ವರ್ಣಿಸಲು ಪದಗಳು ಸಾಲದು; 11 ಅದ್ಭುತ ವನ್ಯಜೀವಿ ಸೇತುವೆಗಳು

By Nagaraja

ಈ ಪುಣ್ಯ ಭೂಮಿಯಲ್ಲಿ ಜೀವಿಸಲು ಮಾನವರಷ್ಟೇ ಪ್ರಾಣಿಗಳಿಗೂ ಸಮಾನ ಹಕ್ಕಿದೆ. ಆದರೆ ಮನುಷ್ಯ ತನ್ನ ಸ್ವಾರ್ಥ ಲಾಭಕ್ಕಾಗಿ ಗಿಡ ಮರಗಳನ್ನು ಕತ್ತರಿಸುತ್ತಾನೆ. ಬರ ಬರುತ್ತಾ ಸಂಪೂರ್ಣ ಭೂಮಿಯ ಮೇಲೆ ಅಧಿಪತ್ಯವನ್ನು ಸ್ಥಾಪಿಸಿದ್ದಾನೆ. ಈ ನಡುವೆ ವನ್ಯಜೀವಿಗಳಂತೂ ದಿಕ್ಕುಪಾಲಾಗಿದೆ.

ಹಾಗಿದ್ದರೂ ಮಾನವರಲ್ಲಿ ಸ್ವಲ್ಪವಾದರೂ ಕರುಣೆ, ದಯೆ ಬಾಕಿಯಿದೆ ಎಂಬುದಕ್ಕೆ ಸಾಕ್ಷಿಯಾಗಿ ದಟ್ಟವಾದ ಅರಣ್ಯದಲ್ಲಿ ವನ್ಯಜೀವಿಗಳಿಗೆ ಸಂಚರಿಸಲು ಹಾದಿಯನ್ನು ತೆರೆದುಕೊಂಡಿದ್ದಾನೆ. ಗಿಡ, ಮರಗಳಿಗೆ ಯಾವುದೇ ರೀತಿಯ ಘಾಸಿಯಾಗದೇ ಅತ್ಯಾದ್ಭುತವಾಗಿ ವನ್ಯಜೀವಿ ಸೇತುವೆಗಳನ್ನು ನಿರ್ಮಿಸಲು ಮಾನವ ಯಶ ಕಂಡಿದ್ದಾನೆ. ಇವುಗಳಲ್ಲಿ ಅಂಡರ್ ಪಾಸ್ ಸುರಂಗ, ಕಮಾನು, ಮೇಲ್ಸೇತುವೆಗಳು ಮತ್ತು ಹಸಿರು ಛಾವಣಿಗಳು ಸೇರಿವೆ.

ವರ್ಣಿಸಲು ಪದಗಳು ಸಾಲದು; 11 ಅದ್ಭುತ ವನ್ಯಜೀವಿ ಸೇತುವೆಗಳು

ರಸ್ತೆಯಲ್ಲಿ ಸಂಚರಿಸುವಾಗ ಮನುಷ್ಯ ಮತ್ತು ಪ್ರಾಣಿಯ ನಡುವೆ ಅವಘಡ ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ವನ್ಯಜೀವಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಇತಿಹಾಸದತ್ತ ತಿರುಗಿ ನೋಡಿದಾಗ 1950ರ ದಶಕದಲ್ಲಿ ಫ್ರಾನ್ಸ್ ನಲ್ಲಿ ಮೊದಲ ಬಾರಿಗೆ ವೈಲ್ಡ್ ಲೈಫ್ ಕ್ರಾಸಿಂಗ್ ತೆರೆದುಕೊಂಡಿತ್ತು. ಇದನ್ನು ಬಳಿಕ ಹಾಲೆಂಡ್, ಸ್ವಿಜರ್ಲೆಂಡ್, ಜರ್ಮನಿ ಇತ್ಯಾದಿ ರಾಷ್ಟ್ರಗಳು ಹಿಂಬಾಲಿಸಿತ್ತು.

