ಎರಡು ಕೋಟಿ ಕೊಟ್ಟರೂ ಎಂತಹಾ ಪರಿಸ್ಥಿತಿ ನೋಡಿ: ಬೆಂಝ್ ಮುಂದೋಗಲು ತಳ್ಳಿದ 10 ಜನ

ಕಾರಿನ ಬ್ಯಾಟರಿಗಳು ಹಾಳಾದರೆ ಎಷ್ಟೇ ಕೋಟಿಯ ಕಾರಾದರೂ ಅದನ್ನು ದೂಡಿ ಸ್ಟಾರ್ಟ್‌ ಮಾಡುವುದು ವಾಡಿಕೆ. ಅದು ಮಾರುತಿ ಅಲ್ಟೋ ಆದರೂ ಸರಿ. ಮರ್ಸಿಡಿಸ್‌ನ (Mercedes Benz) ದುಬಾರಿ ಕಾರುಗಳಲ್ಲಿ ಒಂದಾದ ಜಿ ಕ್ಲಾಸ್‌ ಇದೇ ರೀತಿ ಕೈಕೊಟ್ಟು ಫಚೀತಿಗೆ ಸಿಲುಕಿದಾಗ ದೂಡಿ ಸ್ಟಾರ್ಟ್‌ ಮಾಡಲು ಪ್ರಯತ್ನಿಸಿರುವ ಘಟನೆಯೊಂದು ನಡೆದಿದೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮರ್ಸಿಡಿಸ್‌-ಬೆಂಝ್-ಜಿ ಕ್ಲಾಸ್ ಎಸ್‌ಯುವಿಯೊಂದನ್ನು ಸುಮಾರು 10 ಜನ ಸೇರಿ ದೂಡಿ ಸ್ಟಾರ್ಟ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸೂಪರ್‌ ಕಾರ್ಸ್‌ ಇನ್‌ ಇಂಡಿಯಾ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು ಭಾರೀ ಸದ್ದು ಮಾಡುತ್ತಿದೆ.

10 Individuals Initiate Mercedes Benz G Class

ವಿಡಿಯೋದಲ್ಲಿ ಕಾಣುವಂತೆ ಸುಮಾರು 10 ಮಂದಿ ಬಿಳಿ ಬಣ್ಣದ ಮರ್ಸಿಡಿಸ್‌ ಬೆಂಝ್ ಜಿ ಕ್ಲಾಸ್ ಎಸ್‌ಯುವಿಯನ್ನು ದೂಡುತ್ತಿದ್ದಾರೆ. ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು, ತುಂಬಾ ತ್ರಾಸದಿಂದ ಸುಮಾರು 2500 ಕಿಲೋ ಗ್ರಾಂ ಗಿಂತಲೂ ಅಧಿಕ ತೂಗುವ ಕಾರನ್ನು ದೂಡುತ್ತಿದ್ದಾರೆ.

ಕಾರಿನ ಬ್ಯಾಟರಿಯೇನಾದರೂ ಕೆಟ್ಟು ನಿಂತರೆ ಅದರಷ್ಟು ಪೇಚಾಡುವ ಸ್ಥಿತಿ ಬೇರೊಂದಿಲ್ಲ. ಸಣ್ಣ ಹ್ಯಾಚ್‌ಬ್ಯಾಕ್‌ ಕಾರುಗಳೇನದರೂ ಆದರೆ ಅದನ್ನು ಸುಲಭವಾಗಿ ದೂಡಿ ಸ್ಟಾರ್ಟ್‌ ಮಾಡಬಹುದು. ಆದರೆ ಮರ್ಸಿಡಿಸ್‌ ಬೆಂಝ್ ಜಿ ಕ್ಲಾಸ್ ಎಸ್‌ಯುವಿಯಂತಹ ಬೃಹತ್‌ ಕಾರುಗಳೇನಾದರೂ ಸ್ಥಿತಿ ತಲುಪಿದರೆ ಅದನ್ನು ದೂಡಲು ವಿಡಿಯೋದಲ್ಲಿ ಕಾಣುವಂತೆ 10 ಜನರಾದರೂ ಬೇಕು.

