ಇಂಡಿಯನ್ ಎಫ್1 ರೇಸಿಂಗ್ ತಾರೆಯರಿಗೆ ಚೆಂದದ ಪೋಷಾಕು
ನಿಮಗೆಲ್ಲರಿಗೂ ತಿಳಿದಂತೆಯೇ ಏರ್‌ಟೆಲ್ ಇಂಡಿಯನ್ ಗ್ರ್ಯಾನ್ ಪ್ರಿ ಮೂರನೇ ಆವೃತ್ತಿಯು ಅಕ್ಟೋಬರ್ 25ರಿಂದ 27ರ ವರೆಗೆ ರಾಷ್ಟ್ರ ರಾಜಧಾನಿಯ ಸಮೀಪದಲ್ಲಿರುವ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಆಯೋಜನೆಯಾಗಲಿದೆ. ಇದರಂತೆ ಕೂಟದ ಆಯೋಜಕರು ಎಫ್1 ಆಯೋಜನೆಗೆ ಸಕಲ ರೀತಿಯ ಸಿದ್ಧತೆಗಳನ್ನು ನಡೆಸಿದ್ದು, ರೇಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಯಾವ ರೀತಿ ಎಫ್1 ಚಾಲಕರು ರೇಸ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೋ ಅದೇ ರೀತಿ ಕೂಟದ ಅಂದತೆ ಹೆಚ್ಚುವಲ್ಲಿ ಗ್ರಿಡ್ ಗರ್ಲ್ಸ್ ಸಹ ಅಷ್ಟೇ ಪ್ರಾಮುಖ್ಯತೆಯನ್ನು ವಹಿಸುತ್ತಾರೆ. ಹಾಗಿದ್ದರೆ ಈ ಬಾರಿಯ ಎಫ್1 ಗ್ರಿಡ್ ಗರ್ಲ್ಸ್ ಪೋಷಾಕುಗಳಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ರೆಡ್ ಚಿಲ್ಲೀಸ್ ತರಹ ಕೆಂಪು ಪೋಷಾಕುಗಳಲ್ಲಿ ಕಾಣಿಸಿಕೊಳ್ಳಲಿರುವ ಈ ಗ್ಲಾಮರ್ ತಾರೆಯರೇ ಎಫ್1 ರೇಸ್‌ನ ಪ್ರಮುಖ ಆಕರ್ಷಣೆಯಾಗಿರುತ್ತಾರೆ.

ಇದರಂತೆ ಈ ಬಾರಿಯ ಎರ್‌ಟೆಲ್ ಗ್ರಿಡ್ ಗರ್ಲ್ಸ್‌ಗಳಿಗೂ ವಿಶೇಷ ಉಡುಪುಗಳನ್ನು ತಯಾರಿಸಲಾಗಿದೆ.

ಈ ಬಾರಿಯೂ ವಿನ್ಯಾಸಗಾರ್ತಿ ಮಂದಿರಾ ವರ್ಕ್ ಎಂಬಾಕೆ 2013 ಏರ್‌ಟೆಲ್ ಗ್ರ್ಯಾ ಪ್ರಿ ಗ್ರಿಡ್ ಗರ್ಲ್ಸ್‌ನ ಪೋಷಾಕುಗಳನ್ನು ತಯಾರಿಸಿದ್ದಾರೆ. 'ಎಕ್ಸ್‌ಪ್ರೆಸ್ ಯುವರ್‌ಸೆಲ್ಫ್' ಎಂಬ ಥೀಮ್ (ನಿರೂಪಣಾ ವಿಷಯ) ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ.

ತಮ್ಮ ಉಡುಪು ವಿನ್ಯಾಸದಲ್ಲಿ ಸೊಬಗು, ಹೆಣ್ತನ ಹಾಗೂ ವಿಷಯಾಸಕ್ತಿ ತೋರ್ಪಡಿಸಲು ಮಂದಿರಾ ಹೆಚ್ಚು ಒತ್ತನ್ನು ನೀಡಿದ್ದಾರೆ.

ಇಡೀ ದೆಹಲಿಯನ್ನೇ ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲ ಆವರಿಸಲಿರುವುದರಿಂದ ವಿಶೇಷವಾದ ಟ್ರೆಂಡಿ ಟ್ರೆಂಚ್ ಮೇಲಂಗಿಯಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ.

ಟ್ರೆಂಚ್ ಕೋಟು ಆಕೆಯ ಫೇವರಿಟ್ ಆಗಿರುವುದರಿಂದ, ಮೂರು ವಿಧದ ಸ್ಟೈಲಿಷ್ ಕಾನ್ಸೆಪ್ಟ್ ಉಡುಪುಗಳನ್ನು ಮಂದಿರಾ ತಯಾರಿಸಿದ್ದಾರೆ.

ಇದೀಗ ಸಿದ್ಧಗೊಂಡಿರುವ ಈ ಪೋಷಾಕುಗಳನ್ನು ಗ್ರಿಡ್ ಗರ್ಲ್ಸ್ ಸುಂದರಿಯರು ಎಫ್1 ರೇಸ್ ವೇಳೆ ತೊಡಲಿದ್ದಾರೆ.

ಉಳಿದಂತೆ ಉಣ್ಣೆದಾರದಿಂದ ಹೆಣೆದ ಬಿಗಿ ಕವಚ, ಬೆಲ್ಟ್, ಗುಂಡಿ ಹಾಗೂ ಆಚೆ ಈಚೆ ಮಡಿಸಿದ ಕೋಟಿನ ಎದೆಯ ಭಾಗ ಹೆಚ್ಚು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತದೆ.

ಇನ್ನು ಕೊರಳ ಬಟ್ಟೆಯಲ್ಲಿ (ಸ್ಕಾರ್ಫು) ಏರ್‌ಟೆಲ್ ಲಾಂಛನದೊಂದಿಗೆ ಗ್ರಿಡ್ ಗರ್ಲ್ಸ್ ಪೋಷಾಕು ಕೊನೆಗೊಳ್ಳುತ್ತದೆ. ಇವೆಲ್ಲವೂ ಹೆಣ್ಣಿನ ಸೌಂದರ್ಯವನ್ನು ವರ್ಣಿಸಲು ನೆರವಾಗಿದೆ.

ರೇಸ್ ಟ್ರ್ಯಾಕ್‌ನಲ್ಲಿ ಚಾಲಕರನ್ನು ಉತ್ತೇಜಿಸಲು ಗ್ರಿಡ್ ಗರ್ಲ್ಸ್ ಪ್ರಮುಖ ಪಾತ್ರ ವಹಿಸುತ್ತಾರೆ.

ನೋಡುಗರು ಹೆಚ್ಚು ಆಕರ್ಷಿತರಾಗುವ ನಿಟ್ಟಿನಲ್ಲಿ ಉಡುಪುಗಳನ್ನು ಸಿದ್ಧಗೊಳಿಸಲಾಗಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಟಿಕೆಟ್ ಮಾರಾಟದಲ್ಲಿ ಭಾರಿ ಕುಸಿತ ದಾಖಲಾಗಿದೆ. ಆದರೆ ನೂತನ ಗ್ರಿಡ್ ಗರ್ಲ್ಸ್ ಪೋಷಾಕು ವಿಚಾರ ತಿಳಿದಂತೆ ಈ ಸಂಖ್ಯೆಯಲ್ಲಿ ವರ್ಧನೆ ಕಾಣುವ ಭರವಸೆಯನ್ನು ಆಯೋಜಕರು ಹೊಂದಿದ್ದಾರೆ.


Click it and Unblock the Notifications








