ಪೈಲಟ್ ಮತ್ತು ವಿಮಾನದ ಪರಿಚಾರಕರು ಬಿಚ್ಚಿಟ್ಟ 20 ಕರಾಳ ಸತ್ಯಗಳು!
ಆಧುನಿಕ ಯುಗದಲ್ಲಿ ವಿಮಾನಯಾನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದರೊಂದಿಗೆ ವ್ಯೋಮಯಾನ ಕ್ಷೇತ್ರದಲ್ಲಿ ಅವಕಾಶ ವ್ಯಾಪಕವಾಗಿ ಹೆಚ್ಚಾಗಿದ್ದು, ಇಡೀ ಜಗತ್ತೇ ನಮ್ಮ ವ್ಯಾಪ್ತಿಯೊಳಗೆ ಬಂದು ನಿಂತಿದೆ.
Also Read: ಮೃದುವಾದ ಹಕ್ಕಿ ಢಿಕ್ಕಿಯಾದರೆ ವಿಮಾನ ಪತನಗೊಳ್ಳುವುದು ಹೇಗೆ ?
ಹಾಗಿರುವಾಗ ವಿಮಾನಯಾನದ ಬಗ್ಗೆ ಹಲವಾರು ಅನುಮಾನಗಳು ಜನ ಸಾಮಾನ್ಯರಲ್ಲಿ ಮೂಡತ್ತಲೇ ಇದೆ. ಈ ನಿಟ್ಟಿನಲ್ಲಿ ವಿಮಾನದಲ್ಲಿ ಸದಾ ಚಟುವಟಿಕೆ ನಿರತರಾಗಿರುವ ಪೈಲಟ್ ಮತ್ತು ಪರಿಚಾರಕರಲ್ಲಿ ನಡೆಸಿರುವ ಅಧ್ಯಯನದಲ್ಲಿ 23 ಕರಾಳ ಸತ್ಯವನ್ನು ಬಿಚ್ಚಿಡಲಾಗಿದೆ. ಈ ಸಂಬಂಧ ಕುತೂಹಲದಾಯಕ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಸಾಗಿರಿ.

01. ಲ್ಯಾಂಡಿಂಗ್ ವೇಳೆ ಲೈಟ್ ಡಿಮ್ ಮಾಡುವುದು ಏಕೆ?
ರಾತ್ರಿ ವೇಳೆಯಲ್ಲಿ ವಿಮಾನ ಲ್ಯಾಂಡಿಂಗ್ ಆದಾಗ ಹೊರಗಡೆ ಕಗ್ಗತ್ತಲು ಆವರಿಸಿರುವುದರಿಂದ ನಿಮ್ಮ ಕಣ್ಣುಗಳು ಆಗಲೇ ಪರಿಸ್ಥಿತಿಗೆ ಹೊಂದಿಕೊಳ್ಳಲು ವಿಮಾನದೊಳಗೆ ಬೆಳಕನ್ನು ಮಂಕು ಮಾಡಲಾಗುತ್ತದೆ.

02. ಒರಟಾದ ಲ್ಯಾಂಡಿಂಗ್
ಹದೆಗೆಟ್ಟ ವಾತಾವರಣದ ವೇಳೆ ಒರಟಾಗಿ ವಿಮಾನ ಇಳಿಸಿದ್ದಲ್ಲಿ ಅದು ಪೈಲಟ್‌ನ ಕೌಶಲ್ಯದ ಅಭಾವ ಎಂದು ಭಾವಿಸಬೇಡಿ. ಬದಲಾಗಿ ಇದು ಅಂತರಾಷ್ಟ್ರೀಯ ವಿಮಾನ ನಿಯಮವಾಗಿದ್ದು, ರನ್ವೇ ನೀರಿನಿಂದ ಆವೃತ್ತವಾದ್ದಲ್ಲಿ ನೀರಿನ ಪದರನ್ನು ಒಡೆಯಲು ಗಟ್ಟಿಯಾಗಿ ವಿಮಾನ ಲ್ಯಾಂಡ್ ಮಾಡಬೇಕಾಗುತ್ತದೆ.

03. ಓಕ್ಸಿಜನ್ ಮಾಸ್ಕ್ ಹಿಂದಿರುವ ಸತ್ಯ
ಆಮ್ಲಜನಕ ಮುಖವಾಡಗಳನ್ನು ಕೆಳಗಿಳಿಸಿದಾಗ 15 ನಿಮಿಷಗಳ ವರೆಗೆ ಉಸಿರಾಡಲು ಬೇಕಾಗುವಷ್ಟು ಆಮ್ಲನಜನಕ ದೊರೆಯುತ್ತದೆ. ಈ ವೇಳೆಯಲ್ಲಿ ಪೈಲಟ್ ಗೆ ವಿಮಾನವನ್ನು ಕೆಳಗಿಳಿಸಲು ಬೇಕಾದಷ್ಟು ಸಮಯ ದೊರಕುತ್ತದೆ. ತದಾ ಬಳಿಕ ಕಡಿಮೆ ಎತ್ತರದಲ್ಲಿ ಆರಾಮವಾಗಿ ಉಸಿರಾಡಬಹುದಾಗಿದೆ.