01. ಬ್ಯಾನ್ಫ್ ನ್ಯಾಷನಲ್ ಪಾರ್ಕ್, ಅಲ್ಬೆರ್ಟಾ, ಕೆನೆಡಾ

01. ಬ್ಯಾನ್ಫ್ ನ್ಯಾಷನಲ್ ಪಾರ್ಕ್, ಅಲ್ಬೆರ್ಟಾ, ಕೆನೆಡಾ

1885ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಬ್ಯಾನ್ಫ್ ನ್ಯಾಷನಲ್ ಪಾರ್ಕ್, ಕೆನೆಡಾದ ಅತಿ ಪುರಾತನ ಉದ್ಯಾನವನವಾಗಿದೆ. ರೊಕಿ ಪರ್ವತದಲ್ಲಿ ಸ್ಥಿತಗೊಂಡಿರುವ ಬ್ಯಾನ್ಫ್ ನ್ಯಾಷನಲ್ ಪಾರ್ಕ್, 110ರಿಂದ 180 ಕೀ.ಮೀ. ದೂರದ ವರೆಗೆ ಹರಡಿದೆ. ಮಂಜುಗಡ್ಡೆ ಸೇರಿದಂತೆ ವಿವಿಧ ರೀತಿ ಭೂಪ್ರದೇಶಗಳನ್ನು ಹೊಂದಿರುವ ಇಲ್ಲಿನ ಪಾರ್ಕ್ ನಲ್ಲಿ ವನ್ಯಜೀವಿಗಳ ಸಂಚಾರಕ್ಕಾಗಿ ವಿಶಿಷ್ಟ ಮಾರ್ಗಗಳನ್ನು ತೆರೆಯಲಾಗಿದೆ. ವರದಿಗಳ ಪ್ರಕಾರ ಇಲ್ಲಿನ ಪಾರ್ಕ್ ನಲ್ಲಿ 56 ಸಸ್ತನಿ ಜಾತಿಯ ಜೀವಿಗಳು ವಾಸಿಸುತ್ತಿವೆ. ಇವುಗಳಲ್ಲಿ ಕೂಗರ್, ಕೆನಡಾ ಹೆಬ್ಬೆಕ್ಕು, ವೊಲ್ವೆರಿನ್, ಕೆಂಪು ನರಿ, ನದಿ ನೀರುನಾಯಿ, ಕೊಯೊಟೆ, ಎಲ್ಕ್, ಹೇಸರಗತ್ತೆ ಜಿಂಕೆ ಮತ್ತು ಬಿಳಿ ಬಾಲದ ಜಿಂಕೆಗಳು ಸಾಮಾನ್ಯವಾಗಿದೆ.

02. ದಿ ನೆದರ್ ಲ್ಯಾಂಡ್ಸ್

02. ದಿ ನೆದರ್ ಲ್ಯಾಂಡ್ಸ್

ವನ್ಯಜೀವಿಗಳು ಯಾವುದೇ ಅಡೆತಡೆಗಳಿಲ್ಲದೆ ಸುರಕ್ಷಿತವಾಗಿ ರಸ್ತೆ ದಾಟುವುದು ವೈಲ್ಡ್ ಲೈಫ್ ಕ್ರಾಸಿಂಗ್ ನ ಪ್ರಮುಖ ಉದ್ದೇಶವಾಗಿದೆ. ಹಾಲೆಂಡ್ ನಲ್ಲಿ ಅಂಡರ್ ಪಾಸ್ ರಸ್ತೆಯ ಮೇಲ್ಗಡೆಯಾಗಿ ನಿರ್ಮಿಸಿರುವ ಹಸಿರು ವರ್ಣಿತ ಸೇತುವೆ ಇದಕ್ಕೊಂದು ಪ್ರಮುಖ ಉದಾಹರಣೆಯಾಗಿದೆ. ವಾಹನಗಳು ಢಿಕ್ಕಿಯಾಗಿ ವನ್ಯಜೀವಿಗಳು ಸಾವಿಗೀಡಾಗುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಇಂತಹದೊಂದು ಕಲ್ಪನೆಗೆ ರೂಪುರೇಷೆ ನೀಡಲಾಗಿದೆ.

03. ಬರ್ಕೆನಾ, ಜರ್ಮನಿ

03. ಬರ್ಕೆನಾ, ಜರ್ಮನಿ

ಬರ್ಕೆನಾದ ಸುತ್ತ ಮುತ್ತಲು ಅನೇಕ ಪ್ರಕೃತಿ ಸಂರಕ್ಷಣಾ ಪ್ರದೇಶಗಳಿವೆ. ಅತಿ ಸುಂದರವಾದ ಭೂಪ್ರದೇಶದಲ್ಲಿ ಹಾದು ಹೋಗುತ್ತಿರುವ ರಸ್ತೆಯ ಮೇಲೆ ಅರ್ಧವೃತ್ತಾಕಾರದಲ್ಲಿ ಕಟ್ಟಲಾದ ನೈಸರ್ಗಿಕ ಸೇತುವೆ ಮನ ಸೆಳೆಯುತ್ತಿದೆ.

