ಪ್ರಪಂಚದ 19 ನಾನ್-ಸ್ಟಾಪ್ ವಿಮಾನಯಾನಗಳು!
ಜೀವನದಲ್ಲಿ ಒಂದು ಬಾರಿಯಾದರೂ ವಿಮಾನದಲ್ಲಿ ಸಂಚರಿಸಬೇಕು ಎಂಬುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಗಾಳಿಯಲ್ಲಿ ಸ್ವಚ್ಚಂದವಾಗಿ ಹಾರುವ ಲೋಹದ ಹಕ್ಕಿಗಳು ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ದೂರವನ್ನು ಕ್ರಮಿಸುವ ಮೂಲಕ ಯಾತ್ರಿಕರನ್ನು ಸುರಕ್ಷಿತವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಲುಪಿಸುತ್ತದೆ.
ಇದರಂತೆ ಯಾತ್ರಿಕರ ಅನುಕೂಲ ಹಾಗೂ ಆರಾಮದಾಯಕತೆಗಾಗಿ ಐಷರಾಮಿ ಸೌಲಭ್ಯಗಳನ್ನು ವಿಮಾನಗಳಲ್ಲಿ ಏರ್ಪಡಿಸಲಾಗುತ್ತದೆ. ಇಂದಿನ ಈ ಲೇಖನದಲ್ಲಿ ಪ್ರಪಂಚದ 19 ನಾನ್-ಸ್ಟಾಪ್ ಅಥವಾ ತಡೆರಹಿತವಾಗಿ ಅತ್ಯಂತ ದೂರ ಸಂಚರಿಸುತ್ತಿರುವ 20 ವಿಮಾನಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

19. ನ್ಯೂಯಾರ್ಕ್- ಮುಂಬೈ
ವಿಮಾನ: ಬೋಯಿಂಗ್ 777-300
ಸಮಯ: 15 ಗಂಟೆ, 58 ನಿಮಿಷ
ದೂರ: 12559 ಕೀ.ಮೀ.
ಭಾರತದ ರಾಷ್ಟ್ರಧಾನಿ ದೆಹಲಿಯಿಂದ ನೇರವಾಗಿ ಅಲ್ಲಿ ದೂರದ ಅಮೆರಿಕಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಇಂದಾಗಿದೆ.

18. ಟೊರಂಟೊ (ಕೆನಡಾ) - ಹಾಂಕಾಂಗ್ (ಚೀನಾ)
ವಿಮಾನ: ಬೋಯಿಂಗ್ 777-300
ಸಮಯ: 14 ಗಂಟೆ, 50 ನಿಮಿಷ
ದೂರ: 12562 ಕೀ.ಮೀ.
ಸಾಮಾನ್ಯವಾಗಿ ಬೋಯಿಂಗ್ ವಿಮಾನಗಳು ಅತಿ ದೂರದ ಪ್ರದೇಶಗಳಿಗೆ ತೆರಳಲು ಅತ್ಯಂತ ಅನುಕೂಲಕರ ಪ್ರಯಾಣವನ್ನು ಒದಗಿಸುತ್ತದೆ. ಪ್ರಸ್ತುತ ವಿಮಾನವು ಪ್ರಪಂಚದ ಎರಡು ಶ್ರೀಮಂತ ನಗರಗಳಿಗೆ ಸಂಪರ್ಕ ಕಲ್ಪಿಸಿದೆ.

17. ಲಾಸ್ ಏಜಂಲೀಸ್ - ಮೆಲ್ಪರ್ನ್
ವಿಮಾನ: ಎ380-800, ಬೋಯಿಂಗ್ 787-9
ಸಮಯ: 15 ಗಂಟೆ, 30 ನಿಮಿಷ
ದೂರ: 12771 ಕೀ.ಮೀ.
ಕ್ಯಾಲಿಫೋರ್ನಿಯಾದಿಂದ ಆಸ್ಟ್ರೇಲಿಯಾದ ಮೆಲ್ಪರ್ನ್ ನಗರಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ತಮ್ಮ ಹದಿ ಹರೆಯದಲ್ಲೇ ಜೀವನ ಹುಡುಕಿ ತೆರಳುವವರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.

16. ಡಲ್ಲಾಸ್ ಫೋರ್ಟ್ ವೋರ್ತ್, ಟೆಕ್ಸಾಸ್ - ದೋಹಾ, ಖತಾರ್
ವಿಮಾನ: ಬೋಯಿಂಗ್ 777-200
ಸಮಯ: 15 ಗಂಟೆ, 16 ನಿಮಿಷ
ದೂರ: 12758 ಕೀ.ಮೀ.
ಅಮೆರಿಕದ
ಟೆಕ್ಸಾಸ್ ನಗರದಲ್ಲಿ ಡಲ್ಲಾಸ್/ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಿತಗೊಂಡಿದೆ. ಇದು ಅಮೆರಿಕ ಏರ್ ಲೈನ್ಸ್ ನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ.

