ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

13 ಸದಸ್ಯರನ್ನು ಒಳಗೊಂಡ ಬಾಂಬೆ ಸ್ಯಾಪ್ಪರ್ಸ್‌‍‍ನ ತಂಡವು ಕಾರ್ಗಿಲ್ ವಿಜಯ್ ದಿವಸ್‍‍ನ ಅಂಗವಾಗಿ ಬೈಕ್ ಸವಾರಿಯನ್ನು ಕೈಗೊಂಡಿದೆ. 13 ಸೈನಿಕರು ಕಾರ್ಗಿಲ್ ಜಿಲ್ಲೆಯ ಡ್ರಾಸ್‌ನಿಂದ ಪುಣೆಯವರೆಗೆ 22 ದಿನಗಳ ಕಾಲ ಸವಾರಿ ಮಾಡಲಿದ್ದಾರೆ.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ದಾರಿಯುದ್ದಕ್ಕೂ ಈ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದವರನ್ನು ಭೇಟಿಯಾಗಿ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ಅನ್ನು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ಪ್ರದೇಶದಲ್ಲಿ ಎರಡು ಪ್ರದೇಶಗಳನ್ನು ಮರಳಿ ಪಡೆದ ನೆನಪಿಗಾಗಿ ಆಚರಿಸಲಾಗುತ್ತದೆ.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

1999ರಲ್ಲಿ ಜುಲೈ 26ರಂದು ಭಾರತವನ್ನು ರಕ್ಷಿಸಲು ಅಗತ್ಯವಾದ ಎರಡು ಪ್ರದೇಶಗಳ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲು, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಸೈನ್ಯವನ್ನು ಹಿಂದಕ್ಕೆ ಕಳುಹಿಸಲು ಯಶಸ್ವಿಯಾಗಿದ್ದವು. ಪಾಕಿಸ್ತಾನದ ಪಡೆಗಳು ಭಾರತೀಯ ಪಡೆಗಳನ್ನು ಸಿಯಾಚಿನ್ ಗ್ಲೇಸಿಯರ್‍‍‍ನಿಂದ ಹಿಮ್ಮೆಟ್ಟಿಸಲು ಯತ್ನಿಸಿದ ಕಾರಣಕ್ಕೆ ಕಾರ್ಗಿಲ್ ಯುದ್ಧ ನಡೆಯಿತು.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಭಾರತೀಯ ಪಡೆಗಳು ಧೈರ್ಯದಿಂದ ಹೋರಾಡಿ ಪಾಕಿಸ್ತಾನದ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದವು. ಬಾಂಬೆ ಎಂಜಿನಿಯರ್ ಗ್ರೂಪ್ ಎಂದು ಕರೆಯಲ್ಪಡುವ ಬಾಂಬೆ ಸ್ಯಾಪ್ಪರ್ಸ್, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಈ ಘಟಕವು ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸಮಯದಲ್ಲಿ 1819ರಲ್ಲಿ ಬಾಂಬೆ ಸ್ಯಾಪ್ಪರ್ಸ್ ಅನ್ನು ರಚಿಸಲಾಯಿತು. 2019ಕ್ಕೆ ಈ ಘಟಕವು ಶುರುವಾಗಿ 200 ವರ್ಷಗಳಾಗುತ್ತವೆ. ಕಾರ್ಗಿಲ್ ವಿಜಯದ 20 ನೇ ವಾರ್ಷಿಕೋತ್ಸವ ಹಾಗೂ ಮದ್ರಾಸ್ ಸ್ಯಾಪ್ಪರ್ಸ್‌ನ 200ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಎರಡೂ ಘಟನೆಗಳನ್ನು ಆಚರಿಸುವ ಸಲುವಾಗಿ ಈ ಬೈಕ್ ಸವಾರಿಯನ್ನು ಆಯೋಜಿಸಲಾಗಿದೆ.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಬೈಕ್ ಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ 13 ಸವಾರರು ವಿವಿಧ ಶ್ರೇಣಿ ಹಾಗೂ ಸ್ಥಾನಗಳನ್ನು ಹೊಂದಿರುವ ಸೈನಿಕರಾಗಿದ್ದಾರೆ. ಬಾಂಬೆ ಸ್ಯಾಪ್ಪರ್ಸ್‌ನ ಪ್ರಧಾನ ಕಚೇರಿಯು ಪುಣೆಯಲ್ಲಿ ಇರುವುದರಿಂದ ಈ ತಂಡವು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‍‍ಗಳನ್ನು ಡ್ರಾಸ್‌ನಿಂದ ಪುಣೆವರೆಗೆ ಸವಾರಿ ಮಾಡಲಿದೆ.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಸೈನಿಕರೊಂದಿಗೆ ಮಾತುಕತೆ ನಡೆಸಲು ಬಾಂಬೆ ಸ್ಯಾಪ್ಪರ್ಸ್ ತಂಡವು ಫೀಲ್ಡ್ ಯುನಿಟ್‍‍ಗಳಲ್ಲಿ ನಿಲ್ಲಲಿದೆ. ಈ ತಂಡವು ಬಾಂಬೆ ಸ್ಯಾಪ್ಪರ್ಸ್ ಹಾಗೂ ವೀರ್ ನಾರಿಸ್‍‍ನ ಹಿರಿಯರನ್ನು ಭೇಟಿಯಾಗಿ ಶುಭಾಶಯ ಕೋರಲಿದ್ದು, ಘಟಕ ಹಾಗೂ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಧನ್ಯವಾದ ಸಲ್ಲಿಸಲಿದ್ದಾರೆ. 2019ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪುಣೆಯಲ್ಲಿ ಈ ಸವಾರಿ ಕೊನೆಗೊಳ್ಳಲಿದೆ.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಾವುದೇ ಸೈನಿಕ ಸಾಮಾನ್ಯ ಮನುಷ್ಯನಲ್ಲ. ಬಾಂಬೆ ಸ್ಯಾಪ್ಪರ್ಸ್ ಅಸಾಧಾರಣ ಘಟಕವಾಗಿದೆ. ಸ್ವಾತಂತ್ರ್ಯದ ಮೊದಲು ಬ್ರಿಟಿಷ್ ಸೈನ್ಯದ ಅಡಿಯಲ್ಲಿ ಸಲ್ಲಿಸಿದ್ದ ಸೇವೆಗಳಿಗಾಗಿ ಈ ಘಟಕವು ವಿಕ್ಟೋರಿಯಾ ಕ್ರಾಸ್ ಹಾಗೂ ಫ್ರೆಂಚ್ ಲೀಜನ್ ಆಫ್ ಆನರ್‍‍ನಂತಹ ಪ್ರಶಸ್ತಿಗಳನ್ನು ಪಡೆದಿತ್ತು.