04. ಸ್ಕಾಚ್ ಪ್ಲೈನ್ಸ್

04. ಸ್ಕಾಚ್ ಪ್ಲೈನ್ಸ್

ಅಮೆರಿಕದ ನ್ಯೂ ಜೆರ್ಸಿಯಲ್ಲಿ ಹಾದು ಹೋಗುತ್ತಿರುವ ಸ್ಕಾಚ್ ಪ್ಲೈನ್ಸ್ ಮಾರ್ಗಕ್ಕೆ ನಿರ್ಮಿಸಲಾಗಿರುವ ಪ್ರಕೃತಿ ದತ್ತವಾದ ಮೇಲ್ಸುತುವೆ ನಿಜಕ್ಕೂ ಅಮೋಘ ಅನುಭವವನ್ನು ನೀಡುತ್ತದೆ. ಎರಡು ಕಡೆಗಳಲ್ಲೂ ಸುತ್ತುವರಿಯಲ್ಪಟ್ಟ ದಟ್ಟವಾದ ಕಾಡುಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

05. ಇ314, ಬೆಲ್ಜಿಯಂ

05. ಇ314, ಬೆಲ್ಜಿಯಂ

ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಇ-ರೋಡ್ ಜಾಲದ ಭಾಗವಾಗಿರುವ ಬೆಲ್ಜಿಯಂನಲ್ಲಿ ಹಾದು ಹೋಗುತ್ತಿರುವ ಯುರೋಪಿಯನ್ ರೂಟ್ ಇ314, ಅಂದಾಜು 125 ಕೀ.ಮೀ. ದೂರವನ್ನು ಹೊಂದಿದೆ. ಇಲ್ಲಿ ವಾಹನಗಳ ಸಂಚಾರಕ್ಕಾಗಿ ವೈಲ್ಡ್ ಲೈಫ್ ಕ್ರಾಸಿಂಗ್ ನಿರ್ಮಿಸಲಾಗಿದೆ.

06. ಹೈವೇ ಎ50, ಹಾಲೆಂಡ್

06. ಹೈವೇ ಎ50, ಹಾಲೆಂಡ್

ಹಾಲೆಂಡ್ ನಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ ಎ50 ಮೇಲ್ಗಡೆಯಲ್ಲಿರುವ ಇಕೊಡಕ್ಟ್ ಡೆ ವೊಸ್ಟ್ ಹೋವ್ ವೈಲ್ಡ್ ಲೈಫ್ ಕ್ರಾಸಿಂಗ್, ಕೆಂಪು ಜಿಂಕೆ, ಬ್ಯಾಜರ್ಸ್ ಇತ್ಯಾದಿ ವನ್ಯಜೀವಿಗಳಿಗೆ ಸಂರಕ್ಷಣೆಯನ್ನು ನೀಡುತ್ತದೆ.

07. ಫ್ಲ್ಯಾಟ್ ಹೆಡ್ ಇಂಡಿಯನ್ ರಿಸರ್ವವೇಷನ್, ಮೌಂಟನಾ

07. ಫ್ಲ್ಯಾಟ್ ಹೆಡ್ ಇಂಡಿಯನ್ ರಿಸರ್ವವೇಷನ್, ಮೌಂಟನಾ

ವನ್ಯಜೀವಿ ಸಂರಕ್ಷಣೆಯ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೌಂಟನಾದಲ್ಲಿ ವೈಲ್ಡ್ ಲೈಫ್ ಕ್ರಾಸಿಂಗ್ ನಿರ್ಮಿಸಲಾಗಿದೆ. ಇಲ್ಲಿ ಜೀವಶಾಸ್ತ್ರಜ್ಞರಿಗೆ ವನ್ಯಜೀವಿ ಕ್ರಾಸಿಂಗ್ ಬಗ್ಗೆ ಗಾಢವಾಗಿ ಅರಿಯಲು ಕ್ಯಾಮೆರಾಗಳನ್ನು ಆಳವಡಿಸಲಾಗಿದೆ.

