20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಟೊಯೊಟಾ ಕಂಪನಿಯು ಕ್ವಾಲಿಸ್ ಕಾರಿನ ಬಿಡುಗಡೆಯೊಂದಿಗೆ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತ್ತು. ಕ್ವಾಲಿಸ್ ಬಿಡುಗಡೆಯಾದ ಅಲ್ಪಾವಧಿಯಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು. ಈ ಕಾರಣಕ್ಕೆ ಭಾರತದ ರಸ್ತೆಗಳಲ್ಲಿ ಕ್ವಾಲಿಸ್ ಕಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಟೊಯೊಟಾ ಕಂಪನಿಯು ಹಲವು ವರ್ಷಗಳ ಹಿಂದೆಯೇ ಕ್ವಾಲಿಸ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತು. ಈ ಕಾರಿನ ಬದಲಿಗೆ ಟೊಯೊಟಾ ಇನೋವಾ ಕಾರನ್ನು ಬಿಡುಗಡೆಗೊಳಿಸಿತು. ಕ್ವಾಲಿಸ್‌ ಕಾರಿನಂತೆ ಇನೋವಾ ಕಾರು ಸಹ ಜನಪ್ರಿಯವಾಯಿತು. ಟೊಯೊಟಾ ಕಂಪನಿಯು ಕ್ವಾಲಿಸ್ ಕಾರನ್ನು 2 ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತ್ತು.

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಈ 2 ಎಂಜಿನ್ ಆಯ್ಕೆಗಳಲ್ಲಿ 2.4 ಲೀಟರಿನ ಡೀಸೆಲ್ ಹಾಗೂ 2 ಲೀಟರಿನ ಪೆಟ್ರೋಲ್ ಎಂಜಿನ್ ಗಳು ಸೇರಿದ್ದವು. ಟೊಯೊಟಾ ಕಂಪನಿಯು ಈ 2 ಎಂಜಿನ್‌ಗಳೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್ ಗಳನ್ನು ಜೋಡಿಸಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಟೊಯೊಟಾ ಕಂಪನಿಯು ಕ್ವಾಲಿಸ್ ಕಾರನ್ನು ಹಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದ್ದರೂ ಕೆಲವರು ಇನ್ನೂ ಈ ಕಾರನ್ನು ಹೊಸದರಂತೆ ನಿರ್ವಹಿಸುತ್ತಿದ್ದಾರೆ. 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್ ಕಾರು ಇನ್ನೂ ಹೊಸದರಂತೆ ಕಾಣುತ್ತಿದೆ.

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಈ ಬಗ್ಗೆ ಮನೋರಮಾ ಆನ್‌ಲೈನ್ ವೀಡಿಯೊವನ್ನು ಅಪ್ ಲೋಡ್ ಮಾಡಿದೆ. ಈ ವಾಹನದ ಮಾಲೀಕರು ಗಣೇಶ್ ಕುಮಾರ್. ನಟರಾಗಿದ್ದ ಗಣೇಶ್ ಕುಮಾರ್ ಈಗ ರಾಜಕಾರಣಿಯಾಗಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಅವರು ಈಗ ಕೇರಳದ ಕೊಲ್ಲಂ ಜಿಲ್ಲೆಯ ಪಥನಪುರಂ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ರಾಜಕೀಯ ಪ್ರವೇಶಿಸುವ ಮೊದಲು ಅಂದರೆ 2000ರಲ್ಲಿ ಟೊಯೊಟಾ ಕ್ವಾಲಿಸ್ ಕಾರನ್ನು ಖರೀದಿಸಿದ್ದರು. ಗಣೇಶ್ ಕುಮಾರ್ ಅವರ ಆಪ್ತ ಸ್ನೇಹಿತರೊಬ್ಬರು ಟೊಯೊಟಾ ಕ್ವಾಲಿಸ್ ಕಾರು ಖರೀದಿಸಿದ್ದರು.

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಅದರಲ್ಲಿ ಪ್ರಯಾಣಿಸಿದ ಗಣೇಶ್ ಕುಮಾರ್ ರವರಿಗೆ ಕೂಡ ಕ್ವಾಲಿಸ್ ಖರೀದಿಸಬೇಕು ಎಂಬ ಆಲೋಚನೆ ಬಂದಿದೆ. ಕ್ವಾಲಿಸ್ ಕಾರಿನಲ್ಲಿದ್ದ ಗುಣಮಟ್ಟ ಹಾಗೂ ಆರಾಮದಾಯಕ ಪ್ರಯಾಣವು ಅವರನ್ನು ಆಕರ್ಷಿಸಿದೆ. ಈ ಕಾರಣಕ್ಕೆ ಅವರು ಸಹ ಕ್ವಾಲಿಸ್ ಕಾರನ್ನು ಖರೀದಿಸಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಆರಂಭದಲ್ಲಿ ಅವರು ಅಪರೂಪಕ್ಕೆ ಈ ಕ್ವಾಲಿಸ್ ಕಾರನ್ನು ಹೊರ ತೆಗೆಯುತ್ತಿದ್ದರು. ಈ ಕಾರಣಕ್ಕೆ ಅವರ ರಾಜಕೀಯ ವಿರೋಧಿಗಳು ಗಣೇಶ್ ಕುಮಾರ್ ಖರೀದಿಸಿರುವ ಕ್ವಾಲಿಸ್ ದುಬಾರಿಯಾಗಿದ್ದು, ಈ ಕಾರಿನ ಬೆಲೆ ರೂ.20ಲಕ್ಷದಿಂದ ರೂ.25 ಲಕ್ಷಗಳಾಗಿದೆ ಎಂಬ ವದಂತಿಗಳನ್ನು ಹಬ್ಬಿಸಿದ್ದರು.

ಆದರೆ ಆ ಸಮಯದಲ್ಲಿ ಗಣೇಶ್ ಕುಮಾರ್ ಖರೀದಿಸಿದ ಟೊಯೊಟಾ ಕ್ವಾಲಿಸ್‌ ಕಾರಿನ ಬೆಲೆ ರೂ.6ರಿಂದ ರೂ.7 ಲಕ್ಷಗಳಾಗಿತ್ತು. ಖರೀದಿಸಿ 20 ವರ್ಷಗಳಾಗಿದ್ದರೂ ಸಹ ಈ ಕಾರು ಇನ್ನೂ ಮೂಲ ಬಣ್ಣವನ್ನೇ ಹೊಂದಿದೆ. ಗಣೇಶ್ ಕುಮಾರ್ ಈ ಕಾರು ಎಂದಿಗೂ ಯಾವುದೇ ಸಮಸ್ಯೆ ನೀಡಿಲ್ಲವೆಂದು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

20 ವರ್ಷ ಹಳೆಯ ಕಾರೇ ಈ ರಾಜಕಾರಣಿಯ ನೆಚ್ಚಿನ ವಾಹನ

ಗಣೇಶ್ ಕುಮಾರ್ ಈ ಕಾರನ್ನು ಚೆನ್ನಾಗಿ ನಿರ್ವಹಿಸಿದ್ದು, ಕಾರಿನಲ್ಲಿರುವ ಬಹುತೇಕ ಭಾಗಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಗಣೇಶ್ ಕುಮಾರ್ ಈ ಕ್ವಾಲಿಸ್ ಕಾರನ್ನು ತಮ್ಮ ದೈನಂದಿನ ಬಳಕೆಗಾಗಿ ಬಳಸುತ್ತಿದ್ದಾರೆ.

Most Read Articles

Kannada
English summary
20 years old car remains favorite for kerala MLA. Read in Kannada.
Story first published: Thursday, October 22, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X