ಆಫ್‌ರೊಡಿಂಗ್‌ ಪ್ರೀಯರೇ ಎಚ್ಚರ: ಥಾರ್‌, ಫಾರ್ಚ್ಯೂನರ್‌ ಸೇರಿದಂತೆ 10 ಎಸ್‌ಯುವಿಗಳು ಸೀಜ್‌

ಇತ್ತೀಚೆಗೆ ನಮ್ಮಲ್ಲಿ ನಿಯಮ ಬಾಹಿರ ವಾಹನ ಚಲಾವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವಕರಂತೂ ಎಲ್ಲಿ ತಮ್ಮ ವಾಹನಗಳನ್ನು ಓಡಿಸಬಾರದೋ, ಅಂತಹ ಕಡೆ ವಾಹನವನ್ನು ಚಲಾಯಿಸುವುದು ಅತಿಯಾಗಿಬಿಟ್ಟಿದೆ. ಇದೇ ಕಾರಣದಿಂದ ಹಲವಯ ಬಾರಿ ಇವರು ತಮ್ಮ ವಾಹನಗಳ ಜೊತೆ ಪೊಲೀಸರಿಗೆ ಅತಿಥಿಯಾಗುವ ಸುದ್ದಿಗಳು ಹರಿದಾಡುತ್ತಿದೆ.

ಇಲ್ಲೊಂದು ಕಡೆ ಯುವಕರು ಮೀಸಲು ಅರಣ್ಯದಲ್ಲಿ ತಮ್ಮ ಆಫ್‌ ರೋಡರ್‌ ವಾಹನಗಳನ್ನು ತೆಗೆದುಕೊಂಡು ಆಫ್‌ರೋಡಿಂಗ್‌ ಮಾಡಲು ಹೋದ ಪರಿಣಾಮವಾಗಿ ವಾಹನಗಳ ಸಹಿತ ಅರಣ್ಯ ಇಲಾಕೆ ಸಿಬ್ಬಂದಿಗಳ ಅತಿಥಿಯಾದ ಘಟನೆಯೊಂದು ಸಂಭವಿಸಿದೆ. ಇದು ನಮ್ಮ ಹಾಸನ ಜಿಲ್ಲೆಯ ಸಕಲೇಶಪುರದ ಆಚ್ಚಾರಾದಿ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

Fortuner Seized For Off Roading

ಮೋಜಿಗಾಗಿ ಜಾಗದಲ್ಲಿ ತಮ್ಮ ಕಾರುಗಳೊಂದಿಗೆ ಆಫ್‌ರೋಡಿಂಗ್‌ ಮಾಡಲು ಹೋಗಿ ಸುಮಾರು 10 ಎಸ್‌ಯುವಿಗಳನ್ನು ಪೊಲೀಸರು ಸೀಜ್‌ ಮಾಡಿದ್ದು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂರ್ಖಾನಿ ಗುಡ್ಡದ ಬಳಿ ತಮ್ಮ ಖಾಸಗಿ ವಾಹನಗಳನ್ನು ಚಲಾಯಿಸಿ ಮೋಜು ಮಾಡಿದಕ್ಕಾಗಿ ಅರಣ್ಯ ಇಲಾಕೆ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ.

ಎಸ್‌ಯುವಿಗಳು ಪ್ರದೇಶದಲ್ಲಿ ಆಫ್‌ರೊಡಿಂಗ್‌ (Off Roading) ಮಾಡುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಕಲೇಶಪುರದ ರೇಂಜ್‌ ಫಾರೆಸ್ಟ್‌ ಆಫೀಸರ್‌ ಆದ ಎಸ್‌ಎಲ್ ಶೀಲ್ಪಾ ಮತ್ತು ತಂಡ ಬೆಂಗಳೂರಿನಿಂದ ಆಗಮಿಸಿದ ಸುಮಾರು 15 ಮಂದಿ ಮತ್ತು ಅವರ ಎಸ್‌ಯುವಿಗಳನ್ನು ಪ್ರದೇಶದಿಂದ ಸೀಜ್‌ ಮಾಡಿದ್ದಾರೆ.

Fortuner Seized For Off Roading

ಪ್ರವಾಸಿಗರಿಗೆ ಮೊದಲೇ ವಾರ್ನ್‌ ಮಾಡಿದ್ದರೂ, ಒಬ್ಬ ಕಾಫಿ ಎಸ್ಟೇಟ್‌ ಮಾಲೀಕ ಇವರನ್ನು ರಿಸರ್ವ್ ಫಾರೆಸ್ಟ್‌ ವಲಯದಲ್ಲಿ ಆಫ್‌ರೊಡಿಂಗ್‌ ಗೆ ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ, ಸೆಕ್ಷನ್‌ Karnataka Forest Act - 1963 ಅಡಿಯಲ್ಲಿ ಪ್ರಕರಣವನ್ನು] ದಾಖಲಿಸಿಕೊಂಡಿದೆ.

ಇದಕ್ಕಕಿಂತ ಮೊದಲೇ ಸಮೀಪದ ರೆಸಾರ್ಟ್‌ ಮತ್ತು ಹೋಮ್‌ ಸ್ಟೇ ಮಾಲೀಕರಿಗೆ ನೋಟೀಸ್‌ ಮೂಲಕ ಮುನ್ನೆಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಎಚ್ಚರಿಕೆಗೆ ಅಲ್ಲಿನ ಕೆಲವೊಂದು ಮಾಲೀಕರು ಅಸಮಧಾನ ವ್ಯಕ್ತಪಡಿಸಿದ್ದರು. ಕಾರಣದಿಂದಾಗಿಯೇ ಇಂದು ಇಷ್ಟೊಂದು ವಾಹನಗಳನ್ನು ಸೀಝ್‌ ಮಾಡುವ ಪರಿಸ್ಥಿತಿ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಅಲ್ಲಿನ ಸಾರ್ವಜನಿಕರು ನೀಡಿದ ಮಾಹಿತಿಯನ್ನು ಆಧರಿಸಿದ ಅರಣ್ ಇಲಾಕೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ವಾಹನಗಳನ್ನು ಸೀಜ್‌ ಮಾಡಿದ್ದು ಇದರಲ್ಲಿ ಹಲವಾರು ದುಬಾರಿ ವಾಹನಗಳು ಸಹ ಸೇರಿಕೊಂಡಿವೆ. ಪ್ರಮುಖವಾಗಿ ಇಲ್ಲಿಂದ ಜಿಪ್ಸಿ, ಥಾರ್‌, ಫಾರ್ಚ್ಯೂನರ್‌ ರೀತಿಯ ಆಫ್‌ರೋಡರ್‌ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 18, 2023, 8:30 [IST]
English summary
10 suvs including mahindra thar fortuner seized for off roading in reserve forest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+