04. ಪೈಲಟ್ ಗಳ ಗಾಢ ನಿದ್ರೆ
ಮಗದೊಂದು ಬೆಚ್ಚಿ ಬೀಳಿಸುವ ಸತ್ಯ ಏನೆಂದರೆ ದೀರ್ಘ ದೂರದ ಯಾನದ ವೇಳೆಯಲ್ಲಿ ಇರ್ವರಲ್ಲಿ ಓರ್ವ ಪೈಲೆಟ್ ಗಾಢ ನಿದ್ರೆಗೆ ಜಾರುತ್ತಾರೆ. ಇಲ್ಲಿ ಇನ್ನಷ್ಟು ಆಸಕ್ತದಾಯಕ ವಿಚಾರ ಏನೆಂದರೆ, ಒಟ್ಟು ಸಂಚಾರ ಅವಧಿಯ ಮೂರನೇ ಒಂದರಷ್ಟು ಸಮಯದಲ್ಲಿ ಸಹ ಪೈಲಟ್ ಗಳು ನಿದ್ರೆಗೆ ಜಾರಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸುತ್ತಾರೆ.

05. ಹಳೆಯ ಹೆಡ್ ಸೆಟ್
ಅನೇಕ ಪ್ರಕರಣಗಳಲ್ಲಿ ವಿಮಾನದ ಪೈಲಟ್ ಗಳಿಗೆ ಹಳೆಯ ಹೆಡ್ ಸೆಟ್ ಗಳು ದೊರಕುತ್ತದೆ. ಅನೇಕ ಮಂದಿ ಬಳಕೆ ಮಾಡಿದ ಇಂತಹ ಹೆಡ್ ಸೆಟ್ ಗಳಲ್ಲಿ ಧೂಳಿನ ಕಣಗಳು ಅಂಟಿಕೊಂಡಿರುತ್ತದೆ. ಇದು ವಿಮಾನಯಾದನ ಶೋಚನೀಯ ಅವಸ್ಥೆಯನ್ನು ಬಿಚ್ಚಿಡುತ್ತದೆ.

06. ಭೋಜನಾ ಕ್ರಮ
ಪೈಲಟ್ ಗಳಿಗೆ ಹಂಚಿರುವ ಆಹಾರವನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ. ಆಹಾರ ನಂಜಿಗೆ ಕಾರಣವಾಗುವ ಹಿನ್ನೆಲೆಯಲ್ಲಿ ಈ ರೀತಿಯ ಭೋಜನಾ ಕ್ರಮ ಅನುಸರಿಸಲಾಗುತ್ತದೆ.

07. ಸಾಕು ನಾಯಿ ಸಾಗಿಸುವ ಸಾಹಸ ಬೇಡ
ಬಹುತೇಕ ಬಾರಿ ನಿಮ್ಮ ಸಾಕು ನಾಯಿಗಳನ್ನು ಸುರಕ್ಷಿತವಾಗಿ ಸಾಗಿಸುವ ಪ್ರಯತ್ನವನ್ನು ವಿಮಾನ ಸಿಬ್ಬಂದಿಗಳು ಮಾಡಲಿದ್ದಾರೆ. ಆದರೆ ವಿಮಾನಗಳ ರಾಂಪ್ (ramp) ಬಳಿಯಲ್ಲಿಟ್ಟು ನಾಯಿಗಳನ್ನು ಸಾಗಿಸುವುದು ಅಪಾಯಕಾರೆಯೆನಿಸುತ್ತದೆ. ಅತಿ ಹೆಚ್ಚು ಶಬ್ದವನ್ನುಂಟು ಮಾಡುವ ಇಲ್ಲಿ ಸಿಬ್ಬಂದಿಗಳು ಇಯರ್ ಫೋನ್ ಗಳನ್ನಿಟ್ಟು ಕೆಲಸದಲ್ಲಿ ಮಗ್ನವಾಗಿರುತ್ತಾರೆ. ಹಾಗಿರುವಾಗ ನಾಯಿಯ ಪರಿಸ್ಥಿತಿ ಹೇಳಲಾಗದು.