08. ಬೊರ್ಕೆಲ್ಡ್, ಹಾಲೆಂಡ್

08. ಬೊರ್ಕೆಲ್ಡ್, ಹಾಲೆಂಡ್

ಚಿತ್ರ ನೋಡಿದಾಗಲೇ ವನ್ಯಜೀವಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಎಷ್ಟು ಉಪಯುಕ್ತವೆನಿಸಲಿದೆ ಎಂಬುದು ತಿಳಿದು ಬರುತ್ತದೆ. ಇದರ ಕೆಳಗಡೆಯಾಗಿ ಮಾನವ ನಿರ್ಮಿತ ರಸ್ತೆಗಳಲ್ಲಿ ಶರವೇಗದಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ.

09. ಇಂಟರ್ ಸ್ಟೇಟ್ 78, ವಾಚುಂಗ್ ರಿಸರ್ವವೇಷನ್, ನ್ಯೂ ಜೆರ್ಸಿ, ಅಮೆರಿಕ

09. ಇಂಟರ್ ಸ್ಟೇಟ್ 78, ವಾಚುಂಗ್ ರಿಸರ್ವವೇಷನ್, ನ್ಯೂ ಜೆರ್ಸಿ, ಅಮೆರಿಕ

ಅತಿ ದೊಡ್ಡ ವನ್ಯಜೀವಿ ಉದ್ಯಾನವನವಾಗಿರುವ ನ್ಯೂ ಜೆರ್ಸಿಯಲ್ಲಿರುವ ವಾಚುಂಗ್ ಸಂರಕ್ಷಣೆ ಕೇಂದ್ರದಲ್ಲಿ ವೈಲ್ಡ್ ಲೈಫ್ ಕ್ರಾಸಿಂಗ್ ನಿರ್ಮಿಸಿರುವುದರಿಂದ ವಾಹನಗಳು ನಿಶ್ಚಿಂತತೆಯಿಂದ ಓಡಾಡಬಹುದಾಗಿದೆ.

10. ನಿಯರ್ ಕೀಚೆಲಸ್ ಲೇಕ್, ವಾಷಿಂಗ್ಟನ್, ಅಮೆರಿಕ

10. ನಿಯರ್ ಕೀಚೆಲಸ್ ಲೇಕ್, ವಾಷಿಂಗ್ಟನ್, ಅಮೆರಿಕ

ಒಂದೆಡೆ ನದಿ, ಮತ್ತೊಂದು ಬದಿಯಲ್ಲಿ ದಟ್ಟಾವಾದ ಅರಣ್ಯ ಇದರ ಮಧ್ಯೆ ಹಾದು ಹೋಗುತ್ತಿರುವ ರಸ್ತೆ ಹೀಗೆ ಹಲವು ವೈಶಿಷ್ಟ್ಯಗಳಿಂದ ಕೂಡಿರುವ ನಿಯರ್ ಕೀಚೆಲಸ್ ಲೇಕ್ ಮೇಲ್ಪಾಗದಲ್ಲಿ ವೈಲ್ಡ್ ಜೀವಿ ಕ್ರಾಸಿಂಗ್ ಕಟ್ಟಲಾಗಿದೆ.

11. ಬ್ಯಾನ್ಫ್ ನ್ಯಾಷನಲ್ ಪಾರ್ಕ್, ಕೆನೆಡಾ

11. ಬ್ಯಾನ್ಫ್ ನ್ಯಾಷನಲ್ ಪಾರ್ಕ್, ಕೆನೆಡಾ

ಕೆನೆಡಾದಲ್ಲಿ ಸೂರಂಗ ಮಾರ್ಗದಲ್ಲಿ ರೂಪಿಸಲಾಗಿರುವ ಬ್ಯಾನ್ಫ್ ನ್ಯಾಷನಲ್ ಪಾರ್ಕ್, ವೈಲ್ಡ್ ಲೈಫ್ ಕ್ರಾಸಿಂಗ್ ಮಾರ್ಗಕ್ಕಿರುವ ಮಗದೊಂದು ಉದಾಹಣೆಯಾಗಿದೆ.

More from DriveSpark

Article Published On: Thursday, July 7, 2016, 10:19 [IST]
English summary
11 Amazing Animal Bridges Around the World
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+