Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ

By Pragathi S

ಬೆಂಗಳೂರು: ಮದುವೆ ಸೀಸನ್ ನಡುವೆಯೇ ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Price) ಶಾಕ್ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಡಾಲರ್ ಮೌಲ್ಯದಲ್ಲಿನ ಏರಿಳಿತಗಳ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆಯೂ ಬೀರಿದೆ. ಇಂದು (ಮಾರ್ಚ್ 02, 2026) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ನೀವು ಇಂದು ಚಿನ್ನ ಖರೀದಿಸುವ ಯೋಚನೆಯಲ್ಲಿದ್ದರೆ, ಮಾರುಕಟ್ಟೆಗೆ ಹೋಗುವ ಮುನ್ನ ಇಂದಿನ ನಿಖರ ಬೆಲೆ ತಿಳಿಯುವುದು ಅತ್ಯಗತ್ಯ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಗಣನೀಯವಾಗಿ ಏರಿಕೆಯಾಗಿದೆ. ಮಾರುಕಟ್ಟೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ಇಂದು 15,865 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 17,308 ರೂಪಾಯಿಗಳಷ್ಟಾಗಿದೆ.


Gold and Silver Rate

ಕೇವಲ ಚಿನ್ನವಷ್ಟೇ ಅಲ್ಲ, ಬೆಳ್ಳಿಯ ದರವೂ ಕೂಡ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಕೈಗಾರಿಕಾ ಬೇಡಿಕೆ ಹೆಚ್ಚಾದ ಕಾರಣ, ಬೆಂಗಳೂರಿನಲ್ಲಿ ಇಂದು 1 ಗ್ರಾಂ ಬೆಳ್ಳಿಯ ಬೆಲೆ 295 ರೂಪಾಯಿಗಳಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 2,95,000 ರೂಪಾಯಿಗಳಿಗೆ ಬಂದು ನಿಂತಿದೆ.

Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ

MCX ಮಾರುಕಟ್ಟೆಯ ಟ್ರೇಂಡ್‌

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್‌) ನಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ವಹಿವಾಟು ಚುರುಕುಗೊಂಡಿದೆ. ಎಂಸಿಎಕ್ಸ್‌ನಲ್ಲಿ ಏಪ್ರಿಲ್ ಕಾಂಟ್ರಾಕ್ಟ್ ಚಿನ್ನದ ಫ್ಯೂಚರ್ಸ್ 1,60,000 ರೂಪಾಯಿಗಳ (10 ಗ್ರಾಂ) ಗಡಿ ದಾಟಿ ವಹಿವಾಟು ನಡೆಸುತ್ತಿದೆ. ಜಾಗತಿಕ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಹೆಚ್ಚಾದಾಗಲೆಲ್ಲಾ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಾರೆ. ಇದೇ ಕಾರಣಕ್ಕೆ ಎಂಸಿಎಕ್ಸ್‌ ಮಾರುಕಟ್ಟೆಯಲ್ಲಿ ಸತತ ಏರಿಕೆ ಕಂಡುಬರುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ನಗರವಾರು 22 ಕ್ಯಾರಟ್ 1ಗ್ರಾಂ ಚಿನ್ನದ ಬೆಲೆ ಪಟ್ಟಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಈ ಕೆಳಗಿನಂತಿದೆ:

ಬೆಂಗಳೂರು - 15,865 ರೂಪಾಯಿ

ದೆಹಲಿ - 15,880 ರೂಪಾಯಿ

ಚೆನ್ನೈ - 15,775 ರೂಪಾಯಿ

ಮುಂಬೈ - 15,865 ರೂಪಾಯಿ

ಹೈದರಾಬಾದ್ - 15,865 ರೂಪಾಯಿ

ಅಹಮದಾಬಾದ್ - 15,870 ರೂಪಾಯಿ

ಪುಣೆ - 15,865 ರೂಪಾಯಿ

ಕೋಲ್ಕತ್ತಾ - 15,865 ರೂಪಾಯಿ

LPG Price: ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್‌ 1ರ ದರಪಟ್ಟಿ

ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ 2, 2026 ರ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿದೆ. ಅಮೆರಿಕ-ಇರಾನ್ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆ ಏರಿಳಿತಗಳಿಂದಾಗಿ MCX ನಲ್ಲಿ ದರಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 15,865 ರೂ. ಹಾಗೂ 1 ಕೆಜಿ ಬೆಳ್ಳಿ ಬೆಲೆ 2,95,000 ರೂ. ದಾಖಲಾಗಿದೆ. ಮುಂಬರುವ ದಿನಗಳಲ್ಲಿಯೂ ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಬೆಲೆಯಲ್ಲಿ ಮತ್ತಷ್ಟು ಏರಿಳಿತಗಳಾಗುವ ಸಾಧ್ಯತೆಗಳಿವೆ.

Credit: Oneindia

More from DriveSpark

Article Published On: Monday, March 2, 2026, 7:39 [IST]
English summary
Actual gold and silver prices today on March 2, 2026. Check the real-time 22 carat 1 gram gold rates in Bengaluru, Delhi, Mumbai, and other cities. Read about MCX rates and market trends.
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+