08. ಗಗನಸಖಿಯರ ತುಂಟಾಟ
ಎಲ್ಲರಲ್ಲೂ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸುವ ಗಗನ ಸಖಿಯರು ಹಿಂದುಗಡೆ ತೆರಳಿ ತಾವೇ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಕಟು ಸತ್ಯವೂ ಬೆಳಕಿಗೆ ಬಂದಿದೆ.

09. ಮಿಂಚು ಬಡಿತ, ಪೈಲಟ್ ಅಧಿಕಾರ
ಮೂಲಗಳ ಪ್ರಕಾರ, ಮಿಂಚು ಬಡಿತದ ವೇಳೆ ವಿಮಾನಗಳು ಸ್ಥಗಿತಗೊಳ್ಳುತ್ತದೆ. ಅಲ್ಲದೆ ಒಮ್ಮೆ ವಿಮಾನಗದ ಬಾಗಿಲುಗಳು ಮುಚ್ಚಿದ ಬಳಿಕ ಜನರನ್ನು ಬಂಧಿಸುವ, ಶುಲ್ಕ ವಿಧಿಸುವ ಅಥವಾ ಸಾಯುವ ಪ್ರಯಾಣಿಕನ ಉಯಿಲು ಬರೆದಿಟ್ಟುಕೊಳ್ಳುವ ಅವಕಾಶ ಪೈಲಟ್ ಗಿರುತ್ತದೆ.

10. ಬಾಟಲಿ ನೀರು ಮಾತ್ರ ಕುಡಿಯಿರಿ
ವಿಮಾನಗಳಲ್ಲಿ ಬಾಟಲಿ ನೀರುಗಳನ್ನು ಮಾತ್ರ ಕುಡಿಯಿರಿ. ಏಕೆಂದರೆ ಮಾಜಿ ಲುಫ್ತಾನ್ಸಾ ಸಿಬ್ಬಂದಿಯ ಪ್ರಕಾರ ಕೆಲವೊಂದು ಬಾರಿ ವಿಮಾನದ ಶುದ್ಧ ನೀರುಗಳನ್ನು ಶೌಚಾಲಯಗಳ ಬಳಕೆಗೂ ಬಳಕೆ ಮಾಡಲಾಗುತ್ತದೆ.

11. ಹೊಲಸು ನೀರು
ಕಾಫಿ ಅಥವಾ ಟೀ ತಯಾರಿಸಲು ಬಳಸುವ ನೀರು ಹೊಲಸಾಗಿರಲಿದೆ ಎಂಬ ಕಟು ಸತ್ಯವನ್ನು ಸಿಬ್ಬಂದಿಗಳು ವ್ಯಕ್ತಪಡಿಸುತ್ತಾರೆ. ಯಾಕೆಂದರೆ ವಿಮಾನ ಟ್ಯಾಂಕ್ ಗಳು ವರ್ಷಗಟ್ಟಲೆಯಿಂದ ಶುಚಿಯಾಗಿಡುವುದಿಲ್ಲ.

12. ಬ್ಯಾಗ್ ಲಾಕ್ ಮಾಡಿಡಿ
ವಿಮಾನಯಾನದ ವೇಳೆ ಯಾವತ್ತೂ ಬ್ಯಾಗ್ ಗಳನ್ನು ಲಾಕ್ ಮಾಡಿಡಲು ಮರೆಯದಿರಿ. ಯಾಕೆಂದರೆ ಸಿಬ್ಬಂದಿ ಪರಿಶೋಧನೆ ವೇಳೆ ನಿಮ್ಮ ಬ್ಯಾಗ್ ತೆರೆದು ವಸ್ತುಗಳನ್ನು ತೋರಿಸಬೇಕಾಗುತ್ತದೆ. ತದಾ ಬಳಿಕ ಮತ್ತೆ ಲಾಕ್ ಮಾಡಿಡಲು ಗಮನ ವಹಿಸಬೇಕು.

13. ಟಿಪ್ಸ್ ಕೊಡಿ
ವಿಮಾನ ಪರಿಚಾರಕರಿಗೆ ಟಿಪ್ಸ್ ಕೊಡಬಹುದೆಂಬ ವಿಚಾರ ಬಹುತೇಕ ಮಂದಿಗೆ ಗೊತ್ತಿರುವುದಿಲ್ಲ. ಹೀಗೆ ಮಾಡಿದ್ದಲ್ಲಿ ಇದು ಅವರ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.