15. ನ್ಯೂಯಾರ್ಕ್- ಜೋಹಾನ್ಸ್ ಬರ್ಗ್
ವಿಮಾನ: ಎ340-300
ಸಮಯ: 14 ಗಂಟೆ, 57 ನಿಮಿಷ
ದೂರ: 12845 ಕೀ.ಮೀ.
ಪ್ರಪಂಚದಲ್ಲೇ ಅತ್ಯಂತ ಆಧುನಿಕ ವಿಮಾನಗಳಲ್ಲಿ ನ್ಯೂಯಾರ್ಕ್ ಒಂದಾಗಿದೆ. ಸಹಜವಾಗಿಯೇ ಇಲ್ಲಿಂದ ಜಗತ್ತಿನ ನಾನಾ ಕಡೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್ ಬರ್ಗ್ ಸಹ ಇದರಲ್ಲಿ ಸೇರಿದೆ.

14. ನ್ಯೂಯಾರ್ಕ್ - ಗುವಾಂಝು, ಚೀನಾ
ವಿಮಾನ: ಬೋಯಿಂಗ್ 777-300
ಸಮಯ: 14 ಗಂಟೆ, 17 ನಿಮಿಷ
ದೂರ: 12871 ಕೀ.ಮೀ.
ಗುವಾಂಝು ಆಗ್ನೇಯ ಹಾಕಾಂಗ್‌ನ ನಗರವಾಗಿದ್ದು, ಇಲ್ಲಿಂದ ನ್ಯೂಯಾರ್ಕ್‌ಗೆ ವಾಯು ಮಾರ್ಗವಾಗಿ ನೇರ ಸಂಪರ್ಕ ಕಲ್ಪಿಸುತ್ತದೆ.

13. ದುಬೈ, ಯುಎಇ - ಡಲ್ಲಾಸ್ ಫೋರ್ಟ್ ವರ್ತ್, ಟೆಕ್ಸಾಸ್
ವಿಮಾನ: ಎ380-800
ಸಮಯ: 15 ಗಂಟೆ, 17 ನಿಮಿಷ
ದೂರ: 12932 ಕೀ.ಮೀ.
ಈ ವಿಮಾನವು ಜಗತ್ತಿನ ಅತಿ ಎತ್ತರದ ಕಟ್ಟಡವನ್ನು ಹೊಂದಿರುವ ದುಬೈನಿಂದ ಅಮೆರಿಕದ ಟೆಕ್ಸಾಸ್ ನಗರಕ್ಕೆ 15 ತಾಸು, 17 ನಿಮಿಷಗಳಲ್ಲಿ ಸಂಪರ್ಕ ಕಲ್ಪಿಸುತ್ತದೆ.

12. ದೋಹಾ, ಖತಾರ್- ಹೌಂಸ್ಟನ್, ಟೆಕ್ಸಾಸ್
ವಿಮಾನ: ಬೋಯಿಂಗ್ 777-200
ಸಮಯ: 15 ಗಂಟೆ, 47 ನಿಮಿಷ
ದೂರ: 12947 ಕೀ.ಮೀ.
ಅಮೆರಿಕ ನಾಲ್ಕನೇ ಅತಿ ದೊಡ್ಡ ಜನನಿಬಿಡ ಪ್ರದೇಶವಾಗಿರುವ ಹೌಂಸ್ಟನ್, ಟೆಕ್ಸಾಸ್‌ನ ಜನಪ್ರಿಯ ನಗರಗಳಲ್ಲಿ ಒಂದಾಗಿದೆ. ಇಲ್ಲಿಂದ ಖತಾರ್‌ನ ದೋಹಾಕ್ಕೆ 15 ತಾಸು 47 ನಿಮಿಷಗಳಲ್ಲೇ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.

