ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಶಾಲಾ ಬಾಲಕರು ತಮ್ಮ ಸಹಪಾಠಿಗಳ ಪೆನ್ನು, ಪೆನ್ಸಿಲ್, ಪುಸ್ತಕ ಮುಂತಾದವುಗಳನ್ನು ಕದಿಯುವುದು ಸಾಮಾನ್ಯ. ಆದರೆ ಇವುಗಳನ್ನೆಲ್ಲಾ ಮೀರಿಸುವಂತಹ ಕೃತ್ಯಕ್ಕೆ ಶಾಲಾ ಬಾಲಕನೊಬ್ಬ ಕೈ ಹಾಕಿದ್ದಾನೆ.

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಬಾಲಕನೊಬ್ಬ ತನ್ನ ಶಾಲೆಯ ಬಸ್ ಕದ್ದ ಘಟನೆ ಅಮೆರಿಕಾದ ಲೂಯಿಸಿಯಾನದ ಬ್ಯಾಟನ್ ರೂಜ್‌ನಲ್ಲಿ ನಡೆದಿದೆ. ಬಸ್ ಕದ್ದ ಹುಡುಗನ ಹೆಸರನ್ನು ಬಹಿರಂಗ ಪಡಿಸಿಲ್ಲ. ಅವನ ವಯಸ್ಸು 11 ಎಂದು ಹೇಳಲಾಗಿದೆ. ಕಳೆದ ಭಾನುವಾರ ಈ ಘಟನೆ ನಡೆದಿದೆ ಎಂದು ಬ್ಯಾಟನ್ ರೂಜ್ ನಗರ ಪೊಲೀಸರು ತಿಳಿಸಿದ್ದಾರೆ. ಬಸ್ ಕದ್ದ ಹುಡುಗ ನಗರದ ವಿವಿಧ ರಸ್ತೆಗಳಲ್ಲಿ ಬಸ್ ಚಾಲನೆ ಮಾಡಿದ್ದಾನೆ.

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಬಸ್ ಚಾಲನೆ ವೇಳೆ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಸ್ಸನ್ನು ಪತ್ತೆ ಹಚ್ಚಿ ಬಾಲಕನನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ, ಬಾಲಕ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳದೆ ತಪ್ಪಿಸಿಕೊಂಡಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಬಾಲಕ ಸುಮಾರು 21 ಕಿ.ಮೀಗಳವರೆಗೆ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳದೇ ತಪ್ಪಿಸಿಕೊಂಡಿದ್ದಾನೆ. ನಂತರ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ ಆತನಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವೇಳೆ ಪೊಲೀಸರು ಬಾಲಕ ಹಾಗೂ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಆತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸರ ವಿಚಾರಣೆ ವೇಳೆಯಲ್ಲಿ ಬಾಲಕ ಕೇವಲ ಜಾಲಿ ರೈಡ್ ಮಾಡುವುದಕ್ಕಾಗಿ ಶಾಲಾ ಬಸ್ ಕದ್ದೆ ಎಂದು ಹೇಳಿದ್ದಾನೆ. ಬಾಲಕನ ಈ ಮಾತು ಪೊಲೀಸರಿಗೆ ಆಶ್ಚರ್ಯವನ್ನುಂಟು ಮಾಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಬಾಲಕನ ಈ ಕೃತ್ಯದಿಂದಾಗಿ ಖಾಸಗಿ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ ಎಂದು ವರದಿಗಳಾಗಿವೆ. ಅಮೆರಿಕಾದ ಸುದ್ದಿ ಚಾನೆಲ್ ಎಬಿಸಿ 11 ಪ್ರಕಾರ ಗ್ಯಾಸ್ ಕನೆಕ್ಷನ್ ಲೈನ್, ವಾಹನಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ತೀವ್ರ ಪ್ರಮಾಣದ ಹಾನಿಯಾಗಿದೆ.

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಈ ಘಟನೆಯ ಪ್ರತ್ಯಕ್ಷದರ್ಶಿಯಾದ ಜಾಯ್ ಗ್ರಾಟ್ನಿ ಮಾತನಾಡಿ, ಸಣ್ಣ ಬಾಲಕ ಇಷ್ಟು ದೊಡ್ಡ ಬಸ್ ಅನ್ನು ಹೇಗೆ ಚಾಲನೆ ಮಾಡಿದ ಎಂಬುದು ಅರ್ಥವಾಗುತ್ತಿಲ್ಲ. ಬಸ್ ಚಾಲನೆ ಮಾಡುವಾಗ ಆತ ಜೋರಾಗಿ ನಗುತ್ತಿದ್ದ ಎಂದು ಹೇಳಿದ್ದಾಳೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಜಾಯ್ ಗ್ರಾಟ್ನಿ ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಪೊಲೀಸರು ಬಾಲಕನ ವಿರುದ್ಧ ವಾಹನ ಕಳ್ಳತನ, ರಾಶ್ ಡ್ರೈವಿಂಗ್, ಸಾರ್ವಜನಿಕ ಆಸ್ತಿಗೆ ಹಾನಿ, ಇತರರಿಗೆ ಅಪಾಯವನ್ನುಂಟು ಮಾಡಿರುವುದು ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಜಾಯ್ ಗ್ರಾಟ್ನಿ ತನ್ನ ಮೊಬೈಲ್ ನಲ್ಲಿ ತೆಗೆದ ಫೋಟೋ ಹಾಗೂ ವೀಡಿಯೊಗಳು ವೈರಲ್ ಆಗಿವೆ. ಅಮೆರಿಕಾದ ಸಿಬಿಎಸ್ 17 ಹಾಗೂ ಎಬಿಸಿ 11 ತಮ್ಮ ಸುದ್ದಿಯಲ್ಲಿ ಇವುಗಳನ್ನೇ ಪ್ರಸಾರ ಮಾಡುತ್ತಿವೆ. ಈ ಚಿತ್ರಗಳನ್ನು ಡಬ್ಲ್ಯುಎಎಫ್ ಬಿನಿಂದ ಪಡೆಯಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವೀಡಿಯೊದಲ್ಲಿ ಕಳುವಾದ ಶಾಲಾ ಬಸ್ ತೀವ್ರವಾಗಿ ಹಾನಿಗೊಳಗಾಗಿರುವುದನ್ನು ಕಾಣಬಹುದು. ಈ ಘಟನೆಯು ಹಾಲಿವುಡ್ ನಟ ಟಾಮ್ ಕ್ರೂಸ್ ಚಿತ್ರದ ಆಕ್ಷನ್ ದೃಶ್ಯಗಳಿಗೆ ಹೋಲಿಕೆಯಾಗುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜಾಲಿ ರೈಡ್ ಗಾಗಿ ಶಾಲಾ ಬಸ್ ಕದ್ದ 11 ವರ್ಷದ ಬಾಲಕ

ಪೊಲೀಸರು ಬಸ್ ಅನ್ನು ಬೆನ್ನಟ್ಟಿದಾಗ, ಹುಡುಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಸಿನಿಮಾದ ಚಿತ್ರೀಕರಣದಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಸ್ ಮರಕ್ಕೆ ಡಿಕ್ಕಿ ಹೊಡೆದ ನಂತರ ಇಡೀ ಘಟನೆ ಕೊನೆಗೊಂಡಿದೆ.

Most Read Articles
 

Kannada
English summary
11 year old boy steals school bus for jolly ride. Read in Kannada.
Story first published: Thursday, October 15, 2020, 14:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X