ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ನೀರಿನಲ್ಲಿ ಬೈಕ್ ಚಲಿಸುತ್ತದೆ ಎಂಬ ಸುದ್ದಿಯೇ ರೋಮಾಂಚನವನ್ನುಂಟು ಮಾಡುತ್ತದೆ. ಹಲವು ಬಾರಿ ಇಂತಹ ಬೈಕ್‌ಗಳನ್ನು ನೋಡಿದ್ದೇವೆ. ಈಗ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ತಮ್ಮ ವಿಶಿಷ್ಟ ಐಡಿಯಾಗಳೊಂದಿಗೆ ನೀರಿನಲ್ಲಿ ಚಲಿಸುವ ಬೈಕ್ ನಿರ್ಮಿಸಿದ್ದಾರೆ.

ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ತಮಿಳುನಾಡಿನ ಸೇಲಂ ಮೂಲದ ದಕ್ಷಿಣಮೂರ್ತಿ ಎಂಬ ಯುವಕ ಟಿವಿಎಸ್ ಮ್ಯಾಕ್ಸ್ 100 ಬೈಕ್ ಅನ್ನು ನೀರಿನಿಂದ ಚಲಿಸುವ ಬೈಕ್ ಆಗಿ ಪರಿವರ್ತಿಸಿದ್ದಾರೆ. ದಕ್ಷಿಣಮೂರ್ತಿ ಇಂತಹ ಹಲವು ವಿಶಿಷ್ಟ ಚಿಂತನೆಗಳನ್ನು ಇಟ್ಟುಕೊಂಡು ವಾಹನಗಳನ್ನು ನಿರ್ಮಿಸುತ್ತಾರೆ. ಈ ಹಿಂದೆ ಅವರು ಸುಣ್ಣದ ಸಹಾಯದಿಂದ ಬೈಕ್ ನಿರ್ಮಿಸಿದ್ದರು.

ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ಈ ವಾಟರ್ ಬೈಕ್ ಬಗ್ಗೆ ಹೇಳುವುದಾದರೆ ಟಿವಿಎಸ್ ಮ್ಯಾಕ್ಸ್ 100 ಬೈಕ್ ಅನ್ನು ಪೂರ್ತಿಯಾಗಿ ಮಾಡಿಫೈಗೊಳಿಸಲಾಗಿದೆ. ಈ ಬೈಕಿನ ಎರಡೂ ಕಡೆ ಕಬ್ಬಿಣದ ಫ್ರೇಮ್ ಗಳನ್ನು ಅಳವಡಿಸಲಾಗಿದೆ. ಇವುಗಳಿಗೆ ಬಾತ್ ಟ್ಯೂಬ್ ಫ್ರೇಮ್ ಅಳವಡಿಸಲಾಗಿದ್ದು, ಏರ್ ತುಂಬಿಸಲಾಗಿದೆ. ಈ ಕಾರಣಕ್ಕೆ ಬೈಕ್ ನೀರಿನಲ್ಲಿ ಚಲಿಸಲು ಸಾಧ್ಯವಾಗುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ಬೈಕಿನ ಹಿಂಭಾಗದ ಟಯರ್ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಬೈಕ್‌ನಲ್ಲಿ ನೀರಿನಲ್ಲಿ ಚಲಿಸಲು ಯಾವುದೇ ಪ್ರೊಪೆಲ್ಲರ್ ಅಳವಡಿಸಿಲ್ಲ. ಹಿಂಭಾಗದ ಟಯರ್ ನೀರಿನ ಮೇಲೆ ಹೆಚ್ಚಿನ ವೇಗವಾಗಿ ತಿರುಗಿದ ತಕ್ಷಣ ಬೈಕನ್ನು ಮುಂದಕ್ಕೆ ತಳ್ಳುತ್ತದೆ. ಇದರಿಂದಾಗಿ ಬೈಕ್ ನೀರಿನಲ್ಲಿ ಚಲಿಸುತ್ತದೆ.

ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ನೀರಿನಲ್ಲಿ ಬೈಕ್‌ನ ದಿಕ್ಕನ್ನು ಬದಲಿಸಲು, ಬೈಕ್‌ನ ಹಿಂಭಾಗದ ಟಯರ್‌ನಲ್ಲಿ ಬೈಕ್‌ನ ಹ್ಯಾಂಡಲ್‌ಗೆ ರಬ್ಬರ್ ಜೋಡಿಸಲಾಗಿರುವ ಕಾರಣಕ್ಕೆ ನೀರಿನಲ್ಲಿಯೂ ಬೈಕಿನ ದಿಕ್ಕನ್ನು ಬದಲಿಸಲು ಯಾವುದೇ ತೊಂದರೆಯಾಗುವುದಿಲ್ಲ. ದಕ್ಷಿಣಮೂರ್ತಿಯವರ ನೀರಿನಿಂದ ಚಲಿಸುವ ಈ ಬೈಕ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ದಕ್ಷಿಣಮೂರ್ತಿ ಹೊಸ ಹೊಸ ವಸ್ತುಗಳನ್ನು ನಿರ್ಮಿಸುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ತಮ್ಮ ಹೊಸ ಯೋಜನೆಯ ಭಾಗವಾಗಿ ಹೀಲಿಯಂ ಗ್ಯಾಸ್ ನಿಂದ ಚಾಲನೆಗೊಳ್ಳುವ ಹೆಲಿಕಾಪ್ಟರ್ ಅನ್ನು ನಿರ್ಮಿಸಲಿದ್ದಾರೆ. ಹಣದ ಕೊರತೆಯಿಂದಾಗಿ ಈ ನಿರ್ಮಾಣ ಕಾರ್ಯವು ನಿಧಾನವಾಗಿ ಸಾಗುತ್ತಿದೆ.

ಖಾಸಗಿ ಸಂಸ್ಥೆಗಳು ಅಥವಾ ಸರ್ಕಾರವು ನೆರವು ನೀಡಿದರೆ ಭವಿಷ್ಯದಲ್ಲಿ ಇಂತಹ ಅನೇಕ ಆವಿಷ್ಕಾರಗಳನ್ನು ಮಾಡುವುದಾಗಿ ದಕ್ಷಿಣಮೂರ್ತಿ ಹೇಳಿದ್ದಾರೆ. ಕಾವೇರಿ ನದಿಯನ್ನು ದಾಟಲು ಸುಣ್ಣದ ಬೈಕನ್ನು ನಿರ್ಮಿಸಿದ್ದಾಗಿ ಅವರು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ನೀರಿನಲ್ಲಿ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ

ದಕ್ಷಿಣಮೂರ್ತಿ ನದಿಯ ಒಂದು ತೀರದಲ್ಲಿ ವಾಸಿಸುತ್ತಿದ್ದರೆ, ಅವರ ಸಂಬಂಧಿಕರು ಇನ್ನೊಂದು ತೀರದಲ್ಲಿ ವಾಸಿಸುತ್ತಿದ್ದಾರೆ. ಈ ಕಾರಣಕ್ಕೆ ತಾವು ತಯಾರಿಸಿರುವ ವಾಹನದ ಮೂಲಕ ಅವರು ನದಿ ದಾಟುತ್ತಾರೆ. ಅವರು ಬಾಲ್ಯದಿಂದಲೂ ಈ ರೀತಿಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

Most Read Articles

Kannada
English summary
19 year old engineering student develops amphibious bike. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X