ಮಳೆ ನೀರಲ್ಲಿ ಕಾರು ಮುಳುಗಿದಾಗ ಏನು ಮಾಡಬೇಕು? ಇಲ್ಲಿದೆ ಸುರಕ್ಷತಾ ಸಲಹೆಗಳು
ವರುಣಾರ್ಭಟದಿಂದ ಕಳೆದೆರಡು ದಿನಗಳಿಂದ ನಮ್ಮ ಬೆಂಗಳೂರು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜಲ ಪ್ರಳಯಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಈಗ ಮಳೆಯದ್ದೇ ಮಾತು, ಭಾರೀ ಮಳೆ ಬಂದರೆ ಬೆಂಗಳೂರಿನ ಹಲವೆಡೆಗಳಲ್ಲಿ ಜಲಾವೃತವಾಗುತ್ತದೆ. ಇಂತ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎಲ್ಲೆಲ್ಲೂ ನೀರು, ಎಲ್ಲೆಲ್ಲೂ ಕೆಟ್ಟು ನಿಂತ ವಾಹನಗಳದ್ದೇ ಸುದ್ದಿ ಇರುತ್ತದೆ.
ಮಳೆ ಬಂದರೆ ಕಾರುಗಳ ಮಾಲೀಕರ ಸ್ಥಿತಿಯಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ. ಕಾರುಗಳ ಮಾಲೀಕರು ಈ ಹೊತ್ತಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಇದೀಗ ಮತ್ತೆ ಬೆಂಗಳೂರಿನಲ್ಲಿ ಮಳೆ ಪ್ರಾರಂಭವಾಗಿದೆ. ಭೀಕರ ಮಳೆಯಲ್ಲಿ ಒಂದು ವೇಳೆ ನಿಮ್ಮ ಕಾರು ಮುಳುಗಿದರೆ, ಆತಂಕಕ್ಕೆ ಒಳಗಾಗಬೇಡಿ. ನಿಮ್ಮ ಕಾರು ಪ್ರವಾಹಕ್ಕೆ ಸಿಲುಕಿದಾಗ ಏನು ಮಾಡಬೇಕು ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ.

ಭೀತಿಗೊಳಗಾಗಬೇಡಿ: ನಿಮ್ಮ ಕಾರು ಪ್ರವಾಹಕ್ಕೆ ಸಿಲುಕಿರುವುದನ್ನು ನೋಡುವುದು ಭಯಾನಕ ಕ್ಷಣವಾಗಿದ್ದರೂ, ಅಂತಹ ಸಂದರ್ಭಗಳಲ್ಲಿ ಗಾಬರಿಯಾಗಾಬಾರದು. ನೀವು ಗಾಬರಿಯಾದಾರೆ, ಆ ಸಮಯದಲ್ಲಿ ಏನು ಮಾಡಬೇಕೆಂಬುವುದು ಮೆರೆತು ಗಾಬರಿಗೆ ಒಳಗಾಗುತ್ತೀರಾ. ಇದರಿಂದ ಗಾಬರಿ ಯಾಗದೇ ಈ ಕೆಳಗೆ ನೀಡಿರುವ ವಿಧಾನವನ್ನು ಅನುಸರಿಸಿ. ಇದರಿಂದ ಕೆಳಗೆ ನೀಡಿರುವ ಎಲ್ಲಾ ಪ್ರಮುಖ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ.
ಕಾರನ್ನು ಸ್ಟಾರ್ಟ್ ಮಾಡಬೇಡಿ: ನಿಮ್ಮ ಕಾರು ಪ್ರವಾಹಕ್ಕೆ ಸಿಲುಕಿರುವುದನ್ನು ನಿಮ್ಮ ಗಮನಕ್ಕೆ ಬಂದರೆ ಅಥವಾ ಪ್ರವಾಹದಿಂದ ಉಂಟಾದ ಹಾನಿಯ ಪ್ರಮಾಣ ಅಷ್ಟು ಇಲ್ಲವೆಂದು ಕಾರನ್ನು ಸ್ಟ್ರಾಟ್ ಮಾಡಲು ಪ್ರಯತ್ನಿಸಬೇಡಿ. ಏಕೆಂದರೆ ನಿಮ್ಮ ಕಾರನ್ನು ಸ್ಟಾರ್ಟ್ ಮಾಡುವುದರಿಂದ ನಿಮ್ಮ ವಾಹನದ ಎಕ್ಸಾಸ್ಟ್ ಮತ್ತು ಅಪರ್ ಯುನಿಟ್ ಗಳನ್ನು ಹಾನಿಗೊಳಿಸಬಹುದು. ನೀರು ಎಂಜಿನ್ ಒಳಗೆ ನುಗ್ಗಿದಾಗ ಪಿಸ್ಟನ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುವುದಿಲ್ಲ. ಇಂಥಾ ಸಂದರ್ಭದಲ್ಲಿ ವಾಹನಗಳ ರಿಪೇರಿ ನಿಜಕ್ಕೂ ದುಬಾರಿ.

