂ ಈ ಪ್ರಕ್ರಿಯೆ ಹೆಚ್ಚಾಗಿ ಕಂಡುಬರುತ್ತಿದೆ.
ಅಂದ ಹಾಗೆ ಕಾರನ್ನು ಪಾರ್ಕಿಂಗ್ ಮಾಡುವುದು ನಿಮಗೆ ಅತಿಯಾದ ತೊಂದರೆ ಕೊಡುತ್ತಿದೆಯೇ? ಇನ್ನು ಮುಂದಕ್ಕೆ ಅಂತಹ ಭಯ ನಿಮ್ಮನ್ನು ಕಾಡಲಾರದು. ಯಾಕೆಂದರೆ ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ವೋಲ್ವೋ, ತನ್ನ ಐಷಾರಾಮಿ ಕಾರುಗಳಲ್ಲಿ ಪಾರ್ಕಿಂಗ್ ಪೈಲಟ್ ಎಂಬ ನೂತನ ತಂತ್ರಜ್ಞಾನವನ್ನು ಅವಿಷ್ಕರಿಸಿದೆ.
ಇದರ ಬಟನ್ ಆನ್ ಮಾಡಿದರೆ ಸ್ವಯಂಚಾಲಿತವಾಗಿ ಪಾರ್ಕಿಂಗ್ ಮಾಡಲಿದೆ. ಇದರಲ್ಲಿ ಕೆಲಸ ನಿರ್ವಹಿಸುವ ಅಲ್ಟ್ರಾಸೊನಿಕ್ ಸೆನ್ಸಾರ್‌ಗಳು ಇತರ ವಾಹನಗಳಿಗೆ ತೊಂದರೆಯಾಗದ ರೀತಿಯಲ್ಲಿ ಯಥಾ ಪ್ರಕಾರ ಪಾರ್ಕಿಂಗ್ ಮಾಡಲಿದೆ.
ವೋಲ್ವೋ ಇದೀಗಷ್ಟೇ ಲಾಂಚ್ ಮಾಡಿರುವ ವಿ40 ಕ್ರಾಸ್ ಕಂಟ್ರಿ ಐಷಾರಾಮಿ ಕಾರಿನಲ್ಲಿ ಈ ಸೌಲಭ್ಯ ಲಭ್ಯವಿದೆ. ಅಷ್ಟಕ್ಕೂ ವೋಲ್ವೋ ಪಾರ್ಕಿಂಗ್ ಪೈಲಟ್ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ನೋಡಿ ವೀಡಿಯೋ...

ವೋಲ್ವೋ ವಿ40 ಲಗ್ಫುರಿ ಹ್ಯಾಚ್‌ಬ್ಯಾಕ್ ಕಾರಿನ ದೆಹಲಿ ಎಕ್ಸ್ ಶೋ ರೂಂ ದರ 28.5 ರು.ಗಳಾಗಿವೆ.

ವೋಲ್ವೋ ವಿ40 ಕಾರು 2.0 ಲೀಟರ್ ಫೈವ್ ಸಿಲಿಂಡರ್ ಡಿ3 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಭಾರತದಲ್ಲಿ ಡೀಸೆಲ್ ವೆರಿಯಂಟ್ ಮಾತ್ರ ಲಭ್ಯವಿರಲಿದೆ.

ಹಾಗೆಯೇ ವೋಲ್ವೋ ವಿ40, ಎಲೆಕ್ಟ್ರಾನಿಕ್ ಕ್ಲೈಮೇಟ್ ಕಂಟ್ರೋಲ್, ರೈನ್ ಸೆನ್ಸಾರ್, ಪಾರ್ಕ್ ಅಸಿಸ್ಟ್ ಹಾಗೂ ಕ್ರಾಸ್ ಟ್ರಾಫಿಕ್ ಅಲರ್ಟ್‌ಗಳಂದ ವೈಶಿಷ್ಟ್ಯಗಳನ್ನು ಹೊಂದಿದೆ.

ಇದರ ಜತೆಗೆ ವೋಲ್ವೋ ವಿ40 ಐಷಾರಾಮಿ ಕಾರಿನಲ್ಲಿ ಪಾದಚಾರಿ ಅಸಿಸ್ಟ್ ಸೌಲಭ್ಯ ಕೂಡಾ ಲಭ್ಯವಿದೆ.
ವೀಡಿಯೋ ವೀಕ್ಷಿಸಿ
ವೀಡಿಯೋ ವೀಕ್ಷಿಸಿ
ವೀಡಿಯೋ ವೀಕ್ಷಿಸಿ



Click it and Unblock the Notifications








