ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಕಾರು ಜಗತ್ತಿಗೆ ಸಂಬಂಧಿಸಿದ 16 ಕುತೂಹಲದಾಯಕ ಅಂಶಗಳನ್ನು ಇಲ್ಲಿ ಬಹಿರಂಗಪಡಿಸಲಿದ್ದೇವೆ.

By Nagaraja

ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದ್ದು, ಕಾರು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕಳೆದೊಂದು ದಶಕದಲ್ಲಿ ಕಾರು ತಂತ್ರಜ್ಞಾನವು ಅತಿ ಹೆಚ್ಚು ಪ್ರಗತಿಯನ್ನು ಸಾಧಿಸಿದೆ. ಹಾಗಿರಬೇಕೆಂದರೆ ಪ್ರಸ್ತುತ ಲೇಖನದಲ್ಲಿ ಕಾರು ಬಗ್ಗೆ ನೀವು ತಿಳಿದುಕೊಳ್ಳಬೇಕಾದ 16 ಮಹತ್ವದ ಅಂಶಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ಕಾರು ಡ್ಯಾಶ್ ಬೋರ್ಡ್ ಎಂಬ ಪದ ಹೇಗೆ ಬಳಕೆ ಬಂತು?

ಕಾರು ಡ್ಯಾಶ್ ಬೋರ್ಡ್ ಎಂಬ ಪದ ಹೇಗೆ ಬಳಕೆ ಬಂತು?

ಕುದುರೆಗಾಡಿಯಲ್ಲಿ ಕುದುರೆಯ ಹಿಂದುಗಡೆ ಹಾಗೂ ಸವಾರಿ ಬಂಡಿಯ ಮುಂದುಗಡೆಯಾಗಿ ಮರದ ಫಲಕಗಳನ್ನು ಇಡಲಾಗಿತ್ತು. ಇದು ಕುದುರೆ ಸವಾರಿ ಮಾಡುವಾಗ ಕುದುರೆ ಕಾಲು ಮತ್ತು ಚಕ್ರಗಳಿಂದ ಕೆಸರು ಸಿಂಪಡೆಯಾಗದಂತೆ ತಡೆಯಲು ರಚಿಸಲಾಗಿತ್ತು. ಇದೇ ಪದವು ಬಳಿಕ ಕಾರಿನ ಡ್ಯಾಶ್ ಬೋರ್ಡ್ ಗೂ ಬಳಕೆಯಾಗಿತ್ತು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ನಿಮಗಿದು ಗೊತ್ತೇ? ನಿಮ್ಮ ಕಾರಿನ ರಿಮೋಟ್ ಕೀಯನ್ನು ತಲೆಯ ಸಮೀಪ ಇಟ್ಟುಕೊಂಡ್ಡಲ್ಲಿ ಇದರ ವ್ಯಾಪ್ತಿ ಇಮ್ಮಡಿಯಾಗಲಿದೆ. ಯಾಕೆಂದರೆ ಮಾನವ ತಲೆಬುರಡೆಯು ವರ್ಧಕದಂತೆ ವರ್ತಿಸುತ್ತದೆ. ಇದು ತಮಾಷೆಯಾಗಿ ಕಾಣಿಸಿದರೂ ನಿಜವೆನಿಸಿದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ವಿಶ್ವದಲ್ಲಿ ಅತಿ ಹೆಚ್ಚು ಮರುಬಳಕೆಯಾಗುವ ಉತ್ಪನ್ನ ಕಾರಾಗಿದೆ. ಇಡೀ ಜಗತ್ತಿನಲ್ಲೇ ಶೇಕಡಾ 95ರಷ್ಟು ಕಾರು ಉತ್ಪನ್ನಗಳು ಮರುಬಳಕೆಯಾಗುತ್ತಿದೆ. ಅಧ್ಯಯನ ವರದಿಯೊಂದರ ಪ್ರಕಾರ ವರ್ಷಂಪ್ರತಿ 27 ದಶಲಕ್ಷ ಕಾರುಗಳು ಮರುಬಳಕೆಯಾಗುತ್ತಿದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಸರಾಸರಿ ಕಾರೊಂದು 30,000 ಗಳಷ್ಟು ಬಿಡಿಭಾಗಗಳನ್ನು ಹೊಂದಿರುತ್ತದೆ. ಈ ಪೈಕಿ ಬಹುತೇಕ ಭಾಗಗಳನ್ನು ಮರು ಬಳಕೆ ಮಾಡಲು ಯೋಗ್ಯವೆನಿಸುತ್ತದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಒಂದೇ ಕಾರನ್ನು ಖರೀದಿಸಿ ದೀರ್ಘವಾಧಿಯವರೆಗೆ ಚಾಲನೆ ಮಾಡಿದ ದಾಖಲೆಯನ್ನು ಅಲೆನ್ ಸ್ವಿಫ್ಟ್ ಎಂಬವರು ಹೊಂದಿದ್ದಾರೆ. 1928ರಲ್ಲಿ ಉಡುಗೊರೆಯಾಗಿ ಪಡೆದ ರೋಲ್ಸ್ ರಾಯ್ಸ್ ನ ಪಿಸ್ಸಿಡಿಲ್ಲಿ ಪಿ1 ರೋಡ್ ಸ್ಟರ್ ಕಾರನ್ನು 82 ವರ್ಷಗಳಷ್ಟು ಕಾಲ ಚಾಲನೆ ಮಾಡಿದ್ದರು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಬಲ್ಲ ಮೂಲಗಳ ಪ್ರಕಾರ ಇಡೀ ಭೂಮಿಯಲ್ಲಿ ಒಂದು ಬಿಲಿಯನ್ ಗಿಂತಲೂ ಹೆಚ್ಚು ಕಾರುಗಳು ಅಸ್ತಿತ್ವದಲ್ಲಿದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