ಹ್ಯಾಂಡ್‌ಬ್ರೇಕ್ ಹಾಕಿ: ನಿಮ್ಮ ಕಾರು ಹ್ಯಾಂಡ್‌ಬ್ರೇಕ್ ಅನ್ನು ಹಾಕಿ ಮತ್ತು ನಿಮ್ಮ ಕಾರು ಗೇರ್‌ನಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ಇದು ಪ್ರವಾಹದ ಸಮಯದಲ್ಲಿ ಕಾರು ಉರುಳುವುದನ್ನು ತಡೆಯುತ್ತದೆ. ಭಾರೀ ಪ್ರವಾಹದ ಸಂದರ್ಭದಲ್ಲಿ, ನಿಮ್ಮ ಕಾರಿನ ಟೋಯಿಂಗ್ ಪಾಯಿಂಟ್‌ಗಳನ್ನು ಸಹ ನೀವು ಕಾರ್ ಅನ್ನು ಶಾಶ್ವತ ರಚನೆಗೆ ಹಾಕಲು ಬಳಸಬಹುದು, ಇದು ಪ್ರವಾಹದಲ್ಲಿ ದೂರ ಹೋಗುವುದನ್ನು ತಡೆಯುತ್ತದೆ.
ಎಲೆಕ್ಟ್ರಿಕಲ್ಸ್: ಪ್ರವಾಹದ ಸಮಯದಲ್ಲಿ ನಿಮ್ಮ ಕಾರಿನ ಬ್ಯಾಟರಿ ಸಂಪರ್ಕ ಕಡಿತಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಇದು ಶಾರ್ಟ್ ಸರ್ಕ್ಯೂಟ್ ಅಥವಾ ಶಾಶ್ವತ ಪವರ್ ಹಾನಿಯ ಯಾವುದೇ ಸಾಧ್ಯತೆಗಳನ್ನು ತಡೆಯುತ್ತದೆ. ಪ್ರವಾಹದ ಸಂದರ್ಭದಲ್ಲಿ ನಿಮ್ಮ ಕಾರಿಗೆ ದುಬಾರಿ ರಿಪೇರಿಯನ್ನು ತಡೆಗಟ್ಟಲು ಇದು ಬಹಳ ಮುಖ್ಯವಾದ ಹಂತವಾಗಿದೆ.
ವೃತ್ತಿಪರ ಸಹಾಯವನ್ನು ಪಡೆಯಿರಿ: ಪ್ರವಾಹದ ನೀರು ಕಡಿಮೆಯಾದ ನಂತರ, ನಿಮ್ಮ ಕಾರಿಗೆ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ವೃತ್ತಿಪರ ಸಹಾಯವನ್ನು ಪಡೆಯುವುದು ಉತ್ತಮ. ಅಲ್ಲದೆ, ಯಾವುದೇ ಪವರ್ ಹಾನಿಯನ್ನು ತಪ್ಪಿಸಲು ನಿಮ್ಮ ಕಾರನ್ನು ಸರ್ವಿಸ್ ಸೆಂಟರ್ ಗಳಿಗೆ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಯಾವುದಾದರೂ ಕೆಲವು ತಾಂತ್ರಿಕ ಅಂಶಗಳಲ್ಲಿ ರಿಪೇರಿಯಾಗಿದ್ದರೆ, ಅಲ್ಲಿ ತಿಳಿಯುತ್ತದೆ. ಇಲ್ಲವಾದರೆ, ನೀವು ಡ್ರೈವ್ ಮಾಡುವಾಗ ಹೆಚ್ಚು ಅಪಾಯ ಉಂಟು ಮಾಡುತ್ತದೆ.
ಇಳಿಜಾರಿನಡಿಗೆ ವಾಹನ ಚಾಲನೆ ಬೇಡ: ರಸ್ತೆಯಲ್ಲಿ ನೀರುವ ತುಂಬಿರುವ ಸಂದರ್ಭದಲ್ಲಿ ಇಳಿಜಾರಿನತ್ತ ಸಂಚರಿಸದೆ ಎತ್ತರ ಇರುವ ಕಡೆಗೆ ವಾಹನವನ್ನು ನಿಧಾನವಾಗಿ ತೆಗೆದುಕೊಂಡು ಹೋಗಿ. ಇದರಿಂದ ನೀರಿನಲ್ಲಿ ಮುಚ್ಚಿಕೊಂಡಿರುವ ಹೊಂಡಗಳಲ್ಲಿ ವಾಹನಗಳಿಗೆ ಆಗಬಹುದಾದ ಹಾನಿಯನ್ನು ತಪ್ಪಿಸಬಹುದು. ಪ್ರವಾಹ ಮುನ್ಸೂಚಣೆ ಇದ್ದಲ್ಲಿ ನಿಮ್ಮ ಅಮೂಲ್ಯವಾದ ವಾಹನಗಳನ್ನು ಅವಕಾಶವಿದ್ದರೆ ಎತ್ತರದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿರುವುದು ಖಾತ್ರಿಪಡಿಸಿಕೊಳ್ಳಿ.


Click it and Unblock the Notifications








