ಎಲೆಕ್ಟ್ರಿಕ್ ವಾಹನಗಳಿಗೆ ಮನಸೋತ ಕರುನಾಡ ಜನ, ಇದೇ ಮೊದಲ ಬಾರಿಗೆ.. ಹೊಸದೊಂದು ದಾಖಲೆ

ದೇಶದಲ್ಲಿ ಕಳೆದ ಒಂದೆರಡು ವರ್ಷದಿಂದ ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟುಪಟ್ಟು ಖರೀದಿಸುತ್ತಿದ್ದಾರೆ. ಅದಕ್ಕೆ ಕರ್ನಾಟಕವೂ (Karnataka) ಹೊರತಾಗಿಲ್ಲ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನೋಂದಣಿಯಾದ ಎಲೆಕ್ಟ್ರಿಕ್ ವಾಹನಗಳ (electric vehicles) ಸಂಖ್ಯೆ (ಇವಿ) ಒಂದು ವರ್ಷದೊಳಗೆ 1 ಲಕ್ಷ ಗಡಿ ದಾಟಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಜನವರಿ 1 ರಿಂದ ಸೆಪ್ಟೆಂಬರ್ 7 ರವರೆಗಿನ (2023) ಅವಧಿಯಲ್ಲಿ 1.02 ಲಕ್ಷ ಎಲೆಕ್ಟ್ರಿಕ್ ವಾಹನಗಳು (ಇವಿ) ನೋಂದಣಿಗೊಂಡಿವೆ. 2022ರಲ್ಲಿ 95,929 ಇವಿಗಳನ್ನು ರಿಜಿಸ್ಟರ್ ಮಾಡಲಾಗಿತ್ತು. ಆದರೆ, ಈ ಬಾರಿ ಎಂಟು ತಿಂಗಳು ಕಳೆಯುವುದರಲ್ಲಿ 1 ಲಕ್ಷ ಮೀರಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮನಸೋತ ಕರುನಾಡ ಜನ, ಇದೇ ಮೊದಲ ಬಾರಿಗೆ.. ಹೊಸದೊಂದು ದಾಖಲೆ

ಮಾರುಕಟ್ಟೆ ತಜ್ಞರ ಪ್ರಕಾರ, ಜನರಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಬಗ್ಗೆ ಬಂದಿರುವ ಅರಿವು ಹಾಗೂ ವಿವಿಧ ಕಂಪನಿಗಳ ಮಾರುಕಟ್ಟೆ ವಿಸ್ತರಣೆಯೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ)ಯ ನಿರ್ದೇಶಕ ಪವನ್ ಮುಲುಕುಟ್ಲ ಅವರು, 'ಇವಿಗಳ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಅಧಿಕಗೊಂಡಿದೆ. ತಾಂತ್ರಿಕ ಪ್ರಗತಿಯಿಂದ ಅವು ಸುಧಾರಣೆಗೊಂಡಿವೆ. ನಿರ್ವಹಣೆ ವೆಚ್ಚವು ಕಡಿಮೆಯಿರುವುದರಿಂದ ಹೆಚ್ಚಿನ ಜನ ತಮ್ಮ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ' ಎಂದಿದ್ದಾರೆ.

ರಾಜ್ಯದಲ್ಲಿ ಯಾವ ವರ್ಷ ಎಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ನೋಡುವುದಾದರೆ, 2018ರಲ್ಲಿ 2301, 2019ರಲ್ಲಿ 6150, 2020ರಲ್ಲಿ 9714, 2021ರಲ್ಲಿ 33,314, 2022ರಲ್ಲಿ 95,929 ಹಾಗೂ 2023ರಲ್ಲಿ ಕೇವಲ ಎಂಟು ತಿಂಗಳಲ್ಲಿ 1,02,275 ಇವಿಗಳು ರಿಜಿಸ್ಟರ್ ಆಗಿವೆ. ಈ ಸಂಖ್ಯೆಯನ್ನು ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಭಾರೀ ಬೆಳವಣಿಗೆಯಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮನಸೋತ ಕರುನಾಡ ಜನ, ಇದೇ ಮೊದಲ ಬಾರಿಗೆ.. ಹೊಸದೊಂದು ದಾಖಲೆ

ಕಳೆದ ಆರು ವರ್ಷದಲ್ಲಿ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯ ಪ್ರಯಾಣದಲ್ಲಿ ಏರಿಕೆಯಾಗಿದೆ. ಆದರೆ, ಚಾರ್ಜಿಂಗ್ ಸ್ಟೇಷನ್‌ ಸಂಖ್ಯೆ ಮಾತ್ರ ಹೆಚ್ಚಳಗೊಂಡಿಲ್ಲ. ಇವುಗಳನ್ನು ಏರಿಕೆ ಮಾಡಬೇಕೆಂದು ತಜ್ಞರು ಆಭಿಪ್ರಾಯಪಟ್ಟಿದ್ದು, ಎಲೆಕ್ಟ್ರಿಕ್ ಬಸ್‌, ಕಾರು ಹಾಗೂ ದೊಡ್ಡ ವಾಹನಗಳಿಗೆ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ ತೀರಾ ಅಗತ್ಯ. ಇದರೊಟ್ಟಿಗೆ ಖಾಸಗಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಉತ್ತೇಜಿಸಬೇಕು ಎನ್ನುತ್ತಾರೆ.