ಆಟೋಮ್ಯಾಟಿಕ್‌ ಟ್ರಾನ್ಸ್ಮಿಷನ್‌ ಇರುವ ಕಾರು ಇದಾಗಿದ್ದು ಇಂತಹ ಕಾರುಗಳಲ್ಲಿ ಬ್ಯಾಟರಿಯೆನಾದರೂ ಕೈಕೊಟ್ಟರೆ ಅದನ್ನು ದೂಡಿ ಸ್ಟಾರ್ಟ್‌ ಮಾಡುವಂತಿಲ್ಲ. ವಿಡಿಯೋದಲ್ಲಿ ಕಾರನ್ನು ದೂಡುತ್ತಿರುವ ಅಷ್ಟೂ ಜನರಿಗೂ ಇದರ ಬಗ್ಗೆ ಮಾಹಿತಿಯಿಲ್ಲ ಎಂದೆನಿಸುತ್ತದೆ. ದೂಡಿ ಸ್ಟಾರ್ಟ್‌ ಮಾಡಲು ಕ್ಲಚ್‌ನ ಅಗತ್ಯವಿದ್ದು ಆಟೋಮ್ಯಾಟಿಕ್‌ ಕಾರುಗಳಲ್ಲಿ ಕ್ಲಚ್‌ ಇರದಿರುವದರಿಂದ ಇದು ಕಷ್ಟಸಾದ್ಯ.

ಇಂತಹ ಸಂಧರ್ಭದಲ್ಲಿ ಆಟೋಮ್ಯಾಟಿಕ್‌ ಕಾರುಗಳಿಗೆ ಇರುವ ಒಂದೇ ಒಂದು ಉಪಾಯ ಎಂದರೆ ಅದು ಜಂಪ್‌ ಸ್ಟಾರ್ಟ್‌ ಮಾಡುವುದು. ಒಂದು ಕಾರಿನ ಬ್ಯಾಟರಿಯನ್ನು ಜಂಪ್‌ ಸ್ಟಾರ್ಟ್‌ ಮಾಡಲು ನಿಮಗೆ ಕಾರ್ಯ ನಿರ್ವಹಿಸುವ ಇನ್ನೊಂದು ಕಾರು ಮತ್ತು ಅದರ ಬ್ಯಾಟರಿಯ ಅಗತ್ಯವಿರುತ್ತದೆ. ಟರ್ಮಿನಲ್‌ಗಳನ್ನು ಕನೆಕ್ಟ್‌ ಮಾಡಿಕೊಂಡು ಜಂಪ್‌ ಸ್ಟಾರ್ಟನ್ನು ಆರಂಭಿಸಬೇಕಾಗುತ್ತದೆ.

ಹೀಗೆ ಟರ್ಮಿನಲ್‌ಗಳನ್ನು ಬೂಸ್ಟರ್‌ ಕೇಬಲ್‌ಗಳ ಸಹಾಯದಿಂದ ಕನೆಕ್ಟ್‌ ಮಾಡಿ ಒಂದು ಬ್ಯಾಟರಿಯಿಂದ ಇನ್ನೊಂದು ಬ್ಯಾಟರಿಗೆ ಚಾರ್ಜ್‌ ಮಾಡಬೇಕಾಗುತ್ತದೆ. ಹೀಗೆ ಮಾಡಿದಾಗ ಕೈಕೊಟ್ಟ ಬ್ಯಾಟರಿಯು ಕಾರ್ಯಪೃವೃತ್ತವಾಗಿ ನಿಮ್ಮ ಕಾರನ್ನು ಸ್ಟಾರ್ಟ್‌ ಮಾಡಬಹುದಾಗಿದೆ. ಸಂಧರ್ಭದಲ್ಲಿ ಎರಡೂ ಕಾರುಗಳ ನಡುವೆ ಕೊಂಚ ಅಂತರವನ್ನು ಇಡುವುದು ಉತ್ತಮ.

ಮೇಲೆ ತಿಳಿಸಿದಂತೆ ಸುಮಾರು 2.5 ಟನ್‌ ತೂಗುವ ಮರ್ಸಿಡಿಸ್‌ ಬೆಂಝ್ ಜಿ ಕ್ಲಾಸ್ ಎಸ್‌ಯುವಿ ಆಕಾರದಲ್ಲೂ ಇತರ ಕಾರುಗಳಿಗಿಂತ ದೊಡ್ಡದಾಗಿಯೇ ಇದೆ. ವಿಶ್ವ ದರ್ಜೆಯ ಎಸ್‌ಯುವಿ ಇದಾಗಿದ್ದು ಆಫ್‌ ರೋಡ್‌ ಮತ್ತು ಆನ್‌ ರೋಡ್, ಎರಡೂ ಕಡೆ ಒಂದೇ ರೀತಿ ಅತ್ಯುತ್ತಮ ಪರ್ಫಾಮೆನ್ಸ್‌ ಅನ್ನು ಕಾರು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 15, 2023, 11:37 [IST]
English summary
10 individuals initiate mercedes benz g class vehicle by pushing it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+