11. ಅಬುದಾಬಿ, ಯುಎಇ - ಡಲ್ಲಾಸ್ ಫೋರ್ಟ್ ವರ್ತ್, ಟೆಕ್ಸಾಸ್
ವಿಮಾನ: ಬೋಯಿಂಗ್ 777-200
ಸಮಯ: 14 ಗಂಟೆ, 10 ನಿಮಿಷ
ದೂರ: 12984 ಕೀ.ಮೀ.
ಭಾರತದಿಂದ ಲಕ್ಷಾಂತರ ಮಂದಿ ಯುಎಇ ನಗರದಲ್ಲಿ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಹಾಗೊಂದು ವೇಳೆ ನೀವು ಕೂಡಾ ಅಮೆರಿಕದ ಟೆಕ್ಸಾಸ್ ತೆರಳಲು ಬಯಸುವುದಾದ್ದಲ್ಲಿ ಅಬುದಾಗಿ ಮಾರ್ಗವನ್ನು ಬಳಕೆ ಮಾಡಬಹುದಾಗಿದೆ.

10. ನ್ಯೂಯಾರ್ಕ್ - ಹಾಂಕಾಂಗ್
ವಿಮಾನ: ಬೋಯಿಂಗ್ 777-300
ಸಮಯ: 14 ಗಂಟೆ, 39 ನಿಮಿಷ
ದೂರ: 12984 ಕೀ.ಮೀ.
ತಮ್ಮ ಖಾಸಗಿ ಭದ್ರತೆಯನ್ನು ಬದಿಗಿರಿಸಿ ಅಮೆರಿಕ ಅಧ್ಯಕ್ಷರು ಹಾಂಕಾಂಗ್ ತೆರಳಲು ಬಯಸುವುದಾದ್ದಲ್ಲಿ ಈ ವಿಮಾನ ಬಳಕೆ ಮಾಡಬಹುದಾಗಿದೆ.

09. ದುಬೈ - ಸ್ಯಾನ್ ಫ್ರಾನ್ಸಿಸ್ಕೋ
ವಿಮಾನ: ಎ380-800
ಸಮಯ: 15 ಗಂಟೆ, 37 ನಿಮಿಷ
ದೂರ: 13034 ಕೀ.ಮೀ.
ನೀವು ವಿಶ್ವದ ನಾಲ್ಕನೇ ಅತಿ ಶ್ರೇಷ್ಠ ವಿಮಾನದಲ್ಲಿ ಸಂಚರಿಸುವಾಗ 15 ತಾಸು ಕಳೆಯುವುದರಿಂದ ನಿಮಗ್ಯಾವ ತೊಂದರೆಯೂ ಎದುರಾಗಲಾರದು. ವಿಮಾನದಲ್ಲಿನ ಗಗನಸಖಿಯರು ನಿಮಗೆಲ್ಲ ನೆರವನ್ನು ನೀಡಲಿದ್ದಾರೆ.

08. ಡಲ್ಲಾಸ್ ಫೋರ್ಟ್, ವರ್ತ್, ಟೆಕ್ಸಾಸ್ - ಹಾಂಕಾಂಗ್, ಚೀನಾ
ವಿಮಾನ: ಬೋಯಿಂಗ್ 777-300
ಸಮಯ: 15 ಗಂಟೆ, 8 ನಿಮಿಷ
ದೂರ: 13066 ಕೀ.ಮೀ.
ದೂರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದರಲ್ಲಿ ಟೆಕ್ಸಾಸ್ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಇದಕ್ಕೆ ಮಗದೊಂದು ಸೇರ್ಪಡೆ ಡಲ್ಲಾಸ್ ನಿಂದ ಹಾಂಕಾಂಗ್ ವರೆಗಿನ ಬೋಯಿಂಗ್ ವಿಮಾನವಾಗಿದೆ.

07. ಅಬುದಾಬಿ - ಸ್ಯಾನ್ ಫ್ರಾನ್ಸಿಸ್ಕೋ
ವಿಮಾನ: ಬೋಯಿಂಗ್ 777-300
ಸಮಯ: 15 ಗಂಟೆ, 13 ನಿಮಿಷ
ದೂರ: 13122 ಕೀ.ಮೀ.
ಯುಎಇನಲ್ಲಿ ತೈಲೋದ್ಯಮ ಹೇರಳವಾಗಿ ನಡೆಯುತ್ತಿದೆ. ಬಹುಶ: ಇದೇ ಮಾಸ್ಟರ್ ಬ್ಯುಸಿನೆಸ್ ನೀತಿಯೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋದಿಂದ ನೇರ ವಿಮಾನದ ಸಂಪರ್ಕ ಕಲ್ಪಿಸಿರಬಹುದು.

06. ದುಬೈ - ಹೌಂಸ್ಟನ್, ಟೆಕ್ಸಾಸ್
ವಿಮಾನ: ಎ380-800
ಸಮಯ: 16 ಗಂಟೆ, 19 ನಿಮಿಷ
ದೂರ: 13138 ಕೀ.ಮೀ.
ಅತ್ಯಂತ ದೂರದ ವಿಮಾನಯಾನ ಸೇವೆಯಲ್ಲಿ ಯುಎಇ ಮೂಲದ ಎಮಿರೇಟ್ಸ್ ಸಹ ಹಿಂದೆ ಬಿದ್ದಿಲ್ಲ. ಇದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

05. ಜಿದ್ದಾ, ಸೌದಿ ಅರೇಬಿಯಾ - ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ
ವಿಮಾನ: ಬೋಯಿಂಗ್ 777-300
ಸಮಯ: 15 ಗಂಟೆ, 56 ನಿಮಿಷ
ದೂರ: 13404 ಕೀ.ಮೀ.
ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ವಿಮಾನ ನಿಲ್ದಾಣಗಳಲ್ಲಿ ಜಿದ್ದಾ ಒಂದಾಗಿದೆ. ಇಲ್ಲಿನ ಪವಿತ್ರ ಮಸೀದಿಗಳಿಗೆ ಸಂದರ್ಶನ ನೀಡುವವರಿಗೆ ಇದು ಸಂಪರ್ಕ ಕಲ್ಪಿಸುತ್ತದೆ.

04. ದುಬೈ - ಲಾಸ್ ಏಜಂಲೀಸ್
ವಿಮಾನ: ಎ380-800
ಸಮಯ: 15 ಗಂಟೆ
ದೂರ: 13413 ಕೀ.ಮೀ.
ಲಾಸ್ ಏಂಜಲೀಸ್ ನಲ್ಲಿರುವ ನೀವು ಮರುಭೂಮಿಯತ್ತ ಪ್ರವಾಸ ಹಮ್ಮಿಕೊಳ್ಳುವ ಯೋಜನೆಯಲ್ಲಿದ್ದರೆ ಹಿಂದೆ ಮುಂದೆ ನಿಶ್ಚಿಂತತೆಯಿಂದ ಈ ವಿಮಾನವನ್ನೇರಬಹುದು.

03. ಅಬುದಾಬಿ - ಲಾಸ್ ಏಂಜಲೀಸ್
ವಿಮಾನ: ಬೋಯಿಂಗ್ 777-200
ಸಮಯ: 15 ಗಂಟೆ, 39 ನಿಮಿಷ
ದೂರ: 13497 ಕೀ.ಮೀ.
ಲಾಸ್ ಏಂಜಲೀಸ್‌ನಿಂದ ದುಬೈಗೆ ಮಾತ್ರವಲ್ಲದೆ ಅಲ್ಲೇ ಹತ್ತಿರದಲ್ಲಿರುವ ಅಬುದಾಬಿಗೂ ವಿಮಾನಯಾನದ ಮೂಲಕ ನೇರ ಸಂಪರ್ಕ ಕಲ್ಪಿಸಲಾಗುತ್ತದೆ.

02. ಜೋಹಾನ್ಸ್ ಬರ್ಗ್, ದ. ಆಫ್ರಿಕಾ - ಅಟ್ಲಾಂಟಾ, ಜಾರ್ಜಿಯಾ
ವಿಮಾನ: ಬೋಯಿಂಗ್ 777-200
ಸಮಯ: 16 ಗಂಟೆ, 35 ನಿಮಿಷ
ದೂರ: 13597 ಕೀ.ಮೀ.
ನಾಗರಿಕ ಯುದ್ಧ ಹಾಗೂ 1960ರ ನಾಗರಿಕ ಹಕ್ಕು ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಾರ್ಜಿಯಾ ನಗರದಿಂದ ವರ್ಣಭೇದ ನೀತಿಯ ಮೇಲೆ ಈಗಲೂ ಹೋರಾಡುತ್ತಲೇ ಇರುವ ಜೋಹಾನ್ಸ್ ಬರ್ಗ್ ಗೆ ವಿಮಾನಯಾನ ಸಂಪರ್ಕವನ್ನು ಕಲ್ಪಿಸಲಾಗಿದೆ.

01. ಡಲ್ಲಾಸ್ ಫೋರ್ಟ್ ವರ್ತ್, ಟೆಕ್ಸಾಸ್ - ಸಿಡ್ನಿ, ಆಸ್ಟ್ರೇಲಿಯಾ
ವಿಮಾನ: ಎ380-800
ಸಮಯ: 16 ಗಂಟೆ
ದೂರ: 13822 ಕೀ.ಮೀ.
ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೆಲವೇ ಗಂಟೆಗಳಲ್ಲಿ ಹೇಗೆ ಸಂಪರ್ಕಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರವಾಗಿದೆ.


Click it and Unblock the Notifications