2013ನೇ ಇಸವಿಯಲ್ಲಿ 65,140,268 ಕಾರುಗಳು ನಿರ್ಮಾಣಗೊಂಡಿದ್ದವು. ಈ ಪೈಕಿ ದಿನವೊಂದರಲ್ಲಿ ಸರಾಸರಿ 178466 ಕಾರುಗಳು ಉತ್ಪಾದನೆಯಾಗಿದ್ದವು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಇಡೀ ವಿಶ್ವ ಜನಸಂಖ್ಯೆಯನ್ನೇ ವಾಹನಗಳ ಸಂಖ್ಯೆಯು ಮೀರಿ ನಂತಿದೆ. ಈ ಪೈಕಿ ಬಹುತೇಕ ಕಾರುಗಳು ಬಳಕೆಯಲ್ಲಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಹೊಸ ಕಾರಿನ ವಾಸನೆಯು ನಿಮಗೆಲ್ಲರಿಗೂ ಇಷ್ಟೇ ತಾನೇ? ಇದನ್ನು ವಿವಿಧ ತರಹದ ಬಾಷ್ಪಶೀಲ ಸಂಯುಕ್ತಗಳಿಂದ ತಯಾರಿಸಲಾಗುತ್ತದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

1948ನೇ ಇಸವಿಯಲ್ಲಿ ರಾಲ್ಫ್ ಟೀಟರ್ ಎಂಬವರ್ ಕಾರಿನಲ್ಲಿ ಕ್ರೂಸ್ ಕಂಟ್ರೋಲ್ ತಂತ್ರಜ್ಞಾನವನ್ನು ಕಂಡು ಹುಡುಕಿದ್ದರು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

1966ರ ವೋಲ್ವೋ ಪಿ1800 ಕಾರನ್ನು 47 ವರ್ಷಗಳ ಕಾಲ ಚಾಲನೆ ಮಾಡಿದ್ದ ಇರ್ವ್ ಗಾರ್ಡನ್, 2 ದಶಲಕ್ಷ ಮೈಲು ದೂರಗಳ ತನಕ ಸಂಚರಿಸುವ ಮೂಲಕ ಸಾಧನೆಗೈದಿದ್ದರು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಫೋರ್ಡ್ ಡೀರ್ ಬೋರ್ನ್ ಘಟಕದಲ್ಲಿ ಕೇವಲ ಆರು ತಾಸಿನ ಅವಧಿಯಲ್ಲಿ ಎಫ್-150 ಟ್ರಕ್ ನಿರ್ಮಿಸಲಾಗಿತ್ತು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

1891ನೇ ಇಸವಿಯಲ್ಲಿ ಮೊದಲ ವಾಹನ ಅಪಘಾತ ಘಟಿಸಿತ್ತು. ಜೇಮ್ಸ್ ವಿಲಿಯಮ್ ಲಾಂಬೆರ್ಟ್ ಎಂಬವರ ಕಾರು ಮರಕ್ಕೆ ಢಿಕ್ಕಿ ಹೊಡೆದಿತ್ತು.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಎಲೆಕ್ಟ್ರಿಕ್ ಕಾರು ಶಬ್ದವನ್ನೇ ಹೊರಹಾಕುತ್ತಿಲ್ಲ. ಇದು ಮಾರ್ಗ ಮಧ್ಯೆ ಕುರುಡು ಮತ್ತ ಮಕ್ಕಳಿಗೆ ಸಮಸ್ಯೆಯನ್ನುಂಟು ಮಾಡಲಿದೆ ಎಂದು ಅಧ್ಯಯನ ವರದಿಗಳು ತಿಳಿಸುತ್ತದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

ಕೆಲವು ರಾಷ್ಟ್ರಗಳು ಕಾರು ರೆಡಿಯೋ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿದ್ದವು. ಇದು ಚಾಲನೆ ವೇಳೆ ತೊಂದರೆಯಾಗಲಿದೆ ಎಂಬುದು ವಾದವಾಗಿದೆ.

ಕಾರು ಬಗ್ಗೆ ತಿಳಿದುಕೊಳ್ಳಬೇಕಾದ 16 ಕುತೂಹಲದಾಯಕ ಅಂಶಗಳು

1937ರಲ್ಲಿ ಹಿಟ್ಲರ್ ನಿಂದ ಪೀಪಲ್ಸ್ ಕಾರು ಎಂದು ಗುರುತಿಸಿಕೊಂಡಿದ್ದ ಫೋಕ್ಸ್ ವ್ಯಾಗನ್, ಆಡಿ, ಬೆಂಟ್ಲಿ, ಬುಗಾಟಿ, ಲಂಬೋರ್ಗಿನಿ, ಪೋರ್ಷೆ, ಸಿಯೆಟ್ ಹಾಗೂ ಸ್ಕೋಡಾಗಳಂತಹ ಐಕಾನಿಕ್ ಬ್ರಾಂಡ್ ಗಳ ಅಧೀನತೆಯನ್ನು ಹೊಂದಿದೆ.

More from DriveSpark

Article Published On: Friday, November 18, 2016, 11:23 [IST]
English summary
16 Interesting Facts about Cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+