ರಾಜ್ಯದಲ್ಲಿ 2018ರಲ್ಲಿ, ಕೇವಲ 3 ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್‌ ಇದ್ದವು. 2019ರಲ್ಲಿ ಆ ಸಂಖ್ಯೆ 70ಕ್ಕೆ ಹೆಚ್ಚಳಗೊಂಡಿತು. ಕೊರೋನಾ ಸೋಂಕಿನ ಕಾರಣ, 2020ರಲ್ಲಿ ಯಾವುದೇ ಹೊಸ ಚಾರ್ಜಿಂಗ್ ಸ್ಟೇಷನ್‌ ಆರಂಭವಾಗಲಿಲ್ಲ. 2021ರಲ್ಲಿ ಮತ್ತೆ 53 ನೂತನ ಚಾರ್ಜಿಂಗ್ ಸ್ಟೇಷನ್‌ ಸ್ಥಾಪನೆ ಮಾಡಲಾಯಿತು. ಪ್ರಸ್ತುತ, ಕರ್ನಾಟಕದಲ್ಲಿ 584 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಿವೆ.

ಎಲೆಕ್ಟ್ರಿಕ್ ವಾಹನಗಳಿಗೆ ಮನಸೋತ ಕರುನಾಡ ಜನ, ಇದೇ ಮೊದಲ ಬಾರಿಗೆ.. ಹೊಸದೊಂದು ದಾಖಲೆ

ಅದರಲ್ಲಿ, 265 ಚಾರ್ಜಿಂಗ್ ಸ್ಟೇಷನ್‌ಗಳನ್ನು ಕರ್ನಾಟಕ ಸರ್ಕಾರದಡಿ ಕಾರ್ಯನಿರ್ವಹಿಸುವ ವಿವಿಧ ವಿದ್ಯುತ್ ಪ್ರಸರಣ ಕಂಪನಿಗಳು (ESCOM) ನಿರ್ವಹಣೆ ಮಾಡುತ್ತಿವೆ. 19 ಸ್ಟೇಷನ್‌ಗಳನ್ನು ಇತರೆ ಸರ್ಕಾರಿ ಸಂಸ್ಥೆಗಳು ಹಾಗೂ 300 ಸ್ಟೇಷನ್‌ಗಳನ್ನು ಖಾಸಗಿ ಕಂಪನಿಗಳು ಸ್ಥಾಪಿಸಿವೆ. ಈ ವರ್ಷ ರಾಜ್ಯದಲ್ಲಿ 1,270 ಚಾರ್ಜಿಂಗ್ ಸ್ಟೇಷನ್‌ಗಳನ್ನು ಪ್ರಾರಂಭಿಸುವ ಯೋಜನೆಯನ್ನು ಇಂಧನ ಇಲಾಖೆ ಹೊಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲ್ಲದೆ, ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಿ, ದೂರದ ಪ್ರಯಾಣ ಮಾಡುವವರಿಗೆ ಅನುಕೂಲವಾಗುವ ಸಲುವಾಗಿ ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜೊತೆಯಲ್ಲಿಯೂ ಮಾತುಕತೆ ನಡೆಸುತ್ತಿದೆ. ಪ್ರಾಯೋಗಿಕ ಯೋಜನೆ ಭಾಗವಾಗಿ, ಬೆಂಗಳೂರು - ಪುಣೆ ಹೆದ್ದಾರಿಯ 10-12 ಟೋಲ್ ಪ್ಲಾಜಾಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ ಸ್ಥಾಪನೆಗೆ ಚಿಂತನೆ ನಡೆದಿದೆ.

ಇನ್ನು, ಕರ್ನಾಟಕದಲ್ಲಿ ಈ ಮಟ್ಟಿಗೆ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಲು ಮತ್ತೊಂದು ಕಾರಣ, ದೇಶದಲ್ಲಿ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳೆಂದು ಗುರುತಿಸಿಕೊಂಡಿರುವ ಓಲಾ, ಎಥರ್, ಸಿಂಪಲ್ ಎನರ್ಜಿ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿವೆ. ಅದರಲ್ಲೂ ಓಲಾ ತನ್ನ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಪಾರುಪಾತ್ಯ ಮೆರೆಯುತ್ತಿದೆ.

Article Published On: Tuesday, September 12, 2023, 13:10 [IST]
English summary
1 lakh ev registration karnataka just eight months details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+