ವಿಶಿಷ್ಟವಾಗಿ ವಿಜಯ್ ದಿವಸ್ ಆಚರಿಸಿದ ಬಾಂಬೆ ಸ್ಯಾಪ್ಪರ್ಸ್

ಸ್ವಾತಂತ್ರ್ಯ ನಂತರ ಪರಮವೀರ್ ಚಕ್ರ, ಅಶೋಕ ಚಕ್ರಗಳನ್ನು ಸಹ ಪಡೆದಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟಗಳು, ರಕ್ಷಣಾ ಕಾರ್ಯಾಚರಣೆ, ಮಾನವೀಯ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುವ ಬಾಂಬೆ ಸ್ಯಾಪ್ಪರ್‌ ತಂಡವು ಶಾಂತಿಯ ಸಮಯದಲ್ಲಿನ ಶ್ರಮ ಹಾಗೂ ಧೈರ್ಯಕ್ಕಾಗಿ ಗುರುತಿಸಲ್ಪಟ್ಟಿದೆ. 200 ವರ್ಷಗಳ ಅಸ್ತಿತ್ವಕ್ಕೆ ಹಾಗೂ ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆಗಾಗಿ ಬಾಂಬೆ ಸ್ಯಾಪ್ಪರ್‍‍‍ಗೆ ಕೋಟಿ ನಮನಗಳು.

Most Read Articles

Kannada
English summary
13 Soldiers Ride Royal Enfield Motorcycles From Kargil To Pune To Celebrate Kargil Vijay Diwas - Read in kannada
Story first published: Monday, July 29, 2019, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X