160ರ ಸಂಭ್ರಮದಲ್ಲಿ ದೇಶದ ಪ್ರಥಮ ಪ್ರಯಾಣಿಕ ರೈಲು ಸೇವೆ

160 ವರ್ಷಗಳ ಹಿಂದೆ ಇದೇ ದಿನದಂದು ಭಾರತ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭವಾಗಿತ್ತು. ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ಅಂದರೆ ಬ್ರಿಟಿಷರ ಆಡಳಿತದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ ಪ್ರಾರಂಭವಾಗಿತ್ತು.

ಬ್ರಿಟಿಷರ ಆಗಮನದಿಂದ ಶಿಕ್ಷಣ ಕ್ಷೇತ್ರ ಸೇರಿದಂತೆ ಸಂಚಾರ ವ್ಯವಸ್ಥೆಯಲ್ಲೂ ಭಾರಿ ಸುಧಾರಣೆ ಕಂಡಿತ್ತು. ಇದರ ಪ್ರತಿಬಿಂಬವೆಂಬಂತೆ 1853ನೇ ಇಸವಿಯ ಎಪ್ರಿಲ್ 16ರಂದು ದೇಶದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭವಾಯಿತು. ಈ ರೈಲು ಬೋರಿ ಬಂದರ್ (ಈಗಿನ ಛತ್ರಪತಿ ಶಿವಾಜಿ ನಿಲ್ಧಾಣ, ಮುಂಬೈ) ಹಾಗೂ ಥಾಣೆ ನಡುವೆ ಸಂಚರಿಸುತ್ತಿತ್ತು. ಈ ಎರಡು ನಿಲ್ದಾಣಗಳ ನಡುವಣ ಅಂತರ 34 ಕೀ.ಮೀ. (21 ನಿಮಿಷ) ಆಗಿದೆ. ಸಾಹಿಬ್, ಸಿಂಧ್ ಹಾಗೂ ಸುಲ್ತಾನ್‌ಗಳೆಂಬ ಮೂರು ಎಂಜಿನ್‌ಗಳ ನೆರವಿಂದ ಮೊದಲ ಸಂಚಾರ ಆರಂಭಿಸಲಾಗಿತ್ತು.

160ರ ಸಂಭ್ರಮದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ

ಪ್ರಸ್ತುತ ಭಾರತದ ಮೊದಲ ರೈಲು ಯಾನದ 160ನೇ ವರ್ಷಚಾರಣೆ ಆಚರಿಸುತ್ತಿರುವ ಗೂಗಲ್ ಇಂಡಿಯಾ ಸರ್ಚ್ ಎಂಜಿನ್ ಕೂಡಾ ತನ್ನ ಗೂಗಲ್ ಪದದ 'o' ಅಕ್ಷರವನ್ನು ರೈಲು ರೂಪವಾಗಿ ಚಿತ್ರಿಕರಿಸಿರುವುದು ಇನ್ನು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.

160ರ ಸಂಭ್ರಮದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ

ದೂರ ಪ್ರಯಾಣಕ್ಕೆ ಹೆಚ್ಚು ಅನುಕೂಲಕರವಾಗಿರುವ ಇಂಡಿಯನ್ ರೈಲ್ವೇ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿದೆ.

160ರ ಸಂಭ್ರಮದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ

ಭಾರತೀಯ ರೈಲು ಒಟ್ಟು 64,460 ಕೀ.ಮೀ. ಉದ್ದಕ್ಕೆ ಚಾಚಿಕೊಂಡಿದೆ. ಹಾಗೆಯೇ ವರ್ಷಂಪ್ರತಿ 7651 ಮಿಲಿಯನ್ ಪ್ರಯಾಣಿಕರನ್ನು ಹಾಗೂ 921 ಮಿಲಿಯನ್ ಟನ್ ಸರಕುಗಳ ಸಾಗಣಿಕೆ ಮಾಡುತ್ತಿವೆ.

160ರ ಸಂಭ್ರಮದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ

ಒಟ್ಟು 28 ರಾಜ್ಯ ಹಾಗೂ ಮೂರು ಕೇಂದ್ರಡಾಳಿತ ಪ್ರದೇಶದಲ್ಲಿ ಹರಡಿರುವ ರೈಲು ಜಾಲ ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನಕ್ಕೂ ನಿಗದಿತ ಯಾನವನ್ನು ಹೊಂದಿದೆ.

160ರ ಸಂಭ್ರಮದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ

ಭಾರತೀಯ ರೈಲ್ವೇಯಲ್ಲಿ 16 ಲಕ್ಷಕ್ಕೂ ಹೆಚ್ಚು ಜನ ನೌಕರರಿದ್ದು, ಇದು ಪ್ರಪಂಚದಲ್ಲಿಯೇ ಯಾವುದೇ ವಾಣಿಜ್ಯ ಅಥವಾ ಸಾರ್ವಜನಿಕ ಬಳಕೆಯ ಸೇವಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದು ಪರಿಗಣಿತವಾಗಿದೆ. ಒಂದೇ ಸಂಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಜನರರಿರುವುದು ಚೀನಾದ ಸೇನೆಯಲ್ಲಿ ಮಾತ್ರ ಎಂದೂ ಹೇಳಲಾಗುತ್ತಿದೆ.

160ರ ಸಂಭ್ರಮದಲ್ಲಿ ದೇಶದ ಮೊದಲ ಪ್ರಯಾಣಿಕ ರೈಲು ಸೇವೆ

ಭಾರತಕ್ಕೆ ಸ್ವಾತಂತ್ರ್ಯ ಬರುವ ವೇಳೆಯಲ್ಲಿ 42 ರೈಲ್ವೇಗಳು ಅಸ್ತಿತ್ವದಲ್ಲಿದ್ದವು. ಇನ್ನು 2002ರ ಅಂಕಿಅಂಶ ಪ್ರಕಾರ ಪ್ರತಿ ದಿನ 8,702 ಪ್ರಯಾಣಿಕ ರೈಲುಗಳು ಸೇರಿದಂತೆ, ಒಟ್ಟು, 14.444 ರೈಲುಗಳು ಓಡಾಡುತ್ತಿವೆ.


ರೈಲ್ವೇ ವಲಯಗಳು:

ಆಡಳಿತಾತ್ಮಕ ದೃಷ್ಟಿಯಿಂದ ಭಾರತೀಯ ರೈಲ್ವೇಯನ್ನು ಹದಿನಾರು ವಲಯಗಳನ್ನಾಗಿ ವಿಂಗಡಿಸಲಾಗಿದೆ. (ಕ್ರಮಾಂಕ, ಹೆಸರು, ಕಿರುನಾಮ, ಮುಖ್ಯಕಛೇರಿ, ಸ್ಥಾಪನೆ)

1. ಉತ್ತರ ರೈಲ್ವೇ, NR, ದೆಹಲಿ, ಏಪ್ರಿಲ್ 14, 1952
2. ಈಶಾನ್ಯ ರೈಲ್ವೇ, NER, ಗೋರಖ್ ಪುರ 1952
3. ಈಶಾನ್ಯ ಗಡಿ ರೈಲ್ವೇ, NFR, ಮಾಲಿಗಾವ್, (ಗುವಾಹಾಟಿ) 1958
4. ಪೂರ್ವ ರೈಲ್ವೇ, ER ಕೊಲ್ಕತ್ತಾ, ಏಪ್ರಿಲ್ 1952
5. ಆಗ್ನೇಯ ರೈಲ್ವೇ, SER, ಕೊಲ್ಕತ್ತಾ, 1955
6. ದಕ್ಕ್ಷಿಣ ಮಧ್ಯ ರೈಲ್ವೇ, SCR ಸಿಕಂದರಾಬಾದ್, ಅಕ್ಟೋಬರ್ 2, 1966
7. ದಕ್ಷಿಣ ರೈಲ್ವೇ, SR, ಚೆನ್ನೈ, ಏಪ್ರಿಲ್ 14,1951
8. ಮಧ್ಯ ರೈಲ್ವೇ, CR, ಮುಂಬೈ, ನವೆಂಬರ್ 5,1951
9. ಪಶ್ಚಿಮ ರೈಲ್ವೇ, WR ಮುಂಬಯಿ ನವೆಂಬರ್ 5,1951
10. ನೈರುತ್ಯ ರೈಲ್ವೇ, SWR, ಹುಬ್ಬಳ್ಳಿ ಏಪ್ರಿಲ್ 1, 2003
11. ವಾಯವ್ಯ ರೈಲ್ವೇ, NWR, ಜಯಪುರ, ಅಕ್ಟೋಬರ್ 1, 2002
12. ಪಶ್ಚಿಮ ಮಧ್ಯ ರೈಲ್ವೇ, WCR, ಜಬ್ಬಲ್ ಪುರ, ಏಪ್ರಿಲ್ 1, 2003
13. ಉತ್ತರ ಮಧ್ಯ ರೈಲ್ವೇ, NCR, ಅಲಹಾಬಾದ್, ಏಪ್ರಿಲ್ 1, 2003
14. ಆಗ್ನೇಯ ಮಧ್ಯ ರೈಲ್ವೇ, SECR, ಬಿಲಾಸ್ ಪುರ, ಏಪ್ರಿಲ್ 1, 2003
15. ಪೂರ್ವ ಕರಾವಳಿ ರೈಲ್ವೇ, ECoR, ಭುವನೇಶ್ವರ, ಏಪ್ರಿಲ್ 1, 2003
16. ಪೂರ್ವ ಮಧ್ಯ ರೈಲ್ವೇ, ECR, ಹಾಜಿಪುರ, ಅಕ್ಟೋಬರ್ 1, 2002
17. ಕೊಂಕಣ ರೈಲ್ವೇ, KR, ನವಿ ಮುಂಬಯಿ ಜನವರಿ 26, 1998

More from DriveSpark

Article Published On: Tuesday, April 16, 2013, 12:39 [IST]
English summary
Google on Tuesday is celebrating 160th anniversary of India's first passenger train journey with a doodle on India's home page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+