14. ಅನನುಭವಿ ಚಾಲಕ
ನೀವು ದೊಡ್ಡ ವಿಮಾನಯಾನ ಸಂಸ್ಥೆಯ ವಿಮಾನಗಳಲ್ಲಿ ಸಂಚರಿಸುವ ಮಾತ್ರಕ್ಕೆ ಅವುಗಳನ್ನು ಅನುಭವಿ ಚಾಲಕರು ಮುನ್ನಡೆಸಲಿದ್ದಾರೆಂಬ ಅತಿಯಾದ ಆತ್ಮವಿಶ್ವಾಸ ಬೇಡ.

15. ಮೊಬೈಲ್ ಫೋನ್
ನಿಜವಾಗಿಯೂ ವಿಮಾನಯಾನದ ವೇಳೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಡುವ ಅಗತ್ಯವಿರುವುದಿಲ್ಲ. ಆದರೆ ಏಕಕಾಲಕ್ಕೆ 100ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು ಸಿಗ್ನಲ್ ಪಡೆಯಲು ಯತ್ನಿಸುತ್ತಿರುವಾಗ ಅದು ಪೈಲಟ್ ಗಳಿಗೆ ಕಿರಿಕಿಯನ್ನುಂಟು ಮಾಡುಬಹುದು. ಅಲ್ಲದೆ ಲ್ಯಾಂಡಿಂಗ್ ವೇಳೆ ಸಿಗ್ನಲ್ ಗಳಿಗೆ ತೊಂದರೆ ಕೊಡುವ ಸಾಧ್ಯತೆಯಿದೆ.

16. ಕೊಳಕು ವಿಮಾನ
ಜಕ್ಕೂ ವಿಮಾನಗಳು ಕೊಳಕಾಗಿದ್ದು, ಹಳೆಯ ದಿಂಬುಗಳು ಮತ್ತು ಹೊದಿಕೆಗಳನ್ನು ಬಳಕೆ ಮಾಡಲಾಗುತ್ತದೆ. ಇವುಗಳನ್ನು ಸ್ವಚ್ಚಗೊಳಿಸಲಾಗುವುದಿಲ್ಲ. ಬದಲಾಗಿ ಮಡಚ್ಚಿಟ್ಟು ಮರು ಬಳಕೆ ಮಾಡಲಾಗುತ್ತದೆ.

17. ಭದ್ರತಾ ಲೋಪದೋಷ
ವಿಮಾನಯಾನದ ನಿಕಟವರ್ತಿಗಳ ಪ್ರಕಾರ ಭದ್ರತಾ ಲೋಪದೋಷಗಳು ಇನ್ನೂ ಮುಂದುವರಿಯುತ್ತಿರುವುದು ಖೇದಕರ ಸಂಗತಿಯಾಗಿದೆ.

18. ಮಾನವ ಅಂಗಾಂಗಗಳು
ಬಹುತೇಕ ವಿಮಾನಗಳು ಮಾನವ ಅಂಗಾಂಗಗಳನ್ನು ರವಾನಿಸುವ ಕೆಲಸವನ್ನು ಮಾಡುತ್ತದೆ.

19. ಎಂಜಿನ್ ವೈಫಲ್ಯ
ಎರಡೂ ಎಂಜಿನ್ ಗಳು ವೈಫಲ್ಯದ ನಡುವೆಯೂ ವಿಮಾನಗಳು 5000 ಅಡಿ ಎತ್ತರದಲ್ಲೂ 6 ನಾಟಿಕಲ್ ಮೈಲು ದೂರವನ್ನು ಸಾಗವಷ್ಟು ಸಾಮರ್ಥ್ಯವನ್ನು ಪಡೆದಿರುತ್ತದೆ.

20. ಶೌಚಾಲಯಗಳಲ್ಲಿ ಬೂದಿಯನ್ನು ಉದುರಿಸುವ ತಟ್ಟೆ
ವಿಮಾನಗಳಲ್ಲಿ ಸಿಗರೇಟ್ ಸೇದುವುದು ನಿಷೇಧವಾದರೂ ಶೌಚಾಲಯಗಳಲ್ಲಿ ಬೂದಿಯನ್ನು ಉದುರಿಸುವ ತಟ್ಟೆಯನ್ನು ಇಡಲಾಗುತ್ತದೆ. ಹಾಗೊಂದು ವೇಳೆ ಯಾರೇ ಆದರೂ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಬೂದಿಯನ್ನು ಸುರಿಸಲು ತಟ್ಟೆ ಇಡಲಾಗುತ್ತದೆ.

ಈವಾಗ ನೀವೇ ಹೇಳೆ ವಿಮಾನಯಾನ ಬೇಕೇ ಬೇಡವೋ?

- ಭಾರತ ಪಾಕ್ ಯುದ್ಧಕಾಲ ಪರಿಸ್ಥಿತಿ ಎದುರಾದರೆ ?
- ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ ?


Click it and Unblock the Notifications








