ಕೇಂದ್ರ ಬಜೆಟ್: ಮದ್ಯಪ್ರಿಯರಿಗೆ ಶಾಕ್, ಮದ್ಯ ದುಬಾರಿ, ಈ ವಸ್ತುಗಳ ದರ ಇಳಿಕೆ - ಏರಿಕೆ, ಪಟ್ಟಿ ಇಲ್ಲಿದೆ
Union Budget 2026: ದೇಶದ ಬಹುನಿರೀಕ್ಷೆಯ 2026-27 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಭಾನುವಾರ (ಫೆಬ್ರವರಿ 01) ಮಂಡಿಸಿದ್ದಾರೆ. ಅದರಲ್ಲಿ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಮಾಡಿ ಆಘಾತ ನೀಡಿದ್ದಾರೆ.
ಇದರೊಂದಿಗೆ ಬಡವರು ಹಾಗೂ ಮಧ್ಯಮ ವರ್ಗದವರು ಬಳಸುವ ವಸ್ತುಗಳ ಬೆಲೆ ಇಳಿಕೆ ಆಗಿದೆ. ರೋಗಿಗಳಿಗೆ ಅಗತ್ಯವಾದ ಹಲವು ಔಷಧಿಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿ, ಕೈಗೆಟುಕುವ ಬೆಲೆ ಅಂದರೆ ಕಡಿಮೆ ಬೆಲೆಗೆ ಔಷಧಿ ಸಿಗುವಂತೆ ಮಾಡಿದ್ದಾರೆ.

ಇನ್ನೂ ಕ್ಯಾನ್ಸರ್ ಮತ್ತು ಶುಗರ್ ಕಾಯಿಲೆಗಳು ಸೇರಿದಂತೆ ಇತರ ರೋಗಿಗಳು ಬಳಸುವ 17 ಔಷಧಿಗಳ ಬೆಲೆ ಇಳಿಕೆ ಆಗಿದೆ. ಏಕೆಂದರೆ ಅವುಗಳ ಮೇಲಿನ ಆಮದು ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮಾತ್ರವಲ್ಲದೇ ಏಳು ಅಪರೂಪದ ಕಾಯಿಲೆಗಳ ಔಷಧಿ ಬೆಲೆ ಇಳಿಕೆ ಮಾಡಲಾಗಿದೆ. ಯಾವೆಲ್ಲ ಬೆಲೆ ಇಳಿಕೆ, ಏರಿಕೆ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ.
ಕೇಂದ್ರ ಬಜೆಟ್‌ನಲ್ಲಿ ಬಂಪರ್: ಔಷಧಿ ವಲಯಕ್ಕೆ 10,000 ಕೋಟಿ ರೂ. ಘೋಷಣೆ
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ ಆಗಿದೆ? ಪಟ್ಟಿ ಇಲ್ಲಿದೆ
* ಬೀಡಿ, ಪಾದರಕ್ಷೆಗಳ ದರ ಇಳಿಕೆ ಆಗಿದೆ.
* ಲಿಥೀಯಂ ಬ್ಯಾಟರಿ ದರ ಇಳಿಕೆ ಆಗಿದೆ.
* ಸೆಣಬು ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ.
* ಸಿಎನ್‌ಜಿ ಬಯೋಗ್ಯಾಸ್ ದರ ಕಡಿಮೆ
* ಕ್ಯಾನ್ಸರ್ ಮತ್ತು ಶುಗರ್ ಕಾಯಿಲೆಗಳ ಇತರ 17 ಔಷಧಿಗಳ ಬೆಲೆ ಇಳಿಕೆ
* ಏಳು ಅಪರೂಪದ ಕಾಯಿಲೆಗಳ ಔಷಧಿ ಬೆಲೆ ಕಡಿಮೆ.
* ದುಬಾರಿ ಬೆಲೆಯ ಔಷಧಿಗಳ ಆಮದು ಸುಂಕಕ್ಕೆ ವಿನಾಯಿತಿ.
* ವಿದೇಶ ಪ್ರವಾಸ ಪ್ಯಾಕೇಸ್
* ಕ್ರೀಡಾ ಉಪಕರಣಗಳು
* ವಿದೇಶ ಶಿಕ್ಷಣ
* ಮೈಕ್ರೋವೇವ್ ಓವನ್
* ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ
* ಸೌರ ಫಲಕ
* ಮಧುಮೇಹ ಮತ್ತು ಕ್ಯಾನ್ಸರ್ ಔಷಧ
* ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್
* ಅಮೂಲ್ಯ ಖನಿಜ
* ವೈದ್ಯಕೀಯ ಉಪಕರಣ
Union Budget 2026: ಕೇಂದ್ರ ಬಜೆಟ್ ಬೆನ್ನಲ್ಲೇ ಷೇರುಮಾರುಕಟ್ಟೆ ಮಹಾ ಕುಸಿತ
ಯಾವುದೆಲ್ಲ ದುಬಾರಿ ಆಗಿದೆ? ಇಲ್ಲಿದೆ ವಿವರ
* ಮದ್ಯಗಳ ಮೇಲೆ ಕೇಂದ್ರ ಸರ್ಕಾರದಿಂದ ಸುಂಕ ವಿಧಿಸಲಾಗಿದೆ
* ಬಿಯರ್, ವಿಸ್ಕಿ, ರಮ್ ಸೇರಿದಂತೆ ವಿವಿಧ ಮದ್ಯದ ದರ ಮತ್ತಷ್ಟು ದುಬಾರಿ
* ಸಿಗರೇಟ್ ಮತ್ತು ಪಾನ್ ಮಸಾಲ ದರ ಹೆಚ್ಚಳ
* ರಸಗೊಬ್ಬರ
* ಎಟಿಎಂ ಮತ್ತು ಸ್ವಯಂ ಚಾಲಿತ ಮಾರಾಟ ಯಂತ್ರಗಳು
* ಹೆಣೆದ ಬಟ್ಟೆಗಳು
*ರಾಸಾಯನಿಕಗಳು
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.
Credit: Oneindia


Click it and Unblock